For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ಧರಿಸಿರುವ ಸೀರೆಯ ವಿಶೇಷತೆ ಗೊತ್ತೆ?

|

ಬಜೆಟ್‌ ದಿನ ಜನರು ಕೇಂದ್ರ ಬಜೆಟ್‌ ಬಗ್ಗೆ ಎಷ್ಟು ಚರ್ಚೆ ಮಾಡುತ್ತಾರೋ ಅಷ್ಟೇ ಚರ್ಚೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಸೀರೆ ಬಗ್ಗೆ ಕೂಡ ಮಾಡುತ್ತಾರೆ. ನಿರ್ಮಲಾ ಸೀತಾರಾಮನ್‌ ವಿತ್ತ ಸಚಿವೆ ಆಗಿ ಆಯ್ಕೆ ಆದ ಮೇಲೆ ಪ್ರತಿ ಬಾರಿ ಬಜೆಟ್‌ ಮಂಡಿಸುವಾಗಲೂ ಅವರು ಧರಿಸಿರುವ ಸೀರೆ ತುಂಬಾನೇ ಗಮನ ಸೆಳೆಯುತ್ತದೆ, ಅವರು ಪಾರ್ಲಿಮೆಂಟ್‌ಗೆ ಬರುವಾಗ ಅವರ ಕೈಯಲ್ಲಿರುವ ಕೆಂಪು ಬಟ್ಟೆಯಲ್ಲಿ ಸುತ್ತಿರುವ ಬಜೆಟ್‌ ಲ್ಯಾಪ್‌ನಷ್ಟೇ ಅವರು ಯಾವ ಬಣ್ಣದ ಸೀರೆ ಧರಿಸಿದ್ದಾರೆ ಎಂದು ಜನರು ಗಮನಿಸುತ್ತಾರೆ. ಏಕೆಂದರೆ ಬಜೆಟ್‌ ದಿನ ಅವರು ಸ್ವಲ್ಪ ಕಡು ಬಣ್ಣದ ಸೀರೆ ಧರಿಸುತ್ತಾರೆ, ಅದರಲ್ಲೂ ಕೈ ಮಗ್ಗದ ಸೀರೆಗಳನ್ನು ಬಳಸುವ ಮೂಲಕ ಗಮನ ಸೆಳೆಯುತ್ತಾರೆ.

ವಿತ್ತ ಸಚಿವೆ ಆಗಿ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡಿಸುತ್ತಿರುವುದು ಇದೇ 5ನೇ ಬಾರಿ. ಈ ಬಾರಿ ಕೆಂಪು ಬಣ್ಣದ ಸೀರೆಯ ಮೂಲಕ ಗಮನ ಸೆಳೆದಿದ್ದಾರೆ. 2023ರ ಬಜೆಟ್‌ ಮಂಡಿಸುವಾಗ ನಿರ್ಮಲಾ ಸೀತಾರಾಮನ್ ಧರಿಸಿರುವ ಸೀರೆಯ ವಿಶೇಷತೆಯೇನು, ಈ ಹಿಂದಿನ ಬಜೆಟ್‌ನಲ್ಲಿ ಅವರು ಯಾವ ಬಣ್ಣದ ಸೀರೆಯ ಮೂಲಕ ಗಮನ ಸೆಳೆದಿದ್ದರು ಈ ಬಗ್ಗೆ ನೋಡೋಣ ಬನ್ನಿ:

2023ರಲ್ಲಿ ಗಮನ ಸೆಳೆದ ನಿರ್ಮಲಾ ಸೀತಾರಾಮನ್ ಸೀರೆ

2023ರಲ್ಲಿ ಗಮನ ಸೆಳೆದ ನಿರ್ಮಲಾ ಸೀತಾರಾಮನ್ ಸೀರೆ

2023ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಧರಿಸಿರುವ ಕೆಂಪು ಬಣ್ಣದ ಸೀರೆಯ ವಿಶೇಷತೆ ಬಗ್ಗೆ ನೋಡುವುದಾದರೆ ಈ ಸೀರೆಗೂ ಕರ್ನಾಟಕಕ್ಕೂ ಸಂಬಂಧವಿದೆ. ಇದು ಧಾರವಾಡದ ನವಲಗುಂಧ ಸೀರೆಯಾಗಿದೆ, ಧಾರವಾಡದ ಉದ್ಯಮಿಯೊಬ್ಬರು ಈ ಸೀರೆಯನ್ನು ವಿತ್ತ ಸಚಿವೆಗೆ ಉಡುಗೊರೆಯಾಗಿ ನೀಡಿದ ಸೀರೆ ಇದಾಗಿದೆ.

ನಿರ್ಮಲಾ ಸೀತಾರಾಮನ್ ಧರಿಸಿರುವುದು ಧಾರವಾಡ ಜಿಲ್ಲೆ ನವಲಗುಂದ ಕಸೂತಿ ಕಲೆಯ ಕೆಂಪು ಬಣ್ಣದ ಸೀರೆ, ಬಜೆಟ್‌ ದಿನ ಈ ಸೀರೆ ತುಂಬಾನೇ ಗಮನ ಸೆಳೆದಿದೆ. ಇದನ್ನು ತಯಾರಿಸಲು ಧಾರವಾಡದ ನಾರಾಯಣಪುರದಲ್ಲಿ ಆರತಿ ಹಿರೇಮಠ ಮಾಲೀಕತ್ವದ ಆರತಿ ಕ್ರಾಫ್ಟ್‌ನ 210 ಮಹಿಳೆಯರು ಕೈಯಿಂದ ತಯಾರಿಸಿದ ಸೀರೆ ಇದಾಗಿದೆ. ಇದನ್ನು ಆರತಿ ಹಿರೇಮಠ ಅವರು ನಿರ್ಮಲಾ ಸೀತಾರಾಮನ್‌ ಅವರಿಗೆ ನೀಡಿದ ಉಡುಗೊರೆ ಇದಾಗಿದೆ.

ಈ ಸೀರೆಯಂತೂ ಬಜೆಟ್‌ನಲ್ಲಿ ತುಂಬಾನೇ ಗಮನ ಸೆಳೆದಿದೆ.

2019ರಲ್ಲಿ ನಿರ್ಮಲಾ ಸೀತಾರಾಮನ್‌ ಲುಕ್‌

2019ರಲ್ಲಿ ನಿರ್ಮಲಾ ಸೀತಾರಾಮನ್‌ ಲುಕ್‌

ಮೊತ್ತ ಮೊದಲ ಬಾರಿಗೆ ಬಜೆಟ್‌ ಮಂಡನೆ ಮಾಡುವಾಗ ಬ್ರೈಟ್‌ ಪಿಂಕ್‌ ಬಣ್ಣದ ಸೀರೆ ಧರಿಸಿ ಗಮನ ಸೆಳೆದಿದ್ದರು. ಮೊತ್ತ ಮೊದಲ ಬಾರಿಗೆ ಬಜೆಟ್‌ ಮಂಡನೆ ಮಾಡುವಾಗ ನಿರ್ಮಲಾ ಸೀತಾರಾಮನ್‌ ಹಳೆಯ ಪದ್ಧತಿಗಳನ್ನು ಬ್ರೇಕ್‌ ಮಾಡಿದ್ದರು, ಅಷ್ಟು ವರ್ಷಗಳಿಂದ ಬಜೆಟ್‌ ಮಂಡನೆ ಮಾಡುವಾಗ ಬ್ರೀಫ್‌ಕೇಸ್‌ನಲ್ಲಿ ಬಜೆಟ್‌ ಪೇಪರ್ ತರುತ್ತಿದ್ದರು, ಆದರೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲು ಬರುವಾಗ ಕೆಂಪು ಬಣ್ಣದ ರೇಷ್ಮೆಯ ಬಟ್ಟೆಯಲ್ಲಿ ಲ್ಯಾಪ್‌ ಸುತ್ತಿ ತರುವ ಮೂಲಕ ಗಮನ ಸೆಳೆದಿದ್ದರು. ಆ ಬಟ್ಟೆಯ ಮೇಲೆ ದೇಶದ ಲಾಂಛನವಿತ್ತು.

2020ರ ಕೇಂದ್ರ ಬಜೆಟ್‌

2020ರ ಕೇಂದ್ರ ಬಜೆಟ್‌

2020ರಲ್ಲಿ ಬಜೆಟ್‌ ಮಂಡನೆ ಮಾಡುವಾಗ ಗೋಲ್ಡ್‌ ಜರಿಯ ಹಳದಿ ಬಣ್ಣದ ಸೀರೆಯ ಮೂಲಕ ಗಮನ ಸೆಳೆದಿದ್ದರು, ಸೀರೆಗೆ ತಕ್ಕ ಮ್ಯಾಚಿಂಗ್‌ ಬ್ಲೌಸ್‌ ಧರಿಸಿದ್ದರು. ಹಳದಿ ಬಣ್ಣ ಎನ್ನುವುದು ಶುಭ ಸಂಕೇತ.

2021ರ ಕೇಂದ್ರ ಬಜೆಟ್

2021ರ ಕೇಂದ್ರ ಬಜೆಟ್

2021ರ ಬಜೆಟ್‌ನಲ್ಲಿ ಕೆಂಪು ಹಾಗೂ ಬಿಳಿ ಮಿಶ್ರಿತ ಪೋಚಂಪಲ್ಲಿ ಸ್ಯಾರಿಯಲ್ಲಿ ಗಮನ ಸೆಳೆದಿದ್ದರು, ಆ ಸೀರೆಯ ಸೆರಗು ಹಸಿರು ಬಣ್ಣದಲ್ಲಿದ್ದು ಅದಕ್ಕೆ ಕೆಂಪು ಮ್ಯಾಚಿಂಗ್‌ ಕೆಂಪು ಬಣ್ಣದ ಬ್ಲೌಸ್ ಧರಿಸಿದ್ದರು.

2022ರ ಕೇಂದ್ರ ಬಜೆಟ್

2022ರಲ್ಲಿ ಬಜೆಟ್‌ ಮಂಡನೆ ಮಾಡುವಾಗ ಮೆರೂನನ್‌ ಬಣ್ಣದ ಹ್ಯಾಂಡ್ಯೂಲೂಮ್ ಸೀರೆ ಧರಿಸಿ ಬಂದಿದ್ರು. ಈ ಸೀರೆಯನ್ನು ಬೋಮ್ಕಿ ಸೀರೆ ಎಂದು ಕರೆಯಲಾಗುವುದು. ಇದು ಒಡಿಸ್ಸಾ ಸಂಪ್ರದಾಯದ ಸೀರೆಯಾಗಿದೆ.


ಸೀರೆಗಳ ಮೂಲಕ ಕೈಮಗ್ಗಕ್ಕೆ ಉತ್ತೇಜನ ನೀಡುತ್ತಿರುವ ವಿತ್ತ ಸಚಿವೆ

ಪ್ರತಿಬಾರಿ ಬಜೆಟ್‌ ಮಂಡನೆ ಮಾಡುವಾಗ ಕೈಮಗ್ಗದ ಸೀರೆಯಲ್ಲಿ ಮಿಂಚುತ್ತಾರೆ. ಇವರು ತಮಗಿರುವ ಇಂಡಿಯನ್ ಟೆಕ್ಸ್ಟ್‌ಟೈಲ್ ಮೇಲಿರುವ ಅಭಿಮಾನದ ಬಗ್ಗೆ ಹೇಳುತ್ತಾರೆ. ರೇಷ್ಮೆ, ಕಾಟನ್ , ಕೈ ಮಗ್ಗದ ಸೀರೆಗಳೆಂದರೆ ಅವರಿಗೆ ತುಂಬಾನೇ ಇಷ್ಟ.
ಇವರು 5 ಬಾರಿ ಬಜೆಟ್‌ ಮಂಡನೆ ಮಾಡಿದ್ದಾರೆ, ಅದರಲ್ಲಿ ಒಂದು ಬಾರಿ ಮಾತ್ರ ಹಳದಿ ಬಣ್ಣದ ಸೀರೆ ಧರಿಸಿದ್ದರು, ಉಳಿದ ಸಂದರ್ಭಗಳಲ್ಲಿ ಅವರು ಕೆಂಪು ಹಾಗೂ ಮೆರೂನ್ ಬಣ್ಣದ ಸೀರೆಯಲ್ಲಿ ಗಮನ ಸೆಳೆದಿದ್ದರು.

ಬಜೆಟ್‌ ಮಂಡನೆ ಸಮಯದಲ್ಲಿ ಅವರು ಮಂಡಿಸುವ ವಿಷಯಗಳ ಜೊತೆಗೆ ಅವರು ಧರಿಸಿರುವ ಸೀರೆ ಕೂಡ ಗಮನ ಸೆಳೆಯುತ್ತಿದೆ ಅಲ್ವಾ?

English summary

Budget 2023 : These Saree looks of FM Nirmala Sitharaman much talked during budget Day

Budget 2023 : saree look of FM Nirmala Sitharaman talk of the town in every budget, why read on...
X
Desktop Bottom Promotion