For Quick Alerts
ALLOW NOTIFICATIONS  
For Daily Alerts

ಮಕ್ಕಳಿರುವ ಮನೆಯಲ್ಲಿ ತಂದೆಯ ಜವಾಬ್ದಾರಿಯು ಬಹುಮುಖ್ಯ

By Jaya subramanya
|

ಮಗುವಿನ ಜನನದ ನಂತರ ಅದರ ಸಂಪೂರ್ಣ ಕಾಳಜಿಯನ್ನು ನೀವು ಮಾಡಬೇಕಾಗುತ್ತದೆ. ತೆರೆದಿಟ್ಟ ಬಾಗಿಲಿನ ಮೂಲಕ ಮಗು ಹೊರಗೆ ಹೋಗುವುದು ಅಥವಾ, ಎತ್ತರದ ಸ್ಥಳಗಳಿಗೆ ನಿಮ್ಮ ಮಗು ಹತ್ತುವುದು ಅಲ್ಲಿಂದ ಬೀಳುವುದು ಹೀಗೆ ಹಲವಾರು ಅಪಾಯಗಳಿಗೆ ಒಳಗಾಗುತ್ತಿರುತ್ತದೆ. ಹಾಗಿದ್ದರೆ ಮಗುವಿನ ಕಾಳಜಿಗಾಗಿ ನೀವು ಮನೆಯಲ್ಲಿ ಬಂದೋಬಸ್ತು ಮಾಡಲೇಬೇಕಾಗುತ್ತದೆ.

Dad Duty: Baby-Proof Your Home In 6 Ways

ಮಗು ತನಗೆ ಅರಿವಿಲ್ಲದೆ ಅಪಾಯವಾಗುತ್ತದೆ ಎಂಬುದನ್ನು ತಿಳಿದುಕೊಳ್ಳದೇ ಆಟದಂತೆಯೇ ಪ್ರತಿಯೊಂದನ್ನು ಕಾಣುತ್ತಿರುತ್ತದೆ. ಹಾಗಿದ್ದಾಗ ಮನೆಯ ಹಿರಿಯರು ಅದರಲ್ಲೂ ಮಗುವಿನ ತಂದೆ ಮಗುವನ್ನು ಜೋಪಾನ ಮಾಡಬೇಕಾಗುತ್ತದೆ. ಮಗುವಿನ ತಂದೆಯು ಮಾಡಲೇಬೇಕಾದ ಈ ಕರ್ತವ್ಯಗಳಿಂದ ಮಗುವಿಗೆ ಉಂಟಾಗುವ ಹಾನಿಯನ್ನು ತಪ್ಪಿಸಬಹುದಾಗಿದೆ.

ನಿಮ್ಮ ಮನೆಯು ಬೇಬಿ ಪ್ರೂಫ್ ಆಗಿದ್ದಲ್ಲಿ ಮಗುವು ಸೂಕ್ತವಾದ ಭದ್ರತೆಯಲ್ಲಿರುತ್ತದೆ ಎಂದಾಗಿದೆ. ಇದರಿಂದ ಮಗುವು ಸುರಕ್ಷಿತವಾಗಿ ಮನೆಯಲ್ಲಿ ಓಡಾಡಿಕೊಂಡಿರುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ತಂದೆಯರಿಗಾಗಿ ಆರು ಅತಿ ಮುಖ್ಯ ಭದ್ರತಾ ಹಂತಗಳನ್ನು ನೀಡುತ್ತಿದ್ದು ಮನೆಯಲ್ಲಿ ಇದನ್ನು ಕೂಡಲೇ ಅಳವಡಿಸಿಕೊಳ್ಳಲೇಬೇಕು. ಮಗುವಿಗೆ ಬಲವಂತವಾಗಿ ಊಟ ಮಾಡಿಸುವುದು ಸರಿಯೇ?

ಬಾಗಿಲಿಗಾಗಿ ಕೊಳಿಕೆಗಳು


ನಿಮ್ಮ ಮನೆಯ ಅಡುಗೆ ಮನೆ, ಬಾತ್‎ರೂಮ್ ಕ್ಯಾಬಿನೇಟ್ಸ್ ಕೊಳಿಕೆಗಳನ್ನು ಹೊಂದಿರಬೇಕು. ಇದರಿಂದ ಮಗುವಿಗೆ ಹರಿತವಾದ ವಸ್ತುಗಳಿಂದ ಅಪಾಯ ಕಡಿಮೆ ಇರುತ್ತದೆ. ಮರದ ಕ್ಯಾಬಿನೇಟ್ ಆದಲ್ಲಿ ಮರದ್ದೇ ಲಾಚ್ ಮಾಡಿಸಿ ಅಂತೆಯೇ ಲೋಹದ್ದಾದರೆ ಲೋಹದ ಲಾಚ್ ಮಾಡಿಸಿಕೊಳ್ಳಿ.

ಮೆಟ್ಟಿಲುಗಳಿಗಾಗಿ ಭದ್ರ ಗೇಟ್
ಮೆಟ್ಟಿಲುಗಳ ಕೆಳಭಾಗದಲ್ಲಿ ಮತ್ತು ಮೇಲ್ಭಾಗದಲ್ಲಿ ಗೇಟ್ ಅನ್ನು ಅಳವಡಿಸಿ. ಇದರಿಂದ ಮಗು ಹತ್ತುವುದು ಇಳಿಯುವುದು ತಪ್ಪುತ್ತದೆ. ಗೇಟ್ ಪ್ಲಾಸ್ಟಿಕ್‏‎ನದ್ದಾಗಿದ್ದರೆ ಮಗುವಿಗೆ ಪೆಟ್ಟಾಗುವ ಸಾಧ್ಯತೆ ಕೂಡ ಕಡಿಮೆ ಇರುತ್ತದೆ. ಗಾಯಗಳೂ ಕಡಿಮೆಯಾಗುತ್ತದೆ.

ಕಿಟಕಿಗಳ ಭದ್ರತೆ
ಕೊಠಡಿಯ ಪ್ರತಿ ಕಿಟಕಿಗೆ ಲಾಚ್ ಅನ್ನು ಅಳವಡಿಸಿಕೊಳ್ಳಿ, ಅದರಲ್ಲೂ ನೀವು ಮೇಲ್ಭಾಗದ ಮಹಡಿಯಲ್ಲಿದ್ದೀರಿ ಎಂದಾದಲ್ಲಿ ಹೆಚ್ಚು ಜಾಗರೂಕತೆ ವಹಿಸಿ. ಕಿಟಕಿಯಿಂದ ಸ್ವಲ್ಪ ಅಂತರದಲ್ಲಿ ಕಿಟಕಿ ನೆಟ್‎ಗಳನ್ನು ನಿಮಗೆ ಬಳಸಿಕೊಳ್ಳಬಹುದಾಗಿದೆ.

ಇಲೆಕ್ಟ್ರಿಕ್ ಸಾಕೆಟ್ ಭದ್ರತೆ
ಎಲ್ಲಾ ಇಲೆಕ್ಟ್ರಿಕ್ ಸಾಕೆಟ್‎ಗೆ ಭದ್ರತೆಯನ್ನು ಅಳವಡಿಸಿ. ಇದನ್ನು ತೆರೆದಿಡಬೇಡಿ ಏಕೆಂದರೆ ಮಕ್ಕಳು ನೇರವಾಗಿ ಇದನ್ನು ಮುಟ್ಟುವ ಸಾಧ್ಯತೆ ಇರುತ್ತದೆ. ಆದಷ್ಟು ಇದನ್ನು ಗಟ್ಟಿಯಾಗಿ ಅಳವಡಿಸಲಾಗಿದೆ ಎಂಬುದನ್ನು ಖಾತ್ರಿಪಡಿಸಿ. ಹಾದಿ ತಪ್ಪುತ್ತಿರುವ ಮಕ್ಕಳ ವರ್ತನೆಯ ಬಗ್ಗೆ ಎಚ್ಚರ....

ಡೋರ್ ಸ್ಟಾಪರ್ಸ್ ಬೇಕೇ ಬೇಕು
ಪ್ರತೀ ಬಾಗಿಲಿಗೂ, ಡೋರ್ ಸ್ಟಾಪರ್ ಅನ್ನು ಅಥವಾ ಡೋರ್ ಹೋಲ್ಡರ್ ಅನ್ನು ಅಳವಡಿಸಿ. ಇದರಿಂದ ಬಾಗಿಲು ಜೋರಾಗಿ ಬಡಿದು ಮಗುವಿಗೆ ಪೆಟ್ಟಾಗುವುದು ತಪ್ಪುತ್ತದೆ. ಬಾಗಿಲಿಗೆ ಮತ್ತು ಗೋಡೆಗೆ ಡಾರ್ ಸ್ಟಾಪರ್ಸ್ ಅಳವಡಿಸಿ.

ಆಲ್ಕೊಹಾಲ್ ಕ್ಯಾಬಿನೆಟ್ ಲಾಕ್ ಮಾಡಿ
ಆಲ್ಕೊಹಾಲ್ ಕ್ಯಾಬಿನೇಟ್ ಅನ್ನು ಕೀಲಿಕೈಯಿಂದ ಭದ್ರಪಡಿಸಿ. ಆದಷ್ಟು ಮಗುವಿನ ಕೈಗೆ ಸಿಗದಂತೆ ಮೇಲ್ಭಾಗದಲ್ಲಿ ಎತ್ತಿಡಿ. ನಿಮ್ಮ ಮಗು ತೆವಳುತ್ತಿದೆ ಮತ್ತು ನಡೆಯಲು ಕಲಿಯುತ್ತಿದೆ ಎಂದಾದಲ್ಲಿ ಮನೆಯನ್ನು ಆದಷ್ಟು ಮಗುವಿಗೆ ಅಪಾಯವಾಗದ ರೀತಿಯಲ್ಲಿ ಭದ್ರಪಡಿಸಿಕೊಳ್ಳಿ.

English summary

Dad Duty: Baby-Proof Your Home In 6 Ways

When you baby-proof your home, your baby is in proper care and safety. You need not be over worried about the baby climbing the stairs or if the tiny tot is crawling up the bed to peep out of the window. A baby proof home is the best and the safest environment you can bring up your little one in. Today, we have 6 easy and must do duties for the new dad. These 6 things are the most crucial items you should baby-proof in your home.
Story first published: Saturday, June 18, 2016, 17:04 [IST]
X
Desktop Bottom Promotion