ಮಕ್ಕಳ ಊಟದ ತಟ್ಟೆಗೆ, ಒಂದೆರಡು ಚಮಚ ತುಪ್ಪ ಸೇರಿಸಿ

By: manu
Subscribe to Boldsky

ಸ್ಥೂಲದೇಹಕ್ಕೂ ಕೊಬ್ಬಿಗೂ ನಿಕಟ ಸಂಬಂಧವಿರುವ ಕಾರಣ ಇದನ್ನು ಸೇವಿಸಬೇಕೋ, ಬಾರದೋ ಎಂಬುದು ವಿಶ್ವದಾದ್ಯಂತ ಚರ್ಚೆಯಲ್ಲಿರುವ ವಿಷಯ. ಒಂದರ್ಥದಲ್ಲಿ ಕೊಬ್ಬನ್ನು ಒಂದು ಕ್ರಿಮಿನಲ್‌ನ ರೂಪದಲ್ಲಿಯೇ ಬಿಂಬಿಸಲಾಗುತ್ತದೆ ಹಾಗೂ ಈ ಬಗ್ಗೆಯೇ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ.

Health benefits of adding ghee in your baby's food
  

ಶತಮಾನಗಳಿಂದ ಭಾರತೀಯ ಅಡುಗೆಯಲ್ಲಿ ಪ್ರಮುಖವಾಗಿದ್ದ ಕೊಬ್ಬರಿ ಎಣ್ಣೆಯನ್ನು ಬದಿಗೆ ಸರಿಸಿ ಇದರ ಜಾಗದಲ್ಲಿ ಅಪಾಯಕಾರಿಯಾದ ಪಾಮ್ ಎಣ್ಣೆಯನ್ನು ಮಾರುಕಟ್ಟೆಗೆ ಬಿಡಲೆಂದೇ ಪಾಶ್ಚಾತ್ಯ ದೇಶಗಳು ಕೊಬ್ಬರಿ ಎಣ್ಣೆ ಕೆಟ್ಟದ್ದು ಎಂದು ಪ್ರಚಾರ ಮಾಡಿರುವ ಪರಿಣಾಮವಾಗಿ ಭಾರತದಲ್ಲೆಲ್ಲಾ ಪಾಮ್ ಎಣ್ಣೆ ರಾರಾಜಿಸುತ್ತಿದೆ. ಸರಿಸುಮಾರಾಗಿ ಇದೇ ಪ್ರಕ್ರಿಯೆ ತುಪ್ಪಕ್ಕೂ ಅನ್ವಯಿಸುತ್ತದೆ. ತುಪ್ಪ ತಿಂದವರು ದಪ್ಪಗಾಗುತ್ತಾರೆ ಎಂಬ ನಂಬಿಕೆ ನಮ್ಮ ಜನರಲ್ಲಿದೆ.

Health benefits of adding ghee in your baby's food
 

ಆದರೆ ಒಂದು ಹೊತ್ತಿನ ತುತ್ತಿಗೂ ತಾತ್ವಾರವಿರುವ, ತುಪ್ಪವನ್ನು ಜೀವಮಾನದಲ್ಲಿಯೇ ತಿಂದಿರದ ಬಡಕುಟುಂಬದ ಒಬ್ಬಿಬ್ಬರು ಸದಸ್ಯರು ಸ್ಥೂಲದೇಹಿಗಳಾಗಿರುವುದು ಅಂತೆಯೇ ಹಾಲು ತುಪ್ಪದ ಹೊಳೆ ಹರಿಯುವ ಮನೆಯ ಓರ್ವ ಸದಸ್ಯರು ನರಪೇತಲರಾಗಿರುವುದು ಈ ನಂಬಿಕೆಯನ್ನು ಸುಳ್ಳಾಗಿಸುತ್ತವೆ. ಹಿರಿಯರಿಗೆ ತಾವು ತುಪ್ಪ ತಿಂದು ದಪ್ಪಗಾಗುವ ಚಿಂತೆಗಿಂತ ತಮ್ಮ ಮಕ್ಕಳು ತುಪ್ಪ ತಿನ್ನಬೇಕೇ, ತಿನ್ನಬಾರದೇ ಎಂಬ ದ್ವಂದ್ವ ಹೊಂದಿರುವುದನ್ನು ಎಲ್ಲಾ ಮನೆಗಳಲ್ಲಿ ಕಾಣಬಹುದು. ದೇಸೀ ಹಸುವಿನ ತುಪ್ಪ, ಆರೋಗ್ಯದ ಪಾಲಿನ ಸಂಜೀವಿನಿ  

Health benefits of adding ghee in your baby's food
 

ವಾಸ್ತವವಾಗಿ ತುಪ್ಪ ವಿಶ್ವದಲ್ಲಿ ಲಭ್ಯವಿರುವ ಅತ್ಯಂತ ಆರೋಗ್ಯಕರ ಕೊಬ್ಬು. ಅಲ್ಲದೇ ನಿತ್ಯದ ನಮ್ಮ ಚಟುವಟಿಕೆಗಳಿಗೆ ಶಕ್ತಿ ನೀಡುವುದೇ ಕೊಬ್ಬು. ಅದರಲ್ಲೂ ಬೆಳವಣಿಗೆಯ ಹಂತದಲ್ಲಿರುವ ಮಕ್ಕಳಿಗೆ ತುಪ್ಪ ಇನ್ನಷ್ಟು ಉತ್ತಮ ಮತ್ತು ಅತ್ಯಗತ್ಯವಾದ ಕೊಬ್ಬು ಆಗಿದೆ. ಮಗುವಿಗೆ ಆರು ತಿಂಗಳಾಗುವವರೆಗೆ ತಾಯಿಹಾಲು ಅತ್ಯಂತ ಶ್ರೇಷ್ಠವಾದ ಆಹಾರವಾಗಿದೆ. ಬಳಿಕ ನಿಧಾನವಾಗಿ ಇತರ ಆಹಾರಗಳೊಂದಿಗೆ ಕೊಂಚ ತುಪ್ಪವನ್ನೂ ಸೇರಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಹೆರಿಗೆಯ ನಂತರ, ತುಪ್ಪದ ಡಬ್ಬಿಯನ್ನು ಪಕ್ಕಕ್ಕೆ ಸರಿಸಿ..!

Health benefits of adding ghee in your baby's food
 

ಮಕ್ಕಳಿಗೆ ತುಪ್ಪ ಏಕೆ ಉತ್ತಮ ಎಂಬ ಬಗ್ಗೆ ಕೆಲವು ಅಮೂಲ್ಯ ಮಾಹಿತಿಯನ್ನು ಕೆಳಗೆ ನೀಡಲಾಗಿದೆ

* ತುಪ್ಪ ಅತ್ಯಂತ ಆರೋಗ್ಯಕರ ಕೊಬ್ಬಾಗಿದ್ದು ಅತಿ ಹೆಚ್ಚು ಸಾಂದ್ರತೆಯುಳ್ಳ ಶಕ್ತಿಯ ಮೂಲವೂ ಆಗಿದೆ. ಇದು ಮಕ್ಕಳ ನಿತ್ಯದ ಚಟುವಟಿಕೆಯಲ್ಲಿ ಶಕ್ತಿ ನೀಡುವ ಜೊತೆಗೇ ಬೆಳವಣಿಗೆಯಲ್ಲಿಯೂ ಸಹಕರಿಸುತ್ತದೆ.

*ಮಕ್ಕಳಿಗೆ ಒಂದು ವರ್ಷವಾಗುತ್ತಿದ್ದಂತೆಯೇ ಹುಟ್ಟುವಾಗ ಇದ್ದ ತೂಕದ ಮೂರು ಪಟ್ಟು ಬೆಳೆದುಬಿಟ್ಟಿರುತ್ತಾರೆ. ಆದ್ದರಿಂದ ಈ ಹಂತದಲ್ಲಿ ನಿತ್ಯವೂ ಆಹಾರದಲ್ಲಿ ಕೊಂಚ ತುಪ್ಪವನ್ನು ಸೇರಿಸುವುದು ಅತ್ಯಂತ ಅಗತ್ಯವಾಗಿದೆ.

Health benefits of adding ghee in your baby's food

* ಮಕ್ಕಳ ಆಹಾರದಲ್ಲಿ ನಿತ್ಯದ ಚಟುವಟಿಕೆಗೂ, ಬೆಳವಣಿಗೆಗೂ ಹೆಚ್ಚಿನ ಕ್ಯಾಲೋರಿಗಳ ಅಗತ್ಯವಿದೆ. ಪ್ರತಿ ಗ್ರಾಂ ತುಪ್ಪ ಒಂಬತ್ತು ಕ್ಯಾಲೋರಿಗಳಷ್ಟು ಶಕ್ತಿಯನ್ನು ನೀಡಬಲ್ಲುದು. ಅಲ್ಲದೇ ತುಪ್ಪ ರುಚಿಕರವೂ ಆಗಿರುವುದರಿಂದ ಮಕ್ಕಳು ತುಪ್ಪ ಸೇರಿಸಿದ ಆಹಾರವನ್ನು ಇಷ್ಟಪಟ್ಟು ತಿನ್ನುತ್ತಾರೆ. ಇದು ಆರೋಗ್ಯವಂತ ಬೆಳವಣಿಗೆ ಮತ್ತು ಪುಷ್ಟಿಕರವಾದ ದೇಹಕ್ಕೆ ಸಹಕಾರಿಯಾಗಿದೆ.

* ಮಕ್ಕಳಿಗೆ ಸುಮಾರು ನಾಲ್ಕಾರು ವರ್ಷಗಳಾಗುವವರೆಗೂ ಅವರ ಜೀರ್ಣಾಂಗಗಳು ಪ್ರೌಢ ಮಕ್ಕಳಷ್ಟು ಬೆಳೆದಿರದ ಕಾರಣ ಜೀರ್ಣವಾಗಲು ಕಷ್ಟವಾಗುವ ಆಹಾರಗಳನ್ನು ನೀಡಬಾರದು. ತುಪ್ಪ ಅತ್ಯಂತ ಸುಲಭವಾಗಿ ಜೀರ್ಣವಾಗುವ ಆಹಾರವಾದ ಕಾರಣ ಚಿಕ್ಕ ಮಕ್ಕಳಿಗೂ ತುಪ್ಪವನ್ನು ಯಾವುದೇ ಅಳುಕಿಲ್ಲದೇ ತಿನ್ನಿಸಬಹುದು. ಪಕ್ಕಾ ದೇಸಿ ತುಪ್ಪ, ಆರೋಗ್ಯದ ಲವಲವಿಕೆಯ ಕೀಲಿಕೈ

* ಮಕ್ಕಳ ಮೊದಲ ವರ್ಷ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಅಮೂಲ್ಯವಾಗಿದ್ದು ಪರಿಸರದಲ್ಲಿ ಸಂತಸ ಹಾಗೂ ಆಹಾರ ಪೌಷ್ಟಿಕವಾಗಿರುವುದು ಅಗತ್ಯವಾಗಿದೆ. ಏಕೆಂದರೆ ಮಗುವಿನ ಮೆದುಳು ಈ ವರ್ಷದಲ್ಲಿ ಇತರ ಅಂಗಗಳಿಗಿಂತ ಹೆಚ್ಚಿನ ಬೆಳವಣಿಗೆ ಪಡೆಯುತ್ತದೆ. 60% ರಷ್ಟು ಮೆದುಳಿನ ಭಾಗ ಕೊಬ್ಬು ಆಗಿರುವ ಕಾರಣ ತುಪ್ಪವನ್ನು ನೀಡುವ ಮೂಲಕ ಮೆದುಳಿನ ಬೆಳವಣಿಗೆ ಉತ್ತಮವಾಗುತ್ತದೆ.

Health benefits of adding ghee in your baby's food
 

ಮಕ್ಕಳಿಗೆಷ್ಟು ತುಪ್ಪ ಅಗತ್ಯ?

*ತುಪ್ಪ ಒಳ್ಳೆಯದು ಎಂದು ಬಟ್ಟಲುಗಟ್ಟಲೇ ಹೊಟ್ಟೆಗೆ ಇಳಿಸುವಂತಿಲ್ಲ. ಯಾವ ಪದಾರ್ಥಕ್ಕೂ ಒಂದು ಮಿತಿ ಇರುವಂತೆಯೇ ತುಪ್ಪಕ್ಕೂ ಒಂದು ಮಿತಿ ಇದೆ. ಮಕ್ಕಳಲ್ಲಿ ಈ ಮಿತಿಯನ್ನು ಅವರ ವಯಸ್ಸು ಮತ್ತು ತೂಕ ನಿರ್ಧರಿಸುತ್ತದೆ. ಒಂದು ವೇಳೆ ನಿಮ್ಮ ಮಗುವಿನ ತೂಕ ವಯಸ್ಸಿಗನುಗುಣವಾಗಿ ಕಡಿಮೆ ಇದ್ದರೆ ಇವರ ಊಟದಲ್ಲಿ ಕೊಂಚ ಹೆಚ್ಚು ತುಪ್ಪ ಸುರಿಯಬೇಕು. ಒಂದು ವೇಳೆ ವಯಸ್ಸಿಗೂ ಮೀರಿದ ತೂಕವಿದ್ದರೆ ತುಪ್ಪವನ್ನು ಕಡಿಮೆ ಮಾಡಬೇಕು.

Health benefits of adding ghee in your baby's food

*ಒಂದು ವರ್ಷದೊಳಗಿನ ಆರೋಗ್ಯಕರ ಮಕ್ಕಳಲ್ಲಿ ಈ ಪ್ರಮಾಣ ಒಂದು ದಿನಕ್ಕೆ ಒಂದು ಚಿಕ್ಕ ಚಮಚವಾಗಿದೆ.

*ಒಂದು ವರ್ಷ ದಾಟಿದ ಬಳಿಕ ಈ ಪ್ರಮಾಣವನ್ನು ನಿಧಾನವಾಗಿ ಮೂರರಿಂದ ನಾಲ್ಕು ಚಿಕ್ಕ ಚಮಚಗಳವರೆಗೆ ಹೆಚ್ಚಿಸಬಹುದು. ಆದರೆ ಯಾವ ದಿನ ತುಪ್ಪದಲ್ಲಿ ಮಾಡಿದ ಸಿಹಿತಿಂಡಿಗಳನ್ನು ತಿನ್ನುತ್ತಾರೋ ಆಗ ಊಟದಲ್ಲಿ ತುಪ್ಪ ಸೇರಿಸದೇ ಇರುವುದನ್ನು ನೆನಪಿಟ್ಟುಕೊಳ್ಳಬೇಕು. ದೇಹದ ತೂಕ ಇಳಿಸಲು ದಿನಕ್ಕೆರಡು ಚಮಚ ತುಪ್ಪ ಸಾಕು!

English summary

Health benefits of adding ghee in your baby's food

‘Fat intake’ has always been a controversial topic all around the globe. In fact fat is also known as a ‘criminal’ in the nutrition world. Adults are always conscious about their own fat intake and as parents, they are more worried about how much fat and which kind of fat their little ones’ should be getting.
Please Wait while comments are loading...
Subscribe Newsletter