Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳನ್ನು ದಿಕ್ಕು ತಪ್ಪಿಸುತ್ತಿರುವ ವಿಡಿಯೋ ಗೇಮ್ ಎಂಬ ವೈರಸ್!
ಒಂದು ನೂತನ ಸಮೀಕ್ಷೆಯ ಪ್ರಕಾರ ಅತಿಹೆಚ್ಚು ವೀಡಿಯೋ ಆಟಗಳನ್ನು ಆಡುವ ಮಕ್ಕಳ ಕಲಿಕಾ ಸಾಮರ್ಥ್ಯ ಕುಂಠಿತಗೊಂಡು ಅವರ ಅಂಕಗಳಲ್ಲಿ ಭಾರೀ ಬದಲಾವಣೆ ಕಂಡುಬರುತ್ತದೆ. ಅದೇ ಹೊತ್ತಿನಲ್ಲಿ ಮಕ್ಕಳು ತಮ್ಮ ವಯಸ್ಸಿಗನುಗುಣವಾಗಿ ತೋರಬೇಕಾದ ಆಸಕ್ತಿಯನ್ನು ಇತರ ವಿಷಯಗಳತ್ತ ತೋರದೇ ಕೇವಲ ಆಟ ಮತ್ತು ಆಟದಲ್ಲಿ ಬರುವ ಪಾತ್ರಗಳತ್ತಲೇ ಕೇಂದ್ರೀಕರಿಸುವ ಮೂಲಕ ಸಮಾಜದಿಂದಲೂ ದೂರಾಗುತ್ತಾ ಬರುತ್ತಾರೆ.

ಈ ವಿಷಯವನ್ನು ಅಭ್ಯಸಿಸಿದ ಸಂಶೋಧಕರು ಮಕ್ಕಳು ತಮ್ಮ ಗೇಮ್‌ಗಳಲ್ಲಿ ಕಳೆಯುವ ಸಮಯಕ್ಕೂ ಅವರ ಅಭ್ಯಾಸದ ಮೂಲಕ ಕಲಿಯಬೇಕಾದ ವಿಷಯಗಳಲ್ಲಿ ಕಡಿಮೆಯಾಗಿರುವುದಕ್ಕೂ ನೇರ ಸಂಬಂಧವಿರುವುದನ್ನು ದೃಢೀಕರಿಸಿದ್ದಾರೆ. ವಿಡಿಯೋ ಗೇಮ್‌ಗಳಿಗೆ ವ್ಯಸನರಾಗಿರುವ ಸುಮಾರು ಅದು ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಸಂಶೋಧಕರು ಅಭ್ಯಸಿಸಿ ಅವರ ಪರೀಕ್ಷೆಯ ಅಂಕಗಳನ್ನೂ ಇತರ ಚಟುವಟಿಕೆಗಳನ್ನೂ ಮತ್ತು ಸ್ವತಃ ಇತರ ವಿಷಯಗಳ ಕುರಿತಾದ ಪ್ರಶ್ನೆಗಳನ್ನು ಕೇಳುವ ಮೂಲಕ ಅಪಾರ ಮಾಹಿತಿ ಕಲೆಹಾಕಿ ಅಮೂಲ್ಯ ಮಾಹಿತಿಗಳನ್ನು ನೀಡಿದ್ದಾರೆ. ಆಧುನಿಕ ತಂತ್ರಜ್ಞಾನ ಮಕ್ಕಳನ್ನು ದಿಕ್ಕು ತಪ್ಪಿಸುತ್ತಿದೆಯೇ?
ಇದರ ಫಲಿತಾಂಶವೇನೆಂದರೆ ಕಂಪ್ಯೂಟರ್ ಮತ್ತು ವಿಡಿಯೋ ಗೇಮ್ ಗಳಲ್ಲಿ ಕೊಂಚಕಾಲ, ಅಂದರೆ ಪಾಲಕರು ನಿಗದಿಪಡಿಸಿದಷ್ಟು ಕಾಲ ಮಾತ್ರ ಆಡಿದ ಮಕ್ಕಳು ಉತ್ತಮ ಸಾಧನೆ ತೋರಿದ್ದು ಅತಿಹೆಚ್ಚು ಆಟ ಆಡಿದವರೂ, ಕೊಂಚವೂ ಆಡದೇ ಇದ್ದವರೂ ಕಳಪೆ ಸಾಧನೆ ತೋರಿದ್ದಾರೆ.
ವ್ಯತಿರಿಕ್ತವಾಗಿ ತಮ್ಮ ಸ್ವಂತ ವಿಡಿಯೋ ಗೇಮ್‌ಗಳನ್ನು ಹೊಂದಿರುವ ಮಕ್ಕಳಿಗೆ ಅವರ ಪಾಲಕರೇ ಪರೋಕ್ಷವಾಗಿ ಪ್ರೋತ್ಸಾಹ ನೀಡುತ್ತಿದ್ದರೆ (ಅಂದರೆ ಒಂದು ಲೆವೆಲ್ ಗೆದ್ದಾಗ ಮಕ್ಕಳೊಂದಿಗೆ ತಾವೂ ಸಂಭ್ರಮಿಸಿ ಮುಂದಿನ ಲೆವೆಲ್‌ಗೆ ಹೋಗಲು ಪ್ರೋತ್ಸಾಹಿಸಿದರೆ) ಇಂತಹ ಮಕ್ಕಳ ಕಲಿಕೆಯಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡುಬಂದಿದೆ.
ಅಲ್ಲದೇ ಮನೆಯಲ್ಲಿ ಕಂಪ್ಯೂಟರ್ ಇಲ್ಲದೇ ಇರುವ ಅಥವಾ ಇದ್ದರೂ ಆಡಲಿಕ್ಕೆ ಅವಕಾಶವೇ ಇಲ್ಲದ ಮಕ್ಕಳೂ ಅತಿ ಕಳಪೆ ಅಂಕಗಳನ್ನು ಪಡೆದಿದ್ದಾರೆ. ಅದರಲ್ಲೂ ಯಾವ ಆಟದಲ್ಲಿ ಕೊಲ್ಲುವ ಮೂಲಕ ಗೆಲುವನ್ನು ಸಾಧಿಸಲಾಗುತ್ತದೋ ಆ ಮಕ್ಕಳಲ್ಲಿ ಕೋಪ, ಸೇಡಿನ ಮನೋಭಾವಗಳೇ ತುಂಬಿಕೊಳ್ಳುತ್ತಾ ದೊಡ್ಡವರಾದ ಬಳಿಕ ಭಿನ್ನವಾಗಿ ಯೋಚಿಸುವಂತೆ, ತನ್ಮೂಲಕ ಸಮಾಜಘಾತುಕರಾಗಲೂ ಕಾರಣವಾಗುತ್ತದೆ ಎಂದು ಒಂದು ಸಮೀಕ್ಷೆ ತಿಳಿಸುತ್ತದೆ.
ಆದ್ದರಿಂದ ಮಕ್ಕಳಿಗೆ ಕಂಪ್ಯೂಟರ್ ಆಟವೂ ಇತರ ಆಟಗಳಂತೆ ಒಂದು ನಿರ್ದಿಷ್ಟ ಸಮಯದವರೆಗೆ ಮಾತ್ರ ಆಡಲು ನೀಡಿ ಇತರ ಚಟುವಟಿಕೆಗಳಲ್ಲಿಯೂ ಭಾಗಿಯಾಗುವಂತೆ ಮಾಡುವ ಮೂಲಕ ಉತ್ತಮ ಭಾವನಾತ್ಮಕ ಸಂಬಂಧ ಹೊಂದಲು ಸಾಧ್ಯ.



Click it and Unblock the Notifications




