For Quick Alerts
ALLOW NOTIFICATIONS  
For Daily Alerts

ಮಕ್ಕಳು ಸುಳ್ಳು ಹೇಳುವುದು ಎಷ್ಟನೇ ವಯಸ್ಸಿನಿಂದ?

|
In Which Age Kids Starts Lying
ನಿಮ್ಮ ಮಕ್ಕಳು ಸುಳ್ಳು ಹೇಳುವ ಕಲೆಯನ್ನು ಎಷ್ಟನೇ ವಯಸ್ಸಿನಿಂದ ರೂಢಿಸಿಕೊಳ್ಳುತ್ತಾರೆ ಎಂದು ತಿಳಿಯುವ ಕುತೂಹಲ ನಿಮ್ಮಲ್ಲಿದೆಯಾ? ಹಾಗಿದ್ದರೆ, ಅವರು ತಮ್ಮ ನಾಲ್ಕನೇ ವಯಸ್ಸಿನಿಂದ ಸುಳ್ಳು ಹೇಳುವುದನ್ನು ಹೆಚ್ಚು ಕಲಿಯುತ್ತಾರೆ ಎಂದಿದೆ ಹೊಸ ಸಂಶೋಧನೆ.

'ಬಾರ್ನ್ ಲೈಯರ್ಸ್' ಎಂಬ ಪುಸ್ತಕದಲ್ಲಿ, ಎರಡರಿಂದ-ನಾಲ್ಕನೇ ವಯೋಮಿತಿಯ ಮಕ್ಕಳ ಮನೋಸ್ಥಿತಿಯನ್ನು ಪರೀಕ್ಷಿಸಿದಾಗ, ನಾಲ್ಕನೇ ವಯಸ್ಸಿನಿಂದ ಮಕ್ಕಳು ಸುಳ್ಳು ಹೇಳುವುದನ್ನು ಹೆಚ್ಚು ಕಲಿಯುತ್ತಾರೆ ಎಂದು ತಿಳಿಸಿದೆ.

ಅಷ್ಟೇ ಅಲ್ಲದೆ, ಮಕ್ಕಳ ಮನೋಸ್ಥಿತಿ ಮತ್ತು ಅವರ ನಡವಳಿಕೆಯನ್ನು ಪರೀಕ್ಷಿಸಲು ಸಂಶೋಧನೆಯ ಅಂಗವಾಗಿ ಪೀಕಿಂಗ್ ಗೇಮ್ ಏರ್ಪಡಿಸಿದ್ದಾಗ ಯಾವ ವಯಸ್ಸಿನ ಮಕ್ಕಳು ಸುಳ್ಳು ಹೇಳಲು ಆರಂಭಿಸುತ್ತಾರೆ ಎಂದು ತಿಳಿದುಬಂದಿದೆ.

ಒಂದು ರೂಮಿನಲ್ಲಿ, ಮಕ್ಕಳ ಕಣ್ಣನ್ನು ಮುಚ್ಚುವಂತೆ ಹೇಳಿ, ಆಟದ ಸಾಮಾನನ್ನು ತಂದು ಅದರ ಶಬ್ದದಿಂದ ಆಟದ ಸಾಮಾನನ್ನು ಗುರುತಿಸುವಂತೆ ತಿಳಿಸಲಾಯಿತು. ಮಕ್ಕಳಿಗೆ ಕದ್ದು ನೋಡದಂತೆ ತಿಳಿಸಿ ರೂಮಿನಿಂದ ಪರೀಕ್ಷಕರು ಹೊರನಡೆದಾಗ, ಅವರು ಹೊರಗೆ ಹೋಗುತ್ತಿದ್ದಂತೆ ಮಕ್ಕಳು ಆಟದ ಸಾಮಾನನ್ನು ಕದ್ದು ನೋಡಿದ್ದು ನೋಡಿ ಉತ್ತರ ಕೊಟ್ಟಿದ್ದರು.

ಆನಂತರ ಅದನ್ನು ಪ್ರಶ್ನಿಸಿದಾಗ, ಮೂರು ವಯಸ್ಸಿನ ಮಕ್ಕಳು ಸತ್ಯವನ್ನು ಒಪ್ಪಿಕೊಂಡರು. ಆದರೆ ನಾಲ್ಕು ವಯಸ್ಸಿನ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಹಲವು ಮಕ್ಕಳು ಸುಳ್ಳು ಹೇಳಿ, ಅದನ್ನು ಸತ್ಯವೆನ್ನುವಂತೆ ವಾದ ಮಾಡಿದ್ದು ಕಂಡು ಬಂದಿದೆ. ಅದರಲ್ಲೂ ಆರು ವಯಸ್ಸಿನ ನಂತರ ಮಕ್ಕಳು ಸುಳ್ಳಿನ ಕಲೆಯನ್ನು ಚೆನ್ನಾಗಿ ಕರಗತ ಮಾಡಿಕೊಳ್ಳುತ್ತಾರೆ ಎಂದೂ ಸಂಶೋಧನೆ ತಿಳಿಸಿದೆ.

English summary

In Which Age Kids Starts Lying | Kids Behaviour and Psychology | ಮಕ್ಕಳು ಸುಳ್ಳು ಹೇಳಲು ಆರಂಭಿಸುವುದು ಯಾವಾಗ | ಮಕ್ಕಳ ನಡವಳಿಕೆ ಮತ್ತು ಮನೋಸ್ಥಿತಿ

Are you curious to know in which age your kid start to adopt the art of lying? Your kids starts lying at the age of four, says new research.
Story first published: Wednesday, October 5, 2011, 18:20 [IST]
X
Desktop Bottom Promotion