For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಕಾಡುವ ಹಲ್ಲಿನ ಸಮಸ್ಯೆ-ಒಂದಿಷ್ಟು ಪರಿಹಾರಗಳು

|

ಮಕ್ಕಳು ಹಾಗು ವಯಸ್ಕರಲ್ಲಿ ಹಲ್ಲಿನ ಸಮಸ್ಯೆ ಕಾಡುವುದು ಸಾಮಾನ್ಯ ಪ್ರಕ್ರಿಯೆ!, ಇದಕ್ಕೆ ಕಾರಣಗಳು ಬೇರೆ ಮತ್ತು ಅದರ ಸಮಸ್ಯೆಯು ಮಕ್ಕಳು ಹಾಗೂ ವಯಸ್ಕರಲ್ಲಿ ಭಿನ್ನವಾಗಿ ಇರಬಹುದು. ಆದರೆ ಎರಡು ಕೂಡ ದಂತನೋವು ಆಗಿರುವುದು. ಇದರಿಂದ ಊಟ ಮಾಡಲು, ನೀರು ಕುಡಿಯಲು ಸಮಸ್ಯೆಯಾಗುವುದು, ಹಲ್ಲಿನ ಸೋಂಕಿನ ಪರಿಣಾಮವಾಗಿ ದಂತಕುಳಿ ಉಂಟಾಗುವುದು. ಮಕ್ಕಳಲ್ಲಿ ಹೆಚ್ಚು ಸಕ್ಕರೆ ಮತ್ತು ಸಕ್ಕರೆಯುಕ್ತ ಆಹಾರ ಸೇವನೆ ಮಾಡುವ ಪರಿಣಾಮ ಹಲ್ಲಿನ ಸಮಸ್ಯೆ ಬರುವುದು. ಸಿಹಿ, ಕ್ಯಾಂಡಿಗಳು, ಚಾಕಲೇಟ್, ಬಿಸ್ಕೆಟ್ ಮತ್ತು ಸಿಹಿತಿಂಡಿಗಳು ಮಕ್ಕಳಿಗೆ ಫೇವರಿಟ್. ಇದನ್ನು ಅವರು ಯಾವಾಗಲೂ ತಿನ್ನಲು ಇಷ್ಟಪಡುವರು. ಆದರೆ ಅತಿಯಾಗಿ ಸಿಹಿ ಸೇವನೆ ಪರಿಣಾಮವಾಗಿ ಮಕ್ಕಳಲ್ಲಿ ದಂತಕುಳಿ ಉಂಟಾಗಬಹುದು. ನಾವು ನೀಡುತ್ತಿರುವ ಈ ಸಲಹೆಗಳನ್ನು ಪಾಲಿಸಿ, ನಿಮ್ಮ ಮಗುವಿನ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ. ಬನ್ನಿ ಆ ಸಲಹೆಗಳು ಯಾವುವು ಎಂದು ನೋಡೋಣ.... ಹಲ್ಲು ಹುಟ್ಟುವ ವೇಳೆ ಮಗು ವಿಪರೀತ ಅಳುತ್ತಿದೆಯೇ?

Precautions and treatment for dental caries in infants

* ಚಮಚ ಅಥವಾ ಪೆಸಿಫೈರ್ ಮುಂತಾದ ಜೊಲ್ಲುರಸವನ್ನು ಹೊಂದಿರುವ ಪದಾರ್ಥವನ್ನು ನಿಮ್ಮ ಮಗುವಿನ ಜೊತೆಗೆ ಹಂಚಿಕೊಳ್ಳಬೇಡಿ. ಜೊಲ್ಲಿನ ಮೂಲಕ ನಿಮ್ಮ ಬಾಯಿಯಲ್ಲಿರುವ ಇನ್‌ಫೆಕ್ಷನ್ ನಿಮ್ಮ ಮಗುವಿನ ಬಾಯಿಗೆ ವರ್ಗಾವಣೆಯಾಗಬಹುದು.
* ಪ್ರತಿ ಬಾರಿ ಊಟ ಸೇವಿಸಿದ ನಂತರ ನಿಮ್ಮ ಮಗುವಿನ ಬಾಯಿಯನ್ನು ತೆಳುವಾದ ಬಟ್ಟೆಯಿಂದ ಒರೆಸಿ.
* 3-6 ವರ್ಷಗಳವರೆಗೆ ಒಂದು ಬಟಾಣಿ ಕಾಳಿನಷ್ಟು ಗಾತ್ರದ ಫ್ಲೋರೈಡ್ ಟೂಥ್‌ಪೇಸ್ಟ್‌ನಿಂದ ಮಗುವಿನ ಹಲ್ಲುಗಳನ್ನು ಉಜ್ಜಿ.
* ಯಾವುದೇ ಕಾರಣಕ್ಕು ಪೆಸಿಫೈರ್‌ಗೆ ಸಕ್ಕರೆಯನ್ನು ಲೇಪಿಸಬೇಡಿ ಅಥವಾ ಸಕ್ಕರೆ ದ್ರಾವಣದಲ್ಲಿ ಅದ್ದಬೇಡಿ.
* ಒಂದು ವರ್ಷದ ನಂತರ ನಿಮ್ಮ ಮಗುವಿಗೆ ಫೀಡಿಂಗ್ ಬಾಟಲ್ ಬದಲಿಗೆ ಬಟ್ಟಲಿನಲ್ಲಿ ಆಹಾರವನ್ನು ಸೇವಿಸಲು ಪ್ರೋತ್ಸಾಹಿಸಿ.
* ಹಲ್ಲುಗಳನ್ನಷ್ಟೇ ಅಲ್ಲ, ನಿಮ್ಮ ಮಗುವಿನ ದವಡೆಗಳನ್ನು ಸಹ ಬಟ್ಟೆಯಿಂದ ಒರೆಸಿ ಮತ್ತು ಮಸಾಜ್ ಮಾಡುವುದನ್ನು ಮರೆಯಬೇಡಿ.
* ಆರು ತಿಂಗಳಿಗೆ ಅಥವಾ ವರ್ಷಕ್ಕೊಮ್ಮೆ ದಂತ ವೈದ್ಯರ ಬಳಿಗೆ ನಿಮ್ಮ ಮಗುವನ್ನು ಕರೆದುಕೊಂಡು ಹೋಗುವುದನ್ನು ಮರೆಯಬೇಡಿ. ನಿಮ್ಮ ಮಗುವಿಗೆ ಹಲ್ಲಿನ ಸಮಸ್ಯೆ ಇದ್ದರು ಸಹ ತಪ್ಪದೆ ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿ.


* ನಿಮ್ಮ ಮಗು ಬಾಯಿಯಲ್ಲಿ ಫೀಡಿಂಗ್ ಬಾಟಲ್ ಅಥವಾ ಸಿಪ್ಪಿಂಗ್ ಕಪ್ ಇಟ್ಟುಕೊಂಡೇ ಮಲಗಲು ಬಿಡಬೇಡಿ.
* ನಿಮ್ಮ ಮಗುವಿಗೆ ಸಕ್ಕರೆ ಅಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸಲು ನೀಡಬೇಡಿ.
ಹೀಗೆ ಈ ಮೇಲಿನ ಸಲಹೆಗಳನ್ನು ಪಾಲಿಸಿ, ನಿಮ್ಮ ಮಗುವಿನ ಹಲ್ಲಿನ ಮತ್ತು ಬಾಯಿಯ ಆರೋಗ್ಯವನ್ನು ಕಾಪಾಡಿ. ಒಂದು ವೇಳೆ ನಿಮ್ಮ ಮಗುವು ಯಾವುದಾದರು ಹಲ್ಲಿನ ಸಮಸ್ಯೆಗಳ ಲಕ್ಷಣಗಳನ್ನು ತೋರಿಸಿದಾಗ, ತಪ್ಪದೆ ಚಿಕಿತ್ಸೆಯನ್ನು ಕೊಡಿಸಿ. ಈ ಚಿಕಿತ್ಸೆಯು ನಿಮ್ಮ ಮಗುವಿಗೆ ಇರುವ ಸಮಸ್ಯೆಯ ತೀವ್ರತೆಯ ಮೇಲೆ ಆಧಾರಿಸಿರುತ್ತದೆ.
English summary

Precautions and treatment for dental caries in infants

You do not want you little child to experience toothache. This is why you should inculcate the habit of maintaining good oral right from the time you baby pops her first tooth. Dental caries, also known as bottle tooth decay, is caused due to prolonged exposure of the baby’s teeth to drinks containing sugar like flavoured milk or formula, or more than normal level of fluoride. here we shares few tips to prevent dental caries in infants
X
Desktop Bottom Promotion