Just In
Don't Miss
- Technology
Budget 2023: ಈ ಆಪ್ನಲ್ಲಿ ಪಡೆಯಿರಿ ಬಜೆಟ್ 2023 ರ ಸಂಪೂರ್ಣ ವಿವರ!
- News
ಭಾರತ್ ಜೋಡೋ ಯಾತ್ರೆಯಲ್ಲಿ ಭದ್ರತೆ ಲೋಪ: ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ
- Automobiles
ಭಾರತದದಲ್ಲಿ ಟ್ರೆಂಡಿಂಗ್ನಲ್ಲಿರುವ ಜನಪ್ರಿಯ ಕಾರುಗಳು: ಇವುಗಳಿಗೆ ಸರಿಸಾಟಿಯೇ ಇಲ್ಲ..!
- Sports
ಈ ಹಿಂದಿನಂತೆ ಈ ತಂಡ ಈಗ ಬಲಿಷ್ಠ ತಂಡವಲ್ಲ: ಆಕಾಶ್ ಚೋಪ್ರ ಹೇಳಿದ ಆ ತಂಡ ಯಾವುದು?
- Movies
'ಪಠಾಣ್' ಸಿನಿಮಾಕ್ಕೆ ಬೇರೊಂದು ಹೆಸರು ಸೂಚಿಸಿದ ಕಂಗನಾ! ಏಕೆ?
- Finance
ಹಿಂಡೆನ್ಬರ್ಗ್ ವರದಿ ಎಫೆಕ್ಟ್: ಅದಾನಿ ಸ್ಟಾಕ್ ಶೇ.20ರಷ್ಟು ಕುಸಿತ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸುವ ಈ ವೈರಲ್ ವೀಡಿಯೋ ನೋಡಿದರೆ ನಿಮಗೂ ಹೇಳಲು ಕತೆ ಇರುತ್ತೆ
ಇಲ್ಲೊಂದು ವೀಡಿಯೋ ಇದೆ ಅದನ್ನು ನೋಡಿದರೆ ಹೊಟ್ಟೆ ಹುಣ್ಣಾಗುವಂತೆ ನಗು ಬರುವುದರಲ್ಲಿ ನೋ ಡೌಟ್. ಇದು ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯವಾಗಿದ್ದು ಈ ದೃಶ್ಯ ನೋಡುವಾಗ ನಮ್ಮ ಬದುಕಿಗೆ ರಿಲೇಟ್ ಮಾಡಿಕೊಳ್ಳುತ್ತೇವೆ, ಹಾಗಿದೆ.
ಮರೆವು ಯಾರಿಗೆ ತಾನೆ ಇಲ್ಲ. ವಸ್ತುವನ್ನು ಎಲ್ಲೋ ಇಟ್ಟು ಮತ್ತೆಲ್ಲೋ ಹುಡುಕುತ್ತೇವೆ, ಇನ್ನು ಕೆಲವೊಮ್ಮೆ ನಾವು ಹುಡುಕುತ್ತಿರುವ ವಸ್ತುವನ್ನು ನಮ್ಮ ಬಳಿಯೇ ಇಟ್ಟುಕೊಂಡು ಎಲ್ಲಾ ಕಡೆ ಹುಡುಕಿ, ಕೊನೆಗೆ ನಮ್ಮ ಬಳಿಯೇ ಸಿಕ್ಕಾಗ ನಮ್ಮ ಮೂರ್ಖತನಕ್ಕೆ ನಗುತ್ತೇವೆ.
ಇಲ್ಲೊಬ್ಬ ಅಷ್ಟೇ ಅಂಗಳ ಕ್ಲೀನ್ ಮಾಡುತ್ತಾ ಇರುತ್ತಾನೆ, ಅಂಗಳದಲ್ಲಿರುವ ಕಸವನ್ನೆಲ್ಲಾ ಗುಡಿಸುತ್ತಾನೆ, ಇದನ್ನು ತೆಗೆದು ಬಿಸಾಡಬೇಕಲ್ಲ ಅದಕ್ಕೆ ಅಲ್ಲೇ ಇದ್ದ ಕಸ ಹಾಕಿ ಎಸೆಯುವ ವಸ್ತುವನ್ನು(ಕಸ ಎತ್ತುವ ಮೊರ) ತರುತ್ತಾನೆ, ಹೀಗೆ ತರುವಾಗ ಕೈಯಲ್ಲಿದ್ದ ಪೊರಕೆಯನ್ನು ಕಂಕುಳದಲ್ಲಿಟ್ಟು ಬಿಡುತ್ತಾನೆ, ಕಸದ ಮೊರದಲ್ಲಿ ಕಸ ಹಾಕಬೇಕೆಂದರೆ ಪೊರಕೆ ಬೇಕಲ್ಲಾ? ಅಯ್ಯೋ ಎಲ್ಲಿಟ್ಟೆ ಎಂದು ಹುಡುಕಲಾರಂಭಿಸುತ್ತಾನೆ. ಅವನಿಗೆ ಇಲ್ಲೇ ಇತ್ತಲ್ಲ ಪೊರಕೆ, ಅಷ್ಟು ಬೇಗ ಎಲ್ಲಿ ಮಾಯವಾಯ್ತು? ಕಸದ ಮೊರ ತರುವಷ್ಟರಲ್ಲಿ ಹೋಯ್ತಾ ಅಂತ ಪೊರಕೆಯನ್ನು ಕಂಕುಳದಲ್ಲಿ ಇಟ್ಟುಕೊಂಡೆ ಪೊರಕೆಗಾಗಿ ಹುಡುಕುತ್ತಿರುವ ವೀಡಿಯೋ ನೋಡಲು ತುಂಬಾನೇ ಮಜವಾಗಿದೆ.
ಸಾಕಷ್ಟು ಹುಡುಕಿದ ಮೇಲೆ ಅವನಿಗೆ ಪೊರಕೆ ನನ್ನ ಕಂಕುಳದಲ್ಲಿಯೇ ಇದೆ ಹೊತ್ತಾಗಿ ತನ್ನ ಪೆದ್ದು ತನಕ್ಕೆ ನಕ್ಕು ಬಿಡುತ್ತಾನೆ. ಈ ವೀಡಿಯೋ ನೋಡಿದವರು ತಮ್ಮ-ತಮ್ಮ ಅನುಭವ ಹಂಚಿಕೊಂಡಿದ್ದು ಅವುಗಳು ಕೂಡ ತುಂಬಾ ಸ್ವಾರಸ್ಯಕರವಾಗಿದೆ...
ಒಬ್ಬರು 'ನನಗಿನ್ನೂ ನೆನಪಿದೆ ನಾನು ನನ್ನ ತಾಯಿಯ ಮಡಿಲಿನಲ್ಲಿ ಮಲಗಿದ್ದೆ, ನನ್ನಮ್ಮ ನನ್ನ ಕಸಿನ್‌ನ ಕರೆದು ನಾನೆಲ್ಲಿ ಹುಡುಕು ಅಂದು ಹೇಳಿದ್ರು'
ಮತ್ತೊಬ್ಬರು 'ನಾನು ನನ್ನ ಮಗಳ ಜೊತೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದೆ, ಇದ್ದಕ್ಕಿದ್ದಂತೆ ನೋಡುತ್ತೇನೆ ನನ್ನ ಪಾಕೆಟ್‌ನಲ್ಲಿ ಫೋನಿಲ್ಲ, ಫೋನಿಲ್ಲದಿರುವುದು ನೋಡಿ ಗಾಬರಿ ಬಿದ್ದು ಅವಳಿಗೆ ಮತ್ತೆ ಕಾಲ್ ಮಾಡ್ತೀನಿ ಹೇಳಿ ಫೋನಿಟ್ಟಿದ್ದೆ.
ಇನ್ನೊಬ್ಬರು ನಾನು ಫೋನ್‌ನಲ್ಲಿ ಫ್ರೆಂಡ್ ಜೊತೆ ಮಾತನಾಡುತ್ತಿದ್ದೆ, ಆಗ ನನ್ನ ರೂಮ್ ಮೇಟ್ ಬಂದ, ಅವನ ಬಳಿ ನನ್ನ ಫೋನ್ ಕಾಣ್ತಾ ಇಲ್ಲ ಅಂದೆ, ನನ್ನ ಫೋನ್ ನೋಡಿದ್ರೆ ನನ್ನ ಕೈಯಲ್ಲೇ ಇತ್ತು, ಅದರಲ್ಲೇ ಮಾತನಾಡುತ್ತಿದ್ದೆ...
ಹೀಗೆ ಈ ವೀಡಿಯೋ ನೋಡಿದ ಪ್ರತಿಯೊಬ್ಬರು ಇದನ್ನು ನನಗೂ ರಿಲೇಟ್ ಮಾಡಬಹುದು ಎಂದು ತಮ್ಮ ಅನುಭವಗಳನ್ನು ಹಂಚಿಕೊಳ್ತಾ ಇದ್ದರೆ, ಅದರಲ್ಲಿ ಹೆಚ್ಚಿನವರು ಫೋನ್ ಕಳೆದು ಹೋದೆ ಎಂದು ಗಾಬರಿಯಾಗಿ ನಂತರ ಫೋನ್ ನೋಡಿದರೆ ನಮ್ಮ ಹತ್ರವೇ ಇತ್ತು ಎನ್ನುವ ಅನುಭವ ಹಂಚಿಕೊಳ್ಳುತ್ತಿದ್ದಾರೆ... ನಿಮಗೂ ಈ ರೀತಿಯ ಅನುಭವ ಖಂಡಿತ ಆಗಿರುತ್ತೆ, ನಿಮ್ಮ ಅನುಭವ ನಮ್ಮ ಜೊತೆ ಹಂಚಿಕೊಳ್ಳಿ.