For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ಬೆನ್ನೇರಿ ಕಾಡುವ ಪಿಸಿಓಎಸ್ ಎಂಬ ಪೆಡಂಭೂತ

By Arshad
|

ಪಾಲಿಸಿಟಿಕ್ ಒವರಿಯೇನ್ ಸಿಂಡ್ರೊಮ್ (Polycystic Ovary Syndrome-PCOS) ಎಂಬುದು ಮಹಿಳೆಯರ ದೇಹದಲ್ಲಿ ಸ್ರವಿಸುವ ಎಂಡೋಕ್ರೈನ್ ಎಂಬ ಹಾರ್ಮೋನಿನ ಸ್ರಾವದ ಪ್ರಮಾಣ ಹೆಚ್ಚು ಕಡಿಮೆಯಾಗುವ ಮೂಲಕ ಎದುರಾಗುವ ಆರೋಗ್ಯ ಸಮಸ್ಯೆಯಾಗಿದೆ. ಈ ಏರುಪೇರು ದೇಹದ ಇತರ ಸಾಧ್ಯತೆಗಳನ್ನೂ ಏರುಪೇರಾಗಿಸುತ್ತದೆ.

ಇದರಲ್ಲಿ ಗರ್ಭಧಾರಣೆಯ ಸಾಧ್ಯತೆಯೂ ಒಂದು. ಇವರಲ್ಲಿ ಅಂಡಾಶಯಗಳು ಬಹಳ ಬೊಕ್ಕೆಗಳಂತ ಗುಳ್ಳೆಗಳಿಂದ ಕೂಡಿರುತ್ತವೆ (ovarian cysts). ಇದರಿಂದಾಗಿ ಕಾಲಕಾಲಕ್ಕೆ ಸರಿಯಾಗಿ ಅಂಡಾಣು ಉತ್ಪತ್ತಿಯಾಗದೇ, ಉತ್ಪತ್ತಿಯಾದರೂ ಬಿಡುಗಡೆಯಾಗದೇ ಫಲವತ್ತತೆ ಮತ್ತು ಗರ್ಭಧಾರಣೆಯ ಸಾಧ್ಯತೆಯನ್ನು ಅಪಾರವಾಗಿ ಕಡಿಮೆ ಮಾಡುತ್ತದೆ.

Conceiving With PCOS: Things You Should Know

ಒಂದು ವೇಳೆ ನೀವು ಪಿಸಿಓಎಸ್ ತೊಂದರೆ ಇರುವ ಮಹಿಳೆಯಾಗಿದ್ದು ಗರ್ಭವತಿಯಾಗಿದ್ದರೆ ನಿಮಗೆ ಆರೋಗ್ಯದ ಬಗ್ಗೆ ಅತಿಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ. ಏಕೆಂದರೆ ಈ ಮಹಿಳೆಯರಲ್ಲಿ ಗರ್ಭಪಾತದ ಸಾಧ್ಯತೆಯೂ ಅಪಾರವಾಗಿದ್ದು ಸಾಸಿವೆಯಷ್ಟು ಚಿಕ್ಕ ಕಾರಣವೂ ಗರ್ಭಪಾತಕ್ಕೆ ಸಾಕಾಗಬಹುದು. ಒಂದು ಸಮೀಕ್ಷೆಯ ಪ್ರಕಾರ ಪಿಸಿಓಎಸ್ ತೊಂದರೆ ಇರುವ ಗರ್ಭವತಿಯರು ಇತರರಿಗಿಂತ 45%ಹೆಚ್ಚು ಗರ್ಭಪಾತಕ್ಕೆ ಒಳಗಾಗುವ ಸಾಧ್ಯತೆ ಹೊಂದಿದ್ದಾರೆ. ಅನುಭವವುಳ್ಳವರ ಪ್ರಕಾರ ಈ ಸಾಧ್ಯತೆ ವಾಸ್ತವದಲ್ಲಿ ಇನ್ನೂ ಹೆಚ್ಚಿರಬಹುದು.

ಆದರೆ ವೈದ್ಯರು ಈ ಬಗ್ಗೆ ಆಶಾವಾದಿಯಾಗಿದ್ದು ಪಿಸಿಓಎಸ್ ತೊಂದರೆ ಇರುವುದೇ ಗರ್ಭಪಾತಕ್ಕೆ ಏಕಮಾತ್ರ ಕಾರಣವಾಗುವ ಸಾಧ್ಯತೆಯನ್ನು ಅಲ್ಲಗಳೆಯುತ್ತಾರೆ. ಪಠ್ಯಪುಸ್ತಕದ ಪ್ರಕಾರ ಪಿಸಿಓಎಸ್ ತೊಂದರೆ ಇರುವ ಮಹಿಳೆಯ ಅಂಡಾಣು ಆರೋಗ್ಯವಂತ ಮಹಿಳೆಯ ಅಂಡಾಣುವಿಗಿಂತಲೂ ದುರ್ಬಲವಾಗಿದ್ದು ಗರ್ಭಕಟ್ಟಲು ಹರಸಾಹಸ ಮಾಡಬೇಕಾಗುತ್ತದೆ. ಒಂದು ವೇಳೆ ಗರ್ಭಕಟ್ಟಿದರೂ ಸೂಕ್ತ ಬೆಳವಣಿಗೆ ಪಡೆಯಲೂ ಕಷ್ಟಪಡಬೇಕಾಗುತ್ತದೆ.

ಅದರಲ್ಲೂ ಗರ್ಭಾವಸ್ಥೆಯ ಮಧುಮೇಹ ಇರುವ ಮಹಿಳೆಯರಿಗೆ ಆರೋಗ್ಯದ ಕಾಳಜಿ ಇನ್ನಷ್ಟು ಹೆಚ್ಚಿರಬೇಕಾಗಿದ್ದು ಇದರಿಂದ ಹುಟ್ಟುವ ಮಗುವಿಗೂ ಮಧುಮೇಹ ದಾಟದಂತೆ ನೋಡಿಕೊಳ್ಳಬೇಕಾಗುತ್ತದೆ. ಗರ್ಭಿಣಿಯ ದೇಹದ ಅಂಕಿಅಂಶಗಳನ್ನು ಆಗಾಗ ದಾಖಲಿಸಿ ಸರಿಯಾದ ವಿಶ್ಲೇಷಣೆಯ ಮೂಲಕವೇ ಮುಂದುವರೆಯಬೇಕಾಗುತ್ತದೆ.

ಈ ಅವಧಿಯಲ್ಲಿ ಗರ್ಭವತಿ ತನ್ನ ತೂಕವನ್ನು ಅಪಾರವಾಗಿ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. ತೂಕದೊಂದಿಗೆ ಪಿಸಿಓಎಸ್ ನಿಂದ ಎದುರಾಗಬಹುದಾದ ತೊಂದರೆಗಳೆಲ್ಲಾ ಆವರಿಸುವ ಸಾಧ್ಯತೆಯೂ ಹೆಚ್ಚುವ ಕಾರಣ ಎಷ್ಟೇ ಆಸೆಯಾದರೂ ಆರೋಗ್ಯಕರ ಮತ್ತು ವೈದ್ಯರು ಸೂಚಿಸಿದಷ್ಟೇ ಪ್ರಮಾಣದ ಆಹಾರವನ್ನು ಸೇವಿಸಬೇಕು. ಒಂದು ವೇಳೆ ಗರ್ಭಧರಿಸುವ ಮುನ್ನ ಸ್ಥೂಲಕಾಯ ಆವರಿಸಿದ್ದರೆ ಆರೋಗ್ಯಕರ ಮಟ್ಟಕ್ಕೆ ತೂಕ ಇಳಿಯುವವರೆಗೂ ಗರ್ಭಧಾರಣೆಯನ್ನು ಮುಂದೂಡುವುದೇ ಸೂಕ್ತ ಮಾರ್ಗ.ಪಿಸಿಓಎಸ್ ತೊಂದರೆ ಇದ್ದರೂ ಸ್ಥೂಲಕಾಯವನ್ನು ನಿಯಂತ್ರಿಸಿ ವೈದ್ಯರ ಸೂಕ್ತ ಮಾರ್ಗದರ್ಶನ ಪಾಲಿಸಿದವರು ಆರೋಗ್ಯಕರ ಮಕ್ಕಳನ್ನು ಹೆತ್ತಿರುವುದು ಕಂಡುಬಂದಿದೆ.

ನವಮಾಸಗಳು ಪೂರ್ಣವಾದ ಬಳಿಕ ಒಡಲಲ್ಲಿರುವ ಮಗುವಿನ ತೂಕ ಸಾಮಾನ್ಯವಾಗಿದ್ದರೆ ಸಾಮಾನ್ಯ ಹೆರಿಗೆಯೇ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಒಂದು ವೇಳೆ ಗರ್ಭಾವಸ್ಥೆಯ ಮಧುಮೇಹ ಎದುರಾಗಿದ್ದರೆ ಹೆರಿಗೆಗೂ ಮುನ್ನ ಮಗುವಿನ ತೂಕ ಮತ್ತು ಸ್ಥಿತಿಗಳನ್ನೂ ಪರೀಕ್ಷಿಸಿ ನೋಡಲಾಗುತ್ತದೆ. ಎಲ್ಲವೂ ಸರಿ ಇದ್ದರೆ ಮಾತ್ರ ಸಹಜ ಹೆರಿಗೆಗೆ ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಒಂದು ವೇಳೆ ಹೆರಿಗೆ ಕಷ್ಟವಾಗಬಹುದು ಎಂದರೆ ಮುಂದಿನ ಕ್ರಮವನ್ನು ವೈದ್ಯರೇ ನಿರ್ಧರಿಸುತ್ತಾರೆ.

ಹೆಚ್ಚಿನ ಸಂದರ್ಭಗಳಲ್ಲಿ ನವಮಾಸ ತುಂಬಿದ ಮಗು ಆರೋಗ್ಯಪೂರ್ಣವಾಗಿರುತ್ತದೆ. ಮೊದಲ ಮಗು ಆರೋಗ್ಯಕರವಾಗಿದ್ದರೆ ಮುಂದಿನ ಮಗು ಸಹಾ ಆರೋಗ್ಯಕರವಾಗಿರುವ ಸಾಧ್ಯತೆ ಹೆಚ್ಚು. ಆದ್ದರಿಂದ ಪಿಸಿಓಎಸ್ ತೊಂದರೆ ಇದ್ದರೂ ಸೂಕ್ತ ಆರೈಕೆ, ಒತ್ತಡವಿಲ್ಲದೇ ಇರುವುದು, ವೈದ್ಯರಿಂದ ನಿಯಮಿತವಾಗಿ ತಪಾಸಣೆಗೊಳಗಾಗುವುದು, ಸೂಕ್ತ ಆಹಾರ ಸೇವಿಸುವುದು, ವೈದ್ಯರು ನಿರಾಕರಿಸಿದ ವಸ್ತುಗಳನ್ನು, ಮದ್ಯಪಾನ, ಧೂಮಪಾನಗಳನ್ನೂ ಹೆರಿಗೆಯಾಗುವವರೆಗೆ ಮರೆತು ಬಿಡುವುದು ಉತ್ತಮ.

English summary

Conceiving With PCOS: Things You Should Know

Women who are suffering from PCOS do have a more strenuous time getting pregnant than women who don't have the condition. It happens because the women suffering from PCOS have ovaries that don't function properly because they've cysts on them. This affects every aspect of a woman's reproductive health, including her pregnancy and fertility-related issues.
X
Desktop Bottom Promotion