For Quick Alerts
ALLOW NOTIFICATIONS  
For Daily Alerts

ಮಗು ನಿಮ್ಮನ್ನು ಬಿಟ್ಟಿರಲಾರದೆ ಅಳುವುದು, ಹಠ ಮಾಡುವುದು ಮಾಡುತ್ತಿದೆಯೇ?

|

ಇಷ್ಟು ದಿನ ನೀವು ನಿಮ್ಮ ಮಗುವಿನ ಜೊತೆಗಿದ್ದು ನಂತರ ಕೆಲಸಕ್ಕೆ ಹೋಗುವಾಗ ತುಂಬಾ ಅಳುವುದು, ಹಠ ಮಾಡುವುದು ಮಾಡುವಾಗ ಮನಸ್ಸಿಗೆ ತುಂಬಾನೇ ದುಃಖ ಆಗುತ್ತೆ, ಆದರೆ ಆ ಮಗುವಿನ ಭವಿಷ್ಯಕ್ಕಾಗಿ ದುಡಿಯಲೇಬೇಕಾದ ಅನಿವಾರ್ಯತೆ ಇರುವುದರಿಂದ ನಾವು ಹೋಗುತ್ತೇವೆ, ಕೆಲವು ದಿನಗಳಲ್ಲಿ ಮಗುವಿಗೂ ಅಭ್ಯಾಸವಾಗುತ್ತೆ. ಆದರೆ ಮಗು Separation Anxiety ಅಂದರೆ ಪ್ರತ್ಯೇಕವಾಗುತ್ತಿರುವ ಒತ್ತಡ ಅನುಭವಿಸುತ್ತಿದ್ದರೆ ಮಾತ್ರ ಮಗುವಿನ ಆರೋಗ್ಯದ ದೃಷ್ಟಿಯಿಂದ ನಿರ್ಲಕ್ಷ್ಯ ಮಾಡಲೇಬೇಡಿ.

childs separation anxiety

ಪ್ರತ್ಯೇಕವಾಗುತ್ತಿರುವ ಒತ್ತಡ ಎಂದರೇನು?
ಈ ರೀತಿ ಪ್ರತ್ಯೇಕವಾಗುತ್ತಿರುವ ಒತ್ತಡ ಅನೇಕ ಮಕ್ಕಳಲ್ಲಿ ಕಂಡು ಬರುತ್ತಿದೆ. ಸಾಮಾನ್ಯವಾಗಿ 6 ತಿಂಗಳಿನಿಂದ 3 ವರ್ಷದ ಮಕ್ಕಳಲ್ಲಿ ಈ ರೀತಿ ಹೆಚ್ಚಾಗಿ ಕಂಡು ಬರುವುದು. ಏಕೆಂದರೆ ಈ ಸಮಯದಲ್ಲಿ ತಾಯಿ ಕೆಲಸಕ್ಕೆ ಮರಳಬಹುದು, ಇನ್ನು 3 ವರ್ಷ ಆಗುತ್ತಿದ್ದಂತೆ ಮಗುವನ್ನು ಪ್ಲೇ ಸ್ಕೂಲ್‌ಗೆ ಹಾಕಬಹುದು ಆಗ ಅಷ್ಟು ದಿನ ತಾಯಿ ಅಥವಾ ಕೇರ್‌ಟೇಕರ್‌ ಜೊತೆ ಇದ್ದ ಮಗುವಿಗೆ ಅವರು ಸ್ವಲ್ಪ ಗಂಟೆಗಳ ಕಾಲ ಬಿಟ್ಟು ದೂರ ಇದ್ದಾಗ ಭಯ ಕಾಡುತ್ತದೆ. ಜೋರಾಗಿ ಅಳುವುದು, ಹಠ ಮಾಡುವುದು ಮಾಡುತ್ತಾರೆ. ಇದನ್ನು ಪ್ರತ್ಯೇಕತೆಯ ಒತ್ತಡ ಎಂದು ಕರೆಯುವುದು.

ಮಕ್ಕಳಲ್ಲಿ ಪ್ರತ್ಯೇಕತೆ ಒತ್ತಡದ ಲಕ್ಷಣಗಳು
* ನಿಮ್ಮನ್ನು ಬಿಟ್ಟು ಇರಲು ಒಪ್ಪದೇ ಇರುವುದು
* ತುಂಬಾನೇ ಅಳುವುದು
* ನೀವು ಇಲ್ಲದೆ ನಿದ್ದೆ ಮಾಡಲು ಹೋಗದಿರುವುದು
* ನಿದ್ದೆಯಲ್ಲಿ ಆಗಾಗ ಎಚ್ಚರಗೊಂಡು ಅಳುವುದು

ಹೀಗಾದಾಗ ಏನು ಮಾಡಬೇಕು?
ಈ ಬಗ್ಗೆ ನಿಮ್ಮಲ್ಲಿ ತಪ್ಪಿತಸ್ಥ ಮನೋಭಾವ ಬೇಡ, ಮಗು ಸ್ವಲ್ಪ ದಿನಗಳಲ್ಲಿ ನಿಧಾನಕ್ಕೆ ಪರಿಸ್ಥಿತಿಗೆ ಹೊಂದಿಕೊಳ್ಳುತ್ತದೆ, ಅಲ್ಲದೆ ಮಗು ನಿಮ್ಮನ್ನು ಬಿಟ್ಟು ಸೋಷಿಯಲ್ ಆಗಿ ಬೆರೆಯಲು ಕಲಿಯುವುದು ಅವಶ್ಯಕ, ಆದ್ದರಿಂದ ನಿಮ್ಮಲ್ಲಿ ತಪ್ಪಿತಸ್ಥ ಮನೋಭಾವ ಬೇಡ್ವೆ ಬೇಡ.

ನಿಮ್ಮ ಮಗುವಿನ ಜೊತೆ ಪ್ಲ್ಯಾನ್ ಮಾಡಿ
ಮಗುವಿಗೆ ಒಂದು ವರ್ಷ ಕಳೆಯುತ್ತಿದ್ದಂತೆ ನೀವು ಹೇಳುವುದನ್ನು ಅರ್ಥಮಾಡಿಕೊಳ್ಳುತ್ತವೆ, 3 ವರ್ಷ ಕಳೆದಿದ್ದರೆ ನೀವು ಏನಾದರೂ ಹೇಳಿದ್ದರೆ ಉದಾಹರಣೆಗೆ ಸಂಜೆ ಬಂದು ಪಾರ್ಕ್‌ಗೆ ಕರೆದುಕೊಂಡು ಹೋಗುವೆ ಎಂದು ಹೇಳಿದ್ದರೆ ಮರೆಯದೆ ಕಾಯುತ್ತಿರುತ್ತದೆ, ಈ ರೀತಿಯ ಪ್ಲ್ಯಾನ್ ಮಾಡಿ, ಆಗ ಅವರಿಗೂ ನೀವು ಹೋಗಿ ಮರಳಿ ಬರುತ್ತೀರ ಎಂಬ ನಂಬಿಕೆ ಬರುತ್ತದೆ.

ಮಗುವಿನಲ್ಲಿ ಪ್ರತ್ಯೇಕದ ಒತ್ತಡ ಉಂಟಾದಾಗ ಏನು ಮಾಡಬೇಕು?
ನೀವು ಮಗುವನ್ನು ಬಿಟ್ಟು ಸ್ವಲ್ಪ ಗಂಟೆಗಳ ದೂರ ಇರುವಾಗ ನಿಧಾನಕ್ಕೆ ಅಭ್ಯಾಸ ಮಾಡಬೇಕು, ನೀವು ಕೆಲಸಕ್ಕೆ ಮರಳುತ್ತಿದ್ದರೆ ಮಗುವಿನ ಕೇರ್‌ಟೇಕರ್‌ ಜೊತೆ ಮಗು ಬೆರೆಯುವಂತೆ ಮಾಡಬೇಕು. ಶಾಲೆಗೆ ಹೋಗುವ ಮಗುವಾದರೆ ಅಲ್ಲಿ ಬೇರೆ ಮಕ್ಕಳ ಜೊತೆ ಬೆರೆತು ಕೆಲವೇ ವಾರಗಳಲ್ಲಿ ಈ ಪ್ರತ್ಯೇಕತೆಯ ಒತ್ತಡದಿಂದ ಹೊರಬರುತ್ತಾರೆ.

ಮಗು ಪ್ರತ್ಯೇಕತೆಯ ಒತ್ತಡಕ್ಕೆ ಒಳಗಾದಾಗ ಏನು ಮಾಡಬಾರದು?
ಮಗುವಿಗೆ ಮತ್ತಷ್ಟು ಗದರಿಸುವುದು ಮಾಡಬೇಡಿ, ಕೇರ್‌ಟೇಕರ್‌ಗೂ ಮಗುವನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಸೂಚಿಸಿ, ಅವರು ಹೇಗೆ ನೋಡಿಕೊಳ್ಳುತ್ತಾರೆ ಎಂಬುವುದನ್ನು ಗಮನಿಸಿ.

ಇನ್ನು ಮಗುವಿಗೆ ಗುಡ್‌ಬೈ ಹೇಳಿ ಹೋಗುವಾಗ ನೀವು ಎಮೋಷನ್ ಆಗಬೇಡಿ, ಮುಖದಲ್ಲಿ ನಗು ತಂದು ಬೇಗ ಬರುತ್ತೇನೆ ಎಂದು ಹೇಳಿ ಹೋಗಿ. 4 ವಾರಗಳು ಕಳೆದರೂ ಮಗುವಿನಲ್ಲಿ ಪ್ರತ್ಯೇಕತೆಯ ಒತ್ತಡದ ಲಕ್ಷಣಗಳು ಕಡಿಮೆಯಾಗದೆ ತಲೆನೋವು, ವಾಂತಿ ಸಮಸ್ಯೆ ಕಾಣಿಸಿಕೊಂಡರೆ ವೈದ್ಯರಿಗೆ ತೋರಿಸಿ.

English summary

Child's Separation Anxiety Signs and How to Manage in kannada

How to deal with child's separation anxiety, How can I help prevent separation anxiety disorder, read on...
X
Desktop Bottom Promotion