For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಪಾದದಲ್ಲಿ ಪದೇಪದೇ ತುರಿಕೆ ಬರುವುದು, ಗಂಭೀರ ಕಾಯಿಲೆಯ ಸಂಕೇತವೇ?

|

ಗರ್ಭಾವಸ್ಥೆಯಲ್ಲಿ ಚರ್ಮ ತುರಿಕೆ ಬರುವುದನ್ನು ಕಂಡಿರಬಹುದು. ಇದು ತುಂಬಾ ನೋವಿನಿಂದ ಕೂಡಿದ್ದು, ಕೆಲವು ಮಹಿಳೆಯರು ಗರ್ಭಾವಸ್ಥೆಯ ಒಂಬತ್ತು ತಿಂಗಳ ಉದ್ದಕ್ಕೂ ತುರಿಕೆ ಅನುಭವಿಸುತ್ತಾರೆ. ಈ ತುರಿಕೆ ಕೆಲವೊಮ್ಮೆ ದೇಹದಾದ್ಯಂತ ಇರಬಹುದು ಅಥವಾ ಕೆಲವೊಮ್ಮೆ ಇದು ಪಾದಗಳಿಗೆ ಸೀಮಿತವಾಗಿರುತ್ತದೆ. ಗರ್ಭಾವಸ್ಥೆಯಲ್ಲಿ ಪಾದಗಳಲ್ಲಿ ತುರಿಕೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇದು ಸಮಸ್ಯೆಯಲ್ಲ, ಆದರೆ ಕೆಲವೊಮ್ಮೆ ಇದು ಗರ್ಭಾವಸ್ಥೆಯ ಕೊಲೆಸ್ಟಾಸಿಸ್ ಎಂಬ ಸ್ಥಿತಿಯ ಸಂಕೇತವೂ ಇರಬಹುದು. ಆದ್ದರಿಂದ ಎಚ್ಚರಿಕೆ ವಹಿಸುವುದು ಮುಖ್ಯ.

ಗರ್ಭಾವಸ್ಥೆಯಲ್ಲಿ ಕಾಲುಗಳ ತುರಿಕೆಯು ಪ್ರಗ್ನೆನ್ಸಿ ಇಂಟ್ರಾಹೆಪಾಟಿಕ್ ಕೊಲೆಸ್ಟಾಸಿಸ್ನ ಸಂಕೇತವಾಗಿದೆ. ಇದು ಯಕೃತ್ತಿನ ಕಾಯಿಲೆಯಾಗಿದ್ದು, ಗರ್ಭಾವಸ್ಥೆಯಲ್ಲಿ ಕೈ ಮತ್ತು ಪಾದಗಳಲ್ಲಿ ತುರಿಕೆ ಉಂಟಾಗುತ್ತದೆ. ಹೀಗಿದ್ದಾಗ, ಗರ್ಭಾವಸ್ಥೆಯ ಯಾವುದೇ ತಿಂಗಳಲ್ಲಿ, ಗರ್ಭಿಣಿಯು ಪಾದಗಳಲ್ಲಿ ಸುಡುವಿಕೆ ಅಥವಾ ಜುಮ್ಮೆನಿಸುವಿಕೆ ಅನುಭವಿಸಬಹುದು. ಈ ಲೇಖನದಲ್ಲಿ, ಕಾಲುಗಳ ತುರಿಕೆಗೆ ಕಾರಣಗಳು ಮತ್ತು ಅವುಗಳನ್ನು ತಪ್ಪಿಸುವ ಮಾರ್ಗಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.

ಗರ್ಭಾವಸ್ಥೆಯಲ್ಲಿ ಪಾದಗಳಲ್ಲಿ ತುರಿಕೆ ಬರಲು ಕಾರಣವೇನು?:

ಗರ್ಭಾವಸ್ಥೆಯಲ್ಲಿ ಪಾದಗಳಲ್ಲಿ ತುರಿಕೆ ಬರಲು ಕಾರಣವೇನು?:

ಗರ್ಭಿಣಿಯರಿಗೆ ವಿವಿಧ ಕಾರಣಗಳಿಂದ ಪಾದಗಳಲ್ಲಿ ತುರಿಕೆ ಬರಬಹುದು. ಮೇಲೆ ಹೇಳಿದಂತೆ ಯಕೃತ್ತಿನ ಕಾಯಿಲೆಯೂ ಆಗಿರಬಹುದು, ಜೊತೆಗೆ ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಬದಲಾವಣೆಗಳು ಚರ್ಮದ ಕಿರಿಕಿರಿಯನ್ನು ಉಂಟುಮಾಡಬಹುದು. ಕೆಲವು ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯಗಳು ಮಗುವಿನ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು. ರೋಗನಿರೋಧಕ ಶಕ್ತಿಯಲ್ಲಿನ ಈ ಬದಲಾವಣೆಗಳು ಚರ್ಮವನ್ನು ಸೂಕ್ಷ್ಮವಾಗಿಸುತ್ತದೆ, ಇದು ತುರಿಕೆಗೆ ಕಾರಣವಾಗುತ್ತದೆ.

ಸೋರಿಯಾಸಿಸ್ ಕೂಡ ಒಂದು ಕಾರಣ:

ಸೋರಿಯಾಸಿಸ್ ಕೂಡ ಒಂದು ಕಾರಣ:

ಸೋರಿಯಾಸಿಸ್ ಕೆಲವು ಗರ್ಭಿಣಿ ಮಹಿಳೆಯರಲ್ಲಿ ಪಾದಗಳು ಮತ್ತು ದೇಹದ ಇತರ ಭಾಗಗಳಲ್ಲಿ ತುರಿಕೆಗೆ ಕಾರಣವಾಗಬಹುದು. ಗರ್ಭಾವಸ್ಥೆಯ ಮೊದಲು ಸೋರಿಯಾಸಿಸ್ ಹೊಂದಿರುವ ಮಹಿಳೆಯರು ಗರ್ಭಿಣಿಯಾದ ಮೇಲೆ ಪಾದಗಳಲ್ಲಿ ತುರಿಕೆ ಅನುಭವಿಸಬಹುದು. ಇದರ ಜೊತೆಗೆ, ಒಣ ಚರ್ಮ, ಆಗಾಗ್ಗೆ ಕಾಲು ತೊಳೆಯುವುದು ಮತ್ತು ಕ್ಲೋರಿನೇಟೆಡ್ ನೀರಿನಲ್ಲಿ ಕಾಲಿಡುವುದು, ಆನುವಂಶಿಕ ಮತ್ತು ಪರಿಸರದ ಅಂಶಗಳು ತುರಿಕೆಗೆ ಕಾರಣವಾಗಬಹುದು.

ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು?:

ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು?:

ನೀವು ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಅನುಭವಿಸಿದರೆ, ವೈದ್ಯರೊಂದಿಗೆ ಮಾತನಾಡಿ:

ನಿರಂತರ ಅಥವಾ ರಾತ್ರಿಯ ತುರಿಕೆ

ಮನೆಮದ್ದುಗಳಿಂದಲೂ ಪರಿಹಾರ ಪಡೆಯಲು ಸಾಧ್ಯವಾಗದಿದ್ದಾಗ

ತೀವ್ರ ತುರಿಕೆ

ಗಾಢ ಮೂತ್ರ

ಬೂದು ಅಥವಾ ಹಳದಿ ಮಲ

ಶಂಕಿತ ಕಾಮಾಲೆ

ಹೊಟ್ಟೆ ನೋವು ಅಥವಾ ವಾಕರಿಕೆ ಮುಂತಾದ ಯಾವುದೇ ರೋಗಲಕ್ಷಣಗಳನ್ನು ನೀವು ಗಮನಿಸಿದರೆ, ತಕ್ಷಣ ವೈದ್ಯರ ಬಳಿಗೆ ಹೋಗಬೇಕು.

ಪಾದಗಳ ತುರಿಕೆಯಿಂದ ಪರಿಹಾರ ಪಡೆಯುವ ಮಾರ್ಗಗಳು:

ಪಾದಗಳ ತುರಿಕೆಯಿಂದ ಪರಿಹಾರ ಪಡೆಯುವ ಮಾರ್ಗಗಳು:

ಈ ಸಮಸ್ಯೆಯನ್ನು ಕಡಿಮೆ ಮಾಡಲು ಕೆಲವು ಸುಲಭ ಮಾರ್ಗಗಳನ್ನು ಅಳವಡಿಸಿಕೊಳ್ಳಬಹುದು, ಅವುಗಳೆಂದರೆ:

ತುರಿಕೆ ತಪ್ಪಿಸಲು ಬೆಚ್ಚಗಿನ ಅಥವಾ ತಣ್ಣನೆಯ ನೀರಿನಿಂದ ಕಾಲು ತೊಳೆಯಿರಿ.

ಪಾದಗಳು ಒಣಗಿದಾಗ ತುರಿಕೆಯಾಗಬಹುದು, ಆದ್ದರಿಂದ ಮಾಯಿಶ್ಚರೈಸರ್ ಬಳಸಿ.

ತುರಿಕೆ ವಿರೋಧಿ ಕ್ರೀಮ್‌ಗಳನ್ನ ಸಹ ಬಳಸಬಹುದು, ಆದರೆ ನಿಮ್ಮ ವೈದ್ಯರ ಸಲಹೆ ಪಡೆದು ಬಳಸಿ.

ಕೊಲೆಸ್ಟಾಸಿಸ್ ಹೊಂದಿದ್ದರೆ, ಅದಕ್ಕೆ ಚಿಕಿತ್ಸೆ ನೀಡುವುದರಿಂದ ನಿಮ್ಮ ತುರಿಕೆಯನ್ನು ಕಡಿಮೆ ಮಾಡಬಹುದು.

ಬಿಸಿನೀರಿನ ಸ್ನಾನ, ಮಾಯಿಶ್ಚರೈಸರ್‌ಗಳು ಮತ್ತು ಆಂಟಿಹಿಸ್ಟಮೈನ್‌ಗಳಂತಹ ಔಷಧಿಗಳೊಂದಿಗೆ ಕೊಲೆಸ್ಟಾಸಿಸ್‌ನ ತುರಿಕೆಗೆ ಚಿಕಿತ್ಸೆ ನೀಡುವ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು.

English summary

Itchy Feet During Pregnancy Causes and How to Relieve it in Kannada

Here we talking about Itchy feet during pregnancy causes and how to relieve it in kannada, read on
Story first published: Wednesday, March 16, 2022, 17:25 [IST]
X
Desktop Bottom Promotion