ತಾಯಿ ಮಗುವಿನ ಬಾಂಧವ್ಯ-ವರ್ಣಿಸಲು ಪದಗಳೇ ಸಾಲದು!

By: manu
Subscribe to Boldsky

ತಾಯಿಯಾಗುವುದು ಯಾವುದೇ ಹೆಣ್ಣಿಗೆ ಅತ್ಯಂತ ಸಂತಸದ ಕ್ಷಣ, ಅದರಲ್ಲೂ ತನ್ನ ಕರುಳಿನ ಕುಡಿ ತನ್ನ ಹಾಲನ್ನು ಕುಡಿಯಲು ತೊಡಗುವ ಮೊದಲ ಗಂಟೆಗಳು ಅವಿಸ್ಮರಣೀಯ. ಹುಟ್ಟಿದ ಮಗು ಅತ್ಯಂತ ದುರ್ಬಲವಾಗಿದ್ದು ತಾಯಿಯೇ ಎದೆಗವಚಿ ಹಾಲನ್ನು ಕುಡಿಸಬೇಕಾಗುತ್ತದೆ. ಆದರೆ ನಿಸರ್ಗ ನೀಡಿರುವ ಯಾವುದೋ ಶಕ್ತಿ ಮಗುವನ್ನು ತಾಯಿ ಹಾಲು ಕುಡಿಯುವತ್ತ ತೆವಳುವಂತೆ ಮಾಡುತ್ತದೆ. ಈ ಶಕ್ತಿಯನ್ನೇ breast crawl ಎಂದು ಕರೆಯಲಾಗುತ್ತದೆ.

ವನ್ಯ ಸಸ್ತನಿಗಳು, ದನ ಕುರಿ ಮೊದಲಾದವುಗಳ ಮರಿಗಳು ಹುಟ್ಟಿದ ಕೆಲವೇ ನಿಮಿಷಗಳಲ್ಲಿ ನಡೆದಾಡುವಷ್ಟು ಶಕ್ತಿಯನ್ನು ಪಡೆದುಕೊಳ್ಳುತ್ತವೆ ಹಾಗೂ ತಾಯಿಯ ಕೆಚ್ಚಲಿಗೆ ಬಾಯಿ ಹಾಕುತ್ತವೆ. ಮನುಷ್ಯರಲ್ಲಿಯೂ ಈ ಗುಣವಿದ್ದರೂ ಈ ಶಕ್ತಿ ಕೊಂಚ ನಿಧಾನವಾಗಿ ಪಡೆಯುತ್ತದೆ.

ಸ್ತನದ ಗಾತ್ರ v/s ಎದೆ ಹಾಲು-ಈ ವಿಷಯದಲ್ಲಿ ತಪ್ಪು ಕಲ್ಪನೆ ಬೇಡ!

ತಾಯಿಯ ಹೊಟ್ಟೆಯ ಮೇಲೆ ಮಲಗಿಸಿದ ಮಗು ನಿಧಾನವಾಗಿ ತೆವಳುತ್ತಾ ತಾಯಿಹಾಲಿಗೆ ಬಾಯಿಹಾಕುವುದನ್ನು ಗಮನಿಸುವುದು ಅತ್ಯಂತ ರೋಮಾಂಚಕ ಅನುಭವ. ತಾಯಿಯಾದವಳು ಇದನ್ನು ಅನುಭವಿಸಿಯೇ ಅರಿಯಬೇಕೇ ಹೊರತು ಪದಗಳು ಇದನ್ನು ವರ್ಣಿಸಲು ಸಾಧ್ಯವಿಲ್ಲ. ಬನ್ನಿ, ಈ ಬಗ್ಗೆ ಕೆಲವು ಮಾಹಿತಿಗಳನ್ನು ಅರಿಯೋಣ....

#1

#1

ಮಗುವಿಗೆ ತಾಯಿಯ ಹಾಲನ್ನು ಎಲ್ಲಿಂದ ಪಡೆಯಬೇಕು ಎಂಬ ಅರಿವನ್ನು ಎಂಬುದು ನಿಸರ್ಗವೇ ನೀಡಿರುವ ಶಕ್ತಿಯಾಗಿದೆ. ಈ ಹಾಲನ್ನು ಪಡೆಯಲು ತೆವಳುವುದನ್ನೇ ಎದೆಹಾಲಿನತ್ತ ತವಳುವಿಕೆ (breast crawl) ಎಂದು ಕರೆಯಬಹುದು

#2

#2

ಈ ಬಗೆಯ ತೆವಳುವಿಕೆಯಿಂದ ಹಲವಾರು ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಡುತ್ತಾರೆ. ಮೊದಲಿಗೆ ಮಗು ತನ್ನ ತಾಯಿಯನ್ನು ಅರಿಯುವ ಶಕ್ತಿಯನ್ನು ಪಡೆದೇ ತನ್ನ ಕಣ್ಣುಗಳನ್ನು ಈ ಜಗತ್ತಿಗೆ ತೆರೆಯುತ್ತದೆ. ಇದರಿಂದ ತಾಯಿ ಮತ್ತು ಮಗುವಿನ ನಡುವಣ ಬಾಂಧವ್ಯ ಪ್ರಾರಂಭವಾಗುತ್ತದೆ. ಇದರಿಂದ ಹೆರಿಗೆಯ ಬಳಿಕ ಆವರಿಸುವ ಸ್ರಾವದಿಂದ ರಕ್ಷಣೆ ಪಡೆದಂತಾಗುತ್ತದೆ.

#3

#3

ಸ್ತನಗಳಲ್ಲಿ ಹಾಲು ತುಂಬಿರುವಾಗ ಮೊಲೆತೊಟ್ಟಿನಿಂದ ಒಂದು ವಿಶಿಷ್ಟ ಪರಿಮಳ ಸೂಸುತ್ತದೆ. ಮಗು ಈ ಪರಿಮಳವನ್ನು ಹಿಂಬಾಲಿಸಿ ಹಾಲನ್ನು ಪಡೆಯಲು ಪ್ರೇರಣೆ ನೀಡುತ್ತದೆ. ಈ ಪ್ರೇರಣೆಯಿಂದ ನಿಧಾನವಾಗಿ ತೆವಳಲು ಪ್ರಾರಂಭಿಸಿದ ಮಗು ಮೊಲೆತೊಟ್ಟನ್ನು ತಲುಪಲು ಯಶಸ್ವಿಯಾದರೆ ಈ ಮಗುವಿನಲ್ಲಿ ವಾಸನೆಯನ್ನು ಗ್ರಹಿಸುವ ಶಕ್ತಿ ಅತ್ಯುತ್ತಮವಾಗಿರುತ್ತದೆ.

#4

#4

ಮಗು ತಾಯಿಹಾಲನ್ನು ಕುಡಿಯುತ್ತಿರುವಾಗ ಈ ಅನುಭವದಿಂದ ತಾಯಿಯ ದೇಹದಲ್ಲಿ ಆಕ್ಸಿಟೋಸಿನ್ ಎಂಬ ರಸದೂತ ಬಿಡುಗಡೆಯಾಗುತ್ತದೆ. ಈ ರಸದೂತ ಅತ್ಯಂತ ಸುಖಕರ ಅನುಭವ ನೀಡುವ ರಸದೂತವಾಗಿದ್ದು ತಾಯಿಯಾದವಳು ಸಾರ್ಥಕ್ಯಭಾವನೆಯನ್ನು ಅನುಭವಿಸುತ್ತಾಳೆ. ಈ ರಸದೂತ ರಕ್ತಹೀನತೆಯಿಂದ ರಕ್ಷಿಸುತ್ತದೆ.

#5

#5

ಮಗು ಹೀಗೆ ತೆವಳಲು ಸಾಧ್ಯವಾದರೆ ಮಗುವಿನ ಸೊಂಟ, ನಿತಂಬ, ಕುತ್ತಿಗೆ, ಭುಜಗಳ ಸ್ನಾಯುಗಳು ಅತ್ಯುತ್ತಮ ವ್ಯಾಯಾಮವನ್ನು ಪಡೆಯುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಸುಲಭವಾಗಿ ಚಲಿಸಲು ಸಾಧ್ಯವಾಗುವಂತೆ ಬೆಳೆಯುತ್ತವೆ.

#6

#6

ಹೀಗೆ ಮಗು ಚಲಿಸುವುದು ಹಾಗೂ ತಾನೇ ತಾನಾಗಿ ಹಾಲನ್ನು ಕುಡಿಯಲು ಪ್ರಾರಂಭಿಸುವುದು ತಾಯಿ ಹಾಗೂ ಮಗುವಿನ ಆರೋಗ್ಯ ಉತ್ತಮವಾಗಿದೆ ಎಂಬುದನ್ನು ಸೂಚಿಸುತ್ತದೆ. ಆದರೆ ಸಿ-ಸೆಕ್ಷನ್ ಅಥವಾ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆಯಾದರೆ ಮಗುವನ್ನು ಹೆರಿಗೆಯಾದ ಬಳಿಕ ಕೊಂಚ ಹೊತ್ತಿನವರೆಗೆ ಅಗತ್ಯ ಕಾರಣಗಳಿಂದಾಗಿ ಮಗುವನ್ನು ತಾಯಿಯಿಂದ ಪ್ರತ್ಯೇಕವಾಗಿರಿಸಲಾಗುತ್ತದೆ. ಈ ಸಂದರ್ಭದಲ್ಲಿ ಎದೆಹಾಲಿನತ್ತ ತವಳುವಿಕೆ ಸಾಧ್ಯವಾಗಲಾರದು ಎಂದು ತಜ್ಞರು ತಿಳಿಸುತ್ತಾರೆ.

English summary

What Is Breast Crawl?

If you have heard of the term breast crawl, you must have wondered what it means. It occurs during the initial phase of breast feeding. A new born baby has the ability to know that food is in the milk provided by the mother. When the baby is allowed to sit near the mother, he or she can crawl till the breast and consume the milk. Here are some quick facts.
Subscribe Newsletter