For Quick Alerts
ALLOW NOTIFICATIONS  
For Daily Alerts

ಇಂಗ್ಲೆಂಡ್ ರಾಣಿ ಬಳಿಯೇ ರಾಣಿಯನ್ನು ನೋಡಿದ್ದೀರಾ? ಎಂದು ಕೇಳಿದ ಟೂರಿಸ್ಟ್ ರಾಣಿ ನೀಡಿದ್ದ ಉತ್ತರ ಇದೀಗ ವೈರಲ್

|

ಇಂಗ್ಲೆಂಡ್‌ನ ರಾಣಿ, ಬರೋಬರಿ 7 ದಶಕಗಳ ಕಾಲ ಇಂಗ್ಲೆಂಡ್‌ ರಾಜ ಮನೆತನ ಚುಕ್ಕಾಣಿ ಹಿಡಿದಿದ್ದ ಎರಡನೇ ಎಲಿಜಬತ್‌ ವಿಧಿವಶರಾಗಿದ್ದಾರೆ. ಅವರಿಗೆ 96 ವಯಸ್ಸಾಗಿತ್ತು. ರಾಜಮನೆತನದಲ್ಲಿ ಅವರಷ್ಟು ದೀರ್ಘಾವಧಿ ಯಾರೂ ಆಡಿತ ನಡೆಸಿರಲಿಲ್ಲ. ರಾಜಮನೆತನ ಗೌರವಕ್ಕೆ ಚ್ಯುತಿ ಬರದಂತೆ ಅವರು ಆಡಳಿತವನ್ನು ನಡೆಸಿದ್ದರು.

96 ವರ್ಷದ ಎಲಿಜಬತ್‌ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು, ಇವರು ಸೆಪ್ಟೆಂಬರ್‌ 8ಕ್ಕೆ ಬ್ರಿಟನ್‌ನ ಬಲ್‌ಮೋರಾಲ್‌ನಲ್ಲಿಇಹಲೋಕಕ್ಕೆ ಗುಡ್‌ಬೈ ಹೇಳಿದ್ದಾರೆ.

2nd Elizabeth

ಇವರ ಮರಣದ ಸುದ್ದಿ ಕೇಳಿದ ಮೇಲೆ ಇವರ ಜೀವನದಲ್ಲಿ ನಡೆದ ಘಟನೆಯ ಕುರಿತ ಸುದ್ದಿಒಂದು ತುಂಬಾನೇ ವೈರಲ್‌ ಆಗಿದೆ. ಇಂಗ್ಲೆಂಡ್‌ನ ರಾಣಿಯ ಬಳಿಯೇ ಪ್ರವಾಸಿಗನೊಬ್ಬ ನೀವು ರಾಣಿಯನ್ನು ನೋಡಿದ್ದೀರಾ ಎಂದು ಕೇಳಿದಾಗ ಆಗ ರಾಣಿ ಕೊಟ್ಟ ಉತ್ತರ ಈಗ ಮತ್ತೊಮ್ಮೆ ವೈರಲ್‌ ಆಗುತ್ತಿದೆ, ಅಷ್ಟಕ್ಕೂ ಆ ಘಟನೆಯೇನು ಎಂದು ನೋಡೋಣ ಬನ್ನಿ:

ರಾಯಲ್ ಮಾಜಿ ಪ್ರೊಟೆಕ್ಷನ್ ಆಫೀಸರ್ ಹೇಳಿದ ಕತೆ

ರಾಯಲ್ ಮಾಜಿ ಪ್ರೊಟೆಕ್ಷನ್ ಆಫೀಸರ್ ಹೇಳಿದ ಕತೆ

ರಾಣಿಯ ಪ್ಲಾಟಿನಮ್ ಜ್ಯೂಬ್ಲಿ ಸಮಯದಲ್ಲಿ ಮಾಜಿ ರಾಯಲ್‌ ಪ್ರೊಟೆಕ್ಷನ್ ಆಫೀಸರ್ ಮಿ. ಗ್ರಿಫಿನ್ ಹೇಳಿದ ಇಂಟೆರೆಸ್ಟಿಂಗ್‌ ಸ್ಟೋರಿ ಈಗ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗಿದೆ.

ರಾಣಿ ಸ್ಕಾಟ್ಲೆಂಡ್, ಬಾಲ್ಮೋರಲ್ ಕ್ಯಾಸಲ್ ಬಳಿ ಇರುವ ಅಬರ್ಡೀನ್‌ಶೈರ್‌ಗೆ ಪಿಕ್ನಿಕ್ ಹೋಗಿದ್ದರು. ಆಗ ಅಲ್ಲೊಂದಷ್ಟು ಪ್ರವಾಸಿಗರ ಗುಂಪು ನಿಂತಿತ್ತು, ಆಗ ರಾಣಿ ಅವರನ್ನು ನೋಡಿ ಹಲೋ ಎಂದು ಹೇಳುತ್ತಾರೆ, ಎಲ್ಲಿಗಾದರೂ ಹೋದರೆ ಜನರ ಗುಂಪು ನೋಡಿದರೆ ನಿಲ್ಲಿಸಿ ಹಲೋ ಎನ್ನುತ್ತಿದ್ದರು ರಾಣಿ. ಅದೇ ರೀತಿ ಆ ದಿನ ಕೂಡ ಮಾಡಿದರು.

ಆಗ ಅವರು ನಾವು ಎಲ್ಲಿಂದ ಬಂದಿರುವುದು, ಎಲ್ಲಿಗೆ ಹೋಗುತ್ತಿರುವುದು ಎಲ್ಲಾ ಹೇಳಿದರು, ಕೊನೆಗೆ ರಾಣಿ ಹತ್ರ ನೀವು ಎಲ್ಲಿರುವುದು ಅಂತ ಕೇಳ್ತಾರೆ, ಅವರಿಗೆ ರಾಣಿ ಗುರುತು ಸಿಕ್ಕಿರಲಿಲ್ಲ.

ನೀವು ರಾಣಿಯನ್ನು ನೋಡಿದ್ದೀರಾ?

ನೀವು ರಾಣಿಯನ್ನು ನೋಡಿದ್ದೀರಾ?

ಅವರು ರಾಣಿ ಎಲಿಜಬತ್‌ ಜೊತೆ ಮಾತನಾಡುತ್ತಾ ನೀವು ಈ ಜಾಗಕ್ಕೆ ಬರ್ತಾ ಇರ್ತೀರಾ ಎಂದು ಕೇಳಿದಾಗ ರಾಣಿ ಹೌದು ಸುನಾರು 80 ವರ್ಷಗಳಿಂದ ವರ್ತಾ ಇದ್ದೇನೆ, ನಾನು ಚಿಕ್ಕ ಹುಡುಗಿಯಾಗಿರುವಾಗಲೇ ಬರ್ತಾ ಇದ್ದೆ ಎಂದು ಉತ್ತರಿಸುತ್ತಾರೆ, ಆಗ ಮುಂದೆ ನಡೆಯುವ ಮಾತುಕತೆ ಸ್ವಾರಸ್ಯಕರವಾಗಿ ಬದಲಾಗುತ್ತೆ.

ಅದರಲ್ಲೊಬ್ಬ ಪ್ರವಾಸಿಗ ನೀವು 80 ವರ್ಷದಿಂದ ಇಲ್ಲಿ ಬರ್ತಾ ಇದ್ದೀರಾ ಎಂದ ಮೇಲೆ ಇಲ್ಲಿಯ ರಾಣಿಯನ್ನು ನೋಡಿರುತ್ತೀರಾ ಅಲ್ವಾ ಎಂದು ಕೇಳುತ್ತಾನೆ. ಅದಕ್ಕೆ ರಾಣಿ ನೀಡಿರುವ ಉತ್ತರ ತುಂಬಾ ವೈರಲ್‌ ಆಗುತ್ತಿದೆ...

 ನಾನು ರಾಣಿಯನ್ನು ನೋಡಿಲ್ಲ ಎಂದ ರಾಣಿ ಎಲಿಜಬತ್‌

ನಾನು ರಾಣಿಯನ್ನು ನೋಡಿಲ್ಲ ಎಂದ ರಾಣಿ ಎಲಿಜಬತ್‌

ಪ್ರವಾಸಿಗ ನೀವು ರಾಣಿಯನ್ನು ನೋಡಿದ್ದೀರಾ ಎಂದು ಕೇಳಿದಾಗ ಇಲ್ಲ ನಾನು ನೋಡಿಲ್ಲ ಆದರೆ ಡಿಕ್ಕಿ (ಮಿ. ಗ್ರಿಫಿನ್ ಅವರನ್ನು ಅವರು ಹಾಗೆ ಕರೆಯುತ್ತಿದ್ದದು) ದಿನಾ ಮೀಟ್‌ ಮಾಡುತ್ತಾರೆ ಎಂದು ಹೇಳಿದರು.

ಆಗ ಟೂರಿಸ್ಟ್ ಗ್ರಿಫಿನ್ ಬಳಿ ತಿರುಗಿ ಹೌದಾ ಎಂಬಂತೆ ನೋಡುತ್ತಾರೆ ಆಗ ಮಿ.. ಗ್ರಿಫಿನ್ 'ರಾಣಿಗೆ ತುಂಬಾನೇ ಹ್ಯೂಮರ್‌ ಸೆನ್ಸ್' ಎಂದು ಹೇಳುತ್ತಾರೆ. ಆದರೂ ಆ ಪ್ರವಾಸಿಗರಿಗೆ ನಾವು ರಾಯಲ್ ಫ್ಯಾಮಲಿ ಮುಂದೆ ಇದ್ದೇವೆ ಎಂಬುವುದು ಗೊತ್ತೇ ಆಗಲಿಲ್ಲ.

ಅದರಲೊಬ್ಬ ಟೂರಿಸ್ಟ್ ಗ್ರಿಫಿನ್‌ ಹೆಗಲ ಮೇಲೆ ಕೈ ಹಾಕಿ ಫೋಟೋ ತೆಗೆಸಿಕೊಂಡರು, ನಂತರ ರಾಣಿ ಕೈಗೆ ಕ್ಯಾಮರಾ ಕೊಡುತ್ತಾ ಒಂದೆರಡು ಫೋಟೋ ಕ್ಲಿಕ್‌ ಮಾಡಬಹುದಾ ಎಂದು ಕೇಳುತ್ತಾರೆ.

ಪ್ರವಾಸಿಗರು ರಾಣಿಯ ಜೊತೆಯೂ ಫೋಟೋ ತೆಗೆಸಿಕೊಂಡು ಹೋಗುತ್ತಾರೆ.

ಅವರು ಮರಳಿದ ಮೇಲೆ ರಾಣಿ ಹೇಳುತ್ತಾರೆ ನನಗೆ ತುಂಬಾನೇ ಖುಷಿ ಆಗುತ್ತಿದೆ, ಅವನು ಆ ಫೋಟೋ ತೆಗೆದುಕೊಂಡು ಅಮೆರಿಕದಲ್ಲಿರುವ ತನ್ನ ಸ್ನೇಹಿತರಿಗೆ ತೋರಿಸಿದಾಗ ಯಾರಾದರೂ ಅವನಿಗೆ ನಾನು ಯಾರೆಂದು ಹೇಳಬಹುದು ಎಂದು ಆ ಘಟನೆ ನೆನೆದು ಖುಷಿಯಾಗಿದ್ದರು ಎಂದು ಗ್ರಿಫಿನ್‌ ಹೇಳಿರುವ ಸ್ಟೋರಿ ಇದೀಗ ಮತ್ತೊಮ್ಮೆ ವೈರಲ್ ಆಗಿದೆ.

English summary

Have You Met The Queen, A Tourist Asked The Queen. Her Answer goes viral

Old incident become viral after death of queen Elizabeth,One touris asked have you met queen Her Answer goes viral,
Story first published: Friday, September 9, 2022, 18:16 [IST]
X
Desktop Bottom Promotion