For Quick Alerts
ALLOW NOTIFICATIONS  
For Daily Alerts

ಒಬೆಸಿಟಿ ಮಕ್ಕಳ ತೂಕ ಕಮ್ಮಿ ಮಾಡಲು ಡಯಟ್ ಟಿಪ್ಸ್

|

ಒಬೆಸಿಟಿ ದೊಡ್ಡವರಲ್ಲಿ ಮಾತ್ರವಲ್ಲ ಚಿಕ್ಕ ಮಕ್ಕಳಲ್ಲಿಯೂ ಕಂಡು ಬರುತ್ತದೆ. ಇದಕ್ಕೆ ಕಾರಣ ನಮ್ಮ ಆಧುನಿಕ ಜೀವನ ಶೈಲಿ. ಒಬೆಸಿಟಿ ನಗರ ಪ್ರದೇಶದ ಮಕ್ಕಳಲ್ಲಿ ಹೆಚ್ಷಾಗಿ ಇರುತ್ತದೆ. ಕಾರಣ ಅಧಿಕ ದೈಹಿಕ ಶ್ರಮವಿಲ್ಲದಿರುವುದು. ಮನೆ ಮುಂದೆ ಆಟ ಆಡಲು ಸ್ಥಳಾವಕಾಶ ಇರುವುದಿಲ್ಲ, ಸ್ವಲ್ಪ ಕಾಲು ಅಲ್ಲಾಡ ಬೇಕೆಂದರೆ ಪಾರ್ಕ್ ಗೆ ಕರೆದುಕೊಂಡು ಹೋಗಬೇಕು. ಇನ್ನು ಕೆಲವುಶಾಲೆಗಳಲ್ಲಿ ಆಟದ ಮೈದಾನವೇ ಇರುವುದಿಲ್ಲ!

ದಿನಾ ಓದು, ಟಿವಿ, ಕಂಪ್ಯೂಟರ್ , ವೀಡಿಯೋಗೇಮ್ ಹೀಗೆ ಕೂತೇ ಇರುವುದರಿಂದ ಮೈ ತೂಕ ಹೆಚ್ಚಾಗುವುದು. ಇನ್ನು ಕೆಲವು ಮಕ್ಕಳಿಗೆ ವಂಶ ಪಾರಂಪರ್ಯವಾಗಿ ಬಂದಿರುತ್ತದೆ. ಮಕ್ಕಳ ಅಧಿಕ ತೂಕವನ್ನು ಕಮ್ಮಿ ಮಾಡದಿದ್ದರೆ ಮಧುಮೇಹ ರೋಗಕ್ಕೆ ತುತ್ತಾಗುವ ಅಪಾಯವಿದೆ. ಆದ್ದರಿಂದ ಪೋಷಕರು ತಮ್ಮ ಮಗುವಿನ ಅಧಿಕ ತೂಕ ಕಮ್ಮಿ ಮಾಡುವತ್ತ ಗಮನಹರಿಸಬೇಕು.

ಮಕ್ಕಳ ಅಧಿಕ ಮೈ ತೂಕ ಕಮ್ಮಿ ಮಾಡುವಲ್ಲಿ ಈ ಕೆಳಗಿನ ಟಿಪ್ಸ್ ಸಹಾಯ ಮಾಡುತ್ತದೆ:

 ಆರೋಗ್ಯಕರ ಬ್ರೇಕ್ ಫಾಸ್ಟ್

ಆರೋಗ್ಯಕರ ಬ್ರೇಕ್ ಫಾಸ್ಟ್

ನಿಮಗೆ ಪುರುಸೊತ್ತು ಇಲ್ಲ ಎಂದು ಮಕ್ಕಳಿಗೆ ಮ್ಯಾಗಿ ಮುಂತಾದ ಫಾಸ್ಟ್ ಫುಡ್ ಮಾಡಿಕೊಡುವುದು ಅಥವಾ ಹೋಟೆಲ್ ನಿಂದ ಪಾರ್ಸಲ್ ತಂದು ಕೊಡುವುದು ಮಾಡಬಾರದು. ಮನೆಯಲ್ಲಿಯೇ ಮಾಡಿದ ಆರೋಗ್ಯಕರ ಆಹಾರ ಕೊಡಿ. ಕೊಬ್ಬಿನಂಶ ಕಡಿಮೆ ಇರುವ ಹಾಲನ್ನು ಕೊಡಿ. ಕೊಬ್ಬಿನಂಶವಿರುವ ಆಹಾರಗಳನ್ನು, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಕೊಡಬೇಡಿ.

 ಜ್ಯೂಸ್

ಜ್ಯೂಸ್

ಕೋಕ್ , ಪೆಪ್ಸಿ ಈ ರೀತಿಯ ತಂಪು ಪಾನೀಯಾದ ಬದಲು ಟೊಮೆಟೊ ಜ್ಯೂಸ್, ನಿಂಬೆ ಪಾನಕ ಹೀಗೆ ಹಣ್ಣು-ತರಕಾರಿಗಳಿಂದ ಮಾಡಿದ ಜ್ಯೂಸ್ ಕೊಡಿ.

 ತರಕಾರಿಗಳು

ತರಕಾರಿಗಳು

ಕೊಬ್ಬಿನಂಶದ ಪದಾರ್ಥಗಳು, ಕುರುಕಲು ತಿಂಡಿಗಳ ಬದಲು ಆರೋಗ್ಯಕರ ತರಕಾರಿಗಳನ್ನು ತಿನ್ನಿಸಿ. ಅವರು ತಿನ್ನಲಿಲ್ಲ ಎಂದು ಬಾಯಿಗೆ ರುಚಿಕರವಾದ ಚಾಕಲೇಟ್, ಐಸ್ ಕ್ರೀಮ್ ಕೊಡಿಸಬೇಡಿ. ಮೊದ ಮೊದಲು ತಿನ್ನದಿದ್ದರೂ ನಂತರ ನಿಧಾನಕ್ಕೆ ತರಕಾರಿ, ಹಣ್ಣುಗಳನ್ನು ತಿನ್ನಲು ಅಭ್ಯಾಸ ಮಾಡಿಕೊಳ್ಳುತ್ತವೆ.

 ಸ್ನ್ಯಾಕ್ಸ್

ಸ್ನ್ಯಾಕ್ಸ್

ಸ್ನ್ಯಾಕ್ಸ್ ಬಾಕ್ಸ್ ಗೆ ಬೇಕರಿ ತಿಂಡಿಗಳ ಬದಲು ಹಣ್ಣುಗಳನ್ನು ತುಂಬಿ. ಓಟ್ಸ್ ಬಿಸ್ಕೆಟ್ ಹೀಗೆ ಪ್ರೊಟೀನ್ ಇರುವ ಆಹಾರಗಳನ್ನು ಡಬ್ಬಿಯಲ್ಲಿ ತುಂಬಿ.

ಸಕ್ಕರೆಯಂಶ ತುಂಬಾ ಕೊಡಬೇಡಿ

ಸಕ್ಕರೆಯಂಶ ತುಂಬಾ ಕೊಡಬೇಡಿ

ಅಧಿಕ ಸಿಹಿ ಇರುವ ಆಹಾರಗಳನ್ನು ಕೊಡುವುದನ್ನು ಕಮ್ಮಿ ಮಾಡಿ.

ರಾತ್ರಿ ಊಟಕ್ಕೆ

ರಾತ್ರಿ ಊಟಕ್ಕೆ

2 ಚಪಾತಿ, ಸಲಾಡ್, ಮೊಳಕೆ ಬರಿಸಿದ ಧಾನ್ಯ ಕೊಡಿ. ಚಪಾತಿಯನ್ನು ಎಣ್ಣೆ ಹಾಕದೆ ಮಾಡಿ.

 ದೈಹಿಕ ವ್ಯಾಯಾಮ

ದೈಹಿಕ ವ್ಯಾಯಾಮ

ಮಕ್ಕಳ ಕೈಯಿಂದ ದಿನಾ ಅರ್ಧ ಗಂಟೆ ದೈಹಿಕ ವ್ಯಾಯಾಮ ಮಾಡಿಸಿ. ಅವರನ್ನೇ ಮಾಡಲು ಹೇಳಬೇಡಿ, ನೀವೂ ಜೊತೆ ಸೇರಿ ಮಾಡಿ. ಈ ರೀತಿ ಮಾಡುವುದರಿಂದ ಒಬೆಸಿಟಿ ಮಕ್ಕಳು ನಿಧಾನಕ್ಕೆ ದೇಹದ ತೂಕವನ್ನು ಕಮ್ಮಿ ಮಾಡುತ್ತಾ ಬರುತ್ತವೆ.

English summary

Diet Tips For Obese Kids | Tips For Parents | ಒಬೆಸಿಟಿ ಇರುವ ಮಕ್ಕಳಿಗೆ ಡಯಟ್ ಟಿಪ್ಸ್ | ಪೋಷಕರಿಗೆ ಕೆಲ ಸಲಹೆಗಳು

A diet rich in all nutrients and vitamins is healthy and good for the obese kids. It is important to have the right amount of food at the right time, this helps tackle obesity. Here are helpful diet tips for obese kids-
X
Desktop Bottom Promotion