For Quick Alerts
ALLOW NOTIFICATIONS  
For Daily Alerts

ಮಕ್ಕಳು ಆಡಬಹುದಾದ 5 ಸಾಹಸಿ ಕ್ರೀಡೆಗಳು

|

ಎಲ್ಲಾ ಮುದ್ದಿನ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು... ಮಕ್ಕಳ ದಿನಕ್ಕೆ ವಿಶೇಷವಾಗಿ ಮಕ್ಕಳಲ್ಲಿ ಸಾಹಸಿ ಮನೋಭಾವ ಮೂಡಿಸುವಂತಹ ಆಟಗಳ ಬಗ್ಗೆ ಹೇಳಲಾಗಿದೆ ನೋಡಿ:

ಮಕ್ಕಳ ದೈಹಿಕ ಬೆಳವಣಿಗೆಯಲ್ಲಿ ಆಟ ಪ್ರಮುಖ ಪಾತ್ರವಹಿಸುತ್ತದೆ. ಒಂದು ಕಡೆ ಕುಳಿತು ಆಡುವುದರಿಂದ ಮಕ್ಕಳ ದೈಹಿಕ ಬೆಳವಣಿಗೆ ಕುಂಠಿತವಾಗುವುದು. ಈಗೀನ ಮಕ್ಕಳು ಹೆಚ್ಚಾಗಿ ಮೊಬೈಲ್, ಕಂಪ್ಯೂಟರ್, ಟಿವಿ, ವೀಡಿಯೋ ಗೇಮ್ ಎಂದು ಮನೆಯೊಳಗೆ ಆಟ ಆಡಲು ಇಷ್ಟ ಪಡುತ್ತಾರೆ. ಮನೆಯೊಳಗೇ ಆಡುವ ಬದಲು ಹೊರಗಡೆ ಸ್ವಲ್ಪ ದೈಹಿಕ ವ್ಯಾಯಾಮ ದೊರೆಯುವಂತಹ ಆಟಗಳನ್ನು ಆಡಲು ಹೇಳಿ.

ಈ ರೀತಿ ಹೊರಗಡೆ ಆಟ ಆಡಲು ನಗರ ಪ್ರದೇಶದಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಸಾಧ್ಯವಾಗುವುದಿಲ್ಲ. ಮನೆ ಮುಂದೆ ಓಡಾಡಿ ಆಡುವಷ್ಟು ಸ್ಥಳಾವಕಾಶ ಕೂಡ ಇರುವುದಿಲ್ಲ. ಕೆಲವೊಂದು ಶಾಲೆಗಳಲ್ಲಿ ಆಟದ ಮೈದಾನ ಕೂಡ ಇರುವುದಿಲ್ಲ. ರಜಾ ದಿನಗಳಲ್ಲಿ ಮನೆಯ ಪಕ್ಕದಲ್ಲಿ ಗ್ರೌಂಡ್ ಇದ್ದರೆ ಅಲ್ಲಿಗೆ ಕರೆದುಕೊಂಡು ಹೋಗಿ. ಮಕ್ಕಳಿಗೆ ಕೆಲವೊಂದು ಸಾಹಸಿ ಕ್ರೀಡೆಗಳನ್ನು ಪರಿಚಯಿಸಿ. ಇದರಿಂದ ಮಕ್ಕಳ ದೈಹಿಕ ಬೆಳವಣಿಗೆಗೆ ಸಹಕಾರಿಯಾಗುವುದಲ್ಲದೆ. ಅವರು ಧೈರ್ಯವಂತರಾಗಿ, ಸಾಹಸಿಗಳಾಗಿ ಬೆಳೆಯುತ್ತಾರೆ. ಅದರಲ್ಲೂ ಈ ಕೆಳಗಿನ ಸಾಹಸ ಕ್ರೀಡೆಗಳನ್ನು ಮಕ್ಕಳು ತುಂಬಾ ಇಷ್ಟ ಪಡುತ್ತಾರೆ.

1. ಬಂಡೆ ಕಲ್ಲುಗಳನ್ನು ಹತ್ತುವುದು:

1. ಬಂಡೆ ಕಲ್ಲುಗಳನ್ನು ಹತ್ತುವುದು:

ಬಂಡೆ ಕಲ್ಲುಗಳನ್ನು ಹತ್ತುವುದು ಮಕ್ಕಳಿಗೆ ಸವಾಲಿನ ಆಟವಾಗಿದೆ. ಆದರೆ ಈ ರೀತಿ ಬಂಡೆ ಕಲ್ಲುಗಳನ್ನು ಹತ್ತಲು ತರಬೇತಿಯನ್ನು ನೀಡಬೇಕು. ಈ ರೀತಿ ತರಬೇತಿ ನೀಡುವ ಕ್ಲಬ್ ಗಳಿರುತ್ತವೆ. ಅವುಗಳನ್ನು ಸಂಪರ್ಕಿಸಿ.

2. ಚಾರಣ:

2. ಚಾರಣ:

ಟ್ರಕ್ಕಿಂಗ್ ಅಥವಾ ಚಾರಣವನ್ನು ದೊಡ್ಡವರು ಮಾತ್ರವಲ್ಲ ಜೊತೆಗೆ ಮಕ್ಕಳನ್ನು ಕರೆದುಕೊಂಡು ಹೋಗಬಹುದು. ಮಕ್ಕಳನ್ನು ಕರೆದುಕೊಂಡು ಹೋಗಬಹುದಾದ ಸ್ಥಳಗಳಿಗೆ ರಜೆ ಸಮಯದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಿ, ಅವರು ತುಂಬಾ ಸಂತೋಷ ಪಡುತ್ತಾರೆ. ಟ್ರಕ್ಕಿಂಗ್ ಗ್ರೂಪ್, ಟ್ರಕ್ಕಿಂಗ್ ಕ್ಲಬ್ ಗಳಿರುತ್ತವೆ. ಅವರ ಜೊತೆಯೂ ಕಳುಹಿಸಬಹುದು.

3. ನದಿ ದಾಟುವುದು:

3. ನದಿ ದಾಟುವುದು:

ನದಿಯನ್ನು ನಡೆದುಕೊಂಡು ದಾಟುವುದು ಮಕ್ಕಳಿಗೆ ಸಕತ್ ಥ್ರಿಲ್ ಕೊಡುತ್ತದೆ. ಆದರೆ ಈ ರೀತಿ ನದಿ ದಾಟುವಾಗ ದೊಡ್ಡವರು ಜೊತೆಗೆ ಇರಬೇಕು ಹಾಗೂ ಅವರಿಗೆ ಚೆನ್ನಾಗಿ ಈಜು ಗೊತ್ತಿರಬೇಕು. ಬೇಸಿಗೆಯ ಸಮಯದಲ್ಲಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವಾಗ ನದಿ ದಾಟಲು ಮಕ್ಕಳನ್ನು ಕರೆದುಕೊಂಡು ಹೋಗುವುದು ಸೂಕ್ತ.

4. ರಾಪ್ಪೆಲ್ಲಿಂಗ್(Rappelling):

4. ರಾಪ್ಪೆಲ್ಲಿಂಗ್(Rappelling):

ನಿಮ್ಮ ಮಗುವಿಗೆ ಗೋಡೆ ಹತ್ತುವುದು, ಬಂಡೆ ಹತ್ತುವುದು ಈ ರೀತಿಯ ಆಟಗಳು ಇಷ್ಟವಿದ್ದರೆ ಅಂತಹ ಮಕ್ಕಳನ್ನು ರಾಪ್ಪೆಲ್ಲಿಂಗ್ ಆಟ ಆಡಲು ಕಳುಹಿಸಬಹುದು. ಇಂತಹ ಆಟಗಳನ್ನು ಆಡಿಸುವ ಕ್ಲಬ್ ಇರುತ್ತವೆ. ಅಲ್ಲಿಗೆ ನಿಮ್ಮ ಮಕ್ಕಳನ್ನು ಸೇರಿಸಬಹುದು. ಇವೆಲ್ಲಾ ಇನ್ ಡೋರ್ ಆಕ್ಟಿವಿಟಿ ಆಗಿರುತ್ತದೆ.

5. ಬಂಜೀ ಜಂಪಿಂಗ್(Bungee jumping):

5. ಬಂಜೀ ಜಂಪಿಂಗ್(Bungee jumping):

ಬಂಜೀ ಜಂಪಿಂಗ್ ಮಕ್ಕಳಿಗೆ ತುಂಬಾ ಸಂತೋಷವನ್ನು ಕೊಡುವ ಆಟವಾಗಿದೆ. ಈ ಆಟವನ್ನು ಮನೆಯಲ್ಲಿ ಕೂಡ ಆಡಬಹುದು.

English summary

5 Adventurous Game For Kids | Tips For Parents | ಮಕ್ಕಳು ಆಡಬಹುದಾದ 5 ಸಾಹಸಿ ಕ್ರೀಡೆಗಳು | ಪೋಷಕರಿಗೆ ಕೆಲ ಸಲಹೆಗಳು

Adventurous activities like rock climbing, trekking, bungee jumping, river crossing and rappelling are some of the sports your little one can try out and it's completely safe.
X
Desktop Bottom Promotion