For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಕೊರೊನಾ ಬರದಂತೆ ಈ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಿ

|

ಕೊರೊನಾದ ಎರಡನೇ ಅಲೆ ನಿಧಾನವಾಗಿ ಇಳಿಯುತ್ತಿರುವುದು ನಿಟ್ಟುಸಿರು ಬಿಡುವಂತಹ ವಿಚಾರವೇ. ಆದರೆ ಮಕ್ಕಳ ವಿಷಯದಲ್ಲಿ ನಿರ್ಲಕ್ಷ್ಯ ಒಳ್ಳೆಯದಲ್ಲ. ಏಕೆಂದರೆ ಕೊರೊನಾ ಮೂರನೇ ಅಲೆಗೆ ಮಕ್ಕಳು ಹೆಚ್ಚು ತುತ್ತಾಗಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಆದ್ದರಿಂದ, ಪೋಷಕರು ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿರಲು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲು ಪ್ರೋತ್ಸಾಹಿಸುತ್ತಿರುವುದು ಬಹಳ ಮುಖ್ಯ.

ಮಕ್ಕಳು ಅಳವಡಿಸಿಕೊಳ್ಳಬೇಕಾದ ಕೊರೊನಾ ಮಾರ್ಗಸೂಚಿಗಳನ್ನು ಇಲ್ಲಿ ನೀಡಲಾಗಿದೆ:

ಪದೇ ಪದೇ ಕೈ ತೊಳೆಯುವುದು:

ಪದೇ ಪದೇ ಕೈ ತೊಳೆಯುವುದು:

ಸಾಬೂನು ಮತ್ತು ನೀರಿನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ಆಗಾಗ ಕೈ ತೊಳೆಯಲು ನಿಮ್ಮ ಮಕ್ಕಳನ್ನು ಪ್ರೋತ್ಸಾಹಿಸಿ. ಸೋಪ್ ಮತ್ತು ನೀರು ಇಲ್ಲದಿದ್ದಾಗ ಹ್ಯಾಂಡ್ ಸ್ಯಾನಿಟೈಜರ್ ಅನ್ನು ಬಳಸಲು ಹೇಳಿ. ಹೊರಗಡೆ ಹೋಗಿ ಬಂದಾಗ ಅಥವಾ ಹೊರಗಿನಿಂದ ಬಂದ ವಸ್ತುಗಳನ್ನು ಮುಟ್ಟಿದ ಮೇಲೆ ಕೈ ತೊಳೆಯುವುದು ಉತ್ತಮ.

ಮಾಸ್ಕ್ ಧರಿಸುವುದು:

ಮಾಸ್ಕ್ ಧರಿಸುವುದು:

ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ, ನಾವು ಮಾಸ್ಕ್ ಧರಿಸುವುದನ್ನು ನಿಲ್ಲಿಸಬಾರದು. ಅದೇ ರೀತಿ ನಿಮ್ಮ ಮಕ್ಕಳಿಗೂ ಅದನ್ನು ಹೇಳಿಕೊಡಬೇಕು. ಮಾಸ್ಕ್ ಒಂದೇ ರೋಗ ಹರಡುವುದನ್ನ ಪ್ರಾಥಮಿಕವಾಗಿ ತಡೆಯುವ ಅಸ್ತ್ರವಾಗಿದೆ. ಆದ್ದರಿಂದ ಮಾಸ್ಕ್ ಬಳಕೆ ಮುಂದುವರಿಸಿ.

ಕೆಮ್ಮು ಅಥವಾ ಸೀನುವಾಗ ಮುಚ್ಚಿಕೊಳ್ಳುವುದು:

ಕೆಮ್ಮು ಅಥವಾ ಸೀನುವಾಗ ಮುಚ್ಚಿಕೊಳ್ಳುವುದು:

ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿಯಿಂದ ಹೊರಬರುವ ಹನಿಗಳನ್ನು ತಡೆಯಲು ಕೈಯಿಂದ ಬಾಯಿಯನ್ನು ಮುಚ್ಚುವುದು ಮುಖ್ಯ. ಇದು ರೋಗಾಣು ಇನ್ನೊಬ್ಬರಿಗೆ ಹರಡುವುದನ್ನು ತಡೆಯುವುದು. ಹಿಡಿಯದಂತೆ ಇತರರನ್ನು ಉಳಿಸಲು ಅಂಗಾಂಶ ಅಥವಾ ಮೊಣ

ನಿಕಟ ಸಂಪರ್ಕವನ್ನು ತಪ್ಪಿಸುವುದು:

ನಿಕಟ ಸಂಪರ್ಕವನ್ನು ತಪ್ಪಿಸುವುದು:

ನಿಮ್ಮ ಮಕ್ಕಳು ಹೊರಗಿನಿಂದ ಬಂದವರ ಜೊತೆಗೆ ಅಥವಾ ಅನಾರೋಗ್ಯದಿಂದ ಬಳಲುತ್ತಿರುವ (ಕೆಮ್ಮು ಅಥವಾ ಸೀನುವ) ಜನರಿಂದ ದೂರವನ್ನು ಕಾಪಾಡಿಕೊಳ್ಳಬೇಕು. ಅವರ ಜೊತೆಗೆ ಮಾತನಾಡುವಾಗ ಅಂತರವನ್ನು ಕಾಪಾಡಿಕೊಳ್ಳುವುದು ಉತ್ತಮ. ಇದರಿಂದ ನಿಮ್ಮ ಮಗುವಿಗೆ ಆಗುವ ಅಪಾಯವನ್ನು ತಪ್ಪಿಸಬಹುದು.

ವೈಯಕ್ತಿಕ ಸಾಮಾಗ್ರಿಗಳನ್ನು ಸ್ವಚ್ಛವಾಗಿಡಿ:

ವೈಯಕ್ತಿಕ ಸಾಮಾಗ್ರಿಗಳನ್ನು ಸ್ವಚ್ಛವಾಗಿಡಿ:

ನಿಮ್ಮ ಮಕ್ಕಳಿಗೆ ಸ್ನೇಹಿತರೊಂದಿಗೆ ಆಟವಾಡಲು ಅನಮತಿ ನೀಡಿದ್ದರೆ, ಬಾಲ್, ಬ್ಯಾಟ್, ನೀರಿನ ಬಾಟಲಿಯಂತಹ ಅವರ ವೈಯಕ್ತಿಕ ಸಾಧನಗಳನ್ನು ಅವರಿಗೆ ಪ್ರತ್ಯೇಕ ತೆಗೆದುಕೊಡಿ. ಗೆಳೆಯರೊಡನೆ ಹಂಚಿಕೊಳ್ಳಲು ಬಿಡಬೇಡಿ. ಅವರು ಹಿಂದಿರುಗಿದಾಗ ಮೊದಲು ಅವರಿಗೆ ಸ್ನಾನ ಮಾಡಲು ತಿಳಿಸಿ, ಆಟದ ಸಾಮಾನುಗಳನ್ನು ಸ್ಯಾನಿಟೈಜ್ ಮಾಡಿ.

ಸಾಮಾಜಿಕವಾಗಿ ಸಂಪರ್ಕದಲ್ಲಿರಲು ಸಹಾಯ ಮಾಡಿ:

ಸಾಮಾಜಿಕವಾಗಿ ಸಂಪರ್ಕದಲ್ಲಿರಲು ಸಹಾಯ ಮಾಡಿ:

ಜನರನ್ನು ಭೇಟಿಯಾಗದಿರುವುದು ಮತ್ತು ಹೊರಗೆ ಹೋಗುವುದು ನಿಮ್ಮ ಮಗುವಿನ ಯೋಗಕ್ಷೇಮಕ್ಕೆ ಹಾನಿಯಾಗಬಹುದು. ನೀವು ವೀಡಿಯೊ ಕಾಲ್ ಗಳು ಮೂಲಕ ಅವರ ಸ್ನೇಹಿತರ ಜೊತೆ ಮಾತನಾಡಿಸಬಹುದು, ಪತ್ರ ಬರೆಯಲು ಅವರನ್ನು ಪ್ರೋತ್ಸಾಹಿಸಬಹುದು ಅಥವಾ ವಿಶೇಷ ಸಂದರ್ಭಗಳಲ್ಲಿ ಉಡುಗೊರೆಗಳನ್ನು ಕಳುಹಿಸಬಹುದು.

English summary

Coronavirus Precautions For Child: COVID Rules Your Child Should Continue Following in Kannada

Here we talking about Coronavirus Precautions For Child: COVID Rules Your Child Should Continue Following in Kannada, read on
X
Desktop Bottom Promotion