For Quick Alerts
ALLOW NOTIFICATIONS  
For Daily Alerts

ಮಗುವಿನ ಸೂಕ್ಷ್ಮ ಕಿವಿಯನ್ನು ಶುದ್ಧವಿರಿಸುವುದು ಹೇಗೆ?

|
Tips to Clean Toddler Ear Wax
ಮಕ್ಕಳ ಆರೋಗ್ಯ ತುಂಬಾ ಸೂಕ್ಷ್ಮ. ಆದ್ದರಿಂದ ಮಕ್ಕಳನ್ನು ಶುಚಿಯಾಗಿಡುವುದು ಅತಿ ಮುಖ್ಯ. ಮಕ್ಕಳ ಕಿವಿಯಲ್ಲಿ ಸೇರಿಕೊಳ್ಳುವ ವ್ಯಾಕ್ಸ್ ಅಥವಾ ಗುಗ್ಗೆ ಬ್ಯಾಕ್ಟೀರಿಯಾ ಕಿವಿ ಒಳಗೆ ಹೋಗದಂತೆ ತಡೆದರೂ ಸಹ ವ್ಯಾಕ್ಸ್ ಹೆಚ್ಚಾದರೆ ಕಿವಿಯ ಸೋಂಕಿಗೂ ಎಡೆಮಾಡಿಕೊಡಬಹುದು. ಆದ್ದರಿಂದ ಮಕ್ಕಳ ಕಿವಿಗೆ ಸ್ಪೆಷಲ್ ಕೇರ್ ಅಗತ್ಯವಿದೆ.

ಮಕ್ಕಳ ಕಿವಿಯನ್ನು ಶುದ್ಧಗೊಳಿಸುವ ವಿಧಾನ:

1. ಮಗುವನ್ನು ಸ್ನಾನ ಮಾಡಿಸಿದ ನಂತರ ಮೃದುವಾದ ಟವೆಲ್ ನಿಂದ ಕಿವಿಯ ಹೊರಭಾಗವನ್ನು ಒರೆಸಬೇಕು. ಕಿವಿಗೆ ಬೇಬಿ ಆಯಿಲ್ ಹಾಕಿದರೆ ಕಿವಿಯಲ್ಲಿನ ಗುಗ್ಗೆ ಮೆತ್ತಗಾಗಿ ತೆಗೆಯಲು ಸಹಾಯವಾಗುತ್ತೆ.

2. ಹತ್ತಿ ಅಥವಾ ಮೆತ್ತಗಿನ ಹತ್ತಿ ಬಟ್ಟೆ ತೆಗೆದುಕೊಂಡು ಬಿಸಿ ನೀರಿನಲ್ಲಿ ಅದ್ದಿ ಕಿವಿಯ ಹೊರಭಾಗವನ್ನು ಶುದ್ಧಗೊಳಿಸಬೇಕು. ಶುದ್ಧವಿಲ್ಲದ ಇಯರ್ ಬಡ್ಸ್ ಬಳಸಬಾರದು. ಇದು ಮಗುವಿನ ಕಿವಿಗೆ ಹಾನಿಯುಂಟುಮಾಡುತ್ತದೆ.

3. ಕಿವಿಯ ಹಿಂಭಾಗವನ್ನೂ ಒರೆಸಬೇಕು. ಕಿವಿಯ ಹಿಂದೆ ಧೂಳು, ಒಣ ಚರ್ಮ ಮತ್ತು ಕೂದಲಿನ ಎಣ್ಣೆಯ ಜಿಡ್ಡು ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ಭಾಗವನ್ನು ಸ್ವಲ್ಪ ಒತ್ತಡ ಕೊಟ್ಟು ಶುದ್ಧಗೊಳಿಸಬೇಕು.

4. ಇನ್ನೊಂದು ಹತ್ತಿ ಬಟ್ಟೆಯನ್ನು ತೆಗೆದುಕೊಂಡು ಬಿಸಿ ನೀರಿನಲ್ಲಿ ಅದ್ದಿ ಬೆರಳಿನಿಂದ ಕಿವಿಯನ್ನು ಮೃದುವಾಗಿ ಹಿಡಿದುಕೊಂಡು ವೃತ್ತಾಕಾರವಾಗಿ ಶುದ್ಧಗೊಳಿಸಬೇಕು.

5. ಒಂದು ಬಾರಿ ಕ್ಲೀನ್ ಮಾಡಿದ ನಂತರ ಅದೇ ಬಟ್ಟೆ ಅಥವಾ ಹತ್ತಿ ಬಳಸಬಾರದು ಮತ್ತು ಒಂದೇ ಬಾರಿಗೆ ಕಿವಿಯ ಆಳಕ್ಕೆ ಹತ್ತಿಯನ್ನು ಹಾಕಬಾರದು. ಮೃದುವಾಗಿ ಸ್ವಲ್ಪ ಸ್ವಲ್ಪವೇ ಒಳಗೆ ಹಾಕಿ ಕಡಿಮೆ ಒತ್ತಡದಿಂದ ಗುಗ್ಗೆಯನ್ನು ತೆಗೆಯಬೇಕು.

ಈ ವಿಧಾನವನ್ನು ಅನುಸರಿಸಿ ಕಿವಿಯನ್ನು ಶುದ್ಧಗೊಳಿಸುವುದರಿಂದ ಮಕ್ಕಳಿಗೆ ಕಿವಿಯ ಸೋಂಕು ತಗುಲುವುದನ್ನು ತಡೆಯಬಹುದು.

English summary

Tips to Clean Toddler Ear Wax | Toddler Hygiene | ಮಕ್ಕಳ ಕಿವಿ ಗುಗ್ಗೆಯನ್ನು ಶುದ್ಧಗೊಳಿಸುವ ವಿಧಾನ | ಮಗುವಿನ ಶುಚಿತ್ವ

Maintaining toddler hygiene is very difficult. Similarly, cleaning toddler ears can be tricky as they don't resist sitting quiet for more than a minute! Ear wax is produced to prevent dirt and bacteria from entering inside the ears. Cleaning ear wax is important to protect the toddler from getting ear infections and maintain hygiene. Take a look at the tips to clean toddler ears.
Story first published: Tuesday, November 22, 2011, 17:53 [IST]
X
Desktop Bottom Promotion