For Quick Alerts
ALLOW NOTIFICATIONS  
For Daily Alerts

ಪುರುಷರೇ ಕೇಳಿ ಇಲ್ಲಿ, ನಿಮಗೂ ಈ ಸಂಗತಿಗಳು ತಿಳಿದಿರಲಿ!

By Super Admin
|

ಗಂಡಸರಿಗೆ ಪ್ರೀತಿ, ಪ್ರೇಮ ಮತ್ತು ಪ್ರಣಯದ ಕುರಿತಾಗಿ ಹೇಳಿ ಕೊಡುವ ಅಗತ್ಯವಿರುವುದಿಲ್ಲ. ಅವರಿಗೆ ಅದು ಹುಟ್ಟಿನಿಂದಲೇ ಎಲ್ಲವೂ ತಿಳಿದಿರುತ್ತದೆ. ಆದರೆ ಅವರಿಗೆ ಇದರ ಕೊನೆಯ ಉತ್ಪನ್ನದ ಕುರಿತಾಗಿ ತುಂಬಾ ಕಡಿಮೆ ತಿಳಿದಿರುತ್ತದೆ! ನಿಜ, ಅದೇ ವೀರ್ಯಾಣು. ಗಂಡು ಹೆಣ್ಣಿನ ಸಮಾಗಮವನ್ನು ಅಧಿಕೃತವಾಗಿ ದೃಢೀಕರಿಸುವ ಅಂಶ ಇದೇ. ಎಲ್ಲಾ ಮಿಲನಗಳು ಯಶಸ್ವಿಯಾಗಿ ಹೆಣ್ಣು ಗರ್ಭಧರಿಸುವಂತೆ ಮಾಡುವುದಿಲ್ಲ. ಆದರೆ ವೀರ್ಯಾಣುಗಳು ಮತ್ತೆ ಮತ್ತೆ ಉತ್ಪತ್ತಿಯಾಗಿ ತಮ್ಮ ಪಾಲಿನ ಕರ್ತವ್ಯವನ್ನು ಪೂರೈಸಲು ಪ್ರತಿ ಬಾರಿ ಪ್ರಯತ್ನಿಸುತ್ತವೆ.

What Men Don't Know About Sperm Cells

ಇತ್ತೀಚಿನ ಅಧ್ಯಯನಗಳ ಪ್ರಕಾರ ಗಂಡಸರ ವೀರ್ಯೋತ್ಪತ್ತಿಯ ಸಾಮರ್ಥ್ಯವು ಶೇ.50% ಕಡಿಮೆಯಾಗಿದೆಯಂತೆ. ಅದಕ್ಕಾಗಿ ನಾವು ಗಂಡಸರು ನಮ್ಮ ವೀರ್ಯದ ಆರೋಗ್ಯ ಮತ್ತು ಗುಣಮಟ್ಟದ ಕುರಿತಾಗಿ ತಿಳಿದುಕೊಳ್ಳಬೇಕಾದ ಅಗತ್ಯ ಹಿಂದಿಗಿಂತ ಇಂದು ಹೆಚ್ಚಾಗಿದೆ. ಬನ್ನಿ ವೀರ್ಯಗಳ ಕುರಿತಾದ ಕೆಲವೊಂದು ಅಂಶಗಳನ್ನು ನಾವು ಇಂದು ತಿಳಿದುಕೊಳ್ಳೋಣ. ಈ ಅಭ್ಯಾಸಗಳು ವೀರ್ಯಾಣು ಸಂಖ್ಯೆ ಕಮ್ಮಿ ಮಾಡುವುದು!

ಸಂಗತಿ 1
ಒಂದು ಮಿಲೀ ಮೀಟರ್ ವೀರ್ಯದಲ್ಲಿ ಸುಮಾರು 20 ರಿಂದ 100 ಮಿಲಿಯನ್ ವೀರ್ಯಾಣಗಳು ಇರುತ್ತವೆ. ಒಬ್ಬ ಆರೋಗ್ಯಕರ ವ್ಯಕ್ತಿಯು 1 ರಿಂದ 5 ಮಿಲಿಯನ್ ವೀರ್ಯಾಣುಗಳನ್ನು ಪ್ರತಿ ಸ್ಖಲನದಲ್ಲಿ ಬಿಡುಗಡೆ ಮಾಡುತ್ತಾನೆ.

ಸಂಗತಿ 2
ವೀರ್ಯದ ತಲೆಯು ವಂಶವಾಹಿಯನ್ನು ಸಾಗಾಣೆ ಮಾಡುತ್ತದೆ. ಇದರ ಮಧ್ಯದ ಭಾಗವು ಮೈಟೋಕಾಂಡ್ರಿಯಾವನ್ನು ಹೊಂದಿರುತ್ತದೆ, ಇದು ಪ್ಲೆಜುಲಮ್ ಎಂಬ ಬಾಲಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ಬಾಲವು ಈಜುವ ಕಾರ್ಯವನ್ನು ಮಾಡಿ ಗರ್ಭಕಂಠದತ್ತ ಈಜುತ್ತದೆ.

ಸಂಗತಿ 3
ವೀರ್ಯಾಣುವಿನ ಗಾತ್ರವು ಸುಮಾರು 50 ಮೈಕ್ರೋಮೀಟರ್ ಇರುತ್ತದೆ. ಅಂದರೆ 0.05 ಮಿ.ಮೀ. ಹಾಗಾಗಿ ನಿಮ್ಮ ಬರೀಗಣ್ಣಿಗೆ ಇದು ಕಾಣಿಸುವುದು ಕಷ್ಟ.

ಸಂಗತಿ 4
ಮಾನವನ ಅಂಡಾಣುಗಳು ಬರೀಗಣ್ಣಿಗೆ ಕಾಣಿಸುತ್ತವೆ. ಇವು ವೀರ್ಯಾಣುಗಳಿಗಿಂತ 30 ಪಟ್ಟು ದೊಡ್ಡದಿರುತ್ತವೆ.

ಸಂಗತಿ 5
ವೀರ್ಯಾಣುಗಳು ಅಂಡಾಣುಗಳಿಂದ ಬಿಡುಗಡೆಯಾಗುವ ಕೆಲವೊಂದು ಪದಾರ್ಥಗಳನ್ನು ಗ್ರಹಿಸುವ ಸಾಮರ್ಥ್ಯ ಇರುತ್ತದೆ. ಹಾಗಾಗಿ ಅದು ಅಂಡಾಣು ಎಲ್ಲಿದೆ ಎಂದು ಪತ್ತೆ ಹಚ್ಚುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಸಂತಾನೋತ್ಪತ್ತಿ ಅಂಗಗಳಲ್ಲಿ ಅಂಡಾಣುಗಳು ಅಧಿಕ ಉಷ್ಣಾಂಶವಿರುವ ಭಾಗದಲ್ಲಿ ಇರುತ್ತವೆ. ಹಾಗಾಗಿ ವೀರ್ಯಾಣುಗಳು ಅಂಡಾಣುಗಳನ್ನು ಬೇಗ ಪತ್ತೆ ಹಚ್ಚಿ, ಆ ಕಡೆ ಈಜುತ್ತವೆ. ವೀರ್ಯಾಣುಗಳ ಸಂಖ್ಯೆ ವೃದ್ಧಿಸುವ ವಿಧಾನಗಳು

ಸಂಗತಿ 6
ವೀರ್ಯಾಣುಗಳು ಸುಮಾರು 0.2 ಮೀಟರ್ ದೂರವನ್ನು ಒಂದು ಗಂಟೆಯಲ್ಲಿ ಈಜುತ್ತವೆ. ಯಾವ ವೀರ್ಯವು ತುಂಬಾ ವೇಗವಾಗಿ ಈಜುತ್ತದೆಯೋ, ಅದು ಅಂಡಾಣುವಿನ ಹೃದಯವನ್ನು ಗೆದ್ದು, ಅದನ್ನು ಗರ್ಭವಾಗಿ ಪರಿವರ್ತಿಸುತ್ತದೆ.

ಸಂಗತಿ 7
ವೀರ್ಯಾಣುಗಳು ಮಾನವನ ದೇಹದಿಂದ ಹೊರ ಬಂದ ಕೆಲವೇ ಗಂಟೆಗಳಲ್ಲಿ ಸಾಯಬಹುದು. ಆದರೆ ಅದು ಮಹಿಳೆಯ ಹೊಟ್ಟೆಯಲ್ಲಿ, 3-5 ದಿನಗಳ ಕಾಲ ಬದುಕಿರುತ್ತವೆ.

ಸಂಗತಿ 8
ಆಧುನಿಕ ಕಾಲದಲ್ಲಿ ವೀರ್ಯಾಣುಗಳ ಸಂಖ್ಯೆಯು ಕಡಿಮೆಯಾಗುತ್ತಿದೆಯೇ? ನಿಜ ಆಧುನಿಕ ಜೀವನ ಶೈಲಿಯು ವೀರ್ಯಾಣುಗಳನ್ನು ಕೊಲ್ಲುತ್ತಿದೆ. ಇದಕ್ಕೆ ಒತ್ತಡ, ರಾಸಾಯನಿಕಗಳು ಕಾರಣ ಎಂದು ಕೆಲವು ಅಧ್ಯಯನಗಳು ಹೇಳಿದರೆ. ಇನ್ನೂ ಕೆಲವು ಅಧ್ಯಯನಗಳು ಹಾಗೇನಿಲ್ಲ, ಇದು ಸಾಮಾನ್ಯವಾಗಿದೆ ಎಂದು ಹೇಳುತ್ತಿವೆ.

ಸಂಗತಿ 9
ಸ್ಖಲನದ ನಂತರ ಗಂಡಸಿನ ಜನನಾಂಗದಿಂದ ಹೊರಬರದೆ ಉಳಿದ ವೀರ್ಯಾಣುಗಳು ಗಂಡಸಿನ ದೇಹದಲ್ಲಿಯೇ ಕರಗಿ ಹೋಗುತ್ತವೆ.

English summary

What Men Don't Know About Sperm Cells

Men know a lot about romance but very less about the final product of romance. A sperm cell is the the first messenger from a man to a woman that confirms the event of a love making session. Though not all love making sessions are aimed to reproduce, the human body still does its duty of sending enough sperm cells in order to increase the probability of conception.
Story first published: Tuesday, June 21, 2016, 20:14 [IST]
X
Desktop Bottom Promotion