For Quick Alerts
ALLOW NOTIFICATIONS  
For Daily Alerts

ಈ ಹಾರಾಡುವ ಹೋಟೆಲ್ ಬಗ್ಗೆ ಗೊತ್ತಿದೆಯೇ? ಇದರ ಡೆಮೋ ವೀಡಿಯೋ ಅಂತೂ ವಾವ್‌!

|

Never Lands ಎಂಬ ಹಾರಾಡುವ ಹೋಟೆಲ್.... ಇದರಲ್ಲಿ ನೀವು ಆಕಾಶದಲ್ಲಿ ಹಾರಾಡುತ್ತಲೇ ಶಾಪಿಂಗ್‌ ಮಾಡಬಹುದು, ಬಗೆ-ಬಗೆಯ ಆಹಾರಗಳನ್ನು ಸೇವಿಸಬಹುದು, ಅಷ್ಟೇ ಮದುವೆಯಾಗಲು ಇಚ್ಚಿಸುವವರಿಗೆ ಮದುವೆ ಮಂಟಪ ಕೂಡ ಈ ಹೋಟೆಲ್‌ನಲ್ಲಿದೆ. ಇಂಥದ್ದೊಂದು ಹೋಟೆಲ್‌ ಬಗ್ಗೆ ನೀವು ಕೇಳಿದ್ದೀರಾ?

ಇದೀಗ ಈ ಹೋಟೆಲ್‌ ಬಗ್ಗೆ ಒಂದು ಡೆಮೋ ವೀಡಿಯೋ ಬಿಟ್ಟಿದ್ದು ಆ ವೀಡಿಯೋ ನೋಡಿದ ನೆಟ್ಟಿಗರು ವಾವ್‌! ಅಂತಿದ್ದಾರೆ. ಅಬ್ಬಾ ಎಂಥ ಅದ್ಭುತ ಕಲ್ಪನೆ ಹಾಗೂ ಎಂಥ ಅದ್ಭುತ ಅನುಭವವಾಗಿರುತ್ತೆ ಎಂದೆಲ್ಲಾ ಮಾತನಾಡುತ್ತಿದ್ದಾರೆ.

ಈ ಹೋಟೆಲ್‌ ಸದ್ಯದಲ್ಲಿಯೇ ಆಕಾಶಕ್ಕೆ ನೆಗೆಯಲಿದ್ದುಈಗ ಇದರ ಡೆಮೋ ವೀಡಿಯೋ ಅಷ್ಟೇ ಬಿಡುಗಡೆ ಮಾಡಲಾಗಿದೆ.

Never Landsನ ವಿಶೇಷತೆ

Never Landsನ ವಿಶೇಷತೆ

ಈ ರೀತಿಯ ವಿಮಾನವನ್ನು Hashem Al-Ghaili ವಿನ್ಯಾಸ ಮಾಡಲಾಗಿದ್ದು ಇದು ಒಂದು ಬಾರಿಗೆ 5000 ಜನರನ್ನು ಕೊಂಡೊಯ್ಯುವ ಕೆಪಾಸಿಟಿ ಹೊಂದಿದೆ. ಈ ವಿಮಾನಕ್ಕೆ 20 ನ್ಯೂಕ್ಲಿಯರ್‌ ಪವರ್‌ ಎಂಜಿನ್‌ ಹೊಂದಿದ್ದು ಪ್ಲ್ಯಾನ್‌ ಮಾಡಿದ ಪ್ರಯಾಣ ಮುಗಿಯುವವರೆಗೆ ಇದು ಆಕಾಶದಲ್ಲಿಯೇ ಹಾರಾಡಲಿದೆ. ಏನಾದರೂ ರಿಪೇರಿ ಬಂದರೆ ಅದನ್ನುಸರಿ ಪಡಿಸಲು ಬೇಕಾದ ವಸ್ತುಗಳನ್ನು ಜೊತೆಗೆ ಕೊಂಡೊಯ್ಯಲಿದ್ದು ಆಕಾಶದಲ್ಲಿಯೇ ಅದನ್ನು ಸರಿಪಡಿಸುವ ವ್ಯವಸ್ಥೆಯೂ ಇದೆ.

ಪೈಲೆಟ್ ಇದೆಯೇ?

ಪೈಲೆಟ್ ಇದೆಯೇ?

ಈ ವಿಮಾನ ಅಟೋಮ್ಯಾಟಿಕ್‌ ಆಗಿ ಚಲಿಸುವ ತಂತ್ರಜ್ಞಾನ ಹೊಂದಿದೆಯಂತೆ. ಇದರಲ್ಲಾ ಕಾರ್ಯವೈಖರಿಗಳು ಅಟೋಮ್ಯಾಟಿಕ್ ಆಗಿದೆ, ಇದನ್ನು ಭವಿಷ್ಯ ಸಾರಿಗೆ (future of transport) ಎಂದು ಕರೆಯಲಾಗುತ್ತಿದೆ.

ಸ್ಪೋರ್ಟ್ಸ್‌ ಸೆಂಟರ್, ರೆಸ್ಟೋರೆಂಟ್‌, ಸಿನಿಮಾ ಹಾಲ್ ಎಲ್ಲವೂ ಇದೆ

ಸ್ಪೋರ್ಟ್ಸ್‌ ಸೆಂಟರ್, ರೆಸ್ಟೋರೆಂಟ್‌, ಸಿನಿಮಾ ಹಾಲ್ ಎಲ್ಲವೂ ಇದೆ

ಆಕಾಶದಲ್ಲಿ ಹಾರಾಡುವಾಗ ಫುಲ್‌ ಮನರಂಜನೆಗೆ ಇದರಲ್ಲಿ ಎಲ್ಲಾ ವ್ಯವಸ್ಥೆಯೂ ಇದೆ. ಶಾಪಿಂಗ್‌ ಮಾಲ್‌ಗಳಿವೆ, ಆಟ ಆಡಲು ಸ್ಪೋರ್ಟ್ಸ್ ಸೆಂಟರ್‌ಗಳಿವೆ, ರೆಸ್ಟೋರೆಂಟ್‌ಗಳಿವೆ, ಬಾರ್‌, ಪ್ಲೇಗ್ರೌಂಡ್‌ ಇನ್ನು ಆಕಾಶದಲ್ಲಿರುವಾಗ ಈಜಲು ಸ್ವಿಮ್ಮಿಂಗ್‌ ಫೂಲ್‌, ವೆಡ್ಡಿಂಗ್‌ ಹಾಲ್‌, ಮೀಟಿಂಗ್‌ ಹಾಲ್‌ ಹೀಗೆ ಸಕಲ ವ್ಯವಸ್ಥೆಯೂ ಇದೆ.

ಯಾವಾಗ ಲಾಂಚ್‌?

ಯಾವಾಗ ಲಾಂಚ್‌?

'ನೆವರ್‌ ಲ್ಯಾಂಡ್ಸ್‌' ಎಂಬ ಈ ಏರೋಪ್ಲೇನ್‌ ಯಾವಾಗ ಹಾರಲಿದೆ ಎಂಬುವುದರ ಬಗ್ಗೆ ಇನ್ನಷ್ಟೇ ದಿನಾಂಕ ಬಿಡುಗಡೆಯಾಗಬೇಕಾಗಿದೆ.

ಸ್ಟಾರ್‌ ವಾರ್ಸ್‌, ಸೂಪರ್‌ ಹೀರೋ ಕಾರ್ಟೂನ್ ಇವೆಲ್ಲಾ ನೋಡಿದವರಿಗೆ ಅಂಥದ್ದೇ ಕಾನ್ಸೆಪ್ಟ್‌ನ ಈ ಹೋಟೆಲ್‌ ಹತ್ತುವ ಹೆಬ್ಬಯಕೆ ಮೂಡುವುದಂತು ಸಹಜ. ಇವೆಲ್ಲಾ ನೋಡುವಾಗ ವಿಜ್ಞಾನ ಎಷ್ಟೊಂದು ಬೆಳೆಯುತ್ತಿದೆ ಅಲ್ವಾ ಅನಿಸಿದಿರಲ್ಲ...

English summary

Hotel that 'never lands' set to fly 5,000 guests; demo video goes Viral

Hotel that 'never lands' set to fly 5,000 guests; demo video goes Viral, read on...
X
Desktop Bottom Promotion