For Quick Alerts
ALLOW NOTIFICATIONS  
For Daily Alerts

ಹಸುಗೂಸುಗಳಿಗೆ ಕಾಡುವ ಮಲಬದ್ಧತೆಗೆ ಪರಿಹಾರ

By ವಿವೇಕ್
|

ಮಲಬದ್ಧತೆ ದೊಡ್ಡವರಲ್ಲಿ ಮಾತ್ರವಲ್ಲ, ಚಿಕ್ಕ ಮಕ್ಕಳಲ್ಲಿಯೂ ಕಂಡು ಬರುತ್ತದೆ. ಚಿಕ್ಕ ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆ ಕಂಡು ಬಂದರೆ ಅವರಿಗೆ ಮಾತ್ರೆ ಕೊಡುವುದು ಒಳ್ಳೆಯದಲ್ಲ. ಮಲಬದ್ಧತೆಗೆ ಮನೆ ಮದ್ದನ್ನು ಬಳಸುವುದು ಒಳ್ಳೆಯದು. ಕೆಲವು ಆಹಾರ ವಸ್ತುಗಳನ್ನು ಮಲಬದ್ಧತೆಯನ್ನು ಹೋಗಲಾಡಿಸುವ ಮನೆ ಮದ್ದಾಗಿ ಬಳಸಬಹುದು.

ಸಾಮಾನ್ಯವಾಗಿ ಮಲಬದ್ಧತೆ ಸಮಸ್ಯೆಗೆ ಮೂಲ ಕಾರಣ ಗಟ್ಟಿಯಾದ ಮಲ, ಇದನ್ನು ವಿಸರ್ಜಿಸಲು ಮಗುವಿಗೆ ಅಸಾಧ್ಯವಾಗಿ ಮಲಬದ್ಧತೆಯು ಹುಟ್ಟುತ್ತದೆ. ಈ ಮಲಬದ್ಧತೆಯ ಜೊತೆಗೆ ವಾಂತಿ, ಹೊಟ್ಟೆನೋವು, ಊತ, ಊಟ ಸೇರದಿರುವಿಕೆ ಮುಂತಾದ ಸಮಸ್ಯೆಗಳು ಭಾದಿಸುತ್ತವೆ. ಅದಕ್ಕಾಗಿ ಮಗುವಿಗೆ ಪಥ್ಯವನ್ನು ನೀಡುತ್ತಾರೆ. ಸಂಸ್ಕರಿತ ಆಹಾರ ಮತ್ತು ಗಟ್ಟಿಯಾದ ಆಹಾರವನ್ನು ಸೇವಿಸುವುದನ್ನು ತಡೆಯುವ ಮೂಲಕ ಮಲಬದ್ಧತೆಯನ್ನು ದೂರಮಾಡಿಕೊಳ್ಳಬಹುದು. ಇಲ್ಲಿ ನಾವು ಹಸುಗೂಸುಗಳಲ್ಲಿ ಕಾಡುವ ಮಲಬದ್ಧತೆಯನ್ನು ನಿವಾರಿಸಲು ಕೆಲವೊಂದು ಉಪಾಯಗಳನ್ನು ಸೂಚಿಸಿದ್ದೇವೆ ಓದಿ ತಿಳಿದುಕೊಳ್ಳಿ.

Toddlers

ಕರುಳನ್ನು ಖಾಲಿ ಮಾಡಿ
ನಿಮ್ಮ ಮಗುವಿಗೆ ಮಲಬದ್ಧತೆ ಕಾಡುತ್ತಿದ್ದರೆ, ಲಕ್ಸೇಟಿವ್, ಸ್ಟೂಲ್ ಸಾಫ್ಟ್ ನರುಗಳನ್ನು ನೀಡಿ. ಇದನ್ನು ನೀವೆ ಬೇಕಾದರು ನೀಡಬಹುದು. ಆದರೂ ಒಮ್ಮೆ ಮಕ್ಕಳ ತಙ್ಞರ ಬಳಿ ವಿಚಾರಿಸಿ, ನಂತರ ಬಳಸಿ. ಇದನ್ನು ನೀಡಲು ಆರಂಭಿಸಿದ ಮೇಲೆ ಇದ್ದಕ್ಕಿದ್ದಂತೆ ಬಳಸುವುದನ್ನು ನಿಲ್ಲಿಸಬೇಡಿ.

ದೈಹಿಕ ಚಟುವಟಿಕೆಗಳು
ಹಸುಗೂಸುಗಳ ಆರೋಗ್ಯಕ್ಕೆ ಸಂಬಂಧಿಸಿದಂತೆ ದೈಹಿಕ ಚಟುವಟಿಕೆಗಳು ಪ್ರಧಾನ ಪಾತ್ರವನ್ನು ನಿರ್ವಹಿಸುತ್ತವೆ. ಈ ಚಟುವಟಿಕೆಗಳ ವಿಚಾರದಲ್ಲಿ ಯಾವುದೇ ರಾಜಿ ಇಲ್ಲಾ. ಅದಕ್ಕಾಗಿ ನಿಮ್ಮ ಮಗು ಅತ್ಯಗತ್ಯವಾದ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಒಂದು ವೇಳೆ ಇಲ್ಲವಾದಲ್ಲಿ ಮಗುವಿಗೆ ಈ ಚಟುವಟಿಕೆಗಳನ್ನು ನೀಡಿ. ಒಂದು ಮಗುವಿಗೆ ಪ್ರತಿದಿನ ಕನಿಷ್ಠ 60 ನಿಮಿಷಗಳ ಕಾಲದಷ್ಟಾದರು ದೈಹಿಕ ಚಟುವಟಿಕೆಯ ಅಗತ್ಯವಿರುತ್ತದೆ. ಇದರಿಂದಾಗಿ ಮಗುವಿನ ಕರುಳಿನ ಚಟುವಟಿಕೆಗಳು ಚುರುಕಾಗುತ್ತವೆ.

ಔಷಧಿಗಳ ಮೇಲೆ ನಿಗಾವಹಿಸಿ
ನಿಮ್ಮ ಹಸುಗೂಸಿಗೆ ಔಷಧಿಯನ್ನು ನೀಡುತ್ತಿದ್ದಲ್ಲಿ, ತಪ್ಪದೇ ತಙ್ಞರನ್ನು ಕಾಣಿ. ಮಗುವಿಗೆ ನೀಡುತ್ತಿರುವ ಔಷಧಿಯನ್ನು ಪರೀಕ್ಷಿಸುತ್ತಿರಿ. ನಿಮ್ಮ ಮಗುವು ಸ್ವೀಕರಿಸುವ ಔಷಧಿಯು ಮಲಬದ್ಧತೆಯನ್ನುಂಟು ಮಾಡುತ್ತಿದ್ದರೆ, ತಕ್ಷಣ ಆ ಔಷಧಿಯನ್ನು ನೀಡುವುದನ್ನು ನಿಲ್ಲಿಸಿ. ಒಂದು ವೇಳೆ ಕೆಲವು ಔಷಧಿಗಳು ನಿಮ್ಮ ಮಗುವಿಗೆ ಉತ್ತಮವಾಗಿ ಹೊಂದಿಕೊಂಡಿದ್ದರೆ, ತಕ್ಷಣ ನಿಲ್ಲಿಸಬೇಡಿ, ಕಾಯ್ದು ನೋಡಿ. ಇದು ನಿಮ್ಮ ಮಗುವಿನ ಮಲಬದ್ಧತೆಯನ್ನು ನಿವಾರಿಸಲು ಇರುವ ಅತ್ಯುತ್ತಮ ಪರಿಹಾರವಾಗಿದೆ.

ಶಿಸ್ತು
ಸಣ್ಣ ಮಟ್ಟದ ಶಿಸ್ತನ್ನು ಕಾಪಾಡಿಕೊಳ್ಳುವುದರ ಮೂಲಕ ಅದ್ಭುತಗಳನ್ನು ಸಾಧಿಸಬಹುದು. ಮಗುವಿಗೆ ಶೌಚಕ್ಕೆ ಹೋಗಲು ಒಂದು ಸಮಯವನ್ನು ನಿಗದಿಪಡಿಸಿ. ಮಗು ಪ್ರತಿದಿನವು ಒಂದೇ ಸಮಯಕ್ಕೆ ಶೌಚಕ್ಕೆ ಹೋಗುತ್ತದೆಯೆಂಬುದನ್ನು ಖಾತ್ರಿಪಡಿಸಿಕೊಳ್ಳಿ. ಒಂದು ವೇಳೆ ಮಗು ತಪ್ಪಿಸಿದರು ನೀವು ತಪ್ಪದೆ " ಇದು ಬಾತ್‍ರೂಮಿಗೆ ಹೋಗುವ ಸಮಯ" ವೆಂದು ಹೇಳಿ ನೆನಪಿಸಿ. ಈ ಶಿಸ್ತನ್ನು ನಿಮ್ಮ ಮಗುವಿಗೆ ಅಭ್ಯಾಸ ಮಾಡಿಸಿ. ಈ ಎಲ್ಲಾ ಸಲಹೆಗಳನ್ನು ಪಾಲಿಸುವುದರ ಮೂಲಕ ನೀವು ನಿಮ್ಮ ಮಗುವಿನ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಬಹುದು.

ಅದಾಗಿಯೂ ಈ ಎಲ್ಲ ಪರಿಹಾರೋಪಾಯಗಳ ಜೊತೆಗೆ ನಿಮ್ಮ ಮಗುವಿಗೆ ಕಡಿಮೆಯಾದರು ಸರಿ ಆರೋಗ್ಯಯುತವಾದ ನಾರಿನಂಶವನ್ನು ಒಳಗೊಂಡ ಆಹಾರ ಮತ್ತು ಮಲಬದ್ಧತೆ ನಿವಾರಿಸುವ ಡ್ರಾಪ್ಸ್ ನೀಡಿ. ಒಳ್ಳೆಯ ದೈಹಿಕ ಚಟುವಟಿಕೆಗಳಲ್ಲಿ ನಿಮ್ಮ ಮಗುವನ್ನು ತೊಡಗಿಸಿ. ಆಗ ಮಲಬದ್ಧತೆಯು ತನ್ನಿಂದ ತಾನೇ ನಿವಾರಣೆಯಾಗುತ್ತದೆ.

X
Desktop Bottom Promotion