For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಇಂಥಾ ಕೆಲಸಗಳನ್ನು ಎಂದಿಗೂ ಮಾಡಬೇಡಿ

|

ಗೃಹಿಣಿ ಅಂದರೆ ಇದು ದಿನವಿಡೀ ನಿರ್ವಹಿಸಬೇಕಾದ ಹುದ್ದೆಯಾಗಿದೆ. ಗರ್ಭವತಿಯಾದ ತಕ್ಷಣ ಈ ಹುದ್ದೆಯ ಜವಾಬ್ದಾರಿಗಳೇನೂ ಕಡಿಮೆಯಾಗುವುದಿಲ್ಲ. ಆದರೆ ಕೆಲವು ಕಾರ್ಯಗಳನ್ನು ಆರೋಗ್ಯ ನಿಮಿತ್ತ ಮಾಡುವುದು ಸಲ್ಲದು. ಆದರೆ ಗರ್ಭವತಿಗೆ ಯಾವ ಕೆಲಸಗಳನ್ನು ಮಾಡಬಹುದು ಮತ್ತು ಯಾವುದನ್ನು ಮಾಡಬಾರದು ಎಂದು ಗೊತ್ತಾಗುವುದಾದರೂ ಹೇಗೆ? ಈ ಲೇಖನ ಈ ವಿಷಯವನ್ನು ಸ್ಪಷ್ಟಪಡಿಸುತ್ತದೆ.

pregnant should not do these
ಖಂಡಿತವಾಗಿಯೂ ಮಾಡಬೇಕಾದುದು

ಖಂಡಿತವಾಗಿಯೂ ಮಾಡಬೇಕಾದುದು

ಮೊದಲು ವಿವರಣೆಗಳನ್ನು ಓದಿರಿ

ಮನೆಕೆಲಸವನ್ನು ಸುಲಭಗೊಳಿಸುವ ಹಲವಾರು ಉಪಕರಣಗಳು ಇಂದು ನಮ್ಮ ಮನೆಗಳಿಗೆ ಆಗಮಿಸಿವೆ. ಆಧುನಿಕ ಮನೆಗಳಲ್ಲಿ ನೆಲದ ಕಲೆ ತೆಗೆಯಲು, ನೆಲವನ್ನು ಮೇಣದ ಲೇಪನ ನೀಡಿ ಹೊಳಪಿಸಲು, ಧೂಳು ನಿವಾರಿಸಲು ವಿಶೇಷ ಉಪಕರಣಗಳಿವೆ. ಇವೆಲ್ಲವೂ ಕೆಲವು ರಾಸಾಯನಿಕ ಆಧಾರಿತ ಉತ್ಪನ್ನಗಳನ್ನು ಬಳಸುತ್ತವೆ. ಈ ಉತ್ಪನ್ನಗಳಲ್ಲಿ ಕೆಲವು ರಾಸಾಯನಿಕಗಳು ತಮ್ಮ ಕೆಲಸವಾದ ಬಳಿಕ ಆವಿಯಾಗಿ ಗಾಳಿಯಲ್ಲಿ ಬೆರೆತುಕೊಳ್ಳುವ ಗುಣ ಹೊಂದಿರುತ್ತವೆ. ಇವುಗಳನ್ನು Volatile organic compounds (VOCs) ಎಂದು ಕರೆಯುತ್ತಾರೆ.

ಸಾಮಾನ್ಯವಾಗಿ ಈ ಅನಿಲಗಳು ವಿಷಕಾರಿಯಾಗಿವೆ. ಈ ಮಾಹಿತಿಯನ್ನು ಉಪಕರಣದ ಉತ್ಪಾದಕರು ಒದಗಿಸಿರುತ್ತಾರೆ ಹಾಗೂ ಒದಗಿಸಬೇಕು ಕೂಡಾ! ಆದರೆ ಎಲ್ಲಿ ಈ ವಿವರಣೆ ಇರುತ್ತದೆ? ಉಪಕರಣದ ಬಳಕೆಯ ವಿಧಾನಗಳನ್ನು ವಿವರಿಸುವ ಪುಸ್ತಕದಲ್ಲಿ ವಿವರವಾಗಿ ನೀಡಿರಲಾಗುತ್ತದೆ. ಆದರೆ ಬಳಸುವ ಪ್ರತಿಯೊಬ್ಬರೂ ಮೊದಲು ಈ ಪುಸ್ತಕವನ್ನು ಓದಿರದೇ ಇದ್ದರೆ, ಇವರಿಗಾಗಿ ಉತ್ಪಾದಕರು ಉತ್ಪನ್ನದ ಮೇಲೆ ಸ್ಪಷ್ಟವಾಗಿ ಕಾಣಿಸುವಂತೆ "toxic," "danger," "poison," ಅಥವಾ "corrosive" ಮೊದಲಾದ ಪದಗಳನ್ನು ಚಿತ್ರ ಸಹಿತ ಮುದ್ರಿಸಿರುತ್ತಾರೆ.

ಇಂತಹ ಚಿತ್ರ ಮತ್ತು ಎಚ್ಚರಿಕೆಯ ಸಂಕೇತಗಳು ಕೇವಲ ಉಪಕರಣಗಳ ಮೇಲೆ ಮಾತ್ರವಲ್ಲ, ನಮ್ಮ ನಿತ್ಯ ಬಳಕೆಯ ಸೊಳ್ಳೆ ಓಡಿಸುವ ಸ್ಪ್ರೇ, ಬಚ್ಚಲು ತೊಳೆಯುವ ದ್ರಾವಣ, ನೆಲ ಒರೆಸುವ ದ್ರವ ಮೊದಲಾದ ಉತ್ಪನ್ನಗಳಲ್ಲೂ ಇರುತ್ತದೆ. ಗರ್ಭಿಣಿ ಉಪಯೋಗಿಸಬೇಕಾದ ಯಾವುದೇ ಉಪಕರಣ ಅಥವಾ ಉತ್ಪನ್ನದ ಮೇಲೆ ಈ ಯಾವುದೇ ಚಿತ್ರವಿದ್ದರೂ ಈ ಕೆಲಸವನ್ನು ನೀವು ಮಾಡಲು ಹೋಗದಿರಿ.

ಏಕೆಂದರೆ ಗರ್ಭಾವಸ್ಥೆಯಲ್ಲಿ ನಿಮ್ಮ ಆರೋಗ್ಯ ಇತರ ಸಮಯಕ್ಕಿಂತಲೂ ಹೆಚ್ಚು ಶಿಥಿಲವಾಗಿದ್ದು ಇದರ ಪ್ರಭಾವ ನಿಮ್ಮ ಮೇಲೆ ಅತಿ ಸುಲಭವಾಗಿ ಆಗುತ್ತದೆ. ಅಲ್ಲದೇ ನಿಮಗೆ ಹೊಸದಾದ ಯಾವುದೇ ಉಪಕರಣವನ್ನು ಉಪಯೋಗಿಸುವುದಿದ್ದರೂ ಮೊದಲಾಗಿ ಇದರ ಪುಸ್ತಕವನ್ನು ಓದಿಕೊಂಡು ವಿವರಗಳನ್ನು ಅನುಸರಿಸಿ. ಈ ವಿಷಕಾರಿ ವಸ್ತುಗಳು ನಿಮ್ಮ ಕಣ್ಣು, ಮೂಗು, ಗಂಟಲು ಹಾಗೂ ಶ್ವಾಸಕೋಶಗಳನ್ನು ಸುಲಭವಾಗಿ ಬಾಧಿಸಬಹುದು.

ಸಾಮಾನ್ಯ ಗಾಜು ಒರೆಸುವ ಅಗ್ಗದ ದ್ರಾವಣದಲ್ಲಿಯೂ ಅಲ್ಪ ಮಟ್ಟಿಗಿನ ವಿಷಕಾರಿ ವಸ್ತುಗಳಿರಬಹುದು. ಇದನ್ನು "acute toxicity" ಎಂದು ವಿವರಿಸಿರುತ್ತಾರೆ. ಈ ಅಲ್ಪ ಮಟ್ಟದ ಪ್ರಾಬಲ್ಯ ನಿಮಗೆ ಹೆಚ್ಚಿನ ತೊಂದರೆ ನೀಡದೇ ಇದ್ದರೂ ನಿಮಗೆ ಅಥವಾ ನಿಮ್ಮ ಮಗುವಿಗೆ ಯಾವ ರಾಸಾಯನಿಕಗಳು ಅಲರ್ಜಿಕಾರಕವಾಗಿವೆ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲದ್ದರಿಂದ ನೀವು ಅಪಾಯವನ್ನು ಕೈಗೆತ್ತಿಕೊಳ್ಳದೇ ಇರುವುದೇ ಲೇಸು. ಬದಲಿಗೆ ನೈಸರ್ಗಿಕ ಅಥವಾ ವಿಷಕಾರಿಯಲ್ಲದ (nontoxic) ಎಂದು ಬರೆದಿರುವ ಉತ್ಪನ್ನಗಳನ್ನೇ ಖರೀದಿಸಿ.

ನಿಮ್ಮದೇ ಆದ ಸ್ವಚ್ಛತಾ ಸಾಮಾಗ್ರಿಗಳನ್ನು ಬಳಸಿ

ನಿಮ್ಮದೇ ಆದ ಸ್ವಚ್ಛತಾ ಸಾಮಾಗ್ರಿಗಳನ್ನು ಬಳಸಿ

ಸ್ವಚ್ಛತಾ ಸಾಮಗ್ರಿಗಳನ್ನು ಕೊಂಚ ಶ್ರಮವಹಿಸಿ ನೀವೇ ಸ್ವತಃ ತಯಾರಿಸಿಕೊಳ್ಳಬಹುದು. ಇವು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳಷ್ಟು ಪರಿಣಾಮಕಾರಿಯಲ್ಲದೇ ಇದ್ದರೂ ನಿಮ್ಮ ಅಗತ್ಯವನ್ನು ಪೂರೈಸುವಷ್ಟಂತೂ ಇದ್ದೇ ಇರುತ್ತವೆ ಅಲ್ಲದೇ ಅಗ್ಗವೂ ಹೌದು.

ಇದಕ್ಕಾಗಿ ಸಮಪ್ರಮಾಣದಲ್ಲಿ ಬಿಳಿ ಶಿರ್ಕಾ ಮತ್ತು ನೀರನ್ನು ಬೆರೆಸಿ ನೀರು ಸಿಂಪಡಿಸುವ ಉಪಕರಣದಲ್ಲಿ ತುಂಬಿಸಿ ನೆಲದ ಮತ್ತು ಶೌಚಾಲಯದ ಟೈಲ್ಸ್, ಮೇಜು, ಅಡುಗೆಮನೆಯ ಹೆಚ್ಚು ಬಳಕೆಯಾಗುವ ಸ್ಥಳಗಳ ಸ್ವಚ್ಛತೆಗಾಗಿ ಬಳಸಬಹುದು. ನೀರು ಬೀಳುವ ಸಿಂಕ್ ಮತ್ತು ಟಬ್ ಗಳಲ್ಲಿ ಇರುವ ಕಲೆಗಳನ್ನು ನಿವಾರಿಸಲು ಅಡುಗೆ ಸೋಡಾ ಉತ್ತಮ ಮಾರ್ಗವಾಗಿದೆ.

ಇದನ್ನು ಬಳಸುವ ಮುನ್ನ ರಬ್ಬರ್ ಕೈಗವಸು ಧರಿಸುವುದು ಅಗತ್ಯ. ಮೊದಲು ಈ ಕಲೆಗಳಿದ್ದಲ್ಲಿ ಬಿಳಿ ಶಿರ್ಕಾದಿಂದ ಒದ್ದೆಯಾಗಿಸಿದ ದಪ್ಪ ಬಟ್ಟೆಯನ್ನು ಅದ್ದಿ ಒರೆಸಿ. ಬಳಿಕ ಅಡುಗೆ ಸೋಡಾವನ್ನು ಈ ಭಾಗದ ಮೇಲೆ ಚಿಮುಕಿಸಿ. ನಂತರ ಇದೇ ಬಟ್ಟೆಯನ್ನು ಉಪಯೋಗಿಸಿ ಕೊಂಚವೇ ಒತ್ತಡದಲ್ಲಿ ತಿಕ್ಕಿ ತೊಳೆಯುವ ಮೂಲಕ ಕಲೆಗಳೆಲ್ಲವೂ ಹೋಗುತ್ತವೆ.

ಬಿಳಿ ಬಟ್ಟೆಗಳನ್ನು ಸ್ವಚ್ಛಗೊಳಿಸಲು ಹೈಡ್ರೋಜನ್ ಪೆರಾಕ್ಸೈಡ್ ಬಳಸಿ. ಒಂದು ಭಾಗಹೈಡ್ರೋಜನ್ ಪೆರಾಕ್ಸೈಡ್ ಗೆ ಎಂಟು ಭಾಗ ನೀರು ಹಾಕಿ ಈ ನೀರಿನಲ್ಲಿ ಒಗೆದ ಬಿಳಿ ಬಟ್ಟೆಗಳನ್ನು ಮುಳುಗಿಸಿ ಹಿಂಡುವ ಮೂಲಕ ಬಟ್ಟೆಗಳು ಬಿಳಿಯಾಗಿ ಹೊಳೆಯುತ್ತವೆ.

ಎಚ್ಚರಿಕೆ: ಎಂದಿಗೂ ಅಮೋನಿಯಾ ಮತ್ತು ಕ್ಲೋರೀನ್ ಉತ್ಪನ್ನಗಳನ್ನು ಬೆರೆಸಬೇಡಿ. ಇವು ಅಪಾಯಕಾರಿ ಹೊಗೆಯನ್ನು ಅಥವಾ ಅನಿಲಗಳನ್ನು ಉತ್ಪತ್ತಿ ಮಾಡಬಹುದು.

ಕಿಟಕಿಗಳನ್ನು ತೆರೆಯಿರಿ

ಕಿಟಕಿಗಳನ್ನು ತೆರೆಯಿರಿ

ನೀವು ಸ್ವಚ್ಛತೆಗಾಗಿ ಯಾವುದೇ ಉತ್ಪನ್ನಗಳನ್ನು ಬಳಸುತ್ತಿದ್ದರೂ ಸರಿ, ಮೊದಲು ಕಿಟಕಿಗಳು ಪೂರ್ಣವಾಗಿ ತೆರೆದಿರುವುದನ್ನು ಖಚಿತಪಡಿಸಿಕೊಳ್ಳಿ. ಇದರಿಂದ ಮನೆಯೊಳಗೆ ತಾಜಾ ಹವಾ ಬರುತ್ತದೆ ಹಾಗೂ ವಿಷಾನಿಲಗಳು ಇದ್ದರೆ ಹೊರಹೋಗಲು ದಾರಿ ಸಿಗುತ್ತದೆ. ಸ್ವಚ್ಛತೆಯ ಕಾರ್ಯ ನಡೆಸುವಾಗ ಶೌಚಾಲಯದ ಎಕ್ಸ್ ಹಾಸ್ಟ್ ಫ್ಯಾನ್ ಚಾಲೂ ಇರುವಂತೆ ನೋಡಿಕೊಳ್ಳಿ. ನೀವು ಶೌಚಾಲಯವನ್ನು ಸ್ವಚ್ಛಗೊಳಿಸುವುದನ್ನು ಗರಿಷ್ಟ ಹದಿನೈದು ನಿಮಿಷಕ್ಕಿಂತ ಮೊದಲು ನಿರ್ವಹಿಸಬೇಕು.

ಪ್ರತಿ ಬಾರಿಯೂ ರಬ್ಬರ್ ಕೈಗವಸು ಧರಿಸಿ

ಪ್ರತಿ ಬಾರಿಯೂ ರಬ್ಬರ್ ಕೈಗವಸು ಧರಿಸಿ

ಗರ್ಭಾವಸ್ಥೆಯಲ್ಲಿ ನಿಮ್ಮ ತ್ವಚೆ ಇತರ ಸಮಯಕ್ಕಿಂತಲೂ ಹೆಚ್ಚು ಸಂವೇದನಾಶೀಲವಾಗಿರುತ್ತದೆ. ಇದಕ್ಕೂ ಮುನ್ನ ನಿಮಗೆ ಯಾವುದೇ ತೊಂದರೆ ಕೊಡದಿದ್ದ ಸುರಕ್ಷಿತ ಎನಿಸಿದ್ದ ಉತ್ಪನ್ನಗಳೂ ಈಗ ತೊಂದರೆಗೆ ಕಾರಣವಾಗಬಹುದು. ಹಾಗಾಗಿ ಯಾವುದೇ ಉತ್ಪನ್ನಗಳನ್ನೇ ಬಳಸಿ, ಪ್ರತಿ ಬಾರಿಯೂ ಸ್ವಚ್ಛ ರಬ್ಬರ್ ಗವಸನ್ನು ಧರಿಸಿಯೇ ಬಳಕೆಯನ್ನು ಪ್ರಾರಂಭಿಸಿ. ಏಕೆಂದರೆ ಕೆಲವು ರಾಸಾಯನಿಕಗಳು ಹಿಂದೆ ಅಪಾಯ ಉಂಟು ಮಾಡದೇ ಇದ್ದರೂ ಈಗ ಡರ್ಮಿಟೈಟಿಸ್ ಎಂಬ ಸ್ಥಿತಿಯನ್ನು ಉಂಟು ಮಾಡಬಹುದು. ಪರಿಣಾಮವಾಗಿ ತ್ವಚೆಯಲ್ಲಿ ತುರಿಕೆ, ಉರಿತ, ಉರಿಯೂತ ಕಾಣಿಸಿಕೊಳ್ಳುತ್ತದೆ. ಕ್ಲೋರೀನ್, ಡಿಟರ್ಜೆಂಟ್, ಬ್ಲೀಚ್, ಬಣ್ಣ ನೀಡುವ ಡೈ, ಸುಗಂಧ ನೀಡುವ ದ್ರವ ಮೊದಲಾದವೆಲ್ಲಾ ನಿಮಗೆ ಹಾನಿಕಾರಕವಾಗಬಹುದು.

ಸ್ವಚ್ಛತಾ ಕಾರ್ಯವನ್ನು ಆದಷ್ಟೂ ತಪ್ಪಿಸಿಕೊಳ್ಳಿ

ಸ್ವಚ್ಛತಾ ಕಾರ್ಯವನ್ನು ಆದಷ್ಟೂ ತಪ್ಪಿಸಿಕೊಳ್ಳಿ

ಮಗುವಿನ ಆಗಮನದ ಬಳಿಕ ಪಾಪ್ತ ವಯಸ್ಕನಾಗುವವರೆಗೂ ನೀವು ಮಗುವಿನ ಸ್ವಚ್ಛತೆಯ ಕಾರ್ಯದ ಕಾಳಜಿ ವಹಿಸುವುದು ಅನಿವಾರ್ಯವಾಗಿದೆ. ಆದರೆ ಗರ್ಭಾವಸ್ಥೆಯಲ್ಲಿ ನೀವು ಆದಷ್ಟೂ ಈ ಕೆಲಸಗಳಿಂದ ತಪ್ಪಿಸಿಕೊಳ್ಳಬೇಕು. ಅಂದರೆ ಈ ಕೆಲಸಗಳನ್ನು ಮಾಡುವುದನ್ನು ತಪ್ಪಿಸಲೆಂದೇ ನೀವು ಗರ್ಭಾವಸ್ಥೆಯ ನೆಪವನ್ನು ಹೂಡುವುದು ಎಂದು ಇದರ ಅರ್ಥವಲ್ಲ. ಗರ್ಭಾವಸ್ಥೆಯೇ ಮೊದಲಾಗಿ ಗರ್ಭವತಿಯನ್ನು ಅತೀವವಾದ ಆಯಾಸದಲ್ಲಿ ಇರಿಸುತ್ತದೆ.

ನಿಮಗೆ ಹೆಚ್ಚು ವಿಶ್ರಾಂತಿಯ ಅಗತ್ಯವಿದೆ. ಅಲ್ಲದೇ ನಿಮಗೆ ಗರ್ಭಾವಸ್ಥೆಯಲ್ಲಿ ಎದುರಾಗುವ ಚಿಕ್ಕ ಪುಟ್ಟ ಅಲರ್ಜಿ ಮತ್ತು ವಾಕರಿಕೆಗಳೂ ಈ ಉತ್ಪನ್ನಗಳ ವಾಸನೆಯಿಂದ ಉಲ್ಬಣಗೊಳ್ಳಬಹುದು. ಅಲ್ಲದೇ ಹೊಟ್ಟೆ ಉಬ್ಬಿದಷ್ಟೂ ನಿಮಗೆ ನೆಲದ ಮೇಲೆ ಕುಳಿತುಕೊಳ್ಳಲು, ಬಗ್ಗಲು ಮತ್ತು ಎದ್ದೇಳಲು ಕಷ್ಟಕರವಾಗಿಸುತ್ತದೆ.

ಮನೆಕೆಲದ ಎಂದರೆ ಈ ಎಲ್ಲಾ ಬಗೆಯ ಚಟುವಟಿಕೆಗಳ ಅಗತ್ಯವಿದ್ದೇ ಇರುತ್ತದೆ. ಹಾಗಾಗಿ, ಹೆರಿಗೆಯಾಗಿ ಬಾಣಂತನ ಮುಗಿಯುವವರೆಗೂ ನೀವು ಈ ಕೆಲಸಕ್ಕಾಗಿ ಸಹಾಯವನ್ನು ಪಡೆದುಕೊಂಡಷ್ಟೂ ಒಳ್ಳೆಯದು. ಸಾಧ್ಯವಾದರೆ ಈ ಜವಾಬ್ದಾರಿಯನ್ನು ನಿಮ್ಮ ಸಂಗಾತಿ ವಹಿಸಿಕೊಳ್ಳಬಹುದು ಅಥವಾ ವೃತ್ತಿಪರರ ನೆರವನ್ನು ನೀವು ಪಡೆಯಬಹುದು.

ಹಾವಸೆಗಳನ್ನು ಸ್ವಚ್ಛಗೊಳಿಸದಿರಿ

ಹಾವಸೆಗಳನ್ನು ಸ್ವಚ್ಛಗೊಳಿಸದಿರಿ

ಶೌಚಾಲಯ ಮೊದಲಾದ ತೇವ ಇರುವ ಸ್ಥಳಗಳಲ್ಲಿ ಶಿಲೀಂಧ್ರದ ಬೆಳವಣಿಗೆಯಿಂದ ಹಾವಸೆಗಳು ಕಾಣಿಸಿಕೊಳ್ಳುತ್ತವೆ. (mold). ಗರ್ಭಾವಸ್ಥೆಯಲ್ಲಿ ನೀವು ಇದನ್ನು ಸ್ವಚ್ಛಗೊಳಿಸುವುದು ಅತಿ ಅಪಾಯಕಾರಿ! ಈ ಶಿಲೀಂಧ್ರಗಳು ವಿಷಕಾರಿ ವಸ್ತುಗಳನ್ನು ಉತ್ಪಾದಿಸುತ್ತವೆ ಹಾಗೂ ಇವನ್ನು ಸ್ವಚ್ಛಗೊಳಿಸುವ ಸಮಯದಲ್ಲಿ ಒಂದು ವೇಳೆ ನಿಮ್ಮ ಉಸಿರಿನ ಮೂಲಕ ದೇಹ ಸೇರಿದರೆ ಮಗುವಿನ ಬೆಳವಣಿಗೆಯ ಮೇಲೆ ಇದು ಪ್ರಭಾವ ಬೀರುತ್ತದೆ.

ಈ ಹಾವಸೆ ಇರುವ ಎಲೆಗಳನ್ನು ತಿಂದ ಪ್ರಾಣಿಗಳ ಮರಿಗಳು ಹುಟ್ಟುವಾಗಲೇ ವೈಕಲ್ಯವನ್ನು ಪಡೆದು ಹುಟ್ಟಿರುವುದನ್ನು ಗಮನಿಸಲಾಗಿದೆ. ಹಾಗಾಗಿ, ನಿಮ್ಮ ಮನೆಯ ಯಾವುದೇ ಭಾಗದಲ್ಲಿ ಈ ಹಾವಸೆಗಳು ಇದ್ದರೆ ತಕ್ಷಣ ಇದನ್ನು ನಿವಾರಿಸಲು ಕ್ರಮ ಕೈಗೊಳ್ಳಿ. ಆದರೆ ಇದನ್ನು ನೀವೇ ಮಾಡಬಾರದು. ಬದಲಿಗೆ ಯಾರದ್ದಾದರೂ ಸಹಾಯ ಪಡೆದುಕೊಳ್ಳಿ.

ನೀರು ಮತ್ತು ಬಿಳಿಚುಕಾರಕ (ಬ್ಲೀಚ್) ದ್ರಾವಣವನ್ನು (ಸೂಚನೆಯನುಸಾರ) ಮಿಶ್ರಣ ಮಾಡಿ ಈ ಹಾವಸೆಗಳಿರುವಲ್ಲೆಲ್ಲಾ ತಿಕ್ಕಿ ತೊಳೆಯಬೇಕು. ಹಾವಸೆಗಳು ಟೈಲ್ಸ್, ಗಾಜು, ಸಿರಾಮಿಕ್, ಲೋಹ ಮತ್ತು ಪ್ಲಾಸ್ಟಿಕ್ ವಸ್ತುಗಳ ಮೇಲೂ ಎದುರಾಗಬಹುದು. ಒಂದು ವೇಳೆ ಇವು ನೆಲಗಂಬಳಿ, ಗೋಡೆಯ ಬಣ್ಣ, ಸೀಲಿಂಗ್ ಟೈಲ್ಸ್ ಮೊದಲಾದವುಗಳ ಮೇಲೆ ಬಂದಿದ್ದರೆ ಈ ವಸ್ತುಗಳನ್ನೇ ನಿವಾರಿಸಿ ಹೊಸದನ್ನು ಅಳವಡಿಸುವುದೇ ಉತ್ತಮ. ಇದಕ್ಕಾಗಿ ವೃತ್ತಿಪರ ಸಂಸ್ಥೆಗಳ ಸಲಹೆ ಪಡೆಯಿರಿ. ನಿಜಕ್ಕೂ ನಿಮ್ಮ ಆರೋಗ್ಯಕ್ಕೆ ಇವು ಅತಿ ಮಾರಕವಾಗಿವೆ!

ಖಂಡಿತವಾಗಿಯೂ ಮಾಡಬೇಡಿ

ಖಂಡಿತವಾಗಿಯೂ ಮಾಡಬೇಡಿ

ಮನೆಯಲ್ಲಿ ಶೂ ಧರಿಸಬೇಡಿ

ಮನೆಯ ಒಳಗಿನ ಧೂಳಿನ ಪ್ರಮಾಣದ 85 ಶೇಖಡಾ ನಮ್ಮ ಪಾದರಕ್ಷೆಗಳ ಒಳಭಾಗದಲ್ಲಿರುತ್ತದೆ! ಇದರಲ್ಲಿ ಸಾವಿರಾರು ಬಗೆಯ ಬ್ಯಾಕ್ಟೀರಿಯಾಗಳೂ ಇರುತ್ತವೆ. ಇದಕ್ಕೆ ಪರಿಹಾರ ಎಂದರೆ ನಿಮ್ಮ ಪಾದರಕ್ಷೆಗಳನ್ನು ಮನೆಯ ಹೊರಗೆ ಇರಿಸುವುದು. ಮತ್ತು ಉಳಿದ ಸದಸ್ಯರಿಗೂ ಹಾಗೇ ಮಾಡಲು ವಿನಂತಿಸಿಕೊಳ್ಳುವುದು. ಮನೆಯೊಳಗೆ ಸರ್ವಥಾ ಪಾದರಕ್ಷೆಗಳನ್ನು ತರಕೂಡದು. ಇದರಿಂದ ಮನೆಯೂ ಸ್ವಚ್ಛ ಮತ್ತು ಕಲ್ಮಶಗಳೂ ಇಲ್ಲವಾಗುತ್ತವೆ. ಮನೆ ಸ್ವಚ್ಛಗೊಳಿಸುವುದೂ ಸುಲಭ. ಒಂದು ವೇಳೆ ಮನೆಯೊಳಗೆ ಪಾದರಕ್ಷೆ ಧರಿಸುವುದು ಅನಿವಾರ್ಯವಾಗಿದ್ದರೆ ಇದಕ್ಕಾಗಿಯೇ ಪ್ರತಿಯೊಬ್ಬರಿಗೂ ಪ್ರತ್ಯೇಕವಾದ ಪಾದರಕ್ಷೆಗಳನ್ನು ಒದಗಿಸುವುದೇ ಉತ್ತಮ ಕ್ರಮವಾಗಿದೆ.

ಪೀಠೋಪಕರಣಗಳನ್ನು ಅತ್ತಿತ್ತ ಜಾರಿಸುವುದು

ಪೀಠೋಪಕರಣಗಳನ್ನು ಅತ್ತಿತ್ತ ಜಾರಿಸುವುದು

ಮನೆಯ ಸ್ವಚ್ಛತೆ ಅಥವಾ ವ್ಯಾಕ್ಯೂಮ್ ಗಾಗಿ ಮನೆಯ ಪೀಠೋಪಕರಣಗಳನ್ನು ಅತ್ತಿತ್ತ ಜರುಗಿಸಬೇಕಾಗುತ್ತದೆ. ಆದರೆ ಗರ್ಭವತಿಯಾಗಿರುವ ನೀವು ಈ ಕಾರ್ಯವನ್ನು ಮಾಡದಿರಿ. ಏಕೆಂದರೆ ಈ ಕಾರ್ಯದಲ್ಲಿ ನಿಮ್ಮ ಬೆನ್ನಿನ ಮೇಲೆ ಅತೀವವಾದ ಭಾರ ಬೀಳುತ್ತದೆ. ಬೆಳೆಯುತ್ತಿರುವ ಹೊಟ್ಟೆಯ ಕಾರಣದಿಂದ ನಿಮ್ಮ ದೇಹದ ಗುರುತ್ವ ಕೇಂದ್ರ ಮುಂದೆ ಚಲಿಸಿರುತ್ತದೆ. ಹಾಗಾಗಿ ನಿಮಗೆ ನಡೆಯುವಾಗಲೂ ಕೊಂಚ ಹಿಂದೆ ವಾಲಬೇಕಾಗುತ್ತದೆ.

ಈ ಸ್ಥಿತಿಯಲ್ಲಿ ನೀವು ಕೊಂಚವೂ ಭಾರವನ್ನು ಎತ್ತಲೇಬಾರದು! ಅದರಲ್ಲೂ ಭಾರದ ಪೀಠೋಪಕರಣಗಳನ್ನು ಎತ್ತಲು ಹೋದರೆ ಇದು ನಿಮ್ಮ ಬೆನ್ನುಹುರಿಯ ಮೇಲೆ ಅತಿ ಹೆಚ್ಚಿನ ಒತ್ತಡ ಹೇರಬಹುದು. ಅಲ್ಲದೆ ಗರ್ಭಾವಸ್ಥೆಯಲ್ಲಿ ರಸದೂತಗಳ ಪ್ರಭಾವದಿಂದ ನಿಮ್ಮ ಬೆನ್ನು ಮೂಳೆಯ ಅಂಗಾಂಶಗಳು ಸಾಕಷ್ಟು ಶಿಥಿಲವಾಗಿರುತ್ತವೆ. ಮೂಳೆ ಮತ್ತು ಸ್ನಾಯುಗಳನ್ನು ಬಂಧಿಸುವ ಅಂಗಾಂಶ, ಮೂಳೆಸಂಧುಗಳು ಎಲ್ಲವೂ ಹಿಂದಿಗಿಂತಲೂ ಹೆಚ್ಚು ಶಿಥಿಲವಾಗಿರುತ್ತವೆ. ಈ ಸ್ಥಿತಿಯಲ್ಲಿ ನೀವು ಎತ್ತುವ ಭಾರ ಅಪಾಯಕಾರಿಯಾಗಿದೆ.

ಯಾವುದೇ ಬಲ ನಿಮ್ಮ ಮೂಳೆಗಳನ್ನು ಸುಲಭವಾಗಿ ಮುರಿತಕ್ಕೆ ಒಳಗಾಗಿಸಬಹುದು. ಹಾಗಾಗಿ, ತಜ್ಞರ ಸಲಹೆಯನ್ನು ಮಾತ್ರವೇ ಅನುಸರಿಸಿ. ಈ ಅವಧಿಯಲ್ಲಿ ನೀವು ಎಷ್ಟು ಭಾರ ಎತ್ತಬಹುದು ಎಂಬುದನ್ನು ತಜ್ಞರು ಹೀಗೆ ವಿವರಿಸಿದ್ದಾರೆ: ನೀವು ಸಾಮಾನ್ಯ ಆರೋಗ್ಯದಲ್ಲಿದ್ದಾಗ ಎಷ್ಟು ಭಾರವನ್ನು ಎತ್ತಬಲ್ಲವರಾಗಿದ್ದೀರೋ ಆದರ ಕಾಲು ಭಾಗವನ್ನು ಮಾತ್ರವೇ ಗರ್ಭಾವಸ್ಥೆಯಲ್ಲಿ ಎತ್ತಬಹುದು, ಅದೂ ಅತೀ ಹೆಚ್ಚಿನ ಎಚ್ಚರಿಕೆ ವಹಿಸಿ! ನಿಮ್ಮ ಎತ್ತುವ ಸಾಮರ್ಥ್ಯ ಕಡಿಮೆಯಾಗಿದ್ದರೂ ನಿಮ್ಮ ಪೀಠೋಪಕರಣದ ಭಾರವೇನೂ ಕಡಿಮೆಯಾಗಿಲ್ಲವಲ್ಲ! ಹಾಗಾಗಿ, ಈ ಎತ್ತುವಿಕೆಯ ಕಾರ್ಯವನ್ನು ಇನ್ನೊಬ್ಬರಿಂದ ಮಾಡಿಸಿಕೊಳ್ಳುವುದೇ ಉತ್ತಮ.

English summary

During Pregnancy Cleaning: Dos and Don'ts

Here we are discussing about During Pregnancy Cleaning: Dos and Don'ts. Are you a mama-to-be getting ready to scrub the house? First read this guide to safer housecleaning when you're pregnant. Read more
X
Desktop Bottom Promotion