For Quick Alerts
ALLOW NOTIFICATIONS  
For Daily Alerts

  ಮಗು ಅತೀ ಹೆಚ್ಚೇ ಎದೆಹಾಲು ಕುಡಿಯುತ್ತಿದೆಯೇ? ಹಾಗಾದರೆ ಇತ್ತ ಗಮನಿಸಿ...

  By Manu
  |

  ಹೆರಿಗೆಯ ಬಳಿಕ ಮಗು ಎದೆಹಾಲನ್ನೇ ಅವಲಂಬಿಸಿರುವ ಸಮಯದಲ್ಲಿ ಮಗು ಎಷ್ಟು ಹಾಲು ಕುಡಿಯಬೇಕು ಎಂಬುದು ಹೆಚ್ಚಿನ ತಾಯಂದಿರಿಗೆ ಎದುರಾಗುವ ಪ್ರಶ್ನೆಯಾಗಿದೆ. ಮಗುವಿನ ಆರೋಗ್ಯ ಉತ್ತಮವಾಗಿರಬೇಕಾದರೆ ಎಷ್ಟು ಹಾಲು ಕುಡಿಸಬೇಕು? ಒಂದು ವೇಳೆ ಇದಕ್ಕೂ ಹೆಚ್ಚು ಹಾಲನ್ನು ಮಗು ಕುಡಿಯುತ್ತಿದ್ದರೆ? ಏಕೆಂದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸ್ಥೂಲಕಾಯ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಹೆಚ್ಚಿನ ತಾಯಂದಿರ ಆತಂಕವನ್ನು ಹೆಚ್ಚಿಸುತ್ತಿದೆ.

  ಕೆಲವು ಆರೋಗ್ಯ ತಜ್ಞರ ಪ್ರಕಾರ ಮಗುವಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ಹಾಲು ಕುಡಿಯಲು ಸಾಧ್ಯವೇ ಇಲ್ಲ. ಆದರೂ, ಒಂದು ವೇಳೆ ನಿಮ್ಮ ಮಗು ಅಗತ್ಯಕ್ಕೂ ಹೆಚ್ಚು ಹಾಲನ್ನು ಕುಡಿಯುತ್ತಿದೆ ಎಂದೆನ್ನಿಸಿದರೆ ಇಂದಿನ ಲೇಖನದಲ್ಲಿ ಒದಗಿಸಲಾಗಿರುವ ಮಾಹಿತಿಗಳು ನಿಮ್ಮ ಬೇಗುದಿಯನ್ನು ನಿವಾರಿಸಬಹುದು...

  ಒಂದು ವೇಳೆ ಅಗತ್ಯಕ್ಕೂ ಹೆಚ್ಚು ಹಾಲನ್ನು ಮಗು ಕುಡಿದರೆ ಏನಾಗುತ್ತದೆ?

  ಒಂದು ವೇಳೆ ಅಗತ್ಯಕ್ಕೂ ಹೆಚ್ಚು ಹಾಲನ್ನು ಮಗು ಕುಡಿದರೆ ಏನಾಗುತ್ತದೆ?

  ಇದರ ಪ್ರಥಮ ಸೂಚನೆ ಎಂದರೆ ಮಗು ಹಾಲನ್ನು ಬಾಯಿಯಿಂದ ಹೊರಚೆಲ್ಲುವುದು. ಮಗುವಿಗೆ ಹೊಟ್ಟೆ ತುಂಬಿದೆ ಎಂದೆನಿಸಿದ ಬಳಿಕ ಕುಡಿಯುವುದನ್ನು ತಾನೇ ನಿಲ್ಲಿಸುತ್ತದೆ. ಒಂದು ವೇಳೆ ಕುಡಿದರೂ ಇದನ್ನು ನುಂಗದೇ ಹೊರಚೆಲ್ಲಿಬಿಡುತ್ತದೆ. ಇದರ ಅರ್ಥ ಮಗುವಿನ ಹೊಟ್ಟೆ ತುಂಬಿದೆ ಎಂದಾಗಿದೆ.

  ಇದು ಯಾವಾಗಲೂ ಆಗುತ್ತದೆಯೇ?

  ಇದು ಯಾವಾಗಲೂ ಆಗುತ್ತದೆಯೇ?

  ಒಂದು ವೇಳೆ ನಿಮ್ಮ ಮಗುವಿನ ತೂಕ ಆರೋಗ್ಯಕರ ಮಿತಿಯೊಳಗೆ ಇದ್ದರೆ ಹಾಲನ್ನು ಹೊರಚೆಲ್ಲುವುದು ಅಷ್ಟಾಗಿ ಕಾಳಜಿಯ ವಿಷಯವಾಗಲಾರದು. ಒಂದು ವೇಳೆ ಪ್ರತಿ ಬಾರಿ ಹಾಲು ಕುಡಿಸುವಾಗಲೂ ಮಗು ಹಾಲನ್ನು ಹೊರಚೆಲ್ಲುತ್ತಿದ್ದರೆ ಮಾತ್ರ ಕಾಳಜಿಗೆ ಕಾರಣವಾಗಿದೆ.

  ಈ ಕ್ರಿಯೆ ನಿಮ್ಮ ಮಗುವಿನ ತೂಕವನ್ನು ಹೆಚ್ಚಿಸಬಲ್ಲುದೇ?

  ಈ ಕ್ರಿಯೆ ನಿಮ್ಮ ಮಗುವಿನ ತೂಕವನ್ನು ಹೆಚ್ಚಿಸಬಲ್ಲುದೇ?

  ಹೌದು, ಅಗತ್ಯಕ್ಕೂ ಹೆಚ್ಚು ಹಾಲನ್ನು ಕುಡಿದರೆ ಖಂಡಿತವಾಗಿಯೂ ಮಗುವಿನ ತೂಕ ಹೆಚ್ಚುತ್ತದೆ. ಆದರೆ ಮಗು ಬೆಳೆಯುತ್ತಾ ಹೋದಂತೆ ನಿಧಾನವಾಗಿ ಇತರ ಆಹಾರಗಳನ್ನೂ ಸೇವಿಸುತ್ತಾ ಹೋಗುತ್ತಿದ್ದಂತೆ ದೇಹದ ತೂಕವೂ ಅನುಗುಣವಾಗಿ ಹೆಚ್ಚುತ್ತದೆ. ವಾಸ್ತವವಾಗಿ ತಾಯಿಹಾಲಿನಲ್ಲಿ ಮಗುವಿನ ಬೆಳವಣಿಗೆಗೆ ಎಷ್ಟು ಅಗತ್ಯವಾದ ಪೋಷಕಾಂಶಗಳಿರುವಂತೆಯೇ ತೂಕ ಹೆಚ್ಚದೇ ಇರುವಂತಹ ಪೋಷಕಾಂಶಗಳೂ ಇವೆ!

  ಈಗೇನು ಮಾಡುವುದು?

  ಈಗೇನು ಮಾಡುವುದು?

  ಮಗು ಯಾವಾಗ ಹಾಲಿಗಾಗಿ ಅಳುತ್ತದೆಯೋ ಆಗೆಲ್ಲಾ ಯಾವುದೇ ಅಳುಕಿಲ್ಲದೇ ಮಗು ಎಷ್ಟು ಕುಡಿಯುತ್ತದೆಯೋ ಅಷ್ಟೂ ಕುಡಿಯಲು ಅನುವು ಮಾಡಿಕೊಡಿ. ಹೆಚ್ಚು ಕುಡಿಯುತ್ತದೆ ಎಂಬ ಯಾವುದೇ ಯೋಚನೆ ಮಾಡದಿರಿ.

  ನಂತರ ಏನಾಗುತ್ತದೆ?

  ನಂತರ ಏನಾಗುತ್ತದೆ?

  ಒಂದು ವೇಳೆ ಕೆಲವು ಮಕ್ಕಳು ಅತಿ ಹೆಚ್ಚು ಹಾಲು ಕುಡಿದು ತೂಕ ಹೆಚ್ಚಿಸಿಕೊಂಡಿದ್ದರೂ ಕಾಲಕ್ರಮೇಣ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ ಮಕ್ಕಳ ಆಟೋಟ, ನಡಿಗೆ, ಓಟ ಮೊದಲಾದವು ಕೊಬ್ಬನ್ನು ಕರಗಿಸಿ ಸ್ನಾಯುಗಳು ಬೆಳೆಯಲು ಅನುವು ಮಾಡಿಕೊಡುತ್ತವೆ. ಈ ಚಟುವಟಿಕೆಗಳು ಕ್ಯಾಲೋರಿಗಳನ್ನು ದಹಿಸಿ ಸ್ಥೂಲಕಾಯವನ್ನು ಇಲ್ಲವಾಗಿಸುತ್ತವೆ. ಹಾಗಾಗಿ ಮಕ್ಕಳನ್ನು ಮನೆಯೊಳಗೇ ವೀಡಿಯೋ ಗೇಮ್ ನಲ್ಲಿ ಬಂಧಿಸಿಡದೇ ಹೊರಗೆ ಸಾಧ್ಯವಾದಷ್ಟು ಆಟವಾಡಲು ಬಿಡಿ.

  ವೈದ್ಯರನ್ನು ಭೇಟಿಯಾಗುವ ಅಗತ್ಯವಿಲ್ಲವೇ?

  ವೈದ್ಯರನ್ನು ಭೇಟಿಯಾಗುವ ಅಗತ್ಯವಿಲ್ಲವೇ?

  ಒಂದು ವೇಳೆ ನಿಮ್ಮ ಮಗು ಅಗತ್ಯಕ್ಕೂ ಹೆಚ್ಚು ಹಾಲು ಕುಡಿಯುತ್ತಿದೆ ಹಾಗೂ ಹೆಚ್ಚಿನದ್ದನ್ನು ಹೊರಕ್ಕುಗುಳುತ್ತಿದೆ ಎಂದೆನಿಸಿದಾಗ ಮಾತ್ರ ವೈದ್ಯರನ್ನು ಭೇಟಿಯಾಗುವುದು ಅಗತ್ಯ. ವೈದ್ಯರು ಸೂಕ್ತ ಸಲಹೆ ನೀಡಬಲ್ಲರು. ಇತರ ಸಂದರ್ಭದಲ್ಲಿ ಇದು ಸಾಮಾನ್ಯವಾಗಿದೆ.

  English summary

  What If Your Baby Drinks Too Much Of Breast milk?

  During the breastfeeding stage, one concern may surely crop up. How much is too much? What is the ideal quantity of milk to be offered to the baby? What if the baby drinks milk in excess? Many women worry about such concerns as childhood obesity is one big issue that many children of this generation are facing. Some health experts say that over consumption isn't possible during the breastfeeding stage. But still, if you think your baby is drinking more milk then normal, here are some facts that may help you.
  Story first published: Friday, September 15, 2017, 23:31 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more