For Quick Alerts
ALLOW NOTIFICATIONS  
For Daily Alerts

ಮಗುವಿಗೂ ಟೀ ಕುಡಿಸುತ್ತಿದ್ದಿರಾ? ಹಾಗಾದರೆ ಇಂದೇ ನಿಲ್ಲಿಸಿ!

By Arshad
|

ವಿಶ್ವದ ಅತಿ ನೆಚ್ಚಿನ ಪೇಯವಾದ ಟೀ ಭಾರತದಲ್ಲಿಯೂ ಹೆಚ್ಚು ಜನಪ್ರಿಯವಾಗಿದೆ. ಟೀ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುವುದು, ವಿವಿಧ ಋತುಗಳಲ್ಲಿ ಎದುರಾಗುವ ಆರೋಗ್ಯ ತೊಂದರೆಗಳನ್ನು ತಡೆಯುವುದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು, ಆಲಸಿತನ ಓಡಿಸುವುದು, ನಿದ್ದೆ ಬರದಂತೆ ತಡೆಯುವುದು ಇತ್ಯಾದಿ ಹತ್ತು ಹಲವು ಪ್ರಯೋಜನಗಳಿವೆ. ಹಿರಿಯರಿಗೆ ಈ ಗುಣಗಳೇನೋ ಒಪ್ಪುವಂತಿವೆ, ಆದರೆ ಚಿಕ್ಕ ಮಕ್ಕಳಿಗೆ?

ಎಷ್ಟೋ ಮನೆಗಳಲ್ಲಿ ಇನ್ನೂ ಹಾಲುಹಲ್ಲು ಮೂಡಿರದ ಚಿಕ್ಕಮಗುವಿಗೂ ಹಾಲಿನ ಜೊತೆಜೊತೆಗೇ ಕೊಂಚ ಟೀ ಅನ್ನೂ ಕುಡಿಸುತ್ತಾರೆ. ಟೀ ಅಭ್ಯಾಸ ಚಿಕ್ಕಂದಿನಿಂದ ಮಾಡಿಸಿದರೆ ದೊಡ್ಡವರಾಗುವ ವೇಳೆಗೆ ಟೀ ಯಲ್ಲಿರುವ ಉತ್ತಮ ಗುಣಗಳನ್ನು ಹೆಚ್ಚು ಹೆಚ್ಚಾಗಿ ಪಡೆದಿರುತ್ತಾರೆ ಎಂದು ಇವರಿಗೆ ಟೀ ಕುಡಿಸುವ ತಾಯಂದಿರು ಅಂದುಕೊಂಡಿದ್ದಾರೆ. ಅದ್ಭುತ ಗುಣದ ಈ 12 ಬಗೆಯ ಟೀ ಟೇಸ್ಟ್ ಮಾಡಿರುವಿರಾ?

ಆದರೆ ಮಕ್ಕಳ ತಜ್ಞರ ಪ್ರಕಾರ ಈ ಅಭ್ಯಾಸ ತಪ್ಪು. ಏಕೆಂದರೆ ಪುಟ್ಟಮಕ್ಕಳ ದೇಹದಲ್ಲಿ ಎಷ್ಟೋ ಅಂಗಗಳು ಪೂರ್ಣವಾಗಿ ಬೆಳೆದಿರುವುದೇ ಇಲ್ಲ. ತಾಯಿಹಾಲನ್ನು ಮಾತ್ರ ಪೂರ್ಣವಾಗಿ ಜೀರ್ಣಿಸಿಕೊಳ್ಳಬಲ್ಲ ಮಕ್ಕಳ ಜೀರ್ಣಾಂಗಗಳು ಹಸುವಿನ ಹಾಲನ್ನೂ ಪೂರ್ಣವಾಗಿ ಜೀರ್ಣಿಸಿಕೊಳ್ಳಲಾರವು.

ಆದ್ದರಿಂದ ಟೀ ಹಿರಿಯರಿಗೆ ಎಷ್ಟೇ ಒಳ್ಳೆಯದಾಗಿದ್ದರೂ ಇದರ ಗುಣಗಳನ್ನು ಪುಟ್ಟ ಕಂದನ ಜೀರ್ಣಾಂಗಗಳು ಪಡೆದುಕೊಳ್ಳಲಾರವು. ಕೆಲವರು ಟೀಯಲ್ಲಿ ಮುಳುಗಿಸಿ ಮೃದುಗೊಳಿಸಿದ ಬಿಸ್ಕತ್ತನ್ನೂ ತಿನ್ನಿಸುತ್ತಾರೆ. ಈ ಅಭ್ಯಾಸ ಕೂಡಾ ತಪ್ಪು. ಈ ಅಭ್ಯಾಸವೇಕೆ ಸಲ್ಲದು ಎಂಬ ಪ್ರಶ್ನೆಗೆ ಮಕ್ಕಳ ತಜ್ಞರು ಯಾವ ಉತ್ತರ ನೀಡುತ್ತಾರೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ, ಮುಂದೆ ಓದಿ...

ಟೀ ಕೇವಲ ಪ್ರೌಢರಿಗೆ ಮಾತ್ರ ಸಲ್ಲುವ ಆಹಾರವಾಗಿದೆ

ಟೀ ಸೇವನೆಯಿಂದ ಕೆಲವಾರು ಪ್ರಯೋಜನಗಳಿದ್ದರೂ ಕೆಲವು ಅವಗುಣಗಳೂ ಇವೆ. ಇದರಲ್ಲಿ ಪ್ರಮುಖವಾದುದು ಕ್ಯಾಲ್ಸಿಯಂ ಅನ್ನು ನಮ್ಮ ಮೂಳೆಗಳು ಹೀರಿಕೊಳ್ಳುವ ಪ್ರಕ್ರಿಯೆಗೆ ಅಡ್ಡಗಾಲು ಹಾಕುವುದು.

ಕ್ಯಾಲ್ಸಿಯಂ ಕಡಿಮೆ ಇದ್ದರೆ ಹಾಲು ಹೆಚ್ಚು ಸೇವಿಸಲು ವೈದ್ಯರು ಸಲಹೆ ಮಾಡುತ್ತಾರೆ. ಆದರೆ ಹಾಲು ಹೆಚ್ಚು ಸೇವಿಸುವ ಮೂಲಕ ಕ್ಯಾಲ್ಸಿಯಂ ಪಡೆಯಲು ಸಾಧ್ಯವಿಲ್ಲ. ಚಹಾ ಚಟದಿಂದ ಸಿಗುವ 10 ಪ್ರಯೋಜನಗಳು!

ಏಕೆಂದರೆ ಹಾಲಿನಲಿರುವ ಕ್ಯಾಲ್ಸಿಯಂ ಅನ್ನು ಮೂಳೆಗಳು ಹೀರಿಕೊಳ್ಳಬೇಕಾದರೆ ವಿಟಮಿನ್ ಕೆ ಬೇಕೇ ಬೇಕು. ಇದು ಜೇನಿನಲ್ಲಿರುವ ಕಾರಣ ಹಾಲು ಮತ್ತು ಜೇನು ಬೆರೆಸಿ ಕುಡಿದರೆ ಉತ್ತಮ. ಆದರೆ ಆ ಬಳಿಕ ಕುಡಿಯುವ ಟೀ ಈ ವಿಟಮಿನ್ ಕೆ ಅನ್ನು ಬಳಸಿಬಿಡುತ್ತದೆ. ಪರಿಣಾಮವಾಗಿ ಕ್ಯಾಲ್ಸಿಯಂ ಹೀರಿಕೊಳ್ಳಲು ಮೂಳೆಗಳಿಗೆ ಸಾಧ್ಯವಾಗುವುದಿಲ್ಲ.

ಅದರಲ್ಲೂ ಬೆಳವಣಿಗೆಯ ಹಂತದಲ್ಲಿರುವ ಮಕ್ಕಳ ಮೂಳೆಗಳಿಗೆ ಕ್ಯಾಲ್ಸಿಯಂ ಗರಿಷ್ಠ ಪ್ರಮಾಣದಲ್ಲಿ ಅಗತ್ಯವಿದೆ. ಟೀ ಕುಡಿಸುವ ಮೂಲಕ ನಾವೇ ನಮ್ಮ ಕೈಯಾರೆ ಇವರ ಬೆಳವಣಿಗೆಗೆ ಅಡ್ಡಗಾಲು ಇಡುತ್ತಿದ್ದೇವೆ.

ಬರೆಯ ಮೂಳೆಗಳಿಗೆ ಮಾತ್ರವಲ್ಲ, ಮೆದುಳು, ಸ್ನಾಯುಗಳು, ರಕ್ತನಾಳ ಮತ್ತು ಒಟ್ಟಾರೆ ಶರೀರದ ಬೆಳವಣಿಗೆಗೂ ಬಾಧತೆ ಉಂಟಾಗುತ್ತದೆ. ಈ ಬಗ್ಗೆ ನಡೆಸಿದ ಸಂಶೋಧನೆಗಳ ಮೂಲಕ ಬೆಳೆಯುತ್ತಿರುವ ಮಕ್ಕಳು ಟೀ ಕುಡಿಯುವುದರಿಂದ ಕೆಳಗಿನ ತೊಂದರೆಗಳು ಕಂಡುಬರಬಹುದು:

* ಕಡಿಮೆ ಮೂಳೆಗಳ ಸಾಂದ್ರತೆ (ಅಂದರೆ ಆ ವಯಸ್ಸಿಗೆ ಮೂಳೆಗಳು ಎಷ್ಟು ಗಾತ್ರ ಹೊಂದಿರಬೇಕಾಗಿತ್ತೋ ಅಷ್ಟು ಹೊಂದಿದ್ದರೂ ಅಗತ್ಯವಿದ್ದಷ್ಟು ಭಾರವಿಲ್ಲದಿರುವುದು)

* ಮೈಕೈ ನೋವು, ವಿಶೇಷವಾಗಿ ಹಿಮ್ಮಡಿ ಮತ್ತು ಮೊಣಕಾಲ ಕೆಳಗಿನ ಭಾಗ ಮತ್ತು ಪಾದದ ಮೂಳೆಯಲ್ಲಿ ನೋವು ಕಾಣಿಸಿಕೊಳ್ಳುವುದು

* ಕಲಿಕಾ ಸಾಮರ್ಥ್ಯ ಕಡಿಮೆಯಾಗುವುದು, ಚಡಪಡಿಕೆ ಮತ್ತು ಇತರ ಭಾವನಾತ್ಮಕ ತೊಂದರೆಗಳು

* ಏಕಾಗ್ರತೆ ಹೊಂದಲು ಸಾಧ್ಯವಾಗದೇ ಇರುವುದು

* ಸ್ನಾಯುಗಳು ಭಾರ ಹೊರುವ ಸಾಮರ್ಥ್ಯವನ್ನು ಪೂರ್ಣವಾಗಿ ಪಡೆದುಕೊಳ್ಳದೇ ಇರುವುದು.

ಹಾಲಿನಲ್ಲಿ ಕೊಂಚ ಟೀ ಸೇರಿಸಿ ಕುಡಿಸಿದದೂ ಸಲ್ಲದು

ಎಷ್ಟೋ ತಾಯಂದಿರು ತಮ್ಮ ಮಕ್ಕಳಿಗೆ ಹಾಲು ಬೆರೆಸಿದ ಟೀ ಕುಡಿಸುತ್ತಾರೆ. ಏಕೆಂದರೆ ಹಾಲು ಸೇರಿಸುವುದರಿಂದ ಟೀ ನಲ್ಲಿರುವ ತೊಂದರೆಗಳು ಮಕ್ಕಳನ್ನು ಬಾಧಿಸುವುದಿಲ್ಲ ಎಂದು ಅವರು ನಂಬಿಕೊಂಡು ಬಂದಿದ್ದಾರೆ. ಆದರೆ ಹಾಲಿನಲ್ಲಿರುವ ಕ್ಯಾಲ್ಸಿಯಂ ಅನ್ನು ಮೂಳೆಗಳು ಹೀರಿಕೊಳ್ಳಲು ಟೀ ಸರ್ವಥಾ ಬಿಡದ ಕಾರಣ ಟೀ ಎಷ್ಟೇ ಕಡಿಮೆ ಪ್ರಮಾಣದಲ್ಲಿರಲಿ, ಮಕ್ಕಳಿಗೆ ಇದು ಸಲ್ಲದು. ಆದ್ದರಿಂದ ಮಕ್ಕಳಿಗೆ ಹಾಲಿನಲ್ಲಿ ಟೀ ಬದಲಿಗೆ ಜೇನು ಬೆರೆಸಿ ಕುಡಿಸುವುದೇ ಅತ್ಯುತ್ತಮವಾಗಿದೆ. ಕೆಮ್ಮು ನೆಗಡಿ ಇದ್ರೆ ಚೆಕ್ಕೆ ಮಸಾಲಾ ಟೀ ಕುಡೀರಿ

ಟೀ ವ್ಯಸನರಾಗಲು ಸಾಧ್ಯವಾಗುತ್ತದೆ

*ಒಂದು ದಿನಕ್ಕೆ ಎಷ್ಟು ಟೀ ಆರೋಗ್ಯಕರ ಎಂಬ ಪ್ರಶ್ನೆಗೆ ಪ್ರೌಢರಲ್ಲಿ ಎರಡರಿಂದ ಮೂರು ಕಪ್ ಎಂಬ ಉತ್ತರ ನೀಡಬಹುದು. ದಿನಕ್ಕೆ ಒಂದೆರಡು ಕಪ್ ಕುಡಿದವರಿಗೂ ಮರುದಿನ ಒಂದು ಕಪ್ ಕುಡಿಯದೇ ಇರಲು ಚಡಪಡಿಕೆ ಉಂಟಾಗುತ್ತದೆ. ಇದೊಂದು ರೂಪದ ವ್ಯಸನವಾಗಿದೆ. 'tea addiction' ಎಂದು ಕರೆಯಲಾಗುವ ಈ ವ್ಯಸನದಿಂದ ಹೊರಬರುವುದು ಅಷ್ಟು ಸುಲಭವಲ್ಲ. ಈ ಪ್ರಯತ್ನ ಮಾಡಿದವರಿಗೆ ಅತೀವ ತಲೆನೋವು ಬಾಧಿಸುತ್ತದೆ.

*ಒಂದು ವೇಳೆ ಮಕ್ಕಳಿಗೆ ಟೀ ಕುಡಿಯುವ ಅಭ್ಯಾಸ ಮಾಡಿದರೆ ಇದರಲ್ಲಿರುವ ಕ್ಯಾಟೆಚಿನ್ (catechin) ಎಂಬ ಫ್ಲೇವನಾಯ್ಡು ಹಾಲು ಮತ್ತು ಇತರ ಆಹಾರಗಳಲ್ಲಿರುವ ಪ್ರೋಟೀನುಗಳೊಂದಿಗೆ ಸಂಯೋಜನೆ ಹೊಂದಿ ಸಂಕೀರ್ಣವಾದ ರಾಸಾಯನಿಕವಾಗಿ ಪರಿವರ್ತಿತವಾಗುತ್ತದೆ.

*ಈ ರಾಸಾಯನಿಕ ಹೆಚ್ಚೂ ಕಡಿಮೆ ಓಪಿಯಂ ನಂತಹ ಮಾರಕ ಮಾದಕ ಪದಾರ್ಥ ನೀಡುವ ಅಮಲಿನಂತೆಯೇ ಕಾರ್ಯನಿರ್ವಹಿಸುತ್ತದೆ. ಇದೇ ಟೀ ವ್ಯಸನಕ್ಕೆ ಕಾರಣ. ಮಕ್ಕಳಲ್ಲಿ ಈ ವ್ಯಸನ ಉಂಟಾದರೆ ಇದರಿಂದ ಹೊರಬರುವುದು ದುಃಸಾಧ್ಯ. ಬ್ಲ್ಯಾಕ್ ಟೀ ಕುಡಿಯುವುದರ 10 ಅನುಕೂಲಗಳು

ಹಾಗಾದರೆ ಯಾವ ವಯಸ್ಸಿನಲ್ಲಿ ಟೀ ಉತ್ತಮ?

ಹದಿಹರೆಯ ದಾಟುವವರೆಗೂ, ಅಂದರೆ ದೇಹ ಪೂರ್ಣಪ್ರಮಾಣದ ಬೆಳವಣಿಗೆ ಪಡೆಯುವವರೆಗೂ ಟೀ ಕುಡಿಸುವುದು ಉತ್ತಮವಲ್ಲ ಎಂಬ ಅಭಿಪ್ರಾಯವನ್ನು ಹೆಚ್ಚಿನ ಮಕ್ಕಳ ತಜ್ಞರು ಹೊಂದಿದ್ದಾರೆ.

English summary

Is it okay if your toddler drinks tea?

In many Indian families, offering tea to a toddler is a norm. It is believed that tea aids digestion, improves immunity, fight seasonal sickness, what-have-you. Well, we don’t doubt the benefits of drinking tea. But if you think that toddlers, like, adults need to have tea to reap the same benefits, you are probably wrong.
X