ಪುಟ್ಟ ಕಂದಮ್ಮನಿಗೆ ನೀಡುವ ಆಹಾರ-ಪಥ್ಯ ಹೇಗಿರಬೇಕು?

By: Jaya subramanya
Subscribe to Boldsky

ಮಗುವಿನ ಬಾಲ್ಯದಿಂದ ಹಿಡಿದು ಅದು ಬೆಳೆದು ದೊಡ್ಡದಾಗುವವರೆಗೆ ತಾಯಂದಿರುವ ಮಗುವಿನ ಆಹಾರ ಪದ್ಧತಿಗೆ ಹೆಚ್ಚಿನ ಗಮನವನ್ನು ನೀಡುತ್ತಾರೆ. ಬೆಳೆಯುತ್ತಿರುವ ಮಕ್ಕಳು ಹೆಚ್ಚಿನ ಪ್ರೋಟೀನ್ ನ್ಯೂಟ್ರೀನ್ ಅಂಶಗಳನ್ನು ತಮ್ಮ ಆಹಾರದಲ್ಲಿ ತೆಗೆದುಕೊಂಡಾಗ ಮಾತ್ರವೇ ಮಗುವಿನ ಮೂಳೆ ಸ್ನಾಯುಗಳು ಬಲಗೊಂಡು ಹೆಚ್ಚುವರಿ ಶಕ್ತಿಯನ್ನು ಪಡೆಯಲು ಸಾಧ್ಯ.

ಈ ಸಮಯದಲ್ಲಿ ತಮ್ಮ ಮಕ್ಕಳಿಗೆ ಯಾವ ರೀತಿಯ ಆಹಾರ ಪದಾರ್ಥಗಳನ್ನು ನೀಡಬೇಕು, ಯಾವುದನ್ನು ನೀಡಬಾರದು, ಅವರುಗಳ ಮೂಳೆ ಸ್ನಾಯುಗಳನ್ನು ಬಲಗೊಳಿಸುವ ಆಹಾರಗಳೇನು ಎಂಬುದನ್ನು ಕುರಿತು ಅವರು ಯೋಚಿಸುತ್ತಾರೆ ಅಂತೆಯೇ ಅವರಿಗೆ ಈ ಬಗೆಯಲ್ಲಿ ಗೊಂದಲಗಳಿರುತ್ತವೆ. ಹಾಗಿದ್ದರೆ ಮಗುವಿಗೆ ಅಗತ್ಯವಾಗಿ ನೀಡಬೇಕಾಗಿರುವ ಆಹಾರ ಪದಾರ್ಥಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ವಿವರವಾಗಿ ನೀಡಿದ್ದೇವೆ.

ನೀವು ಮಗುವಿಗೆ ನೀಡುತ್ತಿರುವ ಆಹಾರವನ್ನು ಅದು ಸಂಪೂರ್ಣವಾಗಿ ಸೇವಿಸುತ್ತಿದೆಯೇ ಮತ್ತು ಅವರಿಗೆ ಅದು ಇಷ್ಟವಾಗುತ್ತಿದೆಯೇ ಎಂಬುದರ ಕುರಿತೂ ನೀವು ಗಮನ ಹರಿಸಬೇಕು. ಮಗುವು ತಾನು ಸೇವಿಸುವ ಆಹಾರದಲ್ಲಿ ಹೆಚ್ಚಿನ ಅಂಶವನ್ನು ಕಳೆಯುತ್ತಿದೆ ಎಂದಾದಲ್ಲಿ ಅದಕ್ಕೆ ಆ ಆಹಾರ ಹಿಡಿಸುತ್ತಿಲ್ಲ ಎಂದರ್ಥವಾಗಿದೆ. ಇದರಿಂದ ನಿಮ್ಮ ಮಗು ಕಡಿಮೆ ಪ್ರಮಾಣದಲ್ಲಿ ಆಹಾರವನ್ನು ಸೇವಿಸಬಹುದು ಹಾಗೂ ಇದರಿಂದ ಅವರ ಬೆಳವಣಿಗೆ ಕುಂಠಿತಗೊಳ್ಳುವ ಸಾಧ್ಯತೆ ಇದೆ. 

Feeding for baby

ಇಂದಿನ ಲೇಖನದಲ್ಲಿ ಮಗುವಿಗೆ ಅಗತ್ಯವಾಗಿ ನೀಡಬೇಕಾಗಿರುವ ಆಹಾರಗಳೇನು ಎಂಬುದನ್ನು ಇಲ್ಲಿ ತಿಳಿಸಿಕೊಡುತ್ತಿದ್ದು ಇದೊಂದು ಉತ್ತಮ ಮಾರ್ಗದರ್ಶಿ ಕೈಪಿಡಿಯಾಗಿದೆ ಅಂತೆಯೇ ಈ ಪ್ರಕಾರವಾಗಿ ನಿಮಗೆ ಮಗುವಿನ ಆಹಾರ ಪದ್ಧತಿಗಳ ಮೇಲೆ ಕೇಂದ್ರೀಕರಿಸಬಹುದು.

ಪಿಷ್ಟ ಆಹಾರ

ಊಟದ ಸಮಯದಲ್ಲಿ ಪಿಷ್ಟದ ಆಹಾರವನ್ನು ಮಗುವಿಗೆ ನೀವು ನೀಡುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಆಲೂಗಡ್ಡೆ, ಸಿಹಿಗೆಣಸು, ಅನ್ನ, ಗೋಧಿ, ಪ್ಲಾಂಟೇನ್, ಹಸಿ ಬಾಳೆಕಾಯಿ, ಹೀಗೆ ಇವುಗಳನ್ನು ಹೆಸರಿಸಬಹುದು. ಇದು ನಿಮ್ಮ ಮಗುವಿಗೆ ಕಾರ್ಬೋಹೈಡ್ರೇಟ್‌ಗಳನ್ನು ಒದಗಿಸುತ್ತಿದ್ದು ಇದು ಶಕ್ತಿಯನ್ನು ನೀಡುವಲ್ಲಿ ಸಹಾಯ ಮಾಡಲಿದೆ. ಇದರಲ್ಲಿ ನಾರಿನಂಶವಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಏಕೆಂದರೆ ಹೆಚ್ಚುವರಿ ನಾರಿನಂಶ ಕೂಡ ನಿಮ್ಮ ಮಗುವಿನ ಹೊಟ್ಟೆ ತುಂಬಿಸಬಹುದು ಮತ್ತು ಇತರ ಪೋಷಕ ಆಹಾರಗಳನ್ನು ಅವರುಗಳು ಸೇವಿಸದೇ ಇರಬಹುದು. 

fruits

ಹಣ್ಣು ಮತ್ತು ತರಕಾರಿಗಳು

ನಿಮ್ಮ ಮಗುವಿಗೆ ಸಾಧ್ಯವಾದಷ್ಟು ಹಣ್ಣು ಮತ್ತು ತರಕಾರಿಗಳನ್ನು ನೀಡಿ. ಋತುಮಾನಕ್ಕೆ ಅನುಗುಣವಾಗಿ ದೊರೆಯುವ ಹಣ್ಣು ತರಕಾರಿಗಳನ್ನು ಅವರಿಗೆ ನೀಡುತ್ತಿದ್ದೀರಿ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಮಾವು, ಅವೊಕಾಡೊ, ಬಾಳೆಹಣ್ಣನ್ನು ಬೇಯಿಸದೆಯೇ ಹಾಗೆಯೇ ನೀಡಬಹುದು. ಅಂತೆಯೇ ತರಕಾರಿಗಳಾದ ಸೌತೆಕಾಯಿ ಮತ್ತು ಟೊಮೇಟೊಗಳನ್ನು ಸೇವಿಸಲು ನೀಡಿ. ಇತರ ಹಣ್ಣು ಮತ್ತು ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ಅವರಿಗೆ ನೀಡಿ. ನಿಮ್ಮ ಮಗು ಮಸಾಲೆ ಪದಾರ್ಥವನ್ನು ತಿನ್ನುತ್ತಿದ್ದಲ್ಲಿ ಆದಷ್ಟು ಕಡಿಮೆ ಪ್ರಮಾಣದಲ್ಲಿ ನೀಡಿ.

ಕಬ್ಬಿಣ ಮತ್ತು ಪ್ರೊಟೀನ್ ಅಂಶವುಳ್ಳ ಆಹಾರಗಳು

ಹೆಚ್ಚಿನ ಪ್ರೊಟೀನ್ ಮತ್ತು ಕಬ್ಬಿಣದ ಅಂಶವುಳ್ಳ ಆಹಾರವನ್ನು ನಿಮ್ಮ ಮಗುವಿಗೆ ನೀಡಿ. ಮಸೂರ್ ಮತ್ತು ದ್ವಿದಳ ಧಾನ್ಯಗಳು ಕಬ್ಬಿಣ ಮತ್ತು ಪ್ರೊಟೀನ್ ಅನ್ನು ನೀಡಲಿದೆ. ನಿಮ್ಮ ಮಗುವಿಗೆ ಮಾಂಸಾಹಾರಿ ಆಹಾರಗಳನ್ನು ನೀಡುತ್ತಿದ್ದೀರಿ ಎಂದಾದಲ್ಲಿ ಅದು ತಾಜಾ ಮತ್ತು ಸ್ವಚ್ಛವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಚೆನ್ನಾಗಿ ಬೇಯಿಸಿ ನಂತರವೇ ಅವರಿಗೆ ನೀಡಿ ಸಂಸ್ಕರಿಸಿದ ಮಾಂಸಾಹಾರಿ ಆಹಾರಗಳನ್ನು ನೀಡಬೇಡಿ ಅಂತೆಯೇ ಹೆಚ್ಚು ಉಪ್ಪು ಮತ್ತು ಎಣ್ಣೆಯಿರುವ ಆಹಾರಗಳನ್ನು ನೀಡಬೇಡಿ. 

lentils

ಹಾಲು ಮತ್ತು ಹಾಲಿನ ಉತ್ಪನ್ನಗಳು

ನಿಮ್ಮ ಮಗು ಎದೆಹಾಲನ್ನು ಸೇವಿಸುತ್ತಿದೆ ಎಂದಾದಲ್ಲಿ ಇತರ ಹಾಲಿನ ಉತ್ಪನ್ನಗಳನ್ನು ಅವರಿಗೆ ನೀಡಬೇಡಿ. ಮಗು ಈ ಹಾಲನ್ನು ಕುಡಿಯುತ್ತಿಲ್ಲ ಎಂದಾದಲ್ಲಿ ದಿನಕ್ಕೆ ಮೂರು ಬಾರಿಯಾದರೂ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಅವರಿಗೆ ನೀಡಿ. ಇದು 400 ಎಮ್ಎಲ್‌ಗಿಂತ ಹೆಚ್ಚುವರಿ ಆಗಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನಿಮ್ಮ ಮಗುವಿಗೆ ಹಾಲು ಮತ್ತು ಹಾಲಿನ ಇತರ ಉತ್ಪನ್ನಗಳನ್ನು ಈ ಪ್ರಮಾಣದಲ್ಲಿಯೇ ನೀವು ನೀಡಬೇಕು. ಹಾಲಿನಲ್ಲಿ ವಿಟಮಿನ್ ಎ ಅಂಶವಿಲ್ಲ ಇದನ್ನೇ ಮಗು ಅತಿಯಾದರೆ ಸೇವಿಸಿದರೆ ಇತರ ಪ್ರೊಟೀನ್ ಅಂಶಗಳು ಅವರಿಗೆ ದೊರೆಯುವುದಿಲ್ಲ. 

milk

ಕೊಬ್ಬು ಮತ್ತು ಸಕ್ಕರೆ

ಕೊಬ್ಬು ಮತ್ತು ಸಕ್ಕರೆ ಆಹಾರಗಳನ್ನು ಕೆಟ್ಟದ್ದು ಎಂಬುದಾಗಿ ಪರಿಗಣಿಸಲಾಗಿದೆ. ಆರೋಗ್ಯಕರ ಕೊಬ್ಬು ಮತ್ತು ಆಹಾರ ಪದಾರ್ಥಗಳನ್ನು ನೀವು ಮಗುವಿಗೆ ನೀಡಬೇಕು ಆದರೆ ಇದರಲ್ಲಿ ನ್ಯೂಟ್ರೀನ್ ಅಂಶಗಳಿದ್ದು ಇದು ನಿಮ್ಮ ಮಗುವಿಗೆ ಅತ್ಯವಶ್ಯಕ ಆಹಾರ ಪದಾರ್ಥಗಳು ಎಂದೆನಿಸಿವೆ. ಅಂತೆಯೇ ಇವುಗಳನ್ನು ಮಿತವಾಗಿ ನೀಡಿ ತುಪ್ಪ ಹಾಗೂ ಬೆಣ್ಣೆ ಉತ್ಪನ್ನಗಳನ್ನು ನಿಮ್ಮ ಮಗು ಸೇವಿಸಲಿ.

English summary

What Should You Feed Your Toddler

As a parent, it is only normal that you worry about your child's nutrition. It is said that children are most fuzzy about eating at the toddler age. They are restless during this phase of life and are also very picky when it comes to food. What should you feed your toddler? Parents of most toddlers are concerned about what to feed them, so that they get the most out of the meals that they have.
Story first published: Thursday, June 15, 2017, 8:01 [IST]
Subscribe Newsletter