Just In
Don't Miss
- News
ರಾಮಸೇತು ಮೂಲ ಪತ್ತೆಹಚ್ಚುವ ಸಂಶೋಧನೆಗೆ ಕೇಂದ್ರ ಸರ್ಕಾರ ಒಪ್ಪಿಗೆ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Automobiles
ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ ಮ್ಯಾಗ್ನೈಟ್ ಕಾರಿನೊಂದಿಗೆ ನಿಸ್ಸಾನ್ ಹೊಸ ಅಭಿಯಾನ ಘೋಷಣೆ
- Movies
ದಿಗ್ಗಜ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂಗೆ ಪದ್ಮವಿಭೂಷಣ ಪ್ರಶಸ್ತಿ
- Sports
ಐಎಸ್ಎಲ್: ಬಾಗನ್ ಸೋಲಿಸುವ ಆತ್ಮವಿಶ್ವಾಸದಲ್ಲಿ ನಾರ್ಥ್ ಈಸ್ಟ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅವಧಿ ಪೂರ್ವ ಮಗು: ಮೊದಲ ನಾಲ್ಕು ಗಂಟೆ ಗೋಲ್ಡನ್ ಅವರ್, ಏಕೆ?
ದಂಪತಿಗೆ ತಮಗೆ ಮಗುವಾಗುತ್ತಿದೆ ಎಂದು ತಿಳಿದ ಕ್ಷಣದಿಂದ ಖುಷಿಯ ಜೊತೆಗೆ ಒಂದು ರೀತಿಯ ಅವ್ಯಕ್ತ ಭಯ ಇದ್ದೇ ಇರುತ್ತದೆ. ವೈದ್ಯರು ಕೂಡ 3 ತಿಂಗಳವರೆಗೆ ತುಂಬಾ ಜೋಪಾನವಾಗಿರಬೇಕು ಎಂದು ಸಲಹೆ ನೀಡಿರುತ್ತಾರೆ, ಏಕೆಂದರೆ ಮೊದಲ ತ್ರೈಮಾಸಿಕದಲ್ಲಿ ಗರ್ಭಪಾತವಾಗುವ ಸಾಧ್ಯತೆಹೆಚ್ಚು, ಆ ಕಾರಣದಿಂದಾಗಿ ಈ ಸಮಯದಲ್ಲಿ ತಿನ್ನುವ ಆಹಾರದಿಂದ ಹಿಡಿದು ಕೆಲಸ ಮಾಡುವುದು, ಓಡಾಡುವುದು ಇವುಗಳಲ್ಲಿ ಗಮನವೊಂದು ಇರಬೇಕು. ಹೆಚ್ಚು ಭಾರದ ವಸ್ತುಗಳನ್ನು ಎತ್ತಬಾರದು. ಜೋರು ಓಡಾಡಬಾರದು.
ಇದಾದ ಬಳಿಕ ಎರಡನೇ ತ್ರೈಮಾಸಿಕದಲ್ಲಿ ಗರ್ಭಪಾತದ ಅಪಾಯ ತುಂಬಬಾಮನೇ ಕಡಿಮೆ, ಇನ್ನು ಮೂರನೇ ತ್ರೈಮಾಸಿಕದಲ್ಲಿ ಅವಧಿಪೂರ್ವ ಮಗು ಕೆಲವರಿಗೆ ಜನಿಸುವುದು. ಮಗು ಒಂಭತ್ತು ತಿಂಗಳು ತುಂಬಿ ಹುಟ್ಟಿದರೆ ಮಾಸ ತುಂಬಿ ಹುಟ್ಟಿದ ಮಗು ಎಂದು ಹೇಳಲಾಗುವುದು. ಈ ಮಗು ಆರೋಗ್ಯವಾಗಿರುತ್ತೆ, ಅದೇ 6, 7,. 8 ತಿಂಗಳಿನಲ್ಲಿ ಮಗು ಹುಟ್ಟಿದವರೆ ಅದು ಅವಧಿ ಪೂರ್ವ ಮಗುವಾಗಿರುತ್ತೆ. ಇಂಥ ಮಗುವನ್ನು ಉಳಿಸಿಕೊಳ್ಳಬೇಕಾದರೆ ಅದಕ್ಕೆ ತಕ್ಕ ಸೌಲಭ್ಯವಿರುವ ಆಸ್ಪತ್ರೆ ಆಗಿರಬೇಕು.

ಅವಧಿ ಪೂರ್ವ ಮಗುವಿನ ಜನನ ಪ್ರಮಾಣದಲ್ಲಿ ಹೆಚ್ಚಳ
ಇತ್ತೀಚಿನ ದಿನಗಳಲ್ಲಿ ಅವಧಿಪೂರ್ವ ಮಗುವಿನ ಜನನ ಪ್ರಮಾಣ ಅಧಿಕವಾಗಿದೆ, ಅದಕ್ಕೆ ಈಗೀನ ಜೀವನ ಶೈಲಿ, ಪರಿಸರ ಮಾಲಿನ್ಯ, ಆರೋಗ್ಯ ಸಮಸ್ಯೆ ಇವೆಲ್ಲಾ ಕಾರಣವಾಗಿದೆ.

ಅವಧಿಪೂರ್ವ ಹುಟ್ಟಿದ ಮಗುವಿಗೆ ಬೇಕು ಹೆಚ್ಚಿನ ಆರೈಕೆ
37 ವಾರಗಳಿಗಿಂತ ಮುನ್ನ ಮಗುವಿನ ಜನನವಾದರೆ ಅಂಥ ಮಗು ತುಂಬಾ ದುರ್ಬಲವಾಗಿರುತ್ತೆ, ಅಂಥ ಮಗುವನ್ನು ನಿಯೋನೆಟಲ್ ಇಂಟೆನ್ಸಿವ್ ಕೇರ್ ಯುನಿಟ್ (NICU)ನಲ್ಲಿ ಇಟ್ಟು ಆರೈಕೆ ಬೇಕು. ಕೆಲ ಮಕ್ಕಳು ವಾರದವರೆಗೆ ಇಟ್ಟರೆ, ಇನ್ನು ಕೆಲ ಮಕ್ಕಳನ್ನು ತಿಂಗಳುಗಟ್ಟಲೆ ಇಡಬೇಕಾಗುವುದು.

ಮಗು ಜನನವಾದ ಮೊದಲ ನಾಲ್ಕು ಗಂಟೆ 'ಗೋಲ್ಡನ್ ಅವರ್'
ಅವಧಿಪೂರ್ವ ಮಗು ಜನನವಾದರೆ ಮೊದಲ ಒಂದು ಗಂಟೆ ಮಗುವಿನ ಆರೋಗ್ಯ ಸ್ಥಿತಿ ಕುರಿತು ವೈದ್ಯರಿಗೆ ಏನೂ ಹೇಳಲು ಸಾಧ್ಯವಾಗುವುದಿಲ್ಲ, ಈ ಸಮಯದಲ್ಲಿ ತುರ್ತು ನಿಯೋನೆಟಲ್ ಕೇರ್ ಅಗ್ಯತವಿರುತ್ತದೆ. ಮಗುವಿನ ಉಸಿರಾಟದ ಪ್ರಕ್ರಿಯೆಯನ್ನು ಗಮನಿಸುತ್ತಲೇ ಇರಬೇಕಾಗುತ್ತದೆ, ಮಗುವಿಗೆ ಉಸಿರಾಟಕ್ಕೆ ಸಹಾಯವಾಗುವ ವ್ಯವಸ್ಥೆ ಆಸ್ಪತ್ರೆಯಲ್ಲಿ ನೀಡಲಾಗುವುದು.

ಡೆಲಿವರಿ ರೂಂನಿಂದ NICUಗೆ ಸಾಗಿಸುವ ಸಮಯ ತುಂಬಾ ಮುಖ್ಯವಾಗಿರುತ್ತೆ
ಅವಧಿ ಪೂರ್ವ ಮಗುವನ್ನು ಕೊಂಡೊಯ್ಯುವ ರೀತಿಯಲ್ಲಿ ಇದನ್ನು ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ. ಈ ಸಮಯ ವೈದ್ಯರಿಗೆ ತುಂಬಾ ಮುಖ್ಯವಾಗಿರುತ್ತೆ. ಹೆಚ್ಚು ಮುಂಜಾಗ್ರತೆವಹಿಸಿ ಮಗುವನ್ನು NICUಗೆ ಸಾಗಿಸಲಾಗುವುದು. ಈ ಸಮಯದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚು. ಇವೆಲ್ಲಾ ಗೋಲ್ಡನ್ ಅವರ್‌ನಲ್ಲಿ ಅಂದರೆ ಜನಿಸಿದ ಒಂದು ಗಂಟೆಯೊಳಗೆ ಮಾಡಲಾಗುತ್ತೆ.

ಅವಧಿಪೂರ್ವ ಮಗು ಜನಿಸಿದಾಗ ಕಂಡು ಬರುವ ಸಮಸ್ಯೆಗಳು
ಉಸಿರಾಟದಲ್ಲಿ ತೊಂದರೆ
- ಮಗುವನ್ನು ಬೆಚ್ಚಗಿಡಲು ಸಮಸ್ಯೆ ಎದುರಾಗುವುದು
- ಕಣ್ಣಿನ ಸಮಸ್ಯೆ
- ರಕ್ತ ಸಂಚಾರದಲ್ಲಿ ತೊಂದರೆ
- ಸೋಂಕು
ಈ ರೀತಿಯ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ಅವಧಿಪೂರ್ವ ಜನನ ತಡೆಗಟ್ಟಲು ಏನು ಮಾಡಬೇಕು?
ಗರ್ಭಾವಸ್ಥೆಯಲ್ಲಿ ಮಹಿಳೆ ತನ್ನ ಹಾಗೂ ಮಗುವಿನ ಆರೋಗ್ಯದ ಕಡೆ ತುಂಬಾ ಗಮನ ನೀಡಬೇಕು. ಸಮತೋಲಿತ ಆಹಾರ ಸೇವನೆ, ಗರ್ಭಾವಸ್ಥೆಯಲ್ಲಿ ಆರೈಕೆ, ಧೂಮಪಾನ, ಮದ್ಯಪಾನ ಮಾಡದೇ ಇರುವುದು ಇವೆಲ್ಲಾ ಅವಧಿಪೂರ್ವ ಮಗು ಜನನ ತಡೆಗ್ಟಲು ಸಹಕಾರಿ. ಕೆಲವರಿಗೆ ಆರೋಗ್ಯ ಸಮಸ್ಯೆಯಿಂದ (ಬಿಪಿ-ಶುಗರ್) ಅವಧಿಪೂರ್ವ ಮಗು ಜನಿಸುವುದು. ಆರೋಗ್ಯಕರ ಆಹಾರ ಮತ್ತು ಗರ್ಭಿಣಿಯರು ಮಾಡಬಹುದಾದ ವ್ಯಾಯಾಮ ಇವೆಲ್ಲಾ ಮಗುವಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.