For Quick Alerts
ALLOW NOTIFICATIONS  
For Daily Alerts

ಮಕ್ಕಳ ಬುದ್ಧಿ ಶಕ್ತಿ ಹೆಚ್ಚಿಸುವ ಆಹಾರಗಳು

|

ಮಗುವಿನ ದೈಹಿಕ ಬೆಳವಣಿಗೆಯ ಜೊತೆಗೆ ಮಾನಸಿಕ ಹಾಗೂ ಬುದ್ಧಿಶಕ್ತಿಯ ಅಭಿವೃದ್ಧಿಯೂ ಕೂಡ ಸಮಾನ ಪಾತ್ರ ಹೊಂದಿದೆ. ಮಗುವಿನ ಸ್ಮರಣ ಶಕ್ತಿ, ಏಕಾಗ್ರತೆ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸಲು ಪೋಷಕಾಂಶಯುಕ್ತ ಆಹಾರವು ನಿಮಗೆ ಸಹಾಯ ಮಾಡುತ್ತದೆ. ದೇಹದ ಉಳಿದ ಭಾಗಗಳಂತೆ ಮೆದುಳು ಕೂಡ ನಾವು ಸೇವಿಸುವ ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ. ಆದ್ದರಿಂದ, ಮಕ್ಕಳು ಬುದ್ಧಿಶಕ್ತಿಯನ್ನು ವೃದ್ಧಿ ಮಾಡುವ ಪೌಷ್ಟಿಕ ಆಹಾರವನ್ನು ಸೇವಿಸುವುದು ಬಹಳ ಮುಖ್ಯ.

ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚಿಸುವ ಆಹಾರಗಳನ್ನು ಈ ಕೆಳಗೆ ನೀಡಲಾಗಿದೆ:

ಓಟ್ಸ್ / ಓಟ್ ಮೀಲ್:

ಓಟ್ಸ್ / ಓಟ್ ಮೀಲ್:

ಓಟ್ ಮೀಲ್ ಮತ್ತು ಓಟ್ಸ್ ಅತ್ಯುತ್ತಮ ಶಕ್ತಿಯ ಮೂಲಗಳಾಗಿದ್ದು, ಮೆದುಳಿನ "ಇಂಧನ" ವಾಗಿ ಕಾರ್ಯನಿರ್ವಹಿಸುವುದು. ಅವುಗಳಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇದ್ದು, ಮಕ್ಕಳ ಹೊಟ್ಟೆ ತುಂಬಿಸುವುದರ ಜತೆಗೆ ಜಂಕ್ ಫುಡ್ ದೂರವಿಡುವಂತೆ ಮಾಡುವುದು. ಇವುಗಳಲ್ಲಿ ವಿಟಮಿನ್ ಇ, ಬಿ ಕಾಂಪ್ಲೆಕ್ಸ್ ಮತ್ತು ಜಿಂಕ್ ಕೂಡ ಅಧಿಕವಾಗಿದ್ದು, ಮಕ್ಕಳ ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುವುದು. ಇದಕ್ಕಾಗಿ ಸೇಬು, ಬಾಳೆಹಣ್ಣು, ಬೆರಿಹಣ್ಣುಗಳು ಅಥವಾ ಬಾದಾಮಿಗಳನ್ನು ಬೆರೆಸಿದರೆ ಉತ್ತಮ.

ಬೀನ್ಸ್:

ಬೀನ್ಸ್:

ಬೀನ್ಸ್ ನಲ್ಲಿ ಮಕ್ಕಳ ಜ್ಞಾಪಕ ಶಕ್ತಿಯ ವೃದ್ಧಿ ಗೆ ಸಹಾಯವಾಗುವ ಪೋಷಕಾಂಶಗಳಿದ್ದು, ಇದು ನಿಮ್ಮ ಮಗುವನ್ನು ಆಕ್ಟಿವ್ ಆಗಿ ಇರುವಂತೆ ಮಾಡುವುದು. ಇದರಲ್ಲೂ ಫೈಬರ್ ಅಧಿಕವಾಗಿದ್ದು, ಜೊತೆಗೆ ವಿಟಮಿನ್ ಬಿ ಸಮೃದ್ಧವಾಗಿದೆ. ನೀವು ಇಡೀ ದಿನ ಕಾರ್ಯನಿರತವಾಗಿರಲು ಹಾಗೂ ನಿಮ್ಮ ಗಮನದ ಕೇಂದ್ರೀಕರಣಕ್ಕಾಗಿ ಬೀನ್ಸ್ ಉತ್ತಮ ಆಹಾರ ಆಯ್ಕೆಯಾಗಿದೆ.

ಎಣ್ಣೆಯುಕ್ತ ಮೀನು:

ಎಣ್ಣೆಯುಕ್ತ ಮೀನು:

ಎಣ್ಣೆಯುಕ್ತ ಮೀನುಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಅಧಿಕವಾಗಿದ್ದು, ಮೆದುಳಿನ ಬೆಳವಣಿಗೆ ಮತ್ತು ಆರೋಗ್ಯಕ್ಕೆ ಪ್ರಯೋಜನಕಾರಿ. ಒಮೆಗಾ -3 ಕೊಬ್ಬಿನಾಮ್ಲಗಳು ಜೀವಕೋಶದ ಬಿಲ್ಡಿಂಗ್ ಬ್ಲಾಕ್‌ಗಳ ಅಗತ್ಯ ಅಂಶಗಳಾಗಿವೆ. ಸಾಲ್ಮನ್, ಮ್ಯಾಕೆರೆಲ್, ಸಾರ್ಡೀನ್ ಮತ್ತು ಹೆರಿಂಗ್ ಮುಂತಾದ ಮೀನುಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಅಧಿಕವಾಗಿದ್ದು, ವಾರಕ್ಕೊಮ್ಮೆ ಇದನ್ನು ಸೇವಿಸುವುದು ಉತ್ತಮ.

ಹಾಲು, ಮೊಸರು ಮತ್ತು ಬೆಣ್ಣೆ:

ಹಾಲು, ಮೊಸರು ಮತ್ತು ಬೆಣ್ಣೆ:

ಹಾಲು, ಮೊಸರು ಮತ್ತು ಬೆಣ್ಣೆಯಲ್ಲಿ ಪ್ರೋಟೀನ್ ಮತ್ತು ವಿಟಮಿನ್ ಬಿ ಅಧಿಕವಾಗಿದ್ದು, ಮೆದುಳಿನಲ್ಲಿ ಪ್ರಮುಖ ಪಾತ್ರವಹಿಸುವ ಮೆದುಳಿನ ಅಂಗಾಂಶ, ನರಪ್ರೇಕ್ಷಕಗಳು ಮತ್ತು ಕಿಣ್ವಗಳ ಬೆಳವಣಿಗೆಗೆ ಅಗತ್ಯವಾಗಿವೆ. ಈ ಆಹಾರಗಳಲ್ಲಿ ಕ್ಯಾಲ್ಸಿಯಂ ಕೂಡ ಸಮೃದ್ಧವಾಗಿದ್ದು, ಗಟ್ಟಿಯಾದ ಮತ್ತು ಆರೋಗ್ಯಕರ ಹಲ್ಲು ಮತ್ತು ಮೂಳೆಗಳ ಬೆಳವಣಿಗೆಗೆ ಅಗತ್ಯವಾಗಿರುತ್ತದೆ. ಮಕ್ಕಳಿಗೆ ಕ್ಯಾಲ್ಸಿಯಂ ಅವಶ್ಯಕತೆಗಳು ಅವರ ವಯಸ್ಸಿಗೆ ಅನುಗುಣವಾಗಿ ಬದಲಾಗುತ್ತವೆ, ಆದರೆ ಪ್ರತಿದಿನ ಎರಡು ಮೂರು ಕ್ಯಾಲ್ಸಿಯಂ ಭರಿತ ಮೂಲಗಳನ್ನು ಸೇವಿಸಬೇಕು. ನಿಮ್ಮ ಮಗುವಿಗೆ ಹಾಲು ಇಷ್ಟವಾಗದಿದ್ದರೆ ಚಿಂತಿಸಬೇಡಿ; ಅವರ ಆಹಾರದಲ್ಲಿ ಹಾಲನ್ನು ಸೇರಿಸಲು ಇತರ ಮಾರ್ಗಗಳಿವೆ: ಗಂಜಿ, ಪುಡಿಂಗ್ ಅಥವಾ ಪ್ಯಾನ್‌ಕೇಕ್ ಗಳನ್ನು ತಯಾರಿಸುವಾಗ, ನೀರಿನ ಬದಲು ಹಾಲನ್ನು ಬಳಸಿ.

ಮೊಟ್ಟೆಗಳು:

ಮೊಟ್ಟೆಗಳು:

ನಿಮ್ಮ ಮಗುವಿನ ಬ್ರೇಕ್ ಫಾಸ್ಟನ್ನು ಕಾರ್ಬ್ಸ್, ಪ್ರೋಟೀನ್ ಮತ್ತು ಅಲ್ಪ ಪ್ರಮಾಣದ ಆರೋಗ್ಯಕರ ಕೊಬ್ಬಿನೊಂದಿಗೆ ತುಂಬಿಸುವುದರಿಂದ ಅವರು ದಿನವಿಡೀ ಶಕ್ತಿಯುತವಾಗಿರಲು ಸಹಾಯ ಮಾಡುತ್ತದೆ. ಮೊಟ್ಟೆಗಳಲ್ಲಿ ಹೆಚ್ಚಿನ ಪ್ರೋಟೀನ್ ಇರುವುದು ಜೊತೆಗೆ, ಹೆಚ್ಚುವರಿ ಬೋನಸ್ ಆಗಿ ಅವು ಕೋಲೀನ್ ಅನ್ನು ಹೊಂದಿರುತ್ತವೆ, ಇದು ಮೆಮೊರಿ ವೃದ್ಧಿಗೆ ಸಹಾಯ ಮಾಡುವುದು.

English summary

Best Brain-Boosting Food For Kids in Kannada

Here we talking about Best Brain Boosting Food For Kids in Kannada, read on
X
Desktop Bottom Promotion