For Quick Alerts
ALLOW NOTIFICATIONS  
For Daily Alerts

ಸ್ತನ್ಯಪಾನ ಅವಧಿಯಲ್ಲಿ ಮಹಿಳೆಯರಿಗೆ ಅಗತ್ಯವಿರುವ ಜೀವಸತ್ವಗಳು

By Poornima heggade
|

ನಾವು ಸೇವಿಸುವ ಆಹಾರ, ನಮ್ಮ ಆರೋಗ್ಯದ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಅದರಲ್ಲೂ ಗರ್ಭಿಣಿಯರು ಆರೋಗ್ಯಕರ ಗರ್ಭಧಾರಣೆಯ ಹೊಂದುವಲ್ಲಿ ಅವರು ಸೇವಿಸುವ ಆಹಾರಗಳೇ ಪ್ರಮುಖ ಪಾತ್ರ ವಹಿಸುತ್ತವೆ. ಅದೇ ರೀತಿ ಮಗು ಜನನವಾದ ನಂತರ ನಿಮ್ಮ ಮಗುವಿಗೆ ಸ್ತನ್ಯಪಾನ ಮಾಡುವ ಅವಧಿಯಲ್ಲೂ ಇದೇ ರೀತಿ ನೀವು ಸೇವಿಸುವ ಆಹಾರಗಳು ಅತ್ಯಂತ ಮುಖ್ಯ! ನಿಮ್ಮ ಮಗುವಿಗೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುವುದಕ್ಕೆ ಮಾತ್ರವಲ್ಲದೆ ಆರೋಗ್ಯಕರ ಮತ್ತು ಯೋಗ್ಯವಾದ ರೀತಿಯಲ್ಲಿ ನಿಮ್ಮ ಆರೋಗ್ಯವನ್ನು ಇರಿಸಿಕೊಳ್ಳಲು ಕೂಡ ಹಾಲುಣಿಸುವ ಸಮಯದಲ್ಲಿ ಸಮತೋಲನ ಆಹಾರವನ್ನು ಸೇವಿಸುವ ಅಗತ್ಯವಿದೆ. ಸ್ತನ್ಯಪಾನ ಸಮಯದಲ್ಲಿ ಮಹಿಳೆಯರು ಸಾಕಷ್ಟು ಜೀವಸತ್ವಗಳಿರುವ ಆಹಾರಗಳನ್ನು ತೆಗೆದುಕೊಳ್ಳುವುದು ನಿಮ್ಮ ಮಗುವಿನ ಆರೋಗ್ಯಕರ ಮತ್ತು ಶಕ್ತಿಯುತ ಬೆಳವಣಿಗೆಗೆ ಬಹಳ ಮುಖ್ಯ. ಅನೇಕ ವೈದ್ಯಕೀಯ ವೃತ್ತಿಪರರು ಆರೋಗ್ಯಕರ ಆಹಾರ ಜೊತೆಗೆ ಉತ್ತಮ ಬಹು ಜೀವಸತ್ವ ಪೂರಕ ಆಹಾರಗಳನ್ನು ತೆಗೆದುಕೊಳ್ಳುವಂತೆ ಸೂಚಿಸುತ್ತಾರೆ.

ನಿಮ್ಮ ಸ್ತನ್ಯಪಾನ ಸಮಯದಲ್ಲಿ ನಿಮ್ಮ ಪ್ರಸವಪೂರ್ವ ವಿಟಮಿನ್ ಮುಂದುವರೆಸುವ ಮೊದಲು, ಇದು ಹಾಲೂಣಿಸುವಿಕೆಯ ಸಮಯದಲ್ಲಿ ಅಗತ್ಯವಿದೆ ಮತ್ತು ನಿಮ್ಮ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಜೀವಸತ್ವ ಡಿ ಮತ್ತು ಬಿ ನಂತಹ ಪ್ರಮುಖ ಜೀವಸತ್ವಗಳು ಮಹಿಳೆಯರು ಹಾಲುಣಿಸುವ ಸಮಯದಲ್ಲಿ ಬಹಳ ಮುಖ್ಯ. ಸ್ತನ್ಯಪಾನ ಮಾಡುವಾಗ ಹೆಚ್ಚುವರಿ ಶಕ್ತಿ ಮತ್ತು ಪೋಷಕಾಂಶಗಳ ಅಗತ್ಯವಿದ್ದು ಅವುಗಳನ್ನು ಸರಿಯಾದ ಪ್ರಮಾಣದಲ್ಲಿ ದೇಹಕ್ಕೆ ದೊರೆಯುವಂತೆ ಮಾಡಬೇಕು. ಆದ್ದರಿಂದ ಸಾಮಾನ್ಯವಾಗಿ ಗರ್ಭಿಣಿ ಸ್ತ್ರೀಗೆ ಬಹು ಜೀವಸತ್ವ ಆಹಾರವನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ನೀವು ಈ ಸಲಹೆಗಳನ್ನು ಹಾಲುಣಿಸುವ ಸಮಯದಲ್ಲಿಯೂ ಕೂಡ ಅನುಸರಿಸಬಹುದು.

Essential Vitamins For Women During Breastfeeding

ಹಾಲುಣಿಸುವಿಕೆಗೆ ನಿರ್ದಿಷ್ಟವಾದ ಮಲ್ಟಿವಿಟಮಿನ್ (ಬಹು ಜೀವಸತ್ವಗಳ) ಸೇವನೆ ಬಹುತೇಕ ಜೀವಸತ್ವಗಳನ್ನು ಒದಗಿಸುತ್ತದೆ. ಗರ್ಭಿಣಿಯಾಗಿರುವ ಸಂದರ್ಭಕ್ಕಿಂತ ಇಂದು ದೇಹದಲ್ಲಿ ವಿಟಮಿನ್ ಪ್ರಮಾಣದಲ್ಲಿ ಬದಲಾಗಿರಬಹುದು. ಆದ್ದರಿಂದ ಲ್ಯಾಬ್ ಗಳಲ್ಲಿ ಪರಿಶೀಲಿಸಿ ಮತ್ತು ನೀವು ಸಮರ್ಪಕ ಜೀವಸತ್ವಗಳ ಪೂರೈಕೆಯನ್ನು ಪಡೆಯುತ್ತಿದ್ದೀರೆ ಎಂದು ವೈದ್ಯರಿಂದ ಖಚಿತಪಡಿಸಿಕೊಳ್ಳಿ. ಇಲ್ಲಿ ಮಹಿಳೆಯರು ಸ್ತನ್ಯಪಾನ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಕೆಲವು ಪ್ರಮುಖ ವಿಟಮಿನ್ ಗಳನ್ನು ಹೆಸರಿಸಲಾಗಿದೆ.

ಜೀವಸತ್ವ ಡಿ: ಸ್ತನ್ಯಪಾನದ ಅವಧಿಯಲ್ಲಿ ಮಹಿಳೆಯರಿಗೆ ಬೇಕಾಗುವ ಜೀವಸತ್ವಗಳ ಪೈಕಿ, ವಿಟಮಿನ್ ಡಿ ಪ್ರಮುಖ ಪಾತ್ರವನ್ನು ಹೊಂದಿದೆ. ಪ್ರತಿ ದಿನ 10 ಮೈಕ್ರೋಗ್ರಾಂಗಳಷ್ಟು ( ಮೆಕ್ಜಿ ) ಡಿ ಜೀವಸತ್ವವನ್ನು ದೇಹಕ್ಕೆ ಒದಗಿಸಬೇಕು. ವಿಟಮಿನ್ ಡಿ ಉತ್ಪಾದನೆಗೆ ಬೆಳಿಗ್ಗೆ ಅಥವಾ ಸಂಜೆ ಸೂರ್ಯನ ಶಾಖವನ್ನು ಪಡೆಯಲು ಗರ್ಭಧಾರಣೆಯ ಸಂದರ್ಭದಲ್ಲೂ ಸೂಚಿಸಲಾಗುತ್ತದೆ.

ಜೀವಸತ್ವ ಸಿ: ಜೀವಸತ್ವ ಸಿ ಸ್ತನ್ಯಪಾನ ಅವಧಿಯಲ್ಲಿ ಮಹಿಳೆಯರಿಗೆ ಕಡ್ಡಾಯವಾಗಿ ನೀಡಲೇಬೇಕಾದ ಜೀವಸತ್ವಗಳಲ್ಲಿ ಒಂದಾಗಿದೆ. ನಿಮ್ಮ ಆಹಾರದಲ್ಲಿ ಸಿಟ್ರಸ್ ಹಣ್ಣುಗಳು, ಉಷ್ಣವಲಯದ ಹಣ್ಣುಗಳು, ಟೊಮ್ಯಾಟೊ, ದೊಡ್ಡ ಮೆಣಸಿನಕಾಯಿ ಮತ್ತು ಆಲೂಗಡ್ಡೆಯನ್ನು ಸೇರಿಸಿ ವಿಟಮಿನ್ ಸಿ ಸತ್ವವನ್ನು ಪಡೆಯಬಹುದು. ಇತರೆ ಆಹಾರಗಳಿಗಿಂತ ಹೆಚ್ಚು, ಬಹು ಜೀವಸತ್ವ ಪೂರಕಗಳು ವಿಟಮಿನ್ ಸಿಯನ್ನು ಹೊಂದಿರುತ್ತವೆ.

ಫೋಲೇಟ್ : ಫೋಲೇಟ್ ಗರ್ಭಧಾರಣೆ ಮತ್ತು ಹಾಲೂಣಿಸುವಿಕೆಯ ಸಮಯದಲ್ಲಿ ಬಹಳ ಮುಖ್ಯ. ನೀವು ಈ ಸಂದರ್ಭದಲ್ಲಿ ಫೋಲೇಟ್ ನ ಹೆಚ್ಚುವರಿ ಪೂರಕಗಳನ್ನು ತೆಗೆದುಕೊಳ್ಳಬಹುದು. ಜೊತೆಗೆ ನೀವು ನಿಮ್ಮ ಆಹಾರದಲ್ಲಿ ಪಾಲಕ, ಹೂಕೋಸು, ಎಲೆಕೋಸು ಮತ್ತು ಮೊಗ್ಗುಗಳಂತಹ ಎಲೆಗಳ ಹಸಿರು ತರಕಾರಿಗಳನ್ನು ಸೇವಿಸಬಹುದು.

ಜವಸತ್ವ ಇ: ವಿಟಮಿನ್ ಇ ನೀವು ಹಾಲುಣಿಸುವ ಸಂದರ್ಭದಲ್ಲಿ, ನಿಮ್ಮ ದೇಹಕ್ಕೆ ಪೂರಕವಾಗಿರುವ ಪ್ರಮುಖ ಜೀವಸತ್ವವಾಗಿದೆ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ, ಔಷಧ, ಅಥವಾ ಚುಚ್ಚುಮದ್ದಿನ ರೀತಿಯಲ್ಲಿ ವಿಟಮಿನ್ ಇಯನ್ನು ನಿಮ್ಮ ದೇಹಕ್ಕೆ ಪೂರಕವಾಗಿ ತೆಗೆದುಕೊಳ್ಳಲು ಸಾಧ್ಯ .

ಜೀವಸತ್ವ ಎ: ಜೀವಸತ್ವ ಎ ತಾಯಂದಿರು ಹಾಲುಣಿಸುವ ಸಂದರ್ಭದಲ್ಲಿ ಅತ್ಯಂತ ಅಗತ್ಯ ಏಕೆಂದರೆ, ಹಾಲು ಉತ್ಪಾದನೆಯ ಸಮಯದಲ್ಲಿ ಬೇಕಾಗುವ ಜೀವಸತ್ವ ಇದಾಗಿದೆ. ಈ ಜೀವಸತ್ವ ಪೂರಕಗಳನ್ನು ತೆಗೆದುಕೊಳ್ಳುವುದರ ಜೊತೆಗೆ, ಕಡು ಹಸಿರು ಮತ್ತು ಹಳದಿ ಹೂಕೋಸು, ಕ್ಯಾರೆಟ್ ಮತ್ತು ಕುಂಬಳಕಾಯಿ ತರಕಾರಿಗಳನ್ನು ನಿಮ್ಮ ನಿತ್ಯದ ಆಹಾರದಲ್ಲಿ ಸೇರಿಸಿ.

ಜೀವಸತ್ವ ಬಿ6: ಹಾಲುಣಿಸುವ ಮಹಿಳೆಯರಿಗೆ. ಸಲಹಿತ ಆಹಾರ ಸೇವನಾ ಕ್ರಮದಂತೆ ( RDA ) ದಿನಕ್ಕೆ 2 ಗ್ರಾಂ ಜೀವಸತ್ವ ಬಿ6ನ ಸೇವನೆಯ ಅಗತ್ಯವಿದೆ. ನೀವು ಗರ್ಭಧಾರಣೆಯ ಸಂದರ್ಭದಲ್ಲಿ ಬಹು ಜೀವಸತ್ವ ಪೂರಕಗಳನ್ನು ತೆಗೆದುಕೊಳ್ಳುವುದು ಎಷ್ಟು ಪ್ರಮುಖ ಎಂದು ಪರಿಗಣಿಸಲಾಗುತ್ತದೆಯೋ ಹಾಗೆಯೇ ಹಾಲುಣಿಸುವಿಕೆಯ ಸಮಯದಲ್ಲಿ ಜೀವಸತ್ವ ಬಿ6 ಕೂಡ ಅಷ್ಟೇ ಅಗತ್ಯ.

ಜೀವಸತ್ವ ಬಿ2: ಜೀವಸತ್ವ ಬಿ2 ಅಥವಾ ರಿಬೋಫ್ಲಾವಿನ್ ಎಂದು ಕರಯಲ್ವಡುವ ಈ ಜೀವಸತ್ವ ಉತ್ತಮ ಗುಣಮಟ್ಟದ ಎದೆ ಹಾಲು ಉತ್ಪಾದಿಸಲು ಬಾಣಂತಿಯರಿಗೆ ಪೂರಕವಾಗಿರುವಂತದ್ದು. ಇದನ್ನು ಸಾಮಾನ್ಯವಾಗಿ ಹಾಲು, ಮಾಂಸ , ಮೊಟ್ಟೆ, ಬೀಜಗಳು, ಪುಷ್ಟೀಕರಿಸಿದ ಹಿಟ್ಟು, ಮತ್ತು ಹಸಿರು ತರಕಾರಿಗಳಂತಹ ನಿತ್ಯವೂ ಬಳಸುವ ಕೆಲವು ಆಹಾರಗಳಲ್ಲಿ ಕಾಣಬಹುದು .

ಜೀವಸತ್ವ ಬಿ 12 : ಸ್ತನ ಹಾಲಿನ ಪ್ರಮಾಣವನ್ನು ಹೆಚ್ಚಿಸಲು ತಾಯಿಯಂದಿರು ಸೇವನೆ ಮಾಡಲೇಬೇಕಾದ ಜೀವಸತ್ವ ಬಿ12. ಸಸ್ಯಾಹಾರಿಗಳು ಅಥವಾ ಬಿ12 ಜೀವಸತ್ವ ಕೊರತೆಯ ಅಪಾಯವನ್ನು ಎದುರಿಸುತ್ತಿರುವ ತಾಯಂದಿರು ಸಮರ್ಪಕ ರೀತಿಯಲ್ಲಿ ಈ ಜೀವಸತ್ವವಿರುವ ಪೂರಕವನ್ನು ಪಡೆಯಬೇಕು ಎಂದು ವೈದ್ಯರಿಂದ ಸೂಚಿಸಲಾಗುತ್ತದೆ.

ಜೀವಸತ್ವ ಬಿ1 : ಇತರರಿಗೆ ಹೋಲಿಸಿದರೆ ಹಾಲುಣಿಸುವ ಮಹಿಳೆಯರಿಗೆ, ವಿಟಮಿನ್ ಬಿ12 ಹೆಚ್ಚಿನ ಪ್ರಮಾಣದಲ್ಲಿ ಬೇಕು. ಸ್ತನ್ಯಪಾನ ಅವಧಿಯಲ್ಲಿ ಮಹಿಳೆಯರಿಗೆ ಈ ಜೀವಸತ್ವಗಳು ಸಮಪ್ರಮಾಣದಲ್ಲಿ ದೊರೆತರೆ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.

English summary

Essential Vitamins For Women During Breastfeeding

Diet has an important role in having a healthy pregnancy. The condition is not different during your breastfeeding period as well. You need to have a balanced diet during breastfeeding not only to supply enough nutrients for your baby, but also to keep yourself healthy and fit.
Story first published: Thursday, December 19, 2013, 11:37 [IST]
X
Desktop Bottom Promotion