ಐವಿಎಫ್ ಮಗು ಇತರ ಮಕ್ಕಳಷ್ಟೇ ಜಾಣ್ಮೆ ಹೊಂದಿರುತ್ತಾರೆಯೇ?

By: Hemanth
Subscribe to Boldsky

ಕೃತಕ ಗರ್ಭಧಾರಣೆಯಿಂದ ಅಕಾಲಿಕ ಹೆರಿಗೆಯಾಗುವ ಸಾಧ್ಯತೆಯಿದೆ. ಅದೇ ರೀತಿ ನೈಸರ್ಗಿಕವಾಗಿ ಗರ್ಭಧರಿಸಿ ಹುಟ್ಟುವ ಮಕ್ಕಳಷ್ಟೇ ಕೃತಕ ಗರ್ಭಧಾರಣೆಯಿಂದ ಹುಟ್ಟುವ ಮಕ್ಕಳು ಕೂಡ ಜಾಣರಾಗಿರುವರು ಎಂದು ಅಧ್ಯಯನಗಳು ಹೇಳಿವೆ. ಕೃತಕ ಗರ್ಭಧಾರಣೆಯಂತಹ ಚಿಕಿತ್ಸೆಯನ್ನು ಹೆಚ್ಚಾಗಿ ವಯಸ್ಸಾದ ದಂಪತಿಗಳು ಮಾಡುತ್ತಾರೆ. ಇಂತಹ ದಂಪತಿಯು ತುಂಬಾ ಸುಶೀಕ್ಷಿತರು ಮತ್ತು ಸಾಮಾಜಿಕವಾಗಿ ಒಳ್ಳೆಯ ಸ್ಥಾನಮಾನ ಪಡೆದಿರುವವರು ಎಂದು ಜರ್ನಲ್ ಆಫ್ ಹ್ಯೂಮನ್ ರಿಪ್ರೊಡಕ್ಷನ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನದಿಂದ ತಿಳಿದುಬಂದಿದೆ.

IVF Babies

ನೈಸರ್ಗಿಕವಾಗಿ ಗರ್ಭಧರಿಸುವಂತಹ ಮಹಿಳೆಯರಿಗೆ ಹುಟ್ಟುವ ಮಕ್ಕಳಲ್ಲಿ ಇರುವ ಜ್ಞಾನವು ಕೃತಕ ಗರ್ಭಧಾರಣೆಯಿಂದ ಹುಟ್ಟುವ ಮಕ್ಕಳ ಜ್ಞಾನವು ಹೆಚ್ಚಾಗಿರುವುದು ಮತ್ತು ಆರೋಗ್ಯವು ಚೆನ್ನಾಗಿರುವುದು. ಯಾಕೆಂದರೆ ಇದರ ಪೋಷಕರು ಸುಶಿಕ್ಷಿತರಾಗಿರುವುದು ಮತ್ತು ಸಾಮಾಜಿಕ ಸ್ಥಾನಮಾನ ಉತ್ತಮವಾಗಿರುವುದು ಕಾರಣವಾಗಿದೆ ಎಂದು ಆಕ್ಸ್ ಫರ್ಡ್ ಯೂನಿವರ್ಸಿಟಿಯ ಪ್ರೊಫೆಸರ್ ಮೆಲಿಂದ ಮಿಲ್ಸ್ ತಿಳಿಸಿದರು. ಕೃತಕ ಗರ್ಭಧಾರಣೆಯಿಂದಾಗಿ ಅಕಾಲಿಕ ಹೆರಿಗೆಯಾಗುವ ಸಾಧ್ಯತೆ ಹೆಚ್ಚಿದೆ.

ಅದೇ ರೀತಿ ಅವಳಿ ಮಕ್ಕಳು ಹುಟ್ಟುವ ಸಾಧ್ಯತೆಯು ಇದೆ. ಆದರೆ ಪೋಷಕರು ತುಂಬಾ ವಯಸ್ಸಾದವರು, ಸುಶಿಕ್ಷಿತರು ಮತ್ತು ಆರ್ಥಿಕವಾಗಿ ಬಲಿಷ್ಠರಾಗಿರುವರು ಎಂದು ಮಿಲ್ಸ್ ತಿಳಿಸಿದರು. ಮಕ್ಕಳು ಒಳ್ಳೆಯ ಜ್ಞಾನ ಪಡೆಯಲು ಇತರ ಕೆಲವೊಂದು ಕಾರಣಗಳು ಕೂಡ ಇದೆ. ಧನಾತ್ಮಕ ಪರಿಣಾಮವು ದೀರ್ಘಕಾಲ ಅಂದರೆ ಸುಮಾರು 11 ವರ್ಷಗಳ ತನಕ ಉಳಿಯುತ್ತದೆ.

IVF Babies

ಕೃತಕ ಗರ್ಭಧಾರಣೆಯಿಂದ ಹುಟ್ಟುವ ಮಕ್ಕಳ ಜ್ಞಾನಶಕ್ತಿಯನ್ನು ಕಡಿಮೆ ಮಾಡುವುದಿಲ್ಲವೆಂದು ಕೆಲವೊಂದು ಅಧ್ಯಯನಗಳಿಂದ ತಿಳಿದುಬಂದಿದೆ ಎಂದು ಮಿಲ್ಸ್ ತಿಳಿಸಿದರು. ಈ ಅಧ್ಯಯನಕ್ಕಾಗಿ ಸುಮಾರು 18,552 ಕುಟುಂಬಗಳನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು.

2000-2001ದಲ್ಲಿ ಕೃತಕ ಗರ್ಭಧರಿಸಿದ ಸುಮಾರು 15,281 ಮಕ್ಕಳಲ್ಲಿ ಸುಮಾರು 8 ಸಾವಿರ ಮಕ್ಕಳನ್ನು 2003, 2005, 2007 ಮತ್ತು 2012ರಲ್ಲಿ ಜ್ಞಾನ ಪರೀಕ್ಷೆಗೆ ಒಳಪಡಿಸಲಾಯಿತು. ಐದನೇ ವಯಸ್ಸಿನ ಮಕ್ಕಳ ಶಬ್ದಕೋಶದ ಕೌಶಲ್ಯ, ಏಳರಲ್ಲಿ ಓದುವ ಮತ್ತು 11ರಲ್ಲಿ ಕ್ರಿಯೆಗಳನ್ನು ಬಳಸುವುದನ್ನು ಪರೀಕ್ಷಿಸಲಾಯಿತು.

IVF Babies

ಮಕ್ಕಳ ಅಂಕಗಳನ್ನು ನೈಸರ್ಗಿಕವಾಗಿ ಗರ್ಭಧರಿಸಿ ಜನಿಸಿದ ಮಕ್ಕಳೊಂದಿಗೆ ಹೋಲಿಕೆ ಮಾಡಲಾಯಿತು. ನೈಸರ್ಗಿಕವಾಗಿ ಜನಿಸಿದ ಮಕ್ಕಳಿಗೆ ಹೋಲಿಸಿದರೆ ಕೃತಕ ಗರ್ಭಧಾರಣೆಯಿಂದ ಜನಿಸಿದ ಮಕ್ಕಳಲ್ಲಿ ಐದು ವರ್ಷ ವಯಸ್ಸಿನವರೆಗೂ ಅರಿವಿನ ಅಭಿವೃದ್ಧಿಯಲ್ಲಿ ಸುಧಾರಿತ ಕ್ರಮಗಳನ್ನು ದಾಖಲಿಸಲಾಗಿದೆ. ಇದು ಕೃತಕ ಗರ್ಭಧಾರಣೆಯಿಂದ ಹುಟ್ಟಿದ ಮಕ್ಕಳೊಂದಿಗೆ ನೈಸರ್ಗಿಕವಾಗಿ ಗರ್ಭಧರಿಸಿ ಜನಿಸಿದ ಮಕ್ಕಳಿಗೆ ಇನ್ನೂ ಸ್ವಲ್ಪ ಉತ್ತಮವಾಗಿದೆ.

English summary

Are IVF Babies As Smart As Other Kids?

Although artificially conceived babies have a higher risk of being born prematurely, they may be just as smart as those born after natural conception, says a study. The study, published in the journal Human Reproduction, also showed that parents who undergo such treatments are generally older, more educated and have a higher socio-economic status than parents who had naturally conceived children.
Subscribe Newsletter