Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಮಗುವಿನ ಕೂದಲು ಕತ್ತರಿಸುವ ಮುನ್ನ ಮುನ್ನೆಚ್ಚರಿಕೆ ಹೀಗಿರಲಿ...
ನಿಮ್ಮ ಮನೆಯಲ್ಲಿ ಪುಟಾಣಿ ಕಂದಮ್ಮನಿದ್ದರೆ ಅದಕ್ಕಾಗಿ ತೆಗೆದುಕೊಳ್ಳುವ ಕಾಳಜಿ ಅನುಸರಿಸುವ ಕ್ರಮ ಬೇರೆಯದೇ ಆಗಿರುತ್ತದೆ ಅಲ್ಲವೇ? ಮಗುವಿನ ಸಣ್ಣ ಸಣ್ಣ ಅಂಶಗಳಿಗೂ ನೀವು ಆದ್ಯತೆಯನ್ನು ನೀಡಿ ಅತ್ಯುತ್ತಮವಾಗಿ ಪೂರೈಸುವ ಮನದಾಸೆ ನಿಮ್ಮದಾಗಿರುತ್ತದೆ. ಕಂದನ ಜವಬ್ದಾರಿಯನ್ನು ತಾಯಿ ತಂದೆ ಸರಿಸಮನಾಗಿ ತೆಗೆದುಕೊಂಡಾಗ ಮಾತ್ರವೇ ಆ ಮಗುವಿಗೆ ತೃಪ್ತಿ ನೆಮ್ಮದಿ ಉಂಟಾಗುವುದು. ಇಬ್ಬರ ವಾತ್ಯಲ್ಯ ಪ್ರೀತಿ ಬೆಳೆಯುವ ಮಗುವಿಗೆ ಹೆಚ್ಚು ಸಹಕಾರಿಯಾದುದು.
ಆದ್ದರಿಂದ ನಿಮ್ಮ ಮಗುವಿನ ಪ್ರತಿಯೊಂದು ಕೆಲಸ ಕಾರ್ಯಗಳನ್ನು ತಾಯಿ ತಂದೆ ಸರಿಸಮನಾಗಿ ಪೂರೈಸಬೇಕು. ನಿಮ್ಮ ಕೂಸು ನಿಮ್ಮ ಅದ್ಭುತ ಪ್ರಪಂಚವಿದ್ದಂತೆ. ಅದರ ತುಂಟಾಟ, ಮಾತು, ನಗು, ಕೀಟಲೆಗಳನ್ನು ನೀವು ಅನುಭವಿಸಲು ಅದರೊಡನೆ ಇರಲೇಬೇಕು. ಆಗ ಮಾತ್ರವೇ ನಿಮ್ಮಲ್ಲಿರುವ ಪುಟ್ಟ ಕಂದಮ್ಮ ಹೊರಬರುತ್ತದೆ ಮತ್ತು ಆ ಮಗುವಿಗೆ ಜೊತೆಯಾಗುತ್ತದೆ.
ಇಂದಿನ ಲೇಖನದಲ್ಲಿ ನಿಮ್ಮ ಮಗುವಿನ ಹೇರ್ ಕಟ್ ಕುರಿತಾಗಿ ಕೆಲವೊಂದು ಕಿವಿಮಾತುಗಳನ್ನು ಹೇಳಲು ಇಚ್ಛಿಸುತ್ತೇವೆ. ಮಗುವಿನ ಕೂದಲು ಕತ್ತರಿಸುವ ಮುಂಚೆ ನೀವು ಪಾಲಿಸಲೇಬೇಕಾದ ಕೆಲವೊಂದು ಕಿವಿಮಾತುಗಳಿವೆ. ಪೋಷಕರಿಬ್ಬರೂ ಈ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕು...ಮುಂದೆ ಓದಿ

ಉತ್ತಮ ಸಲೂನ್ ಆರಿಸಿಕೊಳ್ಳಿ
ನಿಮ್ಮ ಮಗುವಿನ ಹೇರ್ ಕಟ್ ವಿಷಯದಲ್ಲಿ ಉತ್ತಮ ಸಲೂನ್ ಆರಿಸಿಕೊಳ್ಳಿ. ತಜ್ಞ ಕೂದಲು ಕತ್ತರಿಸುವ ವ್ಯಕ್ತಿಯೆಡೆಗೆ ನಿಮ್ಮ ಮಗುವನ್ನು ಕರೆದೊಯ್ಯಿರಿ. ನಿಮ್ಮ ಸ್ನೇಹಿತರನ್ನು ಈ ಬಗ್ಗೆ ಕೇಳಿ ಅರಿತುಕೊಳ್ಳಿ.

ಸಲೂನ್ ಹೇಗಿದೆ ಎಂಬುದನ್ನು ನೋಡಿಕೊಳ್ಳಿ
ಸಲೂನ್ ಹೇಗಿದೆ ಎಂಬುದನ್ನು ಪರಿಶೀಲಿಸಿಕೊಳ್ಳಿ. ಮಕ್ಕಳ ಕೂದಲು ಕತ್ತರಿಸುವ ಸ್ಥಳ ಆದಷ್ಟು ಶಾಂತವಾಗಿದ್ದರೆ ಉತ್ತಮವಾಗಿರುತ್ತದೆ. ಮಗುವಿಗೆ ಆ ಸ್ಥಳ ಇಷ್ಟವಾಗಿರಬೇಕು.

ಮಗುವಿಗೆ ಕಿರಿಕಿರಿಯಾಗದಂತೆ ನೋಡಿಕೊಳ್ಳಿ
ಮನೆಯವರೆಲ್ಲರೂ ಕೂದಲು ಕತ್ತರಿಸುವ ವಿಷಯದಲ್ಲಿ ಚರ್ಚಿಸದಿರುವುದು ಉತ್ತಮ. ನಿಮ್ಮ ಮಗುವಿನ ಕೇಶ ಶೈಲಿ ಹೇಗಿರಬೇಕು ಎಂಬುದು ಕತ್ತರಿಸುವವರಿಗೆ ತಿಳಿದಿರುತ್ತದೆ. ಆದಷ್ಟು ಶಾಂತಚಿತ್ತರಾಗಿ ಈ ಕೆಲಸವನ್ನು ನಿರ್ವಹಿಸಿ.

ಅಮ್ಮನ ಸಾನಿಧ್ಯ
ಆದಷ್ಟು ಹೇರ್ ಕಟ್ ಮಾಡುವ ಸಂದರ್ಭದಲ್ಲಿ ಅಮ್ಮ ಅಥವಾ ಅಪ್ಪ ಜೊತೆಗಿರಿ. ಇದರಿಂದ ಮಗುವಿಗೆ ಹಿತವೆನಿಸುತ್ತದೆ ಮತ್ತು ಅಜ್ಞಾತ ವ್ಯಕ್ತಿಯ ಕೈಯಲ್ಲಿ ನಾವಿಲ್ಲ ಎಂಬುದು ಅವರಿಗೆ ಅರಿವಾಗುತ್ತದೆ.

ಹೆಚ್ಚುವರಿ ಬಟ್ಟೆಗಳನ್ನು ಕೊಂಡೊಯ್ಯಿರಿ
ಹೇರ್ ಕಟ್ ಮಾಡುವಾಗ ಮಗು ತೊಟ್ಟಿರುವ ಬಟ್ಟೆಗಳು ಕೊಳಕಾಗುತ್ತವೆ. ಕೂದಲು ತೊಳೆಯುವ ಕ್ರಿಯೆ ಇರುವುದರಿಂದ ಮಗುವಿನ ಬಟ್ಟೆ ಒದ್ದೆಯಾಗುತ್ತದೆ. ಇದರಿಂದ ಹೆಚ್ಚುವರಿ ಬಟ್ಟೆಗಳನ್ನು ಕೊಂಡೊಯ್ಯಿರಿ.

ಮಗುವಿನ ಇಷ್ಟದ ಆಟಿಕೆಗಳನ್ನು ಕೊಂಡೊಯ್ಯಿರಿ
ಮಗುವಿನ ಕೂದಲು ಕತ್ತರಿಸುವಾಗ ಅದರ ಇಷ್ಟದ ಆಟಿಕೆ ಕೈಯಲ್ಲಿದ್ದರೆ ಹಟ ಮಾಡುವುದು ಅಳುವುದನ್ನು ಕಡಿಮೆ ಮಾಡುತ್ತದೆ. ಇದು ಗೊಂಬೆ ಅಥವಾ ಚೆಂಡೇ ಆಗಿರಲಿ. ಮಗುವಿನ ಕೈಗೆ ಇದನ್ನು ನೀಡಿ.

ಅಪಾಯಿಂಟ್‌ಮೆಂಟ್ ಬೇಡ
ಆದಷ್ಟು ಮಗುವಿನ ಹೇರ್ ಕಟ್ಟಿಂಗ್‌ನಲ್ಲಿ ಗಡಿಬಿಡಿ ಮಾಡಬೇಡಿ. ಹೇರ್ ಕಟ್ ಮಾಡುವವರು ಸಾಕಷ್ಟು ಸಮಯವನ್ನು ತೆಗೆದುಕೊಂಡು ಈ ಕೆಲಸವನ್ನು ನೆರವೇರಿಸಲಿ. ಇದರಿಂದ ಮಗುವಿಗೆ ಅವರು ನಿರಾಳವಾಗಿ ಹೇರ್ ಕಟ್ ಮಾಡಬಹುದು.

ಆಹಾರ ಮತ್ತು ಪಾನೀಯವನ್ನು ಕೊಂಡೊಯ್ಯಿರಿ
ಮಗುವಿಗೆ ಈ ಸಮಯದಲ್ಲಿ ಹಸಿವಾಗುವುದು ಸಹಜವಾದ್ದರಿಂದ ಆಹಾರ ಮತ್ತು ನೀರನ್ನು ನಿಮ್ಮ ಕೈಯಲ್ಲಿ ಹಿಡಿದುಕೊಳ್ಳಿ. ಹಸಿವಾಗದೇ ಇದ್ದರೂ ಕೊನೆಗೆ ತಿನಿಸುಗಳನ್ನು ಮಗುವಿಗೆ ನೀಡುವುದರಿಂದ ಅವುಗಳು ಖುಷಿ ಪಡುತ್ತವೆ.

ತಾಳ್ಮೆ ಇರಲಿ
ಮಗುವಿನ ಹೇರ್ ಕಟ್ಟಿಂಗ್ ಸಮಯದಲ್ಲಿ ನೀವು ತಾಳ್ಮೆಯನ್ನು ಹೊಂದಿರಬೇಕು. ಹೇರ್ ಸ್ಪೆಷಲಿಸ್ಟ್ ಸಾವಧಾನವಾಗಿ ಮಗುವಿನ ಕೂದಲನ್ನು ತೆಗೆಯುತ್ತಿರುತ್ತಾರೆ. ನೀವು ತರಾತುರಿಯನ್ನು ಮಾಡಿದಲ್ಲಿ ಮಗುವಿಗೆ ಅಪಾಯವಾಗುವ ಸಂಭವವಿದೆ.

ಮಗುವಿನ ಇಷ್ಟದ ವಿಷಯಗಳಲ್ಲಿ ಅವರನ್ನು ವ್ಯಸ್ತರಾಗಿಸಿ
ಮಗುವಿನ ಕೂದಲು ತೆಗೆಸುವ ಸಮಯದಲ್ಲಿ ಆದಷ್ಟು ಅವರಿಗೆ ಇಷ್ಟವಾಗುವ ಅಂಶಗಳನ್ನು ಮಾಡಿ. ಜೋಗುಳ ಹಾಡುವುದು, ಅಜ್ಜಂದಿರು ಕಥೆ ಹೇಳುವುದು ಆಟ ಆಡಿಸುವುದು ಮೊದಲಾದ ಚಟುವಟಿಕೆಗಳನ್ನು ನಿರ್ವಹಿಸಿ.

ಮಗುವಿನ ಪ್ರೀತಿಪಾತ್ರರನ್ನು ಕರೆದೊಯ್ಯಿರಿ
ಮಗುವಿಗೆ ತಂದೆ ತಾಯಿ ಮಾತ್ರವಲ್ಲದೆ ಕುಟುಂಬದಲ್ಲಿ ಇತರ ವ್ಯಕ್ತಿಗಳನ್ನು ಹಚ್ಚಿಕೊಂಡಿರುತ್ತಾರೆ. ಅವರ ಅಜ್ಜ ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ಪಕ್ಕದ ಮನೆಯವರು ಹೀಗೆ. ಮಗುವಿಗೆ ಇಷ್ಟವಾದವರು ಹೇರ್ ಕಟ್ ಸಮಯದಲ್ಲಿ ಇದ್ದಾಗ ಅದಕ್ಕೆ ತಾನು ಅಪರಿಚಿತ ಜಾಗದಲ್ಲಿ ಇದ್ದೇನೆ ಎಂಬುದು ಅರಿವಾಗುವುದೇ ಇಲ್ಲ. ನಿಮ್ಮ ಮಗು ತುಂಬಾ ಹಠ ಮಾಡುತ್ತಿದೆ ಎಂಬ ಸಂದರ್ಭದಲ್ಲಿ ಮಾತ್ರವೇ ಇವರುಗಳನ್ನು ನಿಮ್ಮೊಂದಿಗೆ ವಿನಂತಿಸಿ ಕರೆದೊಯ್ಯಿರಿ.

ಮಗುವನ್ನು ಒಂದೇ ಕಡೆ ಕುಳ್ಳಿರಿಸದಿರಿ
ಮಗುವನ್ನು ಹೇರ್ ಕಟ್ ಮಾಡುವ ಆಸನದಲ್ಲಿ ಕುಳ್ಳಿರಿಸದಿರಿ. ಇದರಿಂದ ಅವರಿಗೆ ಹಿಂಸೆಯಾಗುತ್ತದೆ. ಕೆಲವೊಂದು ಬ್ಯೂಟಿಪಾರ್ಲರ್‌ಗಳು ಮಗುವಿಗೆ ರೈಡ್ ಮಾಡಲು ಆಟಿಕೆ ಕಾರುಗಳನ್ನು ನೀಡುತ್ತವೆ, ಇದರಿಂದ ಅವುಗಳು ಓಡಾಟ ನಡೆಸಿಕೊಂಡು ತಮ್ಮ ಹೇರ್ ಕಟ್ಟಿಂಗ್ ಅನ್ನು ಮಾಡಿಕೊಳ್ಳಬಹುದು. ಮಗು ಆಚೀಚೆ ಓಡಾಡುತ್ತಾ ಸ್ವತಂತ್ರರಾಗಿರಲಿ.

ಹೇರ್ ಸ್ಟೈಲಿಸ್ಟ್ ಜೊತೆ ಮುಂಚಿತವಾಗಿ ಸಂಭಾಷಿಸಿ
ಮಗುವಿನ ಕೂದಲನ್ನು ತೊಳೆಯಬೇಕೇ, ಶಾಂಪೂ ಹಚ್ಚಬೇಕೇ ಎಂಬುದಾಗಿ ಹೇರ್ ಸ್ಟೈಲಿಸ್ಟ್ ಜೊತೆ ಮಾತನಾಡಿ. ಕೂದಲು ಕಟ್ ಮಾಡುವ ಮುಂಚೆ ಕೆಲವೊಂದು ಅಗತ್ಯ ಅಂಶಗಳನ್ನು ಪಾಲಿಸಬೇಕು.



Click it and Unblock the Notifications