For Quick Alerts
ALLOW NOTIFICATIONS  
For Daily Alerts

ಮಕ್ಕಳ ಕೂದಲು ಉದುರುವಿಕೆ ಸಮಸ್ಯೆಗೆ 5 ಪರಿಹಾರಗಳು

|

ಮಕ್ಕಳಲ್ಲಿ ಕೂದಲು ಉದುರುವಿಕೆ ಎಂಬುದು ಖಂಡಿತ ಪೋಷಕರಿಗೆ ಆಶ್ಚರ್ಯ ಹುಟ್ಟಿಸುವ ಮತ್ತು ಆತಂಕ ಸೃಷ್ಟಿಸುವ ವಿಷಯ. ನಿಜ ಹೇಳಬೇಕು ಎಂದರೆ ಮಕ್ಕಳಲ್ಲಿ ಯಾವಾಗಲೂ ಕೂಡ ಕೂದಲು ಉದುರುವಿಕೆ ನಡೆಯುವುದಿಲ್ಲ. ಆದರೆ ಕೆಲವು ಮಕ್ಕಳಲ್ಲಿ ಕೂದಲಿನ ಬೆಳವಣಿಗೆ ಉತ್ತಮವಾಗಿ ಇರುವುದಿಲ್ಲ ಮತ್ತು ಒಂದು ವಯಸ್ಸಿಗೆ ತಲುಪಿದ ಕೂಡಲೇ ಕೂದಲು ಉದುರುವಿಕೆ ಹೆಚ್ಚಾಗುತ್ತದೆ.

remedies to boost hair in children

ಅಮೇರಿಕಾದ ಹೇರ್ ಲಾಸ್ ಅಸೋಸಿಯೇಷನ್ನಿನ ವರದಿಯ ಪ್ರಕಾರ ಮಕ್ಕಳ ತಜ್ಞರ ಬಳಿ ಭೇಟಿ ನೀಡುವ ಅಮೇರಿಕ್ಕರಲ್ಲಿ ಶೇಕಡಾ 3 ರಷ್ಟು ಮಂದಿ ಮಕ್ಕಳ ಕೂದಲು ಉದುರುವಿಕೆ ಸಮಸ್ಯೆಯಿಂದಾಗಿಯೇ ಬರುತ್ತದೆ ಎಂದು ಹೇಳಲಾಗಿದೆ.

ಆರೋಗ್ಯಕರವಾಗಿರುವ ಕೂದಲಿನ ಬೆಳವಣಿಗೆಯಿಂದಾಗಿ ಕೂದಲು ಉದುರುವಿಕೆ ನಿಲ್ಲುತ್ತದೆ ಎಂದಲ್ಲ. ಅಮೇರಿಕನ್ ಅಕಾಡಮಿ ಆಫ್ ಡರ್ಮಟಾಲಜಿ ಹೇಳುವ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತನ್ನ ಕೂದಲನ್ನು ಕಳೆದುಕೊಳ್ಳುತ್ತಾರೆ ಅದು ಮಕ್ಕಳೂ ಇರಬಹುದು ವಯಸ್ಕರೂ ಇರಬಹುದು. ಪ್ರತಿ ದಿನ 50 ರಿಂದ 100 ಕೂದಲನ್ನು ಕಳೆದುಕೊಳ್ಳುವುದು ಸಹಜವೇ ಅಂತೆ. ವೈದ್ಯಕೀಯ ಅಥವಾ ವೈದ್ಯಕೀಯವಲ್ಲದ ಹಲವು ಕಾರಣಗಳಿಂದಾಗಿ ಕೂದಲು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

* ಕೂದಲು ಆರೈಕೆಯಲ್ಲಿ ಉತ್ತಮವಾದ ದಿನಚರಿ ಇಟ್ಟುಕೊಳ್ಳಿ

* ಕೂದಲು ಆರೈಕೆಯಲ್ಲಿ ಉತ್ತಮವಾದ ದಿನಚರಿ ಇಟ್ಟುಕೊಳ್ಳಿ

ನಿಮ್ಮ ಮಗುವಿನ ಕೂದಲು ದಪ್ಪವೇ ಆಗಿರಲಿ ಅಥವಾ ಹೊಳಪಿನಿಂದಲೇ ಕೂಡಿರಲಿ ಅತ್ಯುತ್ತಮವಾದ ಕೂದಲಿನ ಆರೈಕೆಯ ದಿನಚರಿಯನ್ನು ರೂಢಿಸಲೇಬೇಕು.

ಕೂದಲಿನ ಆರೈಕೆಯ ಬಗ್ಗೆ ಮಕ್ಕಳಲ್ಲಿ ಉತ್ತಮ ಜಾಗೃತಿ ಮೂಡಿಸುವಿಕೆಯು ಅವರ ಮುಂದಿನ ಜೀವನಕ್ಕೆ ಖಂಡಿತ ಅನುಕೂಲವಾಗಿರಲಿದ್ದು ಹೆಚ್ಚು ಅವಧಿಗೆ ಕೂದಲು ಆರೋಗ್ಯಯುತವಾಗಿ ಇರುವುದಕ್ಕೆ ಅದು ನೆರವು ನೀಡುತ್ತದೆ.

ನೈಸರ್ಗಿಕವಾಗಿರುವ, ಕೆಮಿಕಲ್ ರಹಿತವಾಗಿರುವ ಶಾಂಪೂ ಬಳಸಿ ನಿಮ್ಮ ಮಕ್ಕಳ ಕೂದಲನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ತೊಳೆಯಿರಿ. ಒಂದು ವೇಳೆ ಕಂಡೀಷನರ್ ಅಗತ್ಯತೆ ಅವರ ಕೂದಲಿಗೆ ಇದ್ದಲ್ಲಿ ಬಳಸಿ.

ಮಗುವಿನ ಕೂದಲನ್ನು ತೊಳೆಯುವುದಕ್ಕಾಗಿ ಹದವಾಗಿ ಬೆಚ್ಚಗಿರುವ ಇಲ್ಲವೇ ತಣ್ಣನೆಯ ನೀರನ್ನೇ ಬಳಸಿ. ಒಂದು ವೇಳೆ ನಿಮ್ಮ ಮಗುವಿನ ಕೂದಲಿನಲ್ಲಿ ಸಮಸ್ಯೆ ಇದೆ ಎಂದಾದಲ್ಲಿ ಕಡಿಮೆ ಬಾರಿ ವಾಷ್ ಮಾಡಿ ಮತ್ತು ಕಡಿಮೆ ಸೋಪಿನ ಬಳಕೆ ಮಾಡಿ. ಅತ್ಯುತ್ತಮವಾಗಿರುವ ಕೂದಲಿನ ಎಣ್ಣೆ ಬಳಸಿ ಕೂದಲನ್ನು ಮಾಯ್ಚರೈಸ್ ಮಾಡುವುದನ್ನು ಮರೆಯಬೇಡಿ.

ಅಲವೀರಾ ಜೆಲ್

ಅಲವೀರಾ ಜೆಲ್

ನಿಮ್ಮ ಮಕ್ಕಳ ಕೂದಲಿಗೆ ಪ್ರಯೋಗ ಮಾಡಬಹುದಾದ ಮತ್ತೊಂದು ಸುರಕ್ಷಿತ ವಸ್ತುವೆಂದರೆ ಅದು ಅಲವೀರಾ ಜೆಲ್. ಅಲವೀರಾದಲ್ಲಿ ವಿಟಮಿನ್ ಎ,ಸಿ, ಮತ್ತು ಇ ಅಂಶಗಳಿರುತ್ತದೆ. ಇದು ಕೂದಲಿನ ಬೆಳವಣಿಗೆಗೆ ಬಹಳವಾಗಿ ನೆರವು ನೀಡುತ್ತದೆ. ಸ್ಕ್ಯಾಪ್ ನ ಪಿಹೆಚ್ ಲೆವೆಲ್ ನ್ನು ಸಮತೋಲನದಲ್ಲಿಟ್ಟು ಕೂದಲಿನ ಆರೋಗ್ಯ ಹೆಚ್ಚಿಸುವುದಕ್ಕೆ ಇದು ನೆರವು ನೀಡುತ್ತದೆ. ತಾಜಾ ಜೆಲ್ ನ್ನು ಅಲವೀರಾ ಎಲೆಗಳಿಂದ ತೆಗೆದುಕೊಳ್ಳಿ ಮತ್ತು ರುಬ್ಬಿಕೊಳ್ಳಿ. ಮಕ್ಕಳ ಕೂದಲಿಗೆ ಮತ್ತು ಸ್ಕ್ಯಾಲ್ಪ್ ಗೆ ಸಮನಾಗಿ ಅಪ್ಲೈ ಮಾಡಿ. ಕೆಲವು ಘಂಟೆಗಳ ಕಾಲ ಹಾಗೆಯೇ ಬಿಡಿ ಮತ್ತು ನಂತರ ಹದವಾಗಿ ಬೆಚ್ಚಗಿರುವ ನೀರಿನಿಂದ ತೊಳೆಯಿರಿ.ವಾರಕ್ಕೆ ಎರಡರಿಂದ ಮೂರು ಬಾರಿ ಹೀಗೆ ಮಾಡುವುದು ಒಳ್ಳೆಯದು.

ತೆಂಗಿನ ಎಣ್ಣೆಯಲ್ಲಿ ಸುಟ್ಟ ದಾಸವಾಳದ ಮಿಶ್ರಣದಿಂದ ಮಸಾಜ್ ಮಾಡಿ

ತೆಂಗಿನ ಎಣ್ಣೆಯಲ್ಲಿ ಸುಟ್ಟ ದಾಸವಾಳದ ಮಿಶ್ರಣದಿಂದ ಮಸಾಜ್ ಮಾಡಿ

ಮಕ್ಕಳ ಕೂದಲಿನ ಆರೋಗ್ಯದ ವಿಚಾರಕ್ಕೆ ಬಂದಾಗ ನಿಮ್ಮ ತೋಟದಲ್ಲಿ ಬೆಳೆದಿರುವ ದಾಸವಾಳದ ಗಿಡ ವರದಾನವೆಂದು ಹೇಳಬಹುದು.ದಾಸವಾಳದ ಹೂವುಗಳು ಮತ್ತು ಎಲೆಗಳು ವಿಟಮಿನ್ ಎ ಮತ್ತು ಸಿ ಅಂಶವನ್ನು ಹೊಂದಿರುತ್ತದೆ ಮತ್ತು ಅಮೈನೋ ಆಸಿಡ್ ಕೂಡ ಹೊಂದಿದ್ದು ಇದು ಕೂದಲಿಗೆ ಬೇಕಾಗಿರುವ ಪ್ರಮುಖ ಪೋಷಕಾಂಶಗಳಾಗಿದೆ. ಇದು ನಿಮ್ಮ ಮಕ್ಕಳಲ್ಲಿ ಕೂದಲುದುರುವಿಕೆಯನ್ನು ತಡೆಯುವುದಕ್ಕೆ ನೆರವಾಗುತ್ತದೆ ಮತ್ತು ಕೂದಲಿನ ಬೆಳವಣಿಗೆ ಹೆಚ್ಚಿಸುವುದಕ್ಕೆ ಸಹಕಾರಿಯಾಗಿರುತ್ತದೆ.7 ಅಥವಾ 8 ದಾಸವಾಳದ ಎಲೆಗಳು ಮತ್ತು ಕೆಲವು ಹೂವುಗಳನ್ನು ತಗೆದುಕೊಳ್ಳಿ ಮತ್ತು ಅದಕ್ಕೆ ಎರಡು ಕಪ್ ನಷ್ಟು ಎಕ್ಸ್ಟ್ರಾ ವರ್ಜಿನ್ ತೆಂಗಿನಎಣ್ಣೆಗೆ ಸೇರಿಸಿ. ಹೂವು ಮತ್ತು ಎಲೆಗಳು ಎಣ್ಣೆಯಲ್ಲಿ ಕರಿದುಹೋಗುವವರೆಗೆ ಚೆನ್ನಾಗಿ ಕುದಿಸಿ. ಎಣ್ಣೆಯನ್ನು ಸೋಸಿ ನಂತರ ಎಣ್ಣೆಯನ್ನು ತಣ್ಣಗಾಗಲು ಬಿಡಿ. ಮಲಗುವ ಮುನ್ನ ನಿಮ್ಮ ಮಗುವಿನ ಕೂದದಲಿಗೆ ಈ ಎಣ್ಣೆಯಿಂದ ಮಸಾಜ್ ಮಾಡಿ. ಒಂದು ರಾತ್ರಿ ಹಾಗೆಯೇ ಬಿಟ್ಟು ಮಾರನೇ ದಿನ ಬೆಳಿಗ್ಗೆ ತೊಳೆಯಿರಿ. ವಾರದಲ್ಲಿ ಕೆಲವು ಬಾರಿ ಈ ವಿಧಾನವನ್ನು ಪುನರಾವರ್ತಿಸುವ ಮೂಲಕ ಉತ್ತಮ ಫಲಿತಾಂಶ ಪಡೆಯಬಹುದು.

ಬಿಸಿಯಾದ ಎಣ್ಣೆ ಬಳಸಿ ಕೂದಲಿಗೆ ಮಸಾಜ್ ಮಾಡಿ

ಬಿಸಿಯಾದ ಎಣ್ಣೆ ಬಳಸಿ ಕೂದಲಿಗೆ ಮಸಾಜ್ ಮಾಡಿ

ಮಕ್ಕಳಲ್ಲಿ ಕೂದಲು ಉದುರುವಿಕೆ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಇರುವ ಅತ್ಯುತ್ತಮವಾದ ಮಾರ್ಗಗಳಲ್ಲಿ ಹಾಟ್ ಆಯಿಲ್ ಮಸಾಜ್ ಬಹಳ ಮುಖ್ಯವಾಗಿರುವುದಾಗಿದೆ. ತಲೆಗೆ ಮಸಾಜ್ ಮಾಡುವುದರಿಂದಾಗಿ ಸ್ಕಾಲ್ಪ್ ನಲ್ಲಿ ರಕ್ತದ ಸಂಚಲನ ಅಧಿಕವಾಗುತ್ತದೆ ಮತ್ತು ಹೊಸ ಕೂದಲಿನ ಅಬಿವೃದ್ಧಿಗೆ ಇದು ನೆರವು ನೀಡುತ್ತದೆ.ನಿಮ್ಮ ಆಯ್ಕೆಯ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ. ಹಾಗಂತ ಹದವಾಗಿ ಬೆಚ್ಚಗಿರುವಂತಿರಲಿ ತೀರಾ ಬಿಸಿಬಿಸಿ ಎಣ್ಣೆ ಬೇಡ. ಮಕ್ಕಳಿಗೆ ತಲೆಗೆ ಅಪ್ಲೈ ಮಾಡುವ ಮುನ್ನ ಎಣ್ಣೆಯ ಬಿಸಿಯನ್ನು ಒಮ್ಮೆ ಪರೀಕ್ಷೆ ಮಾಡಿಕೊಳ್ಳಿ. ಅತಿಯಾದ ಬಿಸಿಬಿಸಿ ಎಣ್ಣೆ ಮಕ್ಕಳಿಗೆ ಸುಟ್ಟಂತ ಅನುಭವ ನೀಡಬಹುದು. ಸ್ಕ್ಯಾಪ್ ಗೆ ಅಪ್ಲೈ ಮಾಡಿ ನಿಧಾನವಾಗಿ ನಿಮ್ಮ ಮಗುವಿನ ತಲೆಯನ್ನು ಮಸಾಜ್ ಮಾಡಿ. ಶವರ್ ಕ್ಯಾಪ್ ಹಾಕಿ 30 ನಿಮಿಷ ಅಥವಾ ಒಂದು ರಾತ್ರಿ ಹಾಗೆಯೇ ಬಿಡಿ. ತಿಳಿಯಾದ ಶಾಂಪೂ ಬಳಸಿ ಕೂದಲಿನ ಎಣ್ಣಯನ್ನು ತೊಳೆಯಿರಿ. ವಾರಕ್ಕೆ ಎರಡರಿಂದ ಮೂರು ಬಾರಿ ಹೀಗೆ ಮಾಡಿ.

ಭಾರತೀಯ ಗೂಸ್ಬೆರ್ರಿ ಅಥವಾ ನೆಲ್ಲಿಕಾಯಿ ಹೇರ್ ಮಾಸ್ಕ್

ಭಾರತೀಯ ಗೂಸ್ಬೆರ್ರಿ ಅಥವಾ ನೆಲ್ಲಿಕಾಯಿ ಹೇರ್ ಮಾಸ್ಕ್

ಮಕ್ಕಳಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವ ಸಲುವಾಗಿ ಭಾರತೀಯ ಗೂಸ್ಬೆರ್ರಿ ಅಥವಾ ನೆಲ್ಲಿಕಾಯಿಯನ್ನು ಬಳಸಬಹುದು.ಇದು ವಿಟನ್ ಸಿಯಿಂದ ಶ್ರೀಮಂತವಾಗಿರುತ್ತದೆ ಮತ್ತು ಕೂದಲುದುರುವಿಕೆಯನ್ನು ತಡೆಯುತ್ತದೆ.ಹೆಚ್ಚುವರಿಯಾಗಿ ಇದರಲ್ಲಿರುವ ಕ್ಯಾರೋಟಿನ್ ಮತ್ತು ಕಬ್ಬಿಣದ ಅಂಶವು ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಅಧಿಕಗೊಳಿಸುತ್ತದೆ.ಸಮಪ್ರಮಾಣದಲ್ಲಿ ಲಿಂಬೆಯ ರಸ ಮತ್ತು ನೆಲ್ಲಿಕಾಯಿಯ ಪಲ್ಪ್ ನ್ನು ಸೇರಿಸಿಕೊಳ್ಳಿ. ಈ ಪೇಸ್ಟ್ ನ್ನು ಕೂದಲಿಗೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ.ಶವರ್ ಕ್ಯಾಪ್ ನ್ನು ಹಾಕಿ ಒಂದು ರಾತ್ರಿ ಹಾಗೆಯೇ ಬಿಡಿ. ಮಾರನೇ ದಿನ ಬೆಳಿಗ್ಗೆ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಕೂದಲುದುರುವಿಕೆಯನ್ನು ತಡೆಯುವುದಕ್ಕಾಗಿ ವಾರಕ್ಕೆ ಒಮ್ಮೆ ಈ ವಿಧಾನ ಅನುಸರಿಸಿ.

English summary

Remedies To Boost Hair Growth In Children

Here are remedies to boost hair in children, read on.
X
Desktop Bottom Promotion