For Quick Alerts
ALLOW NOTIFICATIONS  
For Daily Alerts

ಅಂಬೆಗಾಲಿಡುವ ಮಗುವಿಗೆ ಎಷ್ಟು ಹಾಲು ಹಾಗೂ ನೀರು ಕೊಡಬೇಕು?

|

ಕುಡಿಯಬೇಕಾದ ಪ್ರಮಾಣವು ಸಂಖ್ಯಾ ರೂಪದಲ್ಲಿ ಮಗುವಿನಿಂದ ಮಗುವಿಗೆ ವ್ಯತ್ಯಾಸವಾಗುತ್ತದೆಯಾದರೂ ಕೂಡ, ನಾವಿಲ್ಲಿ ನಿಮಗಾಗಿ ಪ್ರಸ್ತುತಪಡಿಸಿರುವ ಮಾಹಿತಿಯನ್ನು ನೀವು ಒಂದು ಮಾರ್ಗದರ್ಶಿಯ ರೂಪದಲ್ಲಿ ಬಳಸಿಕೊಳ್ಳಬಹುದು:

1 ರಿಂದ 3 ವರ್ಷಗಳ ವಯೋಮಾನದ ಅಂಬೆಗಾಲಿಡುವ ಮಕ್ಕಳು: ಪ್ರತಿದಿನವೂ 4 ಲೋಟಗಳಷ್ಟು (32 ಔನ್ಸ್ ಗಳಷ್ಟು) ದ್ರವಗಳು.
4 ರಿಂದ 8 ವರ್ಷಗಳ ವಯೋಮಾನದ ಮಕ್ಕಳು: ಪ್ರತಿದಿನವೂ 5 ಲೋಟಗಳಷ್ಟು (40 ಔನ್ಸ್ ಗಳಷ್ಟು) ದ್ರವಗಳು.

ಅಂಬೆಗಾಲಿಡುವ ಮಕ್ಕಳಿಗೆ ಕೇವಲ ಎರಡೇ ಎರಡು ಬಗೆಯ ದ್ರವಗಳನ್ನು ಕುಡಿಸಿದರೆ ಸಾಕು. ಅವು ಯಾವುವು ಅಂತೀರಾ ? ಬೇರಿನ್ಯಾವುದೂ ಅಲ್ಲ ಹಾಲು ಮತ್ತು ಸೀದಾಸಾದಾ ನೀರು. ಮಗುವಿನ ದಿನದ ಆರಂಭದ ಹೊತ್ತಿಗೆ ಅವನು/ಅವಳು ಅದೆಷ್ಟು ಕುಡಿದನು/ಳು ಅನ್ನೋದನ್ನ ಅಳತೆ ಮಾಡಿಟ್ಟುಕೊಂಡು ಅನಂತರ ದಿನವಿಡೀ ಅರ್ಥಾತ್ ದಿನದ ಬೇರೆ ಬೇರೆ ಅವಧಿಗಳಲ್ಲಿ, ಅವರ ಪಾಲಿನ ಉಳಿದ ದ್ರವಗಳನ್ನು ಕುಡಿಸುತ್ತಾ ಹೋಗಬಹುದು.

ಸಕ್ಕರೆಯ ಸಿಹಿಯನ್ನೊಳಗೊಂಡಿರುವ ಸ್ಪೋರ್ಟ್ಸ್ ಡ್ರಿಂಕ್ಸ್, ಸೋಡಾಗಳು, ಹಾಗೂ ಲೆಮೊನೆಡ್ ಗಳಂತಹ ಪಾನೀಯಗಳ ಪರಿಚಯವನ್ನ ಅಂಬೆಗಾಲಿಡುವ ಮಕ್ಕಳಿಗೆ ಮಾಡಿಸುವುದೇ ಬೇಡ. ಕೆಲವು ಜೀವಸತ್ವಗಳನ್ನೂ ಒಳಗೊಂಡಿರಬಹುದಾದ ಶೇ. 100% ರಷ್ಟು ಜ್ಯೂಸ್ ಹಾಗೂ ಸುವಾಸಿತ ಹಾಲೂ ಕೂಡ ಸಕ್ಕರೆಯನ್ನ ಅಧಿಕ ಪ್ರಮಾಣದಲ್ಲಿ ಒಳಗೊಂಡಿರುವ ಸಾಧ್ಯತೆ ಇದೆ.

ಅಂಬೆಗಾಲಿಡುವ ನನ್ನ ಎಳೆಮಗು ಎಷ್ಟು ಹಾಲನ್ನು ಕುಡಿಯಬೇಕು ?

ಅಂಬೆಗಾಲಿಡುವ ನನ್ನ ಎಳೆಮಗು ಎಷ್ಟು ಹಾಲನ್ನು ಕುಡಿಯಬೇಕು ?

ತಮ್ಮ ಮೊದಲನೆಯ ಮತ್ತು ಎರಡನೆಯ ಹುಟ್ಟುಹಬ್ಬಗಳ ನಡುವೆ, ಅಂಬೆಗಾಲಿಡುವ ಎಳೆಯ ಮಕ್ಕಳು 2 ರಿಂದ 3 ಲೋಟಗಳಷ್ಟು ಅಥವಾ 16 ರಿಂದ 24 ಜೌನ್ಸ್ ಗಳಷ್ಟು ಪ್ರತಿದಿನವೂ ಕುಡಿಯುವ ಗುರಿಯನ್ನು ಇಟ್ಟುಕೊಂಡಿರಬೇಕು. ಬೆಳೆಯುತ್ತಿರುವ ತಮ್ಮ ಶರೀರಗಳಿಗೆ ಹಾಗೂ ಮೆದುಳಿಗೆ ಬೆಂಬಲವನ್ನು ನೀಡಲು ಈ ವಯಸ್ಸಿನ ಮಕ್ಕಳಿಗೆ ಅವರ ಆಹಾರದಲ್ಲಿ ಹೆಚ್ಚುವರಿ ಕೊಬ್ಬಿನಾಂಶದ ಅಗತ್ಯವಿರುತ್ತದೆ.

ಆದಾಗ್ಯೂ, ಬೊಜ್ಜುಮೈ ಅಥವಾ ಹೃದ್ರೋಗದ ಕೌಟುಂಬಿಕ ಇತಿಹಾಸ ಇರುವಂತಹವರು ನೀವಾಗಿದ್ದಲ್ಲಿ, ನಿಮ್ಮ ಮಗುವಿಗೆ ಕಡಿಮೆ ಕೊಬ್ಬಿನಾಂಶವುಳ್ಳ ಅಥವಾ ಶೇ. 2% ರಷ್ಟು ಹಾಲನ್ನು ಕೊಡಬೇಕೋ ಅನ್ನೋದರ ಕುರಿತು ನಿಮ್ಮ ಶಿಶುತಜ್ಞರಲ್ಲಿ ಸಮಾಲೋಚಿಸಿರಿ.

2 ರಿಂದ 5 ರ ನಡುವಿನ ಹರೆಯದ ಮಕ್ಕಳು 1 ರಿಂದ 2.5 ಲೋಟದಷ್ಟು ಹಾಲನ್ನು ಪ್ರತಿದಿನವೂ ಕುಡಿಯಬೇಕು. ಹಾಗೆ ಕುಡಿಯುವ ಹಾಲು ಕಡಿಮೆ ಕೊಬ್ಬಿನಾಂಶವುಳ್ಳದ್ದು (ಶೇ. 1% ರಷ್ಟು) ಅಥವಾ ಕೊಬ್ಬಿನಾಂಶವಿಲ್ಲದ (ಕೆನೆರಹಿತ) ಹಾಲು ಆಗಿರಬೇಕು.

ಆರೋಗ್ಯಯುತವಾದ ಕೊಬ್ಬಿನಾಂಶದೊಂದಿಗೆ ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಎ ಮತ್ತು ಡಿ, ಹಾಗೂ ಸತುವಿನ ಅಂಶವನ್ನೂ ಹಾಲು ಒದಗಿಸುತ್ತದೆ.

ಹೈನು ಪದಾರ್ಥಗಳಿಗೆ ಅಲರ್ಜಿ ಅಥವಾ ಹಾಲನ್ನು ಸಹಿಸಿಕೊಳ್ಳದ (ಮಿಲ್ಕ್ ಇನ್ಟಾಲರನ್ಸ್) ಪರಿಸ್ಥಿತಿಯೇನಾದರೂ ನಿಮ್ಮ ಮಗುವಿನದ್ದಾಗಿದ್ದರೆ, ಅಂತಹ ಸ್ಥಿತಿಯನ್ನು ಹೊರತುಪಡಿಸಿ, ಅಂಬೆಗಾಲಿಡುವ ಮಕ್ಕಳು ಬಾದಾಮಿ, ಗೋಡಂಬಿ, ಅಕ್ಕಿ, ಓಟ್ಸ್, ಅಥವಾ ಸೆಣಬಿನ ಹಾಲಿನಂತಹ ಬದಲೀ ಹಾಲುಗಳನ್ನು (ಸಸ್ಯಾಧಾರಿತ) ಕುಡಿಯಬಾರದು. ಏಕೆಂದರೆ ಇಂತಹ ಸಾಸ್ಯಾಧಾರಿತ ಹಾಲುಗಳಲ್ಲಿ ಹಸುವಿನ ಹಾಲಿಗಿಂತಲೂ ಪ್ರೋಟೀನ್ ಹಾಗೂ ಕ್ಯಾಲರಿಗಳ ಪ್ರಮಾಣ ಕಡಿಮೆಯಿರುತ್ತದೆ. ಪ್ರಾಣಿಜನ್ಯವಲ್ಲದ ಹಾಲನ್ನು ನಿಮ್ಮ ಮಗುವಿಗೆ ಕೊಡಬೇಕೆಂದು ನಿಮ್ಮ ಇಚ್ಛೆಯಾಗಿದ್ದಲ್ಲಿ, ಸೋಯಾವು ಸ್ವೀಕಾರಾರ್ಹ ಪರ್ಯಾಯ ಎಂದು ಪರಿಗಣಿಸಲಾಗಿದೆ.

ಅಂಬೆಗಾಲಿಡುವ ಮಕ್ಕಳಿಗೆ ಹಾಲು ಆರೋಗ್ಯದಾಯಕ ಅಂತಾ ನೀವು ಒಂದು ವೇಳೆ ನಿಮ್ಮ ಮಗುವಿಗೇನಾದರೂ ಯಥೇಚ್ಛವಾಗಿ ಹಾಲು ಕುಡಿಸುತ್ತಿದ್ದಲ್ಲಿ, ಹಾಲಿನಂತಹ ದ್ರವಾಹಾರದಿಂದಲೇ ಅವರ ಹೊಟ್ಟೆ ತುಂಬಿಹೋಗುತ್ತದೆ ಹಾಗೂ ಇದರಿಂದ ಅವರಿಗೆ ಘನಾಹಾರವನ್ನು ತಕ್ಕಷ್ಟು ಪ್ರಮಾಣದಲ್ಲಿ ಸೇವಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾದಾಗ ಅಂತಹ ಮಕ್ಕಳು ಕಬ್ಬಿಣಾಂಶದಂತಹ ಒಂದು ಪ್ರಮುಖ ಪೋಷಕಾಂಶದಿಂದ ವಂಚಿತರಾದಂತಾಗುತ್ತದೆ (ಹಾಲಿನಲ್ಲಿ ಕಬ್ಬಿಣಾಂಶವಿಲ್ಲ). ಮಗುವಿಗೆ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣಾಂಶದ ಪೂರೈಕೆಯಾಗದೇ ಹೋದಲ್ಲಿ, ಅದು ಮಗುವಿನಲ್ಲಿ ಕಲಿಕೆಗೆ ಹಾಗೂ ನಡವಳಿಕೆಗೆ ಸಂಬಂಧಿಸಿದ ತೊಂದರೆಗಳನ್ನು ಹುಟ್ಟುಹಾಕುತ್ತದೆ. ಜೊತೆಗೆ, ಇದು ಕಬ್ಬಿಣಾಂಶದ ಕೊರತೆಯಿಂದ ತಲೆದೋರುವ ರಕ್ತಹೀನತೆಗೂ (ಕೆಂಪು ರಕ್ತಕಣಗಳ ಕೊರತೆ) ಕಾರಣವಾಗಬಹುದು.

ಇನ್ನೂ ಅಂಬೆಗಾಲಿಡುತ್ತಿರುವ ನನ್ನ ಮಗುವು ಎಷ್ಟು ನೀರನ್ನು ಕುಡಿಯಬೇಕು ?

ಇನ್ನೂ ಅಂಬೆಗಾಲಿಡುತ್ತಿರುವ ನನ್ನ ಮಗುವು ಎಷ್ಟು ನೀರನ್ನು ಕುಡಿಯಬೇಕು ?

1 ವರ್ಷ ತುಂಬಿದಾಗ, ಮಕ್ಕಳು 1 ರಿಂದ 4 ಕಪ್ ಗಳಷ್ಟು ಅರ್ಥಾತ್ 8 ರಿಂದ 32 ಔನ್ಸ್ ಗಳಷ್ಟು ನೀರನ್ನು ಪ್ರತಿದಿನವೂ ಕುಡಿಯಬೇಕು. ಅವರಿಗೆ 2 ವರ್ಷ ವಯಸ್ಸಾದ ಬಳಿಕ, ಅಂಬೆಗಾಲಿಡುವ ಮಕ್ಕಳು 1 ರಿಂದ 5 ಕಪ್ ಗಳಷ್ಟು (40 ಔನ್ಸ್) ನೀರು ಕುಡಿಯಬೇಕು.

ಅಂಬೆಗಾಲಿಡುವ ಮಕ್ಕಳಿಗೆ ಬಾಯಾರಿಕೆಯಾದಾಗ, ಅದರಲ್ಲೂ ವಿಶೇಷವಾಗಿ ಎರಡು ಊಟಗಳ ನಡುವೆ ಅವರೇನನ್ನಾದರೂ ಕುಡಿಯಬಯಸಿದಲ್ಲಿ, ಸಾದಾ ನೀರೇ ಅವರಿಗೆ ಅತ್ಯುತ್ತಮವಾದದ್ದು. ಜ್ಯೂಸ್ ಅಥವಾ ಇತರ ಪಾನೀಯಗಳಿಗಿಂತ ನೀರು ನಿಮ್ಮ ಮಕ್ಕಳ ಹೊಟ್ಟೆ ಹಾಗೂ ಹಲ್ಲುಗಳಿಗೆ ಹಿತಕಾರಿಯಾಗಿರುವುದಷ್ಟೇ ಅಲ್ಲ, ಬದಲಿಗೆ ಸಾದಾ ನೀರಿನ ಅಭ್ಯಾಸವನ್ನು ಮಕ್ಕಳಿಗೆ ಈಗಿನಿಂದಲೇ ಶುರು ಮಾಡುವುದರಿಂದ, ಅವರ ಜೀವನಕ್ಕೆ ನೀವು ಆರೋಗ್ಯದಾಯಕವಾದ ಅಭ್ಯಾಸವೊಂದನ್ನೂ ಹಾಕಿಕೊಟ್ಟಂತಾಗುತ್ತದೆ.

ಅಂಬೆಗಾಲಿಡುವ ನನ್ನ ಎಳೆಯ ಮಗು ಎಷ್ಟು ಜ್ಯೂಸ್ ಅನ್ನು ಕುಡಿಯಬೇಕು ?

ಅಮೇರಿಕನ್ ಎಕಾಡೆಮಿ ಆಫ಼್ ಪೇಡಿಯಾಟ್ರಿಕ್ಸ್ (ಎ.ಎ.ಪಿ) ಯ ಪ್ರಕಾರ, 1 ರಿಂದ 3 ರವರೆಗಿನ ವಯೋಮಾನದ ಪುಟ್ಟ ಮಕ್ಕಳು ದಿನವೊಂದಕ್ಕೆ ಅರ್ಧ ಕಪ್ ಗಿಂತಲೂ ಹೆಚ್ಚು (4 ಔನ್ಸ್ ಗಳು) ಜ್ಯೂಸ್ ಅನ್ನು ಕುಡಿಯಬಾರದು. ಜ್ಯೂಸ್ ನಲ್ಲಿ ಸಾಮಾನ್ಯವಾಗಿ ಸಕ್ಕರೆಯ ಅಂಶ ಹೆಚ್ಚಾಗಿದ್ದು, ಇದು ಬೆಳೆಯುತ್ತಿರುವ ಪುಟ್ಟ ಮಕ್ಕಳ ಹೊಟ್ಟೆಗೆ ಕಠಿಣವಾಗಿರುವುದಷ್ಟೇ ಅಲ್ಲ, ಜೊತೆಗೆ ಅವು ಮಕ್ಕಳಲ್ಲಿ ದಂತಕುಳಿಗಳ ಹೆಚ್ಚಳಕ್ಕೂ ಕಾರಣವಾಗುತ್ತದೆ.

ಜೊತೆಗೆ, ದಿನವಿಡೀ ಹೆಚ್ಚಿನ ಪ್ರಮಾಣದಲ್ಲಿ ಜ್ಯೂಸನ್ನೇ ಹೀರುವ ಮಕ್ಕಳು ಸಾಕಷ್ಟು ಪೋಷಕಾಂಶಗಳ ಸೇವನೆಯ ಬದಲು ಹೆಚ್ಚು ಹೆಚ್ಚು ಕ್ಯಾಲರಿಗಳನ್ನೇ ಸೇವಿಸಿದಂತಾಗುತ್ತದೆ. ಈ ಹವ್ಯಾಸವು ಮಕ್ಕಳಲ್ಲಿ ಪೋಷಕಾಂಶದ ಕೊರತೆಗೆ ಕಾರಣವಾಗುತ್ತದೆ.

ನಿಮ್ಮ ಜ್ಯೂಸ್ ಕುಡಿಸಬೇಕೆಂದೇ ನಿಮ್ಮ ಉತ್ಕಟೇಚ್ಛೆಯಾಗಿದ್ದಲ್ಲಿ, ಶೇ. 100% ರಷ್ಟು ಹಣ್ಣಿನ ಜ್ಯೂಸ್ ನ್ನೇ ಕೊಡಿರಿ. ಮಾರುಕಟ್ಟೆಯಲ್ಲಿ ದೊರಕುವ ಫ಼್ರೂಟ್ ಡ್ರಿಂಕ್ಸ್ ಹಾಗೂ ಫ಼್ರೂಟ್ ಬೆವೆರೇಜೆಸ್ ಗಳಿಗಿಂತ ನೀವೇ ಮನೆಯಲ್ಲಿ ತಯಾರಿಸಿದ ಹಣ್ಣಿನ ಜ್ಯೂಸ್ ನಲ್ಲಿ ಅಧಿಕ ಪ್ರಮಾಣದ ಜೀವಸತ್ವಗಳಿರುತ್ತವೆ ಹಾಗೂ ಕಡಿಮೆ ಪ್ರಮಣದಲ್ಲಿ ಸ್ವಾದಕಾರಕಗಳು ಹಾಗೂ ಸೇರ್ಪಡೆಗಳು (ಸ್ವೀಟ್ನರ್ಸ್ ಆಂಡ್ ಆಡಿಟಿವ್ಸ್) ಇರುತ್ತವೆ.

ಇದಕ್ಕಿಂತಲೂ ಒಳ್ಳೆಯ ಉಪಾಯವೇನೆಂದರೆ, ನಾರಿನಂಶದಿಂದ ಹಾಗೂ ಇನ್ನಿತರ ಆರೋಗ್ಯದಾಯಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಇಡಿಯ ಹಣ್ಣುಗಳನ್ನೇ ತಿನ್ನುವಂತೆ ನಿಮ್ಮ ಕಂದಮ್ಮನಿಗೆ ಉತ್ತೇಜನ ನೀಡುವುದು.

ಹೆಚ್ಚು ಹೆಚ್ಚು ಕುಡಿಯುವಂತೆ ಮಗುವನ್ನು ಪ್ರೇರೇಪಿಸುವುದು ಹೇಗೆ ?

ಹೆಚ್ಚು ಹೆಚ್ಚು ಕುಡಿಯುವಂತೆ ಮಗುವನ್ನು ಪ್ರೇರೇಪಿಸುವುದು ಹೇಗೆ ?

ನಿಮ್ಮ ಪುಟಾಣಿಯು ದಿನವಿಡೀ ಸಾಕಷ್ಟು ದ್ರವಾಹಾರವನ್ನು ಸೇವಿಸುವಂತಾಗುವುದಕ್ಕೆ ದಿನವಿಡೀ ಹೆಣಗಾಡುವ ಪರಿಸ್ಥಿತಿಯು ನಿಮ್ಮದಾಗಿದೆಯೇ ? ಅಂಬೆಗಾಲಿಡುತ್ತಿರುವ ಆ ನಿಮ್ಮ ಪುಟಾಣಿಯು ನೀರನ್ನು ಹಾಗೂ ಹಾಲನ್ನು ಕುಡಿಯುವಂತೆ ಮಾಡಲು ಇರುವ ಅತ್ಯುತ್ತಮ ಉಪಾಯವೆಂದರೆ, ಸ್ವತ: ನೀವೇ ಮಗುವಿನ ಮುಂದೆ ಆ ರೀತಿ ನಡೆದುಕೊಳ್ಳುವುದು! ತಮ್ಮ ತಂದೆತಾಯಿಗಳು ಏನನ್ನು ಮಾಡುತ್ತಾರೆ ಎಂಬುದನ್ನು ನೋಡಿಯೇ ಮಕ್ಕಳು ಕಲಿಯುತ್ತವೆ. ಹಾಗಾಗಿ, ನೀರಿನ ಬಾಟಲಿಯೊಂದನ್ನು ಹಿಡಿದುಕೊಂಡು, ನಿಮ್ಮ ಮಗುವಿನೆದುರು ದಿನವಿಡೀ ಅದನ್ನು ಸ್ವಲ್ಪ ಸ್ವಲ್ಪವಾಗಿಯೇ ಕುಡಿಯುತ್ತಾ, ಅವರೂ ಕೂಡ ಹಾಲು ಹಾಗೂ ನೀರನ್ನು ಸಾಕಷ್ಟು ಕುಡಿಯುವಂತೆ ಮಾಡಿರಿ.

ನಿಮ್ಮ ಮಗುವು ಸಾಕಷ್ಟು ನೀರನ್ನು ಕುಡಿಯುವಂತೆ ಮಾಡಲು ಅವನನ್ನು/ಅವಳನ್ನು ಪೂಸಿ ಮಾಡುವುದಕ್ಕಾಗಿ ಇದೋ ನಿಮಗಿದೆ ಇಲ್ಲಿ ಇನ್ನೊಂದು ಉಪಾಯ: ಮಾರುಕಟ್ಟೆಗೆ ಕರೆದುಕೊಂಡು ಹೋಗಿದ್ದಾಗ, ಆತನೇ/ಆಕೆಯೇ ಆಯ್ದುಕೊಂಡಿದ್ದ ವಿಶೇಷ ಕಪ್ ನಲ್ಲಿ ಆತನಿಗೆ/ಆಕೆಗೆ ನೀರನ್ನು ಹಾಕಿಕೊಡಿರಿ. ಆದಾಗ್ಯೂ, ಹಾಲಿನ ವಿಷಯಕ್ಕೆ ಬಂದಾಗ, ನಿಮ್ಮ ಮಗುವು ಆತನ/ಆಕೆಯ ಮಾಮೂಲೀ ಕಪ್ ನಲ್ಲಿಯೇ ಹಾಲನ್ನು ಕುಡಿಯುವುದು ವಿಹಿತ (ಬಾಟಲಿಯಿಂದ ಹಾಲು ಕುಡಿಯುವ ಮಕ್ಕಳು ಅಗತ್ಯಕ್ಕಿಂತ ಹೆಚ್ಚು ಹಾಲನ್ನು ಕುಡಿಯುವ ಪ್ರವೃತ್ತಿಯುಳ್ಳವರಾಗಿರುತ್ತಾರೆ. ಏಕೆಂದರೆ, ಬಾಟಲಿಯನ್ನು ದಿನವಿಡೀ ಬಗಲಿನಲ್ಲಿಟ್ಟುಕೊಂಡು ಓಡಾಡುವುದು ಸುಲಭ!!).

ಬಾಟಲಿ ಬದಲಿಗೆ ಗ್ಲಾಸ್ ಅಥವಾ ಕಪ್‌ನಲ್ಲಿ ಕುಡಿಸಿ

ಬಾಟಲಿ ಬದಲಿಗೆ ಗ್ಲಾಸ್ ಅಥವಾ ಕಪ್‌ನಲ್ಲಿ ಕುಡಿಸಿ

ಹಾಂ! ಇಲ್ಲಿ ಇನ್ನೊಂದು ವಿಷಯ.... ಕಪ್ ನಿಂದ ಕುಡಿಯುವುದೆಂದರೆ ಅದು ನಿಮ್ಮ ಪುಟಾಣಿಯ ಪಾಲಿಗೆ ಕಲಿಕೆಯ ಅನುಭವ!! ಹಾಗಾಗಿ ನಿಮ್ಮ ಪುಟಾಣಿಯು ಓಡಾಡಿದಲ್ಲೆಲ್ಲ ನೀರು ಚೆಲ್ಲಿರುವುದನ್ನು ನೀವು ಸಹಿಸಿಕೊಳ್ಳಲೇಬೇಕು. ನಿಮ್ಮ ಮಗುವಿಗೆ ಗುಟುರಿಸಿ ಕುಡಿಯುವಂತಹ ಕಪ್ ಗಿಂತಲೂ, ನೀರು ಹೊರಚೆಲ್ಲದಂತೆ ತಡೆಯುವಂತಹ ರಚನೆಯುಳ್ಳ (ಸಿಪ್-ಪ್ರೂಫ಼್) ಕಪ್ ಅನ್ನು ನೀಡಬಯಸುವಿರಾದರೆ, ಮಗುವು ಅದರಿಂದ ಕುಡಿಯುವ ದ್ರವದ ಪ್ರಮಾಣದ ಮೇಲೆ ನಿಗಾವಹಿಸಿ ಅಥವಾ ಅದರ ಬದಲು ಮಾಮೂಲೀ ಕಪ್ ಅನ್ನೇ ಕೊಡುವುದು ಉತ್ತಮ. ಹೀಗಾದಾಗ, ಹೆಚ್ಚು-ಹೆಚ್ಚು ಕುಡಿಯುವ ಅಭ್ಯಾಸವನ್ನು ನಿಮ್ಮ ಮಗುವು ಮೈಗೂಡಿಸಿಕೊಳ್ಳಲಾರದು (ಬಾಟಲ್ ನ ಪ್ರಕರಣದಂತೆ!)

ನಿಮ್ಮ ಮಗುವು ಸೀದಾಸಾದಾ ನೀರನ್ನು ಕುಡಿಯಲು ಹೆಚ್ಚು ಇಷ್ಟಪಡುವುದಿಲ್ಲ ಎಂದಾದಲ್ಲಿ, ಆ ನೀರಿಗೆ ಲಿಂಬೆಹಣ್ಣಿನ ರಸವನ್ನೋ ಅಥವಾ ಬೆರ್ರಿ ಹಣ್ಣುಗಳನ್ನೋ ಸೇರಿಸಲು ಪ್ರಯತ್ನಿಸಿರಿ ಇಲ್ಲವೇ ಅಧಿಕ ಜಲಾಂಶದಿಂದ ಯುಕ್ತವಾಗಿರುವ ಕಲ್ಲಂಗಡಿ, ಖರಬೂಜ, ಹಾಗೂ ಸ್ಟ್ರಾಬೆರ್ರಿಗಳಂತಹ ಹಣ್ಣುಗಳು ಹಾಗೂ ತರಕಾರಿಗಳನ್ನು ಕೊಡಿರಿ. ಹೌದು, ಆಹಾರವಸ್ತುಗಳೂ ಕೂಡ ನಿಮ್ಮ ಪುಟಾಣಿಗೆ ಹಿತಕಾರಿಯೇ!!

ನಿಮ್ಮ ಕಂದಮ್ಮನು ಸಾಕಷ್ಟು ಕುಡಿಯುವಂತೆ ಅವನನ್ನು/ಅವಳನ್ನು ಪ್ರೇರೇಪಿಸಿರಿ, ಹಾಗಂತ ಈ ವಿಚಾರದಲ್ಲಿ ನೀವು ತೀರಾ ವಿಪರೀತವೆಂಬಂತೆ ಆಡಲು ಹೋಗುವುದೂ ಬೇಡ. ಹವಾಮಾನ, ನಿಮ್ಮ ಮಗುವಿನ ಮನಸ್ಥಿತಿ, ಕ್ರಿಯಾಶೀಲತೆಯ ಮಟ್ಟ, ಹಾಗೂ ಹಸಿವೆ ಮೊದಲಾದ ಅಂಶಗಳು ನಿಮ್ಮ ಮಗುವು ಪ್ರತಿದಿನ ಎಷ್ಟು ದ್ರವವನ್ನು ಹೊಟ್ಟೆಗಿಳಿಸಿಕೊಳ್ಳುತ್ತದೆ ಎಂಬುದರ ಮೇಲೆ ಪರಿಣಾಮ ಬೀರುತ್ತವೆ.

ನಿಮ್ಮ ಮಗುವು ಎಷ್ಟು ದ್ರವವನ್ನು ಸೇವಿಸಬೇಕು ಅನ್ನೋದರ ಬಗ್ಗೆ ನಿಮ್ಮ ಶಿಶುವೈದ್ಯರ ಬಳಿ ಯಾವಾಗ ಮಾತನಾಡಬೇಕು ?

ನಿಮ್ಮ ಮಗುವು ಎಷ್ಟು ದ್ರವವನ್ನು ಸೇವಿಸಬೇಕು ಅನ್ನೋದರ ಬಗ್ಗೆ ನಿಮ್ಮ ಶಿಶುವೈದ್ಯರ ಬಳಿ ಯಾವಾಗ ಮಾತನಾಡಬೇಕು ?

ಬಹಳ ಕ್ರಿಯಾಶಾಲಿಯಾಗಿರುವ ಮಕ್ಕಳು - ವಿಶೇಷವಾಗಿ ಕಡುಬೇಸಿಗೆಯಲ್ಲಿ ಅವರು ಹೊರಗಡೆಯೇ ಹೆಚ್ಚು ಆಟವಾಡುವವರಾಗಿದ್ದಲ್ಲಿ, ಅಂತಹ ಮಕ್ಕಳು ನಿರ್ಜಲೀಕರಣಕ್ಕೆ ಒಳಗಾಗುವ ಅಪಾಯವಿದೆ. ಅದರ ಕೆಲವು ಲಕ್ಷಣಗಳೆಂದರೆ: ಹಠಮಾರಿತನ, ಕೆಂಪಾದ ತ್ವಚೆ, ಒಣಗಿದ ತುಟಿಗಳು, ಅಂಟಿಕೊಂಡಂತಿರುವ ಬಾಯಿ, ಹಾಗೂ ಕಡಿಮೆಗೊಂಡ ಮೂತ್ರದ ಪ್ರಮಾಣ ಅಥವಾ ಕಡುವರ್ಣದ ಮೂತ್ರವಿಸರ್ಜನೆ.

ನಿಮ್ಮ ಮಗುವು ನಿರ್ಜಲೀಕರಣಗೊಳ್ಳಲಿದೆ ಎಂದು ನಿಮಗೆ ಬಲವಾಗಿ ಅನಿಸಲಾರಂಭಿಸಿದಲ್ಲಿ, ನಿಮ್ಮ ಶಿಶುತಜ್ಞರಿಗೆ ಕರೆ ಮಾಡಲು ಹಿಂಜರಿಯಬೇಡಿ!!

English summary

How Much Milk, Water & Juice Toddlers Can Drink

How Much milk and water toddler can drink, read on..
X
Desktop Bottom Promotion