For Quick Alerts
ALLOW NOTIFICATIONS  
For Daily Alerts

ಹಾಲುಣಿಸುತ್ತಿರುವಾಗ ಮಗುವಿನ ಬಿಕ್ಕಳಿಕೆಯನ್ನು ನಿವಾರಿಸುವುದು ಹೇಗೆ?

By Jaya
|

ತಾಯಿಗೆ ಮಗುವು ಸರ್ವಸ್ವವಾಗಿರುತ್ತದೆ. ಒಂಬತ್ತು ತಿಂಗಳು ತನ್ನ ಒಡಲಿನಲ್ಲಿ ಕಂದನನ್ನು ಹೊತ್ತು ಅದನ್ನು ಭೂಮಿಗೆ ತರುವ ಕಾರ್ಯದವರೆಗೂ ಆಕೆ ಮಗುವಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುತ್ತಾಳೆ. ತಾಯಿ ಮಗುವಿನ ಈ ಸಂಬಂಧ ಲೋಕದಲ್ಲಿಯೇ ಅತ್ಯಂತ ಮಹತ್ವ ಮತ್ತು ಪವಿತ್ರವಾದುದು ಅಂತೆಯೇ ಬೆಲೆ ಕಟ್ಟಲು ಸಾಧ್ಯವಿಲ್ಲದ್ದು. ಮಗು ಗರ್ಭದಲ್ಲಿರುವಾಗ ತಾಯಿ ಬಹಳಷ್ಟು ಮುತುವರ್ಜಿಯನ್ನು ತನ್ನ ಕಂದನಿಗಾಗಿ ಮಾಡುತ್ತಾಳೆ.

ಇನ್ನು ಅದು ಜನಿಸಿದ ನಂತರ ತಾಯಿ ಮಗುವಿನ ಹೆಜ್ಜೆ ಹೆಜ್ಜೆಯನ್ನು ಜಾಗರೂಕತೆಯಿಂದ ಅವಲೋಕಿಸುತ್ತಾಳೆ. ತನ್ನ ಕಂದನ ಒಂದು ಅಳು ಕೇಳಿದರೂ ಆಕೆಯ ಮನಸ್ಸು ವಿಲ ವಿಲನೆ ಒದ್ದಾಡಿ ಹೋಗುತ್ತದೆ. ಇನ್ನು ಕಂದನಿಗೆ ಯಾವುದೇ ರೀತಿಯ ಕಾಯಿಲೆ, ನೋವು ಉಂಟಾಗಬಾರದೆಂದು ಹಗಲು ಇರುಳು ಕಣ್ಣಲ್ಲಿ ಕಣ್ಣಿಟ್ಟು ಜೋಪಾನ ಮಾಡುತ್ತಾರೆ.

baby

ಅದಾಗ್ಯೂ ಕೆಲವೊಂದು ಸಣ್ಣ ನ್ಯೂನತೆಗಳು ತಾಯಿಯ ಕಣ್ಣುತಪ್ಪಿಸಿ ಮಗುವಿನಲ್ಲಿ ಬೇರೂರಿರುತ್ತದೆ. ಅದರಲ್ಲಿ ಮುಖ್ಯವಾದುದು ಬಿಕ್ಕಳಿಸುವಿಕೆಯಾಗಿದೆ. ನಿಮ್ಮ ಗರ್ಭಧಾರಣೆಯ ಸಮಯದಲ್ಲಿ ಮಗುವಿನ ಶ್ವಾಸಕೋಶಗಳು ಸಂಪೂರ್ಣವಾಗಿ ಅಭಿವೃದ್ಧಿಗೊಳ್ಳುತ್ತದೆ. ಕಿಬ್ಬೊಟ್ಟೆಯ ಮೇಲಿನ ಸಣ್ಣ ಸೆಳೆತಗಳು ಈ ಬಿಕ್ಕಳಿಸುವಿಕೆ ಎಂದನಿಸಿವೆ.

ಮಗುವು ತಾಯಿಯ ಗರ್ಭದಲ್ಲಿರುವಾಗ ಹೆಚ್ಚು ಬಿಕ್ಕಳಿಕೆ ಇರುತ್ತದೆ. ಗರ್ಭಧಾರಣೆಯ ಮೊದಲ ಕೆಲವು ತಿಂಗಳು ಈ ಬಿಕ್ಕಳಿಗೆ ಮಕ್ಕಳಲ್ಲಿ ಇದ್ದೇ ಇರುತ್ತದೆ. ಇದಕ್ಕೆ ಗಾಬರಿಯಾಗಬೇಕಾದ ಅವಶ್ಯಕತೆ ಏನಿಲ್ಲ. ಮಗುವಿನ ಬಿಕ್ಕಳಿಗೆ ಹೆಚ್ಚು ಸಾಮಾನ್ಯವಾಗಿದೆ. ಮಗುವಿಗೆ ಈ ರೀತಿ ಕಿರಿಕಿರಿಯನ್ನು ಮಾಡುವ ಬಿಕ್ಕಳಿಕೆ ಏಕೆ ಉಂಟಾಗುತ್ತದೆ ಎಂಬುದು ನಿಮಗೆ ಆಶ್ಚರ್ಯವನ್ನುಂಟು ಮಾಡಬಹುದು. ಹಿರಿಯರಿಗೆ ಬರುವ ಬಿಕ್ಕಳಿಕೆಯಂತೆ ಮಕ್ಕಳಿಗೆ ಬರುವ ಬಿಕ್ಕಳಿಕೆಯ ಹಿಂದೆ ಕಾರಣವೇನಿಲ್ಲ. ಧ್ವನಿ ಕೋರ್ಡ್‌ಗಳ ತ್ವರಿತ ಮುಚ್ಚುವಿಕೆಯಿಂದ ಮಗುವಿನಲ್ಲಿ ಈ ಬಿಕ್ಕಳಿಕೆ ಉಂಟಾಗುತ್ತದೆ.

ಇನ್ನು ಮಗುವಿಗೆ ಹಾಲುಣಿಸುವ ಸಮಯದಲ್ಲಿ ಹೊಟ್ಟೆಯಲ್ಲಿ ಹೆಚ್ಚಿನ ಗಾಳಿ ಸಿಕ್ಕಿಹಾಕಿಕೊಳ್ಳುವುದರಿಂದ ಈ ಬಿಕ್ಕಳಿಕೆ ಉಂಟಾಗುತ್ತದೆ. ಈ ಬಿಕ್ಕಳಿಕೆ ನಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ ಆಗ ನಮ್ಮ ಮಗುವಿಗೂ ಎಷ್ಟೊಂದು ಕಿರಿಕಿರಿಯಾಗುತ್ತಿರಬಹುದು ಎಂದು ಅನಿಸುವುದು ಸಹಜವೇ ಆಗಿದೆ. ಆದರೆ ನಿಮ್ಮ ಮಗುವಿಗೆ ಇದರಿಂದ ಯಾವುದೇ ತೊಂದರೆಯಿಲ್ಲ ಎಂಬುದು ನಿಮಗೆ ಗೊತ್ತೇ? ಆದರೂ ಮಗುವಿನ ಬಿಕ್ಕಳಿಕೆ ನಿಲ್ಲಲು ನಾವು ಸಾಕಷ್ಟು ವಿಧಾನಗಳನ್ನು ಅನುಸರಿಸುತ್ತೇವೆ. ನೀವು ಮಗುವಿಗೆ ಹಾಲುಣಿಸುತ್ತಿರುವ ಸಂದರ್ಭದಲ್ಲಿ ಈ ಬಿಕ್ಕಳಿಕೆಯ ಮೇಲೆ ಕೊಂಚ ಗಮನ ಹರಿಸಿದರೆ ಸಾಕು.

ನೀವು ಮಗುವಿಗೆ ಹಾಲುಣಿಸುತ್ತಿರುವಾಗ ಹೊಟ್ಟೆಯಲ್ಲಿ ಸಂಗ್ರಹವಾದ ಗಾಳಿ ಮಗುವಿಕೆ ಬಿಕ್ಕಳಿಕೆಯನ್ನುಂಟು ಮಾಡುತ್ತದೆ. ಇದರಿಂದ ಸ್ವಲ್ಪ ವಿರಾಮ ನೀಡಿ ಹಾಲುಣಿಸಿ. ಇದರಿಂದ ಮಗುವಿಗೆ ಬಿಕ್ಕಳಿಕೆ ಮಾಯವಾಗಿ ಸರಿಯಾದ ಭಂಗಿಗೆ ಬರಲು ಅವಕಾಶ ದೊರೆಯುತ್ತದೆ. ಅಮೇರಿಕಾದಲ್ಲಿ ನಡೆಸಿದ ಒಂದು ಸಂಶೋಧನೆಯ ಪ್ರಕಾರ ಬಾಟಲಿ ಹಾಲು ಕುಡಿಯುವ ಮಗುವಿಗೆ ಬಿಕ್ಕಳಿಗೆ ಹೆಚ್ಚಾಗಿದ್ದು ತಾಯಿಯ ಎದೆಹಾಲು ಕುಡಿಯುವ ಮಕ್ಕಳಲ್ಲಿ ಈ ಬಿಕ್ಕಳಿಗೆ ಕಡಿಮೆಯಾಗಿದೆ.

ಹಾಲುಣಿಸುತ್ತಿರುವ ಸಮಯದಲ್ಲಿ ಬಿಕ್ಕಳಿಕೆ ಉಂಟಾದಾಗ ಹಾಲುಣಿಸುವುದನ್ನು ನಿಲ್ಲಿಸಿ ಮತ್ತು ಮಗುವಿನ ಬೆನ್ನನ್ನು ಉಜ್ಜಿ. ಆದರೆ ಹೆಚ್ಚು ಬಲಹಾಕದೆಯೆ ಈ ಕೆಲಸವನ್ನು ಮಾಡಿ. ಆದರೆ ಎಲ್ಲಾ ಬಿಕ್ಕಳಿಕೆಗಳನ್ನು ಈ ರೀತಿ ನಿವಾರಿಸಲಾಗುವುದಿಲ್ಲ. ನಿಮ್ಮ ಮಗುವಿಗೆ ಹಾಲುಣಿಸುವ ಸಮಯವನ್ನು ಬದಲಾಯಿಸುತ್ತಿರಿ. ಹಾಲನ್ನು ಸಣ್ಣ ವಿರಾಮಗಳಲ್ಲಿ ನೀಡಿ. ಒಮ್ಮೆಗೆ ಹಾಲು ಕುಡಿಸಬೇಡಿ.

ಹೆಚ್ಚಿನ ತಾಯಂದಿರುವ ಮಗುವಿಗೆ ಬಿಕ್ಕಳಿಗೆ ಬರುವ ಸಮಯದಲ್ಲಿ ಹಾಲುಣಿಸಿದರೆ ಇದು ಸರಿಯಾಗುತ್ತದೆ ಎಂಬುದಾಗಿ ನಂಬಿದ್ದಾರೆ. ಹೇಗೆ ನಾವು ಬಿಕ್ಕಳಿಕೆ ಬರುವಾಗ ನೀರು ಕುಡಿಯುತ್ತೇವೆಯೋ ಹಾಗೆ. ನಿಮ್ಮ ಗೆಳತಿ ಕೂಡ ನಿಮ್ಮ ಮಗುವಿನ ಈ ಸಮಸ್ಯೆಗೆ ನಿರಂತರವಾಗಿ ಹಾಲುಣಿಸುವುದರಿಂದ ಬಿಕ್ಕಳಿಕೆಯನ್ನು ತಡೆಯಬಹುದು ಎಂದು ಹೇಳಬಹುದು. ಮಗುವಿಗೆ ಬಿಕ್ಕಳಿಕೆ ಬಂದಾಗ ಶ್ವಾಸಕೋಶಗಳಿಗೆ ಹಾಲು ಹೋಗುವುದಿಲ್ಲ ಮತ್ತು ಇದರಿಂದ ಬಿಕ್ಕಳಿಕೆ ನಿಲ್ಲುವುದಿಲ್ಲ.

ಅದಾಗ್ಯೂ ಬಿಕ್ಕಳಿಕೆಯಿಂದ ಮಗುವಿಗೆ ಯಾವುದೇ ತೊಂದರೆ ಇಲ್ಲ. ಅದರಿಂದ ಇದಕ್ಕಾಗಿ ನೀವು ಕಳವಳ ಪಡಬೇಕಾಗಿಲ್ಲ. ನಿಮ್ಮ ಮಗುವಿಗೆ ಬಿಕ್ಕಳಿಕೆ ಬಾರದಂತೆ ನೋಡಿಕೊಳ್ಳಬೇಕು ಎಂದಾದಲ್ಲಿ ನೀರು ಇಲ್ಲವೇ ಬೇರೆ ದ್ರವ ಪದಾರ್ಥಗಳನ್ನು ನೀಡಿ. ಇಲ್ಲದಿದ್ದರೆ ಅದು ನಿಧಾನವಾಗಿ ಕಡಿಮೆಯಾಗುವವರೆಗೆ ನಿರೀಕ್ಷಿಸಿ. ಮಗುವಿಗೆ ಬಿಕ್ಕಳಿಕೆ ಬರುತ್ತಿದೆ ಎಂದಾದಲ್ಲಿ ನೀವು ಗಾಬರಿಗೊಳಗಾಗದೆ ಮಗುವಿಗೆ ಕೊಂಚ ವಿರಮಿಸಲು ಬಿಡಿ. ಇದರಿಂದ ಮಗುವಿನ ಹೊಟ್ಟೆಯಲ್ಲಿರುವ ಗಾಳಿ ಹೊರಬರುತ್ತದೆ ಮಗುವಿಗೆ ಅಹಾರ ಹೀರಲು ನೆರವಾಗುತ್ತದೆ.

English summary

How to Prevent Newborn Hiccups While Breastfeeding

If you have been looking for an answer to how to gain weight fast, you need to prepare yourself for it and take up the challenge. Are you one of the those skinny boys who have fast metabolism and no matter how much you want to, you cannot gain weight. How to gain weight fast for boys? There is no magic trick but some things that can ensurethat you’ll do it in some time. Putting on weight is equally difficult as losing weight. If you are up for 10-day weight gain challenge, here’s everything you need to find on how to gain weight for boy in 10 days naturally.
X
Desktop Bottom Promotion