For Quick Alerts
ALLOW NOTIFICATIONS  
For Daily Alerts

ಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ಗೊರಕೆ ಅಡ್ಡಗಾಲು ಆಗಬಹುದು!!

By Manu
|

ಗೊರಕೆಯ ಅಭ್ಯಾಸ ಕೆಲವು ಮಕ್ಕಳಲ್ಲಿಯೂ ಕಂಡುಬರುತ್ತದೆ. ಅದರಲ್ಲೂ ಕೊಂಚ ಸ್ಥೂಲವಾಗಿರುವ ಮಕ್ಕಳಲ್ಲಿ ಗೊರಕೆಯ ಅಭ್ಯಾಸ ಹೆಚ್ಚಾಗಿ ಕಂಡುಬರುತ್ತಿದೆ. ಆದರೆ ಈ ಅಭ್ಯಾಸದ ಕಾರಣ ಅವರ ಕಲಿಕಾ ಸಾಮರ್ಥ ಮತ್ತು ತನ್ಮೂಲಕ ವಾರ್ಷಿಕ ಪರೀಕ್ಷೆಗಳ ಅಂಕಗಳಲ್ಲಿ ಕಡಿಮೆಯಾಗಿರುವುದನ್ನು ಹೊಸ ಸಂಶೋಧನೆಯೊಂದು ಸಾಬೀತುಪಡಿಸಿದೆ. ಈ ಸಂಶೋಧನೆಯ ಪ್ರಕಾರ ಗೊರಕೆ ಹೊಡೆಯುವ ಮಕ್ಕಳಲ್ಲಿ ಕಲಿಕಾ ಸಾಮರ್ಥ ಕಡಿಮೆಯಾಗುತ್ತದೆ. ಇದಕ್ಕೆ ಗಾಢನಿದ್ದೆಯ ಕೊರತೆಯೇ ಪರೋಕ್ಷವಾಗಿ ಕಾರಣ ಎಂದು ಕಂಡುಕೊಳ್ಳಲಾಗಿದೆ.

 Does Snoring Kids May Score Low Grades at School?

ಆದರೆ ಗೊರಕೆ ಹೊಡೆಯುವ ಅಭ್ಯಾಸ ಎಲ್ಲಾ ಮಕ್ಕಳಲ್ಲಿ ಏಕಪ್ರಕಾರವಾಗಿ ಕಾಣಿಸಿಕೊಳ್ಳುವುದಿಲ್ಲ. ಕೆಲವು ಮಕ್ಕಳು ಅಪರೂಪಕ್ಕೆ ಅಂದರೆ ಅತಿ ಹೆಚ್ಚು ಆಟವಾಡಿ ದಣಿದ ಬಳಿಕ, ಕೆಲವು ಮಕ್ಕಳು ಅಸಮಾಧಾನಪಟ್ಟುಕೊಂಡು ಮಲಗಿದ ಬಳಿಕ ಗೊರಕೆ ಹೊಡೆಯುತ್ತಾರೆ. ಈ ಗೊರಕೆಗಳು ತಾತ್ಕಾಲಿಕವಾಗಿದ್ದು ಈ ಪರಿಯಿಂದ ಯಾವುದೇ ಅಪಾಯವಿಲ್ಲ. ಆದರೆ ನಿತ್ಯವೂ ಮಲಗಿದ ಕೊಂಚವೇ ಹೊತ್ತಿನಲ್ಲಿ ಗೊರಕೆ ಹೊಡೆದರೆ ಮಾತ್ರ ಆತಂಕಕಾರಿಯಾಗಿದ್ದು ಇದೇ ಮಗುವಿನ ಕಲಿಕಾಸಾಮರ್ಥ್ಯ ಮತ್ತು ಏಕಾಗ್ರತೆಗೆ ಅಡ್ಡಿಯಾಗುತ್ತದೆ.

ಗೊರಕೆ ಹೊಡೆಯುವ ಮಗುವಿಗೆ ಇದೊಂದೇ ತೊಂದರೆಯಲ್ಲ, ಇತರ ದೈಹಿಕ ತೊಂದರೆಗಳೂ ಎದುರಾಗಬಹುದು. ವಿಶೇಷವಾಗಿ ಉಸಿರಾಟದ ತೊಂದರೆ. ದಿನಗಳೆದಂತೆ ಗೊರಕೆ ಹೆಚ್ಚಾಗುತ್ತಾ ಹೋದರೆ ಪ್ರಾಪ್ತವಯಸ್ಕರಾಗುವ ವೇಳೆಗೆ ಗಹನವಾದ ಉಸಿರಾಟದ ತೊಂದರೆಗೆ ಸಿಲುಕಿಕೊಳ್ಳಬಹುದು. ಆದ್ದರಿಂದ ತಕ್ಷಣವೇ ವೈದ್ಯರ ಬಳಿ ತಪಾಸಣೆಗೊಳಪಡಿಸಿ ಸೂಕ್ತ ಚಿಕಿತ್ಸೆ ಮತ್ತು ಅವಶ್ಯವೆಂದು ಕಂಡುಬಂದರೆ ಚಿಕ್ಕ ಶಸ್ತ್ರಚಿಕಿತ್ಸೆಯನ್ನೂ ನಡೆಸಬೇಕಾಗಬಹುದು.

ಈ ನಿಟ್ಟಿನಲ್ಲಿ ಸಂಶೋಧನೆ ನಡೆಸಿದ ತಜ್ಞರು ಐದು ವರ್ಷದಿಂದ ಏಳುವರ್ಷದ ನಡುವಣ ವಯಸ್ಸಿನ 1300ಕ್ಕೂ ಹೆಚ್ಚು ಮಕ್ಕಳನ್ನು ತಪಾಸಣೆಗೊಳಪಡಿಸಿ ಸಂಗ್ರಹಿಸಿದ ಮಾಹಿತಿಯ ವಿಶ್ಲೇಷಣೆಯಿಂದ ಈ ಮಾಹಿತಿಗಳನ್ನು ಪಡೆಯಲಾಗಿದೆ. ಗೊರಕೆ ಹೊಡೆಯುವ ಮತ್ತು ಹೊಡೆಯದ ಮಕ್ಕಳ ಗುಂಪಾಗಿಸಿ ವಿವಿಧ ಪ್ರಶ್ನೆಗಳನ್ನು ಕೇಳಲಾಯ್ತು. ಒಟ್ಟಾರೆ ಫಲಿತಾಂಶದಿಂದ ಗೊರಕೆ ಹೊಡೆಯದ ಮಕ್ಕಳ ಮೆದುಳಿನ ಕ್ಷಮತೆ ಇತರರಿಗಿಂತ ಕೊಂಚ ಹೆಚ್ಚಾಗಿದ್ದುದು ಕಂಡುಬಂದಿದೆ.

ಆದ್ದರಿಂದ, ಒಂದು ವೇಳೆ ನಿಮ್ಮ ಮಕ್ಕಳಲ್ಲಿ ಯಾರಿಗಾದರೂ ಗೊರಕೆ ಹೊಡೆಯುವ ಅಭ್ಯಾಸವಿದ್ದರೆ ಮತ್ತು ಇವರ ಅಂಕಗಳು ಕಡಿಮೆ ಇದ್ದರೆ ಇವೆರಡರ ನಡುವೆ ಗಾಢಸಂಬಂಧವಿರಬಹುದು. ಆದ್ದರಿಂದ ತಡಮಾಡದೇ ಮೂಗಿನ ತಜ್ಞವೈದ್ಯರ ಬಳಿ ತಪಾಸಣೆ ಮತ್ತು ಅಗತ್ಯ ಪರೀಕ್ಷೆಗಳನ್ನು ಮಾಡಿಸಿ ಸೂಕ್ತ ಚಿಕಿತ್ಸೆಯನ್ನು ಪಡೆಯುವ ಮೂಲಕ ಮಕ್ಕಳ ಆರೋಗ್ಯ ಮತ್ತು ಮೆದುಳಿನ ಕ್ಷಮತೆ ಹೆಚ್ಚಿಸಿ ಆರೋಗ್ಯವಂತರಾಗಿಸಲು ಮತ್ತು ಬುದ್ದಿಶಾಲಿಗಳಾಗಿಸಲೂ ನೆರವಾಗಬಹುದು.

English summary

Does Snoring Kids May Score Low Grades at School?

Does your child's low grades at school trouble you? Then check if your child is snoring ... 'Sleep apnea can affect the concentration and learning abilities of children, leading to poor academic grades.' The study further claims that snoring could also affect a kid's cognitive abilities. As snoring could affect the quality of sleep, it could indirectly affect a kids' performance.
Story first published: Friday, May 27, 2016, 9:56 [IST]
X
Desktop Bottom Promotion