For Quick Alerts
ALLOW NOTIFICATIONS  
For Daily Alerts

ಅವಧಿಗೂ ಮುನ್ನ ಜನಿಸಿದ ಕಂದಮ್ಮನಿಗೆ ಸ್ತನ್ಯಪಾನವೇ ರಾಮಬಾಣ

By Arshad
|

ಕೆಲವು ಮಕ್ಕಳು ನವಮಾಸ ತುಂಬುವ ಮುನ್ನವೇ ಜನಿಸುವ ಮೂಲಕ ಹತ್ತು ಹಲವು ಆರೋಗ್ಯದ ಸವಾಲುಗಳನ್ನು ಒಡ್ಡುತ್ತವೆ. ಕೆಲವು ಅಂಗಗಳು ಇನ್ನೂ ಬೆಳೆದಿರದ ಕಾರಣ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

Does Breast Milk Aid Heart Development?

ಇತ್ತೀಚಿನ ಸಂಶೋಧನೆಯೊಂದರಲ್ಲಿ ಇಂತಹ ಮಕ್ಕಳ ಆರೋಗ್ಯ ತಾಯಿಹಾಲಿನ ಮೇಲೆ ಬಹುತೇಕ ಅವಲಂಬಿತವಾಗಿದೆ ಎಂದು ಕಂಡುಕೊಳ್ಳಲಾಗಿದೆ. ಈ ಮಕ್ಕಳ ಹೃದಯ ಪೂರ್ಣಪ್ರಮಾಣದಲ್ಲಿ ಕ್ಷಮತೆ ಪಡೆಯಲು ತಾಯಿಯ ಹಾಲೇ ಅತ್ಯುತ್ತಮವಾಗಿದ್ದು ಆರೋಗ್ಯವಂತ ಪ್ರೌಢರಾಗಲು ನೆರವಾಗುತ್ತದೆ.

ಈ ಸಂಶೋಧನೆಯಲ್ಲಿ ಅವಧಿಗೂ ಮುನ್ನ ಜನಿಸಿದ ಹಲವು ಮಕ್ಕಳಿಗೆ ಕೇವಲ ತಾಯಿಹಾಲು ಕುಡಿಸಿ ಮಾಹಿತಿಗಳನ್ನು ಸಂಗ್ರಹಿಸಲಾಯಿತು. ಈ ಮಾಹಿತಿಯನ್ನು ಸಂಸ್ಕರಿಸಿದ ಹಾಲನ್ನು ಕುಡಿದ ಮಕ್ಕಳ ಆರೋಗ್ಯದ ಅಂಕಿ ಅಂಶಗಳೊಂದಿಗೆ ತಾಳೆಹಾಕಿ ತಾಯಿಹಾಲು ಕುಡಿದ ಮಕ್ಕಳ ಹೃದಯ ಇತರರಿಗಿಂತಲೂ ಹೆಚ್ಚು ಕ್ಷಮತೆ ಹೊಂದಿರುವುದನ್ನು ಕಂಡುಕೊಳ್ಳಲಾಯಿತು.

ಅವಧಿಗೂ ಮುನ್ನ ಜನಿಸಿದ ಮಕ್ಕಳ ಹೃದಯ ಮಾತ್ರವಲ್ಲ, ಇತರ ಅಂಗಗಳೂ ತಾಯಿಹಾಲಿನಿಂದ ಉತ್ತಮ ಪೋಷಣೆ ಪಡೆದು ಉತ್ತಮ ಆರೋಗ್ಯ ಹೊಂದಲು ನೆರವಾಗುತ್ತದೆ ಎಂದು ಅರೋಗ್ಯತಜ್ಞರು ತಿಳಿಸುತ್ತಾರೆ.

ಅವಧಿಗೂ ಮುನ್ನ ಜನಿಸಿದ ಮಕ್ಕಳ ಹೃದಯ ಇತರ ಮಕ್ಕಳ ಹೃದಯಕ್ಕಿಂತಲೂ ಕಿರಿದಾದ ಕೋಣೆಗಳನ್ನು ಹೊಂದಿದ್ದು ಹೃದಯದ ಗೋಡೆಗಳು ಹೆಚ್ಚು ದಪ್ಪನಾಗಿರುತ್ತವೆ. ಈ ಹಂತದಲ್ಲಿ ಸರಿಯಾದ ಪೋಷಣೆ ದೊರಕದೇ ಹೋದರೆ ಇದೇ ಸ್ಥಿತಿಯಲ್ಲಿ ಬೆಳೆದ ಮಕ್ಕಳು ಹಲವು ಹೃದಯದ ತೊಂದರೆಗಳನ್ನು ಹೊಂದಿರುತ್ತಾರೆ.

ಈ ಸ್ಥಿತಿಯಲ್ಲಿ ಹೃದಯ ಶೀಘ್ರ ಬೆಳವಣಿಗೆ ಪಡೆದು ಸಾಮಾನ್ಯ ಗಾತ್ರ ಪಡೆಯಲು ತಾಯಿಹಾಲು ಅತ್ಯುತ್ತಮವಾಗಿದೆ. ಸಂಸ್ಕರಿಸಿದ ಹಾಲಿನಲ್ಲಿ ತಾಯಿಹಾಲಿನಲ್ಲಿರುವ ಕೆಲವು ಕಿಣ್ವಗಳಿರದಿರುವುದೇ ಇದಕ್ಕೆ ಕಾರಣ. ಅಷ್ಟಕ್ಕೂ ತಾಯಿಹಾಲಿಗೆ ಬದಲಿ ಹಾಲು ಈ ಜಗತ್ತಿನಲ್ಲಿಯೇ ಇಲ್ಲ, ಅಲ್ಲವೇ. ಹುಟ್ಟಿದ ಬಳಿಕ ಕೆಲವು ತಿಂಗಳುಗಳಾದರೂ ಅಂದರೆ ಕನಿಷ್ಠ ಸುಮಾರು ಆರು ತಿಂಗಳು ಈ ಮಗುವಿಗೆ ಅತಿ ಹೆಚ್ಚು ತಾಯಿಹಾಲನ್ನು ನೀಡಬೇಕಾಗುತ್ತದೆ.

English summary

Does Breast Milk Aid Heart Development?

A new study claims that breast feeding can play a very important role in the health of premature babies. This study also says that breast milk can improve the heart health of premature babies and this may also help the baby even in adulthood. This study claims that babies who were given only breast milk had better heart function and development compared to other babies who were given formula milk.
Story first published: Thursday, June 23, 2016, 20:32 [IST]
X
Desktop Bottom Promotion