For Quick Alerts
ALLOW NOTIFICATIONS  
For Daily Alerts

ತರಕಾರಿ ಊಟ ಎಂದಾಕ್ಷಣ ಮಕ್ಕಳು ಮುಖ ಸಿಂಡರಿಸುತ್ತಾರೆಯೇ?

By Hemanth
|

ತರಕಾರಿಯಲ್ಲಿರುವ ವಿಟಮಿನ್, ಪೋಷಕಾಂಶಗಳು ನಮ್ಮನ್ನು ಆರೋಗ್ಯವಾಗಿಡುವಲ್ಲಿ ಪ್ರಮುಖಪಾತ್ರ ವಹಿಸುತ್ತದೆ. ಆದರೂ ಹೆಚ್ಚಿನವರು ತರಕಾರಿಯೆಂದರೆ ಮಾರು ದೂರ ಓಡಿ ಹೋಗುತ್ತಾರೆ. ಪ್ರತೀ ದಿನ ಮಾಂಸಾಹಾರ ಸೇವನೆ ಮಾಡುವವರಿಗಂತೂ ತರಕಾರಿ ಅಲರ್ಜಿ. ದೊಡ್ಡವರು ಹಾಗಿರಲಿ, ಮಕ್ಕಳು ಕೂಡ ತರಕಾರಿ ಎಂದರೆ ಮುಖ ಸಿಂಡರಿಸುತ್ತಾರೆ.

ಮಕ್ಕಳಿಗೆ ಆರೋಗ್ಯಕರ ಆಹಾರ ಅಥವಾ ತರಕಾರಿಯುಕ್ತ ಆಹಾರ ತಿನ್ನಿಸುವುದು ಕಠಿಣ ಕೆಲಸ. ಇದರ ರುಚಿ ಅವರ ನಾಲಗೆಗೆ ಹಿಡಿಸುವುದಿಲ್ಲ ಮತ್ತು ತರಕಾರಿ ಪದಾರ್ಥ ಅಥವಾ ಆಹಾರ ನೋಡಿದ ಕೂಡಲೇ ನೋ ಎಂದು ಬೊಬ್ಬೆ ಹಾಕುತ್ತಾರೆ.

ಮಕ್ಕಳಲ್ಲಿನ ಆನಾರೋಗ್ಯಕರ ಆಹಾರ ಕ್ರಮವನ್ನು ಬದಲಾಯಿಸುವುದು ಅತೀ ಮುಖ್ಯ. ಇಲ್ಲದೇ ಇದ್ದಲ್ಲಿ ಅವರು ಬೊಜ್ಜಿನಂತಹ ಗಂಭೀರ ಸಮಸ್ಯೆಗೆ ಒಳಗಾಗಬಹುದು ಮತ್ತು ತರಕಾರಿಯಲ್ಲಿರುವ ಪೋಷಕಾಂಶಗಳು ಅವರಿಗೆ ಸಿಗದೇ ಇರಬಹುದು. ತರಕಾರಿ ಆಹಾರಗಳನ್ನು ಸೇವಿಸಿ ಎಂದು ನಿಮ್ಮ ಮಕ್ಕಳನ್ನು ಒತ್ತಾಯಿಸಲು ಸಾಧ್ಯವಿಲ್ಲ. ಆದರೆ ತರಕಾರಿ ಪದಾರ್ಥಗಳನ್ನು ರುಚಿಕರವಾಗಿ ಮಾಡಿ ಬಡಿಸಿದರೆ ಆಗ ಮಕ್ಕಳು ಅದನ್ನು ತಿನ್ನಲು ಇಷ್ಟಪಡುತ್ತಾರೆ.

ಮಕ್ಕಳು ಪೋಷಕಾಂಶ ಭರಿತವಾದ ಆಹಾರವನ್ನು ತಿಂದು ಆರೋಗ್ಯವಾಗಿ ಉಳಿಯುವಂತೆ ಮಾಡುವುದು ಹೆತ್ತವರಾದ ನಿಮ್ಮ ಕರ್ತವ್ಯ. ಯಾವತ್ತೂ ಮಕ್ಕಳಿಗೆ ಒತ್ತಾಯಪೂರ್ವಕವಾಗಿ ತರಕಾರಿ ತಿನ್ನಿಸಲು ಹೋಗಬೇಡಿ. ಯಾಕೆಂದರೆ ಇದರಿಂದ ಮಕ್ಕಳು ಮುಂದೆ ಯಾವತ್ತೂ ತಮ್ಮ ತಿನ್ನುವ ಅಭ್ಯಾಸವನ್ನು ಬದಲಾಯಿಸಲು ಸಾಧ್ಯವಿಲ್ಲ. ನಿಮ್ಮ ಮಕ್ಕಳು ತರಕಾರಿ ತಿನ್ನುವಂತೆ ಮಾಡುವ ಕೆಲವೊಂದು ರುಚಿಕರವಾದ ವಿಧಾನಗಳು ಇಲ್ಲಿವೆ. ಬೆಳೆಯುವ ಮಕ್ಕಳ ಆಹಾರ ಪದ್ಧತಿ ಬಗ್ಗೆ ಗಮನವಿರಲಿ

ರುಚಿಕರವಾದ ರೋಲ್ ಮಾಡಿ

Tasty Ways To Make Your Kids Eat Veggies

ಕೇವಲ ಚಪಾತಿ ಕೊಟ್ಟರೆ ಮಕ್ಕಳು ಅದನ್ನು ತಿನ್ನುವುದು ಕಷ್ಟ. ಅದಕೋಸ್ಕರ ನೀವು ತರಕಾರಿಗಳನ್ನು ಬೇಯಿಸಿ, ಅದಕ್ಕೆ ಸ್ವಲ್ಪ ರುಚಿಕರವಾದ ಮಸಾಲೆ ಸೇರಿಸಿ ತದನಂತರ ಅದಕ್ಕೆ ಬೆಣ್ಣೆ ಹಾಕಿದ ಚಪಾತಿಗೆ ಹಾಕಿ ರೋಲ್ ಮಾಡಿ. ತರಕಾರಿಯೊಂದಿಗೆ ಮಕ್ಕಳಿಗೆ ಚಪಾತಿ ತಿನ್ನುವುದು ತುಂಬಾ ರುಚಿಕರವಾಗಿರುತ್ತದೆ.

ಆರೋಗ್ಯಕರ ಪಾಸ್ತಾ

Tasty Ways To Make Your Kids Eat Veggies

ನೀವು ಇಡೀ ಧಾನ್ಯಗಳ ಪಾಸ್ತಾವನ್ನು ಮಾಡಿ ಅದಕ್ಕೆ ಎಲ್ಲಾ ರೀತಿಯ ತರಕಾರಿಗಳನ್ನು ಸೇರಿಸಬಹುದು. ಎಲ್ಲಾ ಮಕ್ಕಳು ಪಾಸ್ತಾವನ್ನು ಇಷ್ಟಪಡುತ್ತಾರೆ ಮತ್ತು ಮಕ್ಕಳಿಗೆ ತರಕಾರಿ ತಿನ್ನಿಸಲು ಇದು ಅತ್ಯುತ್ತಮವಾದ ವಿಧಾನ.

ತರಕಾರಿಯನ್ನು ಫ್ರೈ ಮಾಡಿ

Tasty Ways To Make Your Kids Eat Veggies

ಒಮೆಗಾ 3ಯನ್ನು ಹೊಂದಿರುವಂತಹ ಆಲಿವ್ ಆಯಿಲ್‌ನಿಂದ ನೀವು ತರಕಾರಿಯನ್ನು ಫ್ರೈ ಮಾಡಿ ಮತ್ತು ಅದು ಕುರುಕುರು ತಿಂಡಿಯಂತಾಗಲಿ. ಮಕ್ಕಳು ಕುರುಕಲು ತಿಂಡಿಯನ್ನು ತುಂಬಾ ಇಷ್ಟಪಡುತ್ತಾರೆಂದು ಅಧ್ಯಯನವೊಂದು ಹೇಳಿದೆ. ನೀವು ಫ್ರೆಂಚ್ ಫ್ರೈ, ಕ್ಯಾಬೇಜ್ ಅಥವಾ ಬ್ರಾಕೋಲಿಯನ್ನು ಫ್ರೈ ಮಾಡಿ ಮಕ್ಕಳಿಗೆ ನೀಡಬಹುದು.

ಹಸಿ ತರಕಾರಿ ನೀಡಬೇಡಿ

ಮಕ್ಕಳಿಗೆ ಯಾವತ್ತೂ ಹಸಿ ತರಕಾರಿಗಳನ್ನು ತಿನ್ನಿಸಲು ಹೋಗಬೇಡಿ. ಹಲವಾರು ಬಗೆಯ ತರಕಾರಿಗಳನ್ನು ಬೇಯಿಸಿ ಅದನ್ನು ಮಿಕ್ಸರ್ ಗೆ ಹಾಕಿ ಪೇಸ್ಟ್ ಮಾಡಿ. ಪೇಸ್ಟ್ ನ್ನು ಮತ್ತೆ ಬಿಸಿ ಮಾಡಿ ಅದಕ್ಕೆ ಜೀರಿಗೆ, ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಚೀಸ್ ನ ಕ್ಯೂಬ್ ಹಾಕಿ. ಇದನ್ನು ಸೂಪ್ ನಂತೆ ಬಟಾಟೆ ಫ್ರೈಯೊಂದಿಗೆ ನೀಡಿ. ಮಕ್ಕಳಿಗಾಗಿ ಟಾಪ್ 6 ಆರೋಗ್ಯಕರ ಮಿಲ್ಕ್‌ಶೇಕ್‌ಗಳು

Tasty Ways To Make Your Kids Eat Veggies

ವೆಜ್ ಪಫ್ಸ್ ಮಾಡಿ ಕೊಡಿ

ಇದಕ್ಕಾಗಿ ಮತ್ತೆ ನೀವು ತರಕಾರಿಯನ್ನು ಫ್ರೈ ಮಾಡಿ ಅದಕ್ಕೆ ಸ್ವಲ್ಪ ಮಸಾಲೆ ಸೇರಿಸಬೇಕಾಗುತ್ತದೆ. ತರಕಾರಿಯೊಂದಿಗೆ ಈ ಪಫ್ಸ್ ನೊಳಗೆ ನೀವು ಆಮ್ಲೆಟ್ ಅನ್ನು ಸೇರಿಸಬಹುದು. ಬೇಯಿಸಿದ ಎಲ್ಲಾ ತರಕಾರಿಗಳನ್ನು ಪಫ್ಸ್ ಅಥವಾ ಬನ್ ಗೆ ಹಾಕಿ ಮಕ್ಕಳಿಗೆ ಕೊಡಿ. ಮುಂದಿನ ಸಲ ನಿಮ್ಮ ಮಕ್ಕಳು ಆರೋಗ್ಯಕರ ವೆಜ್ ಪಫ್ಸ್‌ಗೆ ಡಿಮಾಂಡ್ ಮಾಡದಿದ್ದರೆ ಮತ್ತೆ ಹೇಳಿ.

English summary

Tasty Ways To Make Your Kids Eat Veggies

It is always so difficult to make your kids eat healthy foods or veggies. They don't like the taste and simple nod their head after seeing veggies. It is very important to change the unhealthy habits of your kids. Otherwise there will be many healthy issues such as obesity and they will lack many important nutrients that are present in vegetables.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X