For Quick Alerts
ALLOW NOTIFICATIONS  
For Daily Alerts

ಗೋಧಿಯ ಸತ್ವದಲ್ಲಿದೆ ಮಕ್ಕಳ ಆರೋಗ್ಯದ ಗುಟ್ಟು....

By Jaya Subramanya
|

ನಾವು ಸೇವಿಸುವ ಆಹಾರದಲ್ಲಿ ಪೋಷಕಾಂಶ ಮತ್ತು ಶಕ್ತಿ ಪೂರೈಕೆಯ ಅಂಶಗಳು ಹೇರಳವಾಗಿದ್ದಾಗ ಮಾತ್ರ ರೋಗಗಳೊಂದಿಗೆ ಹೋರಾಡುವ ಶಕ್ತಿಯನ್ನು ನಮಗೆ ಪಡೆಯಲಾಗುತ್ತದೆ. ಸಸ್ಯ ಉತ್ಪನ್ನಗಳು, ಹಣ್ಣು, ತರಕಾರಿ, ಹೈನು ಉತ್ಪನ್ನಗಳು ಹೀಗೆ ನಿತ್ಯದ ಆಹಾರ ಕ್ರಮದಲ್ಲಿ ಬಹಳಷ್ಟು ಸತ್ವವಿರುವ ಅಂಶಗಳನ್ನು ನಾವು ತೆಗೆದುಕೊಳ್ಳುತ್ತೇವೆ. ನಮಗೆ ಶಕ್ತಿಯನ್ನು ಒದಗಿಸುವ ಆಹಾರಗಳನ್ನೇ ನಾವು ಆರಿಸಿ ಸೇವಿಸುತ್ತೇವೆ ಆದರೆ ಮಕ್ಕಳಿಗೆ ನಾವುಗಳು ತಾನೇ ಉತ್ತಮ ಆಹಾರವನ್ನು ಆಯ್ಕೆಮಾಡಿ ನೀಡಬೇಕಾಗುತ್ತದೆ.

Importance Of Wheat For Kids

ಅವರಲ್ಲಿ ಕೂಡ ನಾವು ಉತ್ತಮ ಆಹಾರ ಪದ್ಧತಿಯನ್ನು ಬೆಳೆಸಿದಾಗ ಅವರಲ್ಲೂ ಆಹಾರ ಪದ್ಧತಿಯನ್ನು ಬೆಳೆಸಿಕೊಳ್ಳುವ ಅಭ್ಯಾಸವುಂಟಾಗುತ್ತದೆ. ಮಕ್ಕಳಿಗೆ ಯಾವ ಬಗೆಯ ಆಹಾರಪದಾರ್ಥವನ್ನು ನೀಡಬೇಕು ಎಂಬುದು ಹೆಚ್ಚಿನ ಹೆತ್ತವರಲ್ಲಿ ಗೊಂದಲವನ್ನುಂಟು ಮಾಡುವ ಸಂಗತಿಯಾಗಿದೆ. ಮಕ್ಕಳೇ! ಊಟದ ವಿಷಯದಲ್ಲಿ ಗಡಿಬಿಡಿ ಪಡಬಾರದು..!

ಆದಷ್ಟು ಅವರಿಗೆ ಫಾಸ್ಟ್ ಫುಡ್ ಆಹಾರಗಳನ್ನು ನೀಡುವುದಕ್ಕಿಂತ ನೈಸರ್ಗಿಕವಾಗಿರುವ ಆಹಾರಗಳನ್ನೇ ನೀಡಬೇಕು. ಪ್ರಕೃತಿಯಿಂದ ದೊರೆಯುವ ಆಹಾರವು ಅವರಲ್ಲಿ ಉತ್ತಮ ಆಹಾರ ಸೇವನೆಯ ಗುಣವನ್ನು ಬೆಳೆಸುವುದರೊಂದಿಗೆ ರೋಗ ರುಜಿನಗಳೊಂದಿಗೆ ಹೋರಾಡುವ ಶಕ್ತಿಯನ್ನು ನೀಡುತ್ತದೆ.

ಧಾನ್ಯಗಳು ಹೇಗೆ ಮಕ್ಕಳ ಆರೋಗ್ಯ ಕ್ರಮದಲ್ಲಿ ಪರಿಣಾಮವನ್ನು ಬೀರುತ್ತವೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಯಲಿದ್ದೇವೆ. ಅಕ್ಕಿ, ಗೋಧಿ, ರಾಗಿ, ಬಾರ್ಲಿ ಮೊದಲಾದವು ಹೆಚ್ಚು ಬಳಕೆಯಲ್ಲಿರುವ ಧಾನ್ಯವಾಗಿದ್ದು ನಾವು ಸೇವಿಸುವ ಆಹಾರದಲ್ಲಿ ಪ್ರಧಾನವಾಗಿರುತ್ತದೆ. ಮಕ್ಕಳಿಗೆ ಕೊಡಬಾರದ ಏಳು ಆಹಾರಗಳು

ಬೇಯಿಸುವ ವಿಧಾನ ಪ್ರತ್ಯೇಕವಾಗಿದ್ದು ಇವುಗಳ ಸೇವನೆಯಿಂದ ದೊರೆಯುವ ಶಕ್ತಿ ಪೂರೈಕೆ ಕೂಡ ಭಿನ್ನವಾಗಿರುತ್ತದೆ. ಎಷ್ಟೇ ಧಾನ್ಯಗಳಿದ್ದರೂ ಗೋಧಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನಾವು ನೀಡುತ್ತೇವೆ. ಇದು ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು ದೊರೆಯುವಿಕೆ ಕೂಡ ಸುಲಭವಾಗಿದೆ.

ಮಕ್ಕಳಿಗೆ ಈ ಧಾನ್ಯವನ್ನು ನೀಡುವುದರಿಂದ ಬಹಳಷ್ಟು ಆರೋಗ್ಯ ಪ್ರಯೋಜನಗಳಿದ್ದು, ಮಕ್ಕಳ ಸಂಪೂರ್ಣ ಬೆಳವಣಿಗೆಗೆ ಗೋಧಿಯು ಅತ್ಯುತ್ತಮವಾದುದು.ಮಕ್ಕಳಿಗೆ ಗೋಧಿ ಏಕೆ ಮುಖ್ಯವಾದುದು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ. ಊಟದ ವಿಷಯದಲ್ಲಿ ಮಕ್ಕಳು ರಂಪಾಟ ಮಾಡುತ್ತಾರೆಯೇ?

ಜವೆಗೋಧಿ+ಹಣ್ಣಿನ ಜ್ಯೂಸ್ ಅಥವಾ ಹಾಲು
ಒಂದು ಕಪ್ ನೀರನ್ನು ಬಿಸಿ ಮಾಡಿ ಮತ್ತು ¼ ಕಪ್ ಜವೆಗೋಧಿಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಂಡು ಅದಕ್ಕೆ ಹಾಕಿ. 10 ನಿಮಿಷಗಳ ಕಾಲ ಅದನ್ನು ಕುದಿಸಿ ಮತ್ತು ಸೌಟಿನಲ್ಲಿ ತಿರುಗಿಸುತ್ತಾ ಇರಿ. ಇದಕ್ಕೆ ಸ್ವಲ್ಪ ಹಣ್ಣಿನ ಜ್ಯೂಸ್, ಹಾಲು ಅಥವಾ ಮೊಲೆ ಹಾಲನ್ನು ಹಾಕಬಹುದು. ಮಗುವಿನ ಆಹಾರಕ್ರಮದಲ್ಲಿ ಓಟ್ಸ್‌ಗೂ ಪ್ರಾಮುಖ್ಯತೆ ನೀಡಿ!

ಜವೆಗೋಧಿ ಸಲಾಡ್
ಜವೆಗೋಧಿಯ ಸಲಾಡ್ ಅನ್ನು ಆರು ತಿಂಗಳು ಮೇಲ್ಪಟ್ಟ ಮಕ್ಕಳಿಗೆ ಮಾತ್ರ ನೀಡತಕ್ಕದ್ದು. ಹದವಾಗಿ ಬೇಯಿಸಿದ ಜವೆಗೋಧಿ, ಬೇಯಿಸಿದ ಕ್ಯಾರೆಟ್, ಬೇಯಿಸಿದ ಬಟಾಣಿ ಮತ್ತು ಸಣ್ಣ ಸಣ್ಣ ತುಂಡುಗಳಾಗಿ ಬೇಯಿಸಿದ ಕೋಳಿ ಮಾಂಸವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಎಲ್ಲವನ್ನು ಸಣ್ಣ ಪಾತ್ರೆಯಲ್ಲಿ ಹಾಕಿ ಮಿಶ್ರಣ ಮಾಡಿಕೊಂಡು ಸ್ವಲ್ಪ ಸ್ವಲ್ಪವೇ ನಿಮ್ಮ ಮಗುವಿಗೆ ನೀಡಿ. ಮಗುವಿಗೆ ಮಾಂಸಾಹಾರಿ ಆಹಾರ ನೀಡುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.

ಗೋಧಿ - ಕಾರ್ಬೋಹೈಡ್ರೇಟ್‎ಗಳ ಆಗರವಾಗಿದೆ
ಕಾರ್ಬೋಹೈಡ್ರೇಟ್‎ಗಳ ಆಗರವಾಗಿರುವ ಗೋಧಿಯು ಪ್ರತಿಯೊಬ್ಬರಿಗೂ ಉತ್ತಮ ಪ್ರಮಾಣದ ಶಕ್ತಿಯನ್ನು ಒದಗಿಸುತ್ತದೆ ಗೋಧಿಯಿಂದ ಮಾಡಿದ ಬ್ರೆಡ್ ಮಕ್ಕಳಿಗೆ ಉತ್ತಮ ಪ್ರಮಾಣದ ಶಕ್ತಿ ಪ್ರಮಾಣವನ್ನು ನೀಡುತ್ತದೆ. ಈ ಶಕ್ತಿಯು ಮಕ್ಕಳ ನೈಸರ್ಗಿಕ ಬೆಳವಣಿಗೆಗೆ ಅಗತ್ಯವಾಗಿದ್ದು ತಮ್ಮ ದೈಹಿಕ ಬೆಳವಣಿಗೆಯಲ್ಲಿ ಆತ್ಮವಿಶ್ವಾಸವನ್ನು ಮಕ್ಕಳು ಪಡೆದುಕೊಂಡಿರುತ್ತವೆ.

ವಿಟಮಿನ್‎ಗಳ ಆಗರ
ಕಾರ್ಬೋಹೈಡ್ರೇಟ್‎ಗಳಂತೆಯೇ, ವಿಟಮಿನ್‎ಗಳನ್ನು ತನ್ನಲ್ಲಿ ಹೇರಳವಾಗಿ ಗೋಧಿ ಪಡೆದುಕೊಂಡಿದೆ. ಮಕ್ಕಳ ಮೆದುಳು ಮತ್ತು ದೇಹಕ್ಕೆ ಗೋಧಿಯು ಶಕ್ತಿಯನ್ನು ಪೂರೈಸುತ್ತದೆ. ಇದರಲ್ಲಿ ಕ್ಲೋರಫಿಲ್ ಇದ್ದು ಇದು ವಿಟಮಿನ್ ಬಿ ಮತ್ತು ಇತರ ಅಂಶಗಳನ್ನು ಹಾಗೂ ಮಿನರಲ್‎ಗಳನ್ನು ಮಕ್ಕಳಿಗೆ ಪೂರೈಸುತ್ತದೆ ರಕ್ತವನ್ನು ಶುದ್ಧೀಕರಿಸುವುದಲ್ಲದೆ, ಮಕ್ಕಳ ನೈಸರ್ಗಿಕ ಬೆಳವಣಿಗೆಗೆ ಇದು ಅತಿಮುಖ್ಯವಾದುದಾಗಿದೆ.

ಜೀರ್ಣಕ್ರಿಯೆಗೆ
ಇತರ ಧಾನ್ಯಗಳಂತೆ, ಗೋಧಿಯು ಸರಳವಾಗಿದ್ದು ಜೀರ್ಣಕ್ರಿಯೆಯನ್ನು ಸುಲಲಿತವಾಗಿ ಮಾಡುತ್ತದೆ. ಇದು ಮಕ್ಕಳಿಗೆ ಹೆಚ್ಚು ಪ್ರಯೋಜನಕಾರಿಯೂ ಆಗಿದೆ. ಮಕ್ಕಳಲ್ಲಿ ನೈಸರ್ಗಿಕ ಅಭ್ಯಾಸವನ್ನು ಹೆತ್ತವರು ಅಳವಡಿಸಿದಲ್ಲಿ ಅವರು ತಮಗೆ ಬೇಕಾದ ಪ್ರಮಾಣದಲ್ಲಿ ನ್ಯೂಟ್ರಿಶಿಯನ್ ಆಹಾರವನ್ನು ಪಡೆದುಕೊಳ್ಳುತ್ತಾರೆ.
ಈ ನ್ಯೂಟ್ರಿಶಿಯನ್ ಅವರನ್ನು ಬೇರೆ ಬೇರೆ ಕಾಯಿಲೆಗಳಿಂದ ಸಂರಕ್ಷಿಸುತ್ತದೆ. ವಾಯು, ಎರಡೂ ಕರುಳುಗಳಲ್ಲಿರುವ ನೋವು ಹಾಗೂ ವಾಕರಿಕೆಯನ್ನು ಇದು ತಡೆಯುತ್ತದೆ. ದೀರ್ಘ ಸಮಯದವರೆಗೆ ಗಂಭೀರ ದೈಹಿಕ ಸಮಸ್ಯೆಗಳಿಂದ ಗೋಧಿಯು ಅವರನ್ನು ರಕ್ಷಿಸುತ್ತದೆ.

ಗೋಧಿಯು ನೈಸರ್ಗಿಕ ವಿರೇಚಕ
ಗೋಧಿಯಲ್ಲಿ ಹೆಚ್ಚು ಪ್ರಮಾಣದ ಫೈಬರ್ ಇದ್ದು ಇದು ಅತ್ಯದ್ಭುತ ವಿರೇಚಕವನ್ನುಂಟು ಮಾಡುತ್ತದೆ. ಸೇವಿಸುವವರಿಗೆ ಇದು ಹೆಚ್ಚು ಪ್ರಯೋಜನಕಾರಿ ಎಂದೆನಿಸಿದ್ದು, ಮಕ್ಕಳ ಆರೋಗ್ಯಕ್ಕೂ ಇದು ಲಾಭಕರವಾಗಿದೆ.
ನಾರಿನ ಅಂಶವು ಜೀರ್ಣಕ್ರಿಯೆಯನ್ನು ಸುಲಲಿತಗೊಳಿಸುತ್ತದೆ, ಮತ್ತು ಇದರಿಂದ ದೇಹವು ಎಲ್ಲಾ ವಿಷಕಾರಿ ಮತ್ತು ಬೇಡದೇ ಇರುವ ಪದಾರ್ಥಗಳಿಂದ ಮುಕ್ತವಾಗಿರುತ್ತದೆ. ಮಲಬದ್ಧತೆ ಸಮಸ್ಯೆಯಿಂದ ಮಕ್ಕಳು ಬಳಲುತ್ತಿದ್ದಲ್ಲಿ ಇದು ಅವರಿಗೆ ನೆರವಾಗಲಿದೆ.

ಇಷ್ಟಲ್ಲದೇ, ಮಕ್ಕಳ ಆರೋಗ್ಯ ಪ್ರಯೋಜನದಲ್ಲಿ ಅತ್ಯುತ್ತಮ ಎಂದೆನಿಸಿರುವ ಗೋಧಿಯು ಅವರನ್ನು ದೈಹಿಕವಾಗಿ ಸುರಕ್ಷಿತವಾಗಿರಿಸುತ್ತದೆ ಮತ್ತು ರೋಗ ರುಜಿನಗಳಿಂದ ಕಾಪಾಡುತ್ತದೆ. ನಿತ್ಯವೂ ಗೋಧಿಯನ್ನು ಸೇವಿಸುವುದು ಬಾಯಿ, ಹೊಟ್ಟೆ, ಅನ್ನನಾಳ ಮತ್ತು ಕರುಳನ್ನು ಪರಿಪೂರ್ಣ ಸ್ಥಿತಿಯಲ್ಲಿ ಇರಿಸುತ್ತದೆ.

ಆದ್ದರಿಂದ ಮಕ್ಕಳಿಗೆ ಗೋಧಿಯಿಂದ ಮಾಡಿದ ಆಹಾರವನ್ನು ನೀಡಲು ಯಾವ ವಯಸ್ಸು ಸೂಕ್ತ ಎಂಬುದನ್ನು ಆಲೋಚಿಸದೇ ಅವರಲ್ಲಿ ಆರೋಗ್ಯ ಪೂರ್ಣ ಪರಿಪಾಠವನ್ನು ಬೆಳೆಯಿಸಿ. ಉತ್ತಮ ಅಭ್ಯಾಸವನ್ನು ಅಳವಡಿಸುವಂತೆ ಮಾಡಲು ನಿರ್ದಿಷ್ಟ ಸಮಯವನ್ನು ನೋಡುವ ಅಗತ್ಯವಿಲ್ಲ.

English summary

Importance Of Wheat For Kids

Though there is some confusion about why wheat is important for children and from what age should they be fed with this, everyone accepts that wheat has some amazing health benefits, hence it is the perfect choice to be given to children as well.
Story first published: Tuesday, August 2, 2016, 20:01 [IST]
X
Desktop Bottom Promotion