For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ದುಃಸ್ವಪ್ನವಾಗಿ ಕಾಡುವ ಮಲಬದ್ಧತೆಗೆ ಪರಿಹಾರವೇನು?

|

ನನ್ನ ಮಗುವಿಗೆ ಈಗ 3 ವರ್ಷ ಆದರೂ ನನಗೆ ಆಕೆ ಮಗುವಾಗಿರುವಾಗ ಆದ ಮಲಬದ್ಧತೆಯ ಸಮಸ್ಯೆಯು ಇಂದಿಗು ದುಃಸ್ವಪ್ನವಾಗಿ ಕಾಡುತ್ತಿದೆ. ಆಕೆ ಗಂಟೆಗಟ್ಟಲೆ ರಚ್ಚೆ ಹಿಡಿದಂತೆ ಅಳುತ್ತಿದ್ದುದ್ದನ್ನು ನೆನೆಸಿಕೊಂಡರೆ ಈಗಳೂ ಭಯವಾಗುತ್ತದೆ. ಆಗ ನಮ್ಮ ತಾಯಿಯು ತನ್ನ ಅನುಭವ ವೇಧ್ಯವಾದ ಕೆಲವೊಂದು ಮನೆಮದ್ದುಗಳ ಕುರಿತು ನನ್ನೊಂದಿಗೆ ಹಂಚಿಕೊಂಡಳು. ಈ ಮನೆ ಮದ್ದುಗಳು ನನ್ನ ಮಗುವಿನ ಮಲಬದ್ಧತೆಯನ್ನು ನಿವಾರಿಸಲು ನನಗೆ ಸಹಾಯ ಮಾಡಿದವು. ಅದನ್ನೆ ನಾನು ಏಕೆ ಈಗಿನ ಯುವ ತಾಯಂದಿರ ಜೊತೆಯಲ್ಲಿ ಹಂಚಿಕೊಳ್ಳಬಾರದು?

ನನ್ನ ತಾಯಿ ನನಗೆ ತಿಳಿಸಿದ ಮೊದಲು ತಿಳಿಸಿದ್ದೇನೆಂದರೆ, ಅದು ಮಗುವಿಗೆ ಆದಷ್ಟು ಆರೋಗ್ಯಕಾರಿ ಆಹಾರವನ್ನು ತಿನ್ನಿಸುವುದರಿಂದ ಆದರ ಮೂಲಕ ಮಗುವಿಗೆ ಪೋಷಕಾಂಶಗಳು ಸರಬರಾಜಾಗುತ್ತವೆ ಮತ್ತು ಇದರಿಂದ ಮಗುವು ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಕಾರಿಯಾಗುತ್ತದೆ. ನನ್ನ ತಾಯಿಯ ಮೊದಲ ಸಲಹೆಯೆಂದರೆ, ಮಗುವಿಗೆ ಅಗತ್ಯವಾದ ವ್ಯಾಯಾಮವನ್ನು ಮೊದಲು ನೀಡಬೇಕು. ಒಂದು ವೇಳೆ ಮಗುವು ಅಂಬೆಗಾಲಿಡುತ್ತಿದ್ದರೆ ಅಥವಾ ನಡೆಯುತ್ತಿದ್ದರೆ, ಮಗುವನ್ನು ಮತ್ತಷ್ಟು ಓಡಾಡುವಂತೆ ಪ್ರೋತ್ಸಾಹಿಸಬೇಕು.

Best Home Remedies For Baby Constipation

ಒಂದು ವೇಳೆ ಮಗುವು ಮತ್ತಷ್ಟು ಚಿಕ್ಕ ವಯಸ್ಸಿನದಾಗಿದ್ದರೆ, ಅದರ ಕೈಕಾಲುಗಳನ್ನು ವೃತ್ತಾಕಾರವಾಗಿ ಅಲುಗಾಡಿಸುವ ಮೂಲಕ ನೀವೇ ಮಗುವಿಗೆ ವ್ಯಾಯಾಮವನ್ನು ನೀಡಿ. ಇದರಿಂದ ಮಗುವು ನಿಯಮಿತವಾಗಿ ಮಲ ವಿಸರ್ಜನೆಯನ್ನು ಮಾಡಲು ಅನುಕೂಲವಾಗುತ್ತದೆ. ಇದರ ಜೊತೆಗೆ ನಯವಾಗಿ ಕೋಲಿಕ್ ಪ್ರದೇಶದಲ್ಲಿ, ಮಸಾಜ್ ಮಾಡುವುದರಿಂದ ಸಹ ಮಗುವಿಗೆ ಮಲ ವಿಸರ್ಜನೆ ಮಾಡಲು ಅನುಕೂಲವಾಗುತ್ತದೆ. ಈ ಮಸಾಜ್ ಹೊಟ್ಟೆಯ ಭಾಗದ ಮಾಂಸಖಂಡಗಳಿಗೆ ಆರಾಮವನ್ನು ನೀಡುತ್ತದೆ ಮತ್ತು ಅವುಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ, ಎಂದು ತಮ್ಮ ಸ್ವಂತ ಅಭಿಪ್ರಾಯವನ್ನು ಗೃಹಿಣಿ ಸ್ವಾತಿ ಅವರು ಹೇಳುತ್ತಾರೆ... ಬನ್ನಿ ಇನ್ನು ಮನೆ ಮದ್ದುಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ಸೇಬಿನ ರಸ
ಸೇಬಿನ ರಸವು ಮಗುವಿನ ಮಲಬದ್ಧತೆಯ ಮೇಲೆ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ. ಮಗುವಿಗೆ ಆರೋಗ್ಯಕರವಾಗಿರುವ ಸೇಬಿನ ರಸವನ್ನು ಸ್ವಲ್ಪ ನೀಡಿ.

ಎಲೆ ಕೋಸು
ಎಲೆ ಕೋಸು ಮತ್ತು ಬೇಯಿಸಿದ ಆಲೂಗಡ್ಡೆಯನ್ನು ಅನ್ನದ ಜೊತೆಗೆ ನೀಡುವುದರಿಂದ ಈ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಬಹುದು. ಲಕ್ಸೇಟಿ‌ವ್‍ಗಳಿಗೆ ಬದಲಾಗಿ ಹೊಸ ತಾಯಂದಿರು ಎಲ್ಲರೂ ಈ ಪರಿಹಾರೋಪಾಯವನ್ನೆ ತಮ್ಮ ಮಗುವಿಗೆ ಬಳಸುತ್ತಿದ್ದಾರೆ.

ಟರ್ಮಿನಲಿಯ ಚೆಬುಲ
ಮಗುವಿನ ಮಲಬದ್ಧತೆಯನ್ನು ನಿವಾರಿಸಲು ನನ್ನ ವೈಯುಕ್ತಿಕ ಅಚ್ಚು ಮೆಚ್ಚಿನ ಮತ್ತು ಅತ್ಯಂತ ಸುಲಭವಾದ ಮನೆ ಮದ್ದು ಎಂದರೆ ಅದು ಟರ್ಮಿನಲಿಯ ಚೆಬುಲ (ಹರರ್). ಇದನ್ನು ಸುರುಳಿಯಾಗಿ ಸುತ್ತಿ, ನಿಮ್ಮ ಮಗುವಿಗೆ ಸ್ವಲ್ಪ ನೆಕ್ಕಲು ತಿಳಿಸಿ. ಇದು ಖಂಡಿತವಾಗಿ ಕೆಲಸ ಮಾಡುತ್ತದೆ.

ಒಣ ದ್ರಾಕ್ಷಿ ರಸ
ಮಲ ಬದ್ಧತೆಯನ್ನು ಓಡಿಸುವ ಮತ್ತೊಂದು ಮಾಂತ್ರಿಕ ಪರಿಹಾರವೆಂದರೆ ಅದು, ಒಣ ದ್ರಾಕ್ಷಿ ರಸ. ಇದನ್ನು ಸ್ವಲ್ಪ ಜೇನು ತುಪ್ಪದ ಜೊತೆಗೆ ನೀಡಿದರೆ ಒಳ್ಳೆಯ ಪರಿಹಾರವನ್ನು ಕಾಣಬಹುದು.

ರೋಸ್ ವಾಟರ್
ಬೆಚ್ಚಗಿನ ನೀರು ಸಹ ಒಳ್ಳೆಯ ಪರಿಣಾಮವನ್ನು ತೋರಿಸುತ್ತದೆ. ನಿಮ್ಮ ಮಗುವಿನ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಲು ಸ್ವಲ್ಪ ಗ್ರೈಪ್ ವಾಟರ್ ಮತ್ತು ರೋಸ್ ವಾಟರ್ ಎರಡನ್ನು ಬೆರೆಸಿ ನೀಡಿ. ನಿಮ್ಮ ಮಗುವಿನ ಸಮಸ್ಯೆ ನಿವಾರಣೆಯಾಗುತ್ತದೆ.

English summary

Best Home Remedies For Baby Constipation

Although my daughter is 3years now but I remember my biggest nightmare when she was just a baby was constipation. She used to get so agitated and would cry non-stop for hours together.This can be followed by a little massage in the colic area. have a look
X
Desktop Bottom Promotion