For Quick Alerts
ALLOW NOTIFICATIONS  
For Daily Alerts

ನೀರು, ಬೆಂಕಿ, ಭೂಮಿ, ವಾಯುವಿನಲ್ಲಿ ನಿಮ್ಮ ರಾಶಿಚಕ್ರ ಯಾವ ಅಂಶಕ್ಕೆ ಸೇರುತ್ತದೆ?, ಇದರ ಅರ್ಥವೇನು ಇಲ್ಲಿದೆ ಸಂಪೂರ್ಣ ಮಾಹಿತಿ

|

ಜ್ಯೋತಿಶಾಸ್ತ್ರದ ಪ್ರಕಾರ 12 ರಾಶಿಚಕ್ರಗಳಿವೆ, ಈ 12 ರಾಶಿಚಿಹ್ನೆಗಳಲ್ಲಿ ಪ್ರತಿಯೊಂದು ಚಿಹ್ನೆಯು ತನ್ನದೇ ಆದ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಹೊಂದಿದೆ. ತನ್ನದೇ ನಿರ್ದಿಷ್ಟ ಲಕ್ಷಣಗಳು, ಆಸೆಗಳು, ಜೀವನಶೈಲಿ ಮತ್ತು ಜನರ ಬಗೆಗಿನ ಮನೋಭಾವ ಎಲ್ಲವೂ ಭಿನ್ನವೇ. ಅಲ್ಲದೇ ಪ್ರತಿ ರಾಶಿಗೂ ಮುಖ್ಯವಾಗಿ ಒಂದು ಗ್ರಹ ಆಳುವ ಗ್ರಹ ಇರುತ್ತಾನೆ. ಆದರೆ ಇದರ ಸ್ಥಾನವು ಸೂರ್ಯ, ಚಂದ್ರರ ಪಥ ಬದಲಾವಣೆಯಾದಂತೆ ಬದಲಾಗುತ್ತದೆ. ಪ್ರತಿ ವ್ಯಕ್ತಿಗೂ ಈ ರಾಶಿ ಆಯ್ಕೆ ಆಗುವ ಮಾನದಂಡ ಹುಟ್ಟುವ ಸಮಯ. ಇದನ್ನು ಆಧರಿಸಿ ರಾಶಿ, ನಕ್ಷತ್ರವನ್ನು ಸೂಚಿಸಲಾಗುತ್ತದೆ.

ಜ್ಯೋತಿಶಾಸ್ತ್ರದ ಪ್ರಕಾರ 12 ರಾಶಿಗಳನ್ನು ಪ್ರಮುಖವಾಗಿ 4 ಭಾಗಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿಯೊಂದೂ ರಾಶಿಯೂ ಗಾಳಿ, ಬೆಂಕಿ, ನೀರು ಮತ್ತು ಭೂಮಿ ಎಂಬ ನಾಲ್ಕು ಅಂಶಗಳಲ್ಲಿ ಒಂದಾಗಿರುತ್ತದೆ. ಈ ಅಂಶಗಳು ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಕಾರ್ಯನಿರ್ವಹಿಸುವ ಅತ್ಯಗತ್ಯ ಶಕ್ತಿಯನ್ನು ಪ್ರತಿನಿಧಿಸುತ್ತವೆ. ಜ್ಯೋತಿಷ್ಯವು ಈ ಶಕ್ತಿಗಳನ್ನು ಸಕಾರಾತ್ಮಕ ಅಂಶಗಳ ಮೇಲೆ ಕೇಂದ್ರೀಕರಿಸಲು, ನಮ್ಮ ಸಾಮರ್ಥ್ಯ ಮತ್ತು ನಮ್ಮ ಸಕಾರಾತ್ಮಕ ಗುಣಲಕ್ಷಣಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು ಮತ್ತು ನಕಾರಾತ್ಮಕವಾದವುಗಳೊಂದಿಗೆ ವ್ಯವಹರಿಸಲು ಸಹಾಯ ಮಾಡಲು ಇದು ಸಹಕಾರಿ ಎನ್ನುತ್ತದೆ.

ರಾಶಿಚಕ್ರಗಳ ನಾಲ್ಕು ಅಂಶಗಳು ಜ್ಯೋತಿಷ್ಯ ಚಿಹ್ನೆಗಳಿಗೆ ಸಂಬಂಧಿಸಿದ ವಿಶಿಷ್ಟ ವ್ಯಕ್ತಿತ್ವ ಪ್ರಕಾರಗಳನ್ನು ವಿವರಿಸಲು ಸಹಾಯ ಮಾಡುತ್ತದೆ. ಈ ನಾಲ್ಕು ಅಂಶಗಳು ಮೂಲ ಗುಣಲಕ್ಷಣಗಳು, ಭಾವನೆಗಳು, ನಡವಳಿಕೆ ಮತ್ತು ಚಿಂತನೆಯ ಮೇಲೆ ಆಳವಾದ ಪ್ರಭಾವದ ಬಗ್ಗೆ ಪ್ರದರ್ಶಿಸುತ್ತವೆ. ಏನದು ಮುಂದೆ ನೋಡೋಣ:

ನೀರಿನ ಸಂಕೇತದ ರಾಶಿಚಕ್ರಗಳು

ನೀರಿನ ಸಂಕೇತದ ರಾಶಿಚಕ್ರಗಳು

ನೀರಿನ ಚಿಹ್ನೆಗಳು ಅಸಾಧಾರಣ ಭಾವನಾತ್ಮಕ ಮತ್ತು ಅತಿಯಾದ ಸೂಕ್ಷ್ಮ ಸ್ವಭಾವದವರು ಎಂದು ಹೇಳಲಾಗುತ್ತದೆ. ಇವರು ಹೆಚ್ಚು ಅರ್ಥಗರ್ಭಿತವಾಗಿರುತ್ತಾರೆ ಮತ್ತು ಸಾಗರದಷ್ಟೇ ನಿಗೂಢವಾಗಿರಬಹುದು. ನೀರಿನ ಚಿಹ್ನೆಯ ರಾಶಿಚಕ್ರದವರು ಆಳವಾದ ಸಂಭಾಷಣೆ ಮತ್ತು ಅನ್ಯೋನ್ಯತೆಯನ್ನು ಪ್ರೀತಿಸುತ್ತಾರೆ. ಎಲ್ಲವನ್ನೂ ಮುಕ್ತವಾಗಿ ಮಾಡುತ್ತಾರೆ ಮತ್ತು ತಮ್ಮ ಪ್ರೀತಿಪಾತ್ರರನ್ನು ಬೆಂಬಲಿಸಲು ಯಾವಾಗಲೂ ಇರುತ್ತಾರೆ.

ನೀರಿನ ಸಂಕೇತದ ರಾಶಿಚಕ್ರಗಳು: ಕರ್ಕ, ವೃಶ್ಚಿಕ ಮತ್ತು ಮೀನ ರಾಶಿ.

ಬೆಂಕಿಯ ಚಿಹ್ನೆಯ ರಾಶಿಚಕ್ರಗಳು

ಬೆಂಕಿಯ ಚಿಹ್ನೆಯ ರಾಶಿಚಕ್ರಗಳು

ಬೆಂಕಿಯ ಚಿಹ್ನೆಯ ರಾಶಿಚಕ್ರದವರು ಭಾವೋದ್ರಿಕ್ತ, ಕ್ರಿಯಾತ್ಮಕ ಮನೋಧರ್ಮವನ್ನು ಹೊಂದಿರುತ್ತಾರೆ. ಅವರು ಬೇಗನೆ ಕೋಪಗೊಳ್ಳುತ್ತಾರೆ, ಆದರೂ ಅಷ್ಟೇ ಸುಲಭವಾಗಿ ಕ್ಷಮಿಸುತ್ತಾರೆ. ಅವರು ಅಪಾರ ಶಕ್ತಿಯನ್ನು ಹೊಂದಿರುವ ಸಾಹಸಿಗರು ಎಂದರೆ ತಪ್ಪಾಗಲಾರದು. ಅವರು ದೈಹಿಕವಾಗಿ ತುಂಬಾ ಪ್ರಬಲರಾಗಿದ್ದಾರೆ ಮತ್ತು ಇತರರಿಗೆ ಸ್ಫೂರ್ತಿಯ ಮೂಲವಾಗಿರುತ್ತಾರೆ. ಬೆಂಕಿಯ ಚಿಹ್ನೆಯ ಇರುವ ರಾಶಿಚಕ್ರದವರು ಬುದ್ಧಿವಂತರು, ಸ್ವಯಂ-ಅರಿವುಳ್ಳವರು, ಸೃಜನಶೀಲ ಮತ್ತು ಆದರ್ಶವಾದಿ ಜನರು, ಯಾವಾಗಲೂ ಕ್ರಿಯೆಗೆ ಸಿದ್ಧವಾಗಿರುವಂಥವರು.

ಬೆಂಕಿಯ ಚಿಹ್ನೆಯ ರಾಶಿಚಕ್ರಗಳು: ಮೇಷ, ಸಿಂಹ ಮತ್ತು ಧನು ರಾಶಿ.

ಭೂಮಿ ಸಂಕೇತದ ರಾಶಿಚಕ್ರಗಳು

ಭೂಮಿ ಸಂಕೇತದ ರಾಶಿಚಕ್ರಗಳು

ಭೂಮಿಯ ಚಿಹ್ನೆಗಳು ನೆಲದ ಮತ್ತು ನಮ್ಮನ್ನು ಭೂಮಿಗೆ ಇಳಿಸುವಂಥವುಗಳಾಗಿವೆ. ಇವರು ಹೆಚ್ಚಾಗಿ ಸಂಪ್ರದಾಯವಾದಿ ಮತ್ತು ವಾಸ್ತವಿಕರು, ಆದರೆ ಅವರು ತುಂಬಾ ಭಾವನಾತ್ಮಕವಾಗಿಯೂ ಇರಬಹುದು. ವಾಸ್ತವವನ್ನು ಹೆಚ್ಚು ನಂಬುತ್ತಾರೆ, ವಾಸ್ತವದಲ್ಲಿ ಹೆಚ್ಚು ಬದುಕುತ್ತಾರೆ. ಇವರು ಪ್ರಾಯೋಗಿಕವಾಗಿರುತ್ತಾರೆ, ನಿಷ್ಠಾವಂತರು, ಸ್ಥಿರರಾಗಿರುತ್ತಾರೆ ಮತ್ತು ಕಠಿಣ ಸಮಯಗಳಲ್ಲೂ ಯಾರನ್ನೂ ಬಿಡುವುದಿಲ್ಲ, ಜತೆಗಿದ್ದು ಸಹಕಾರ ನೀಡುತ್ತಾರೆ.

ಭೂಮಿಯ ಚಿಹ್ನೆಗಳು: ವೃಷಭ, ಕನ್ಯಾ ಮತ್ತು ಮಕರ ರಾಶಿ.

ವಾಯು ಚಿಹ್ನೆಯ ರಾಶಿಚಕ್ರಗಳು

ವಾಯು ಚಿಹ್ನೆಯ ರಾಶಿಚಕ್ರಗಳು

ಗಾಳಿಯ ಚಿಹ್ನೆಯುಳ್ಳ ರಾಶಿಚಕ್ರದವರು ತರ್ಕಬದ್ಧರು, ಸಾಮಾಜಿಕವಾಗಿರುವವರು, ಪ್ರೀತಿಯ ಸಂವಹನ ಮಾಡುವವರು ಮತ್ತು ಜನರೊಂದಿಗಿನ ಹೆಚ್ಚು ಸಂಬಂಧ ಬೆಸೆಯುವವರು. ಅಲ್ಲದೇ, ಇವರು ಚಿಂತಕರು, ಸ್ನೇಹಪರರು, ಬೌದ್ಧಿಕರು, ಸಂವಹನಕಾರರು ಮತ್ತು ವಿಶ್ಲೇಷಣಾತ್ಮಕರು. ಇವರು ತಾತ್ವಿಕ ಚರ್ಚೆಗಳು, ಸಾಮಾಜಿಕ ಕೂಟಗಳು ಮತ್ತು ಉತ್ತಮ ಪುಸ್ತಕಗಳನ್ನು ಪ್ರೀತಿಸುತ್ತಾರೆ. ಇತರರಿಗೆ ಹೆಚ್ಚು ಸಲಹೆ ನೀಡುವುದನ್ನು ಆನಂದಿಸುತ್ತಾರೆ, ಆದರೆ ಕೆಲವು ಬಾಡಿ ಇದು ಮೇಲ್ನೋಟಕ್ಕೆ ಸಹ ಆಗಿರಬಹುದು.

ವಾಯು ಚಿಹ್ನೆಗಳು: ಮಿಥುನ, ತುಲಾ ಮತ್ತು ಕುಂಭ ರಾಶಿ.

English summary

Zodiac sign meaning of four elements earth air water fire as per astrology

Here we are discussing about Four elements help describe the unique personality types associated with astrological signs. The four zodiac elements exhibit profound influence on basic character traits, emotions, behavior and thinking. Read more.
X
Desktop Bottom Promotion