ಪುರುಷರೇ ಎಚ್ಚರ! ಹೀಗೆಲ್ಲಾ ಸಮಸ್ಯೆಗಳಾದರೆ, ಕೂಡಲೇ ವೈದ್ಯರಿಗೆ ತೋರಿಸಿ

By: Arshad
Subscribe to Boldsky

ಪ್ರಕೃತಿ ನೀಡಿದ ವಿಚಿತ್ರ ಎಂದರೆ ಗರ್ಭಾಂಕುರಗೊಳ್ಳಲು ಒಂದೇ ವೀರ್ಯಾಣುವಿನ ಅಗತ್ಯವಿದ್ದರೂ ಲಕ್ಷಾಂತರ ಸಂಖ್ಯೆಯಲ್ಲಿದ್ದರೆ ಮಾತ್ರವೇ ಸಫಲತೆ ದೊರಕುತ್ತದೆ. ಒಂದು ಮಿಲಿಲೀಟರ್ ನಲ್ಲಿ ಸುಮಾರು ನಾಲ್ಕು ಕೋಟಿಗೂ ಕಡಿಮೆ ಇದ್ದರೆ ತಂದೆಯಾಗುವ ಸೌಭಾಗ್ಯ ದೊರಕುವುದು ಕಷ್ಟಕರ. ಹತ್ತು ಕೋಟಿಗೆ ಕಡಿಮೆ ಇದ್ದರೆ ಸಾಧ್ಯವೇ ಇಲ್ಲ! ಉತ್ತಮ ಫಲ ಪಡೆಯಬೇಕಾದರೆ ಇದು ನಲವತ್ತು ಕೋಟಿಯಷ್ಟಿರಬೇಕು! ಪುರುಷರ ವೀರ್ಯಾಣುಗಳ ಸಂಖ್ಯೆ ಸದಾ ಮೇಲೆ ಕೆಳಗಾಗುತ್ತಲೇ ಇರುತ್ತದೆ. ಅದರೆ ಅಗತ್ಯಕ್ಕೂ ಕಡಿಮೆಯಾಗಿದ್ದರೆ ಇದಕ್ಕೆ ಆರಾಮವಾದ ಜೀವನಶೈಲಿ,

ಆಹಾರ, ಅನುವಂಶೀಯ ಕಾರಣಗಳು, ಆರೋಗ್ಯ ಸಂಬಂಧಿತ ಮೊದಲಾದ ಕಾರಣಗಳಿರಬಹುದು. ವೀರ್ಯಾಣುಗಳ ಸಂಖ್ಯೆಗೂ ಪೌರುಷಕ್ಕೂ ಯಾವುದೇ ಸಂಬಂಧವಿಲ್ಲ. ವೀರ್ಯಾಣುಗಳ ಸಂಖ್ಯೆ ಹೆಚ್ಚಿದ್ದವರಿಗೆ ಲೈಂಗಿಕ ಸಾಮರ್ಥ ಹೆಚ್ಚು ಅಥವಾ ನಿಮಿರುತನ ಹೆಚ್ಚು ಎನ್ನುವಂತೆಯೂ ಇಲ್ಲ. ವೀರ್ಯಾಣುಗಳ ಸಂಖ್ಯೆ ಹಾಗೂ ಇವುಗಳಲ್ಲಿ ಆರೋಗ್ಯಕರ ವೀರ್ಯಾಣುಗಳು ಎಷ್ಟು ಎಂಬುದೇ ಮುಖ್ಯ. ಹಾಗಾದರೆ ಇದನ್ನು ಲೆಕ್ಕ ಮಾಡುವುದು ಹೇಗೆ? ಇದಕ್ಕಾಗಿ ನಿಮ್ಮ ಕುಟುಂಬ ವೈದ್ಯರ ಹಾಗೂ ಪ್ರಯೋಗಾಲಯದ ನೆರವು ಬೇಕಾಗುತ್ತದೆ. ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಿದೆ ಎಂಬುದನ್ನು ಕೆಲವು ಸೂಚನೆಗಳು ನೀಡುತ್ತವೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ....

ರಸದೂತಗಳ ತೊಂದರೆ

ರಸದೂತಗಳ ತೊಂದರೆ

ರಸದೂತಗಳ ಪ್ರಮಾಣ ಹೆಚ್ಚು ಅಥವಾ ಕಡಿಮೆಯಾದರೂ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ. ಕೆಲವು ಪುರುಷರಲ್ಲಿ ಹಾರ್ಮೋನುಗಳ ಕೊರತೆಯಿಂದ ಮುಖದಲ್ಲಿ ಗಡ್ಡ ಕಡಿಮೆ ಮೂಡಿರುತ್ತದೆ. ಸ್ಥೂಲಕಾಯ ಹೆಚ್ಚಿದ್ದರೆ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಎಂಬ ರಸದೂತ ಕಡಿಮೆಯಾಗುತ್ತದೆ. ವ್ಯತಿರಿಕ್ತವಾಗಿ ದೇಹದ ತೂಕ ಅತಿ ಕಡಿಮೆ ಇದ್ದರೂ ರಸದೂತದ ಸಮತೋಲನ ಏರುಪೇರಾಗುತ್ತದೆ. ದೀರ್ಘಾವಧಿಯಲ್ಲಿ ಹಾರ್ಮೋನುಗಳ ಪ್ರಭಾವ ವೀರ್ಯಾಣುಗಳ ಸಂಖ್ಯೆಯ ಮೇಲೆ ಅಪಾರವಾಗಿ ಆಗುತ್ತದೆ.

ಭಾರವಾದ ಧ್ವನಿ

ಭಾರವಾದ ಧ್ವನಿ

ಒಂದು ಸಮೀಕ್ಷೆಯ ಪ್ರಕಾರ ಭಾರವಾದ ಧ್ವನಿಯನ್ನು ಹೊಂದಿರುವ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವ ಸಾಧ್ಯತೆ ಹೆಚ್ಚಿರುತ್ತದೆ. ಸಾಮಾನ್ಯವಾಗಿ ಮಹಿಳೆಯರಿಗೆ ಈ ಪರಿಯ ಭಾರವಾದ ದನಿ ಇರುವ ಪುರುಷರು ಇಷ್ಟವಾಗುತ್ತಾರೆ. ವಾಸ್ತವದಲ್ಲಿ ಭಾರವಾದ ದನಿ ಉತ್ತಮ ಟೆಸ್ಟೋಸ್ಟೆರಾನ್ ಪ್ರಮಾಣದ ಸಂಕೇತವಾದರೂ ನಿರಾಶಾದಾಯಕವಾಗಿ ಕಡಿಮೆ ವೀರ್ಯಾಣುಗಳ ಸಂಖ್ಯೆಯ ಸೂಚನೆಯೂ ಆಗಿದೆ. ಆದರೆ ದನಿ ಭಾರವಿದ್ದ ಮಾತ್ರಕ್ಕೇ ವೀರ್ಯಾಣುಗಳ ಸಂಖ್ಯೆ ಕಡಿಮೆ ಇರಬೇಕೆಂದಿಲ್ಲ, ವೈದರ ಸಲಹೆ ಎಲ್ಲಾ ಅನುಮಾನಗಳನ್ನು ನಿವಾರಿಸುತ್ತದೆ.

ಸ್ನಾಯುಗಳು

ಸ್ನಾಯುಗಳು

ಸ್ನಾಯುಗಳನ್ನು ಬೆಳೆಸಿಕೊಳ್ಳಲು ಸಾಧ್ಯವಿರದ ಪುರುಷರಿಗೆ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದೂ ಕಷ್ಟವೇ ಆಗಿದೆ. ಇದರ ಅರ್ಥ ಸ್ಥೂಲದೇಹಿಗಳಿಗೆ ಹೆಚ್ಚು ವೀರ್ಯಾಣುಗಳಿರುತ್ತವೆ ಎಂದಲ್ಲ, ಬದಲಿಗೆ ದೇಹದಲ್ಲಿರುವ ಸಂಗ್ರಹಿತ ಕೊಬ್ಬು (adipose tissue) ಹೆಚ್ಚಿದ್ದಷ್ಟೂ ದೇಹದಲ್ಲಿ ಈಸ್ಟ್ರೋಜೆನ್ ಆಗಿ ಪರಿವರ್ತಿತವಾಗಲು ನೆರವಾಗುತ್ತದೆ. ಯಾವಾಗ ಈಸ್ಟ್ರೋಜೆನ್ ರಸದೂತ ಹೆಚ್ಚಾಯಿತೋ, ವೀರ್ಯಾಣುಗಳ ಸಂಖ್ಯೆಯೂ ಕಡಿಮೆಯಾಗುತ್ತದೆ.

ಟೆಸ್ಟೋಸ್ಟೆರಾನ್ ಮಟ್ಟ

ಟೆಸ್ಟೋಸ್ಟೆರಾನ್ ಮಟ್ಟ

ಕೆಲವು ಪುರುಷರಲ್ಲಿ ಟೆಸ್ಟೋಸ್ಟೆರಾನ್ ರಸದೂತದ ಪ್ರಮಾಣ ಕಡಿಮೆಯಾದಂತೆ ವೀರ್ಯಾಣುಗಳ ಸಂಖ್ಯೆಯಲ್ಲಿಯೂ ಕಡಿಮೆಯಾಗುತ್ತದೆ. ಅಲ್ಲದೇ ಸ್ನಾಯುಗಳ ಸಾಂದ್ರತೆ ಕಡಿಮೆ ಇದ್ದಷ್ಟೂ ಟೆಸ್ಟೋಸ್ಟೆರಾನ್ ಪ್ರಮಾಣವೂ ಕಡಿಮೆಯಾಗುತ್ತದೆ. ಅಂದರೆ ಟೆಸ್ಟೋಸ್ಟೆರಾನ್ ಪ್ರಮಾಣ ಸಮತೋಲನದಲ್ಲಿದ್ದರೆ ಕಟ್ಟುಮಸ್ತಾದ ಸ್ನಾಯುಗಳ ಸಹಿತ ಜನನಾಂಗದ ಕ್ಷಮತೆಯೂ ಹೆಚ್ಚುತ್ತದೆ. ಅಲ್ಲದೇ ಟೆಸ್ಟೋಸ್ಟೆರಾನ್ ಪ್ರಮಾಣ ಕಡಿಮೆಯಾದರೆ ಪುರುಷರಲ್ಲಿ ಕಾಮಾಸಕ್ತಿ ಹಾಗೂ ವೀರ್ಯಾಣುಗಳ ಸಂಖ್ಯೆ ಜೊತೆಜೊತೆಯಾಗಿ ಕಡಿಮೆಯಾಗುತ್ತದೆ.

ಅತಿ ಹೆಚ್ಚು ಸುಸ್ತು

ಅತಿ ಹೆಚ್ಚು ಸುಸ್ತು

ಯಾವುದೇ ದೈಹಿಕ ವ್ಯಾಯಾಮವಿಲ್ಲದೇ ಅತೀವ ಸುಸ್ತಾಗುತ್ತಿದ್ದರೆ, ಚಿಕ್ಕ ಪುಟ್ಟ ಕೆಲಸಗಳನ್ನೂ ಮಾಡದೇ ಮುಂದೆ ಹಾಕುವ ಪರಿ ಕಂಡುಬಂದರೆ ದೇಹದಲ್ಲಿ ಟೆಸ್ಟೋಸ್ಟೆರಾನ್ ಪ್ರಮಾಣ ಕಡಿಮೆಯಾಗುತ್ತಿರುವುದನ್ನು ಸೂಚಿಸುತ್ತದೆ. ಪರಿಣಾಮವಾಗಿ ವೀರ್ಯಾಣುಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ.

ವೃಷಣಗಳಲ್ಲಿ ಬಾವು

ವೃಷಣಗಳಲ್ಲಿ ಬಾವು

ಒಂದು ವೇಳೆ ವೃಷಣಗಳು ಕೊಂಚ ಬಾತುಕೊಂಡಿದ್ದರೆ ಹಾಗೂ ನೋವಿನಿಂದ ಕೂಡಿದ್ದರೆ ಇದಕ್ಕೆ ವೃಷಣಗಳಲ್ಲಿರುವ ನರಗಳು ಊದಿಕೊಂಡಿರುವುದು ಕಾಣವಾಗಿರಬಹುದು. ಈ ಸಂದರ್ಭದಲ್ಲಿ ಶರೀರದ ತಾಪಮಾನಕ್ಕಿಂತಲೂ ಕಡಿಮೆ ಇರಬೇಕಾದ ವೃಷಣಗಳ ತಾಪಮಾನ ಆರೋಗ್ಯಕರ ಸಂಖ್ಯೆಯ ವೀರ್ಯಾಣುಗಳನ್ನು ಉತ್ಪಾದಿಸಲು ಅಸಮರ್ಥವಾಗುತ್ತದೆ.

English summary

Signs Your Sperm Count Is Low

sperm count implies the number of sperm cells present in your semen. It has nothing to do with how well you perform in bed and how firm your erections are.But how to know sperm count without test? You might need to consult a doctor to know about the actual count. Also, here are some signs your sperm count is low.
Story first published: Friday, September 8, 2017, 23:31 [IST]
Subscribe Newsletter