For Quick Alerts
ALLOW NOTIFICATIONS  
For Daily Alerts

ಬಾವಿಗೆ ಬಿದ್ದ ಆನೆಯ ಜೀವ ಕಾಪಾಡಿದ ಆರ್ಕಿಮಿಡಿಸ್ ತತ್ತ್ವ: ವೀಡಿಯೋ ವೈರಲ್

|

ಬಾವಿಗೆ ಬಿದ್ದ ಸಲಗವನ್ನು ರಕ್ಷಣೆ ಮಾಡಿದ ವೀಡಿಯೋ ವೈರಲ್ ಆಗಿದೆ. ಅರಣ್ಯ ಇಲಾಖೆ ಸಿಬ್ಬಂದಿಯವರು ಬಾವಿಗೆ ಬಿದ್ದ ಆನೆಯನ್ನು ಮೇಲಕ್ಕೆತ್ತಲು ಉಪಯೋಗಿಸಿದ ಆರ್ಕಿಮಿಡಿಸ್‌ ನಿಯಮದ ಉಪಾಯ ತುಂಬಾ ವೈರಲ್ ಆಗಿದೆ.

ArchimedesPrinciple

ಆಳವಾದ ಬಾವಿಗೆ ಬಿದ್ದ ಆನೆಯನ್ನು ಮೇಲಕ್ಕೆ ತರುವುದು ಹೇಗೆ ಎಂಬುದೇ ದೊಡ್ಡ ಸವಾಲಿನ ವಿಷಯವಾಗಿತ್ತು. ಆನೆಗೆ ಹಗ್ಗ ಕಟ್ಟಿ ಮೇಲಕ್ಕೆತ್ತಲು ಸಾಧ್ಯವಾಗುತ್ತಿರಲಲ್ಲಿ, ಇನ್ನು ಹೇಗೆ ತಾನೆ ಆನೆಯನ್ನು ಮೇಲಕ್ಕೆ ತರಬಹುದು ಎಂದು ಯೋಚಿಸಿದಾಗ ಅರಣ್ಯ ಇಲಾಖೆ ಸಿಬ್ಬಂದಿಯವರಿಗೆ ಹೊಳೆದಿದ್ದೇ ಆರ್ಕಿಮಿಡಿಸ್ ನಿಯಮ. ಅದರಂತೆ ಬಾವಿಗೆ ಪಂಪ್‌ನಿಂದ ನೀರು ಹಾಯಿಸುತ್ತಾರೆ. ಬಾವಿಗೆ ನೀರು ಹಾಕುತ್ತಿದ್ದಂತೆ ಆನೆ ಮೇಲೆ-ಮೇಲೆ ಬರುತ್ತದೆ. ನಂತರ ಜೆಸಿಬಿ ಸಹಾಯ ಆನೆಯನ್ನು ಮೇಲಕ್ಕೆ ಎತ್ತಿ ರಕ್ಷಿಸಲಾಗುವುದು.

ಝಾರ್ಖಂಡ್‌ನ‌ ಗುಮ್ಲಾ ಜಿಲ್ಲೆಯ ಆಮ್ಲಿಯಾ ಗ್ರಾಮದ ಬಾವಿಯಲ್ಲಿಆನೆ ಬಿತ್ತು, ಇದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆಯವರ ಗಮನಕ್ಕೆ ತಂದರು. ಆಗ ತೂಕದ ವಸ್ತುವನ್ನು ಮೇಲಕ್ಕೆ ಎತ್ತಲು ಆರ್ಕಿಮಿಡಿಸ್ ನಿಯಮ ಅರಣ್ಯ ಇಲಾಖೆ ಸಿಬ್ಬಂದಿಗೆ ನೆನಪಾಗುತ್ತದೆ.

ಆರ್ಕಿಮಿಡಿಸ್ ನಿಯಮ ಪ್ರಕಾರ ಕಾಯವು ತಾನು ಸ್ತಾನಪಲ್ಲಟಗೊಳಿಸಿದ ನೀರಿನ ತೂಕಕ್ಕೆ ಸಮನಾದ ಮೇಲ್ಮುಖ ಒತ್ತಡವನ್ನು ಅನುಭವಿಸುತ್ತದೆ. ಆದ್ದರಿಂದ ಅಧಿಕ ತೂಕದ ವಸ್ತುವೊಂದನ್ನು ನೀರಿನೊಳಗಿನಿಂದ ಮೇಲೆತ್ತುವುದು ಸುಲಭವಾಗುವುದು.

English summary

'Archimedes'Principle'to Rescue Elephant from Well

Forest Department officials used archimedes Principle' to rescue elephant in Jharkhand . This video goes viral.
X
Desktop Bottom Promotion