For Quick Alerts
ALLOW NOTIFICATIONS  
For Daily Alerts

ಹಾರ್ಮೋನಲ್‌ ಗರ್ಭನಿರೋಧಕ ಸುರಕ್ಷಿತವೇ?

|

ಮಗು ಈಗಲೇ ಬೇಡ ಅಥವಾ ಮೊದಲ ಮಗುವಿನ ನಂತರ ಎರಡನೇ ಮಗು ಈಗಲೇ ಬೇಡ ಸ್ವಲ್ಪ ಅಂತರವಿರಲಿ ಎಂದು ಬಯಸುವವರು ಗರ್ಭಧಾರಣೆ ತಡೆಗಟ್ಟಲು ಹಲವಾರು ಮಾರ್ಗಗಳನ್ನು ಅನುಸರಿಸುತ್ತಾರೆ.

Hormonal Contraception

ಗರ್ಭನಿರೋಧಕ ಮಾತ್ರೆಗಳು, ಕಾಂಡೋಮ್, ಓವ್ಯೂಲೇಷನ್ ಅಂದರೆ ಅಂಡೋತ್ಪತ್ತಿ ಸಮಯದಲ್ಲಿ ಪತಿ-ಪತ್ನಿ ಒಂದಾಗದಿರುವುದು ಹೀಗೆ ತಮಗೆ ಸೂಕ್ತವಾದ ಹಲವಾರು ವಿಧಾನಗಳನ್ನು ಅನುಸರಿಸುತ್ತಾರೆ. ಆದರೆ ಗರ್ಭಧಾರಣೆ ತಡೆಗಟ್ಟುವಲ್ಲಿ ಹಾರ್ಮೋನ್‌ ಗರ್ಭ ನಿರೋಧಕಗಳು ಸಸಹಕಾರಿ, ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

ಹಾರ್ಮೋನಲ್‌ ಗರ್ಭನಿರೋಧಕ ಎಂದರೇನು?
ಹಾರ್ಮೋನಲ್‌ ಗರ್ಭನಿರೋಧಕ ಎಂದರೆ ಒಂದು ಬಗೆಯ ಔಷಧ, ಇದನ್ನು ಗರ್ಭಧಾರಣೆ ತಡೆಗಟ್ಟಲು ಬಳಸಲಾಗುವುದು. ಇದು ದೇಹದಲ್ಲಿ ಕೆಲವೊಂದು ಹಾರ್ಮೋನ್‌ಗಳ ಅಂದರೆ ಈಸ್ಟ್ರೋಜಿನ್, ಪ್ರೊಗೆಸ್ಟಿರೋನೆ ಹಾರ್ಮೋನ್‌ಗಳ ಬದಲಾವಣೆ ಮಾಡಿ ಗರ್ಭಧಾರಣೆ ತಡೆಗಟ್ಟುವುದು. ಇದು ಅಂಡಾಣುಗಳ ಉತ್ಪತ್ತಿ ತಡೆಗಟ್ಟುತ್ತದೆ ಅಲ್ಲದೆ ಗರ್ಭಕಂಠದ ಲೋಳೆ ದಪ್ಪ ಮಾಡಿ ವೀರ್ಯಾಣುಗಳು ಅಂಡಾಣುಗಳನ್ನು ತಲುಪುವುದನ್ನು ತಡೆಗಟ್ಟುತ್ತದೆ.

ಹಾರ್ಮೋನಲ್‌ ಗರ್ಭನಿರೋಧಕ ಹಲವು ಬಗೆಗಳಲ್ಲಿವೆ
ಮಾತ್ರೆಗಳು
ಪ್ಯಾಚಸ್
ಲಸಿಕೆ
ಐಯುಡಿ

ಹಾರ್ಮೋನಲ್‌ ಗರ್ಭ ನಿರೋಧಕ ಸುರಕ್ಷಿತವೇ?
ಸಾಮಾನ್ಯವಾಗಿ ಇದು ಸುರಕ್ಷಿತವಾಗಿದೆ. ಆದರೆ ಕೆಲವರ ಮೇಲೆ ಅಡ್ಡ ಪರಿಣಾಮ ಬೀರಬಹುದು, ಅದು ಅವರ ದೇಹದ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿದೆ. ನೀವು ಹಾರ್ಮೋನಲ್‌ ಗರ್ಭನಿರೋಧಕ ಬಳಸುವ ಮುನ್ನ ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಈ ವಿಧಾನ ಅನುಸರಿಸಿ.

ಹಾರ್ಮೋನಲ್‌ ಗರ್ಭನಿರೋಧಕಗಳ ಅಡ್ಡಪರಿಣಾಮವೇನು?
ಸಾಮಾನ್ಯವಾಗಿ ಇದು ಸುರಕ್ಷಿತವಾಗಿದೆ, ಕೆಲವೇ ಕೆಲವರಲ್ಲಿ ಈ ರೀತಿಯ ಅಡ್ಡಪರಿಣಾಮ ಬೀರಬಹುದು
* ತೂಕ ಹೆಚ್ಚುವುದು
* ತಲೆ
* ಸ್ತನಗಳು ಭಾರವಾದ ಅನುಭವ,ನೋವು
* ಅನಿಯಮಿತ ಮುಟ್ಟು
* ಮೂಡ್‌ ಸ್ವಿಂಗ್
* ಲೈಂಗಿಕ ಆಸಕ್ತಿ ಕಡಿಮೆಯಾಗುವುದು
* ಮೊಡವೆ
* ವಾಂತಿ

ಹಾರ್ಮೋನಲ್‌ ಗರ್ಭನಿರೋಧಕ ತೆಗೆದುಕೊಂಡಾಗ ಈ ಬಗೆಯ ಅಡ್ಡಪರಿಣಾಮಗಳು ಕಂಡು ಬಂದರೆ ವೈದ್ಯರ ಜೊತೆ ಚರ್ಚಿಸಿ ಬೇರೆ ವಿಧಾನ ಅನುಸರಿಸಬಹುದು.

English summary

Is hormonal contraception safe? All you need to know in Kannada

Is hormonal contraception safe? All you need to know in Kannada
Story first published: Friday, December 9, 2022, 21:25 [IST]
X
Desktop Bottom Promotion