For Quick Alerts
ALLOW NOTIFICATIONS  
For Daily Alerts

ಅತಿಯಾಗಿ ನಕ್ಕಿದ್ದಕ್ಕೆ ಆಕೆಯ ದವಡೆಗಳೇ ಸ್ಥಳಾಂತರ ಗೊಂಡವು..!

|

ನಗು ಮನುಷ್ಯನಿಗೆ ಸಿಕ್ಕ ಒಂದು ವರ. ಮನಸ್ಸಿನಲ್ಲಿ ಸಂತೋಷ, ಮುಖದಲ್ಲಿ ನಗುವಿದ್ದರೆ ಜೀವನವೇ ಸ್ವರ್ಗವಾಗಿ ಬಿಡುತ್ತವೆ. ನಗುವಿಲ್ಲದ ಮುಖ ಹಾಗೂ ಮನಸ್ಸು ಎರಡು ಭಾರವಾದ ಭಾವನೆಯನ್ನು ನೀಡುತ್ತವೆ. ಒಮ್ಮೆ ನಕ್ಕರೂ ಸಾಕು ಮನಸ್ಸು ಸಾಕಷ್ಟು ನಿರಾಳತೆಯನ್ನು ಪಡೆದುಕೊಳ್ಳುವುದು. ಜೊತೆಗೆ ಮಾನಸಿಕ ಚಿಂತನೆಗಳಿಗೆ ಒಂದು ರೀತಿಯ ಚೈತನ್ಯ ದೊರೆಯುವುದು. ಒಂದು ಸುಂದರ ನಗು ಸುತ್ತಲಿನ ಜನರಲ್ಲೂ ಸಂತೋಷವನ್ನು ತುಂಬುವುದು. ಹಾಗಾಗಿಯೇ ಮನುಷ್ಯರು ದೇವರಲ್ಲಿ ಸಂತೋಷವಾದ ಹಾಗೂ ನಗುವಿನಿಂದ ಕೂಡಿರುವ ಜೀವನವನ್ನು ಬೇಡಿಕೊಳ್ಳುತ್ತಾರೆ.

ನಾವು ಎಷ್ಟೇ ಕಷ್ಟಪಟ್ಟು ದುಡಿದರೂ ಸರಿ ನಮ್ಮ ನಗುವಿಗೆ ಕಾರಣವಾಗುವ ಸಂಗತಿಗಳು ದೊರೆತರೆ ಸಾಕು ಎಲ್ಲವೂ ಮಾಯವಾಗುತ್ತವೆ. ಹೃದಯ ಪೂರ್ವಕವಾಗಿ ನಗುವುದರಿಂದ ನಮ್ಮ ಆರೋಗ್ಯದಲ್ಲೂ ಸಾಕಷ್ಟು ಬದಲಾವಣೆಯನ್ನು ಕಾಣಬಹುದು. ವೈದ್ಯಕೀಯ ಶಾಸ್ತ್ರದ ಪ್ರಕಾರ ಒಂದು ಅತ್ಯುತ್ತಮ ನಗುವು ಔಷಧಕ್ಕೆ ಸಮಾನವಾಗಿರುತ್ತದೆ. ಈ ಹಿನ್ನೆಲೆಯಲ್ಲಿಯೇ ಇಂದು ನಗುವುದು ಸಹ ಒಂದು ವ್ಯಾಯಾಮವಾಗಿ ಜನರು ಅನುಸರಿಸುತ್ತಿದ್ದಾರೆ.

Woman dislocates her jaw after laughing too hard

ಚಿತ್ರಕೃಪೆ: ನ್ಯೂಸ್ ಟ್ರಾಕ್

ಆದರೆ ಇಲ್ಲೊಬ್ಬ ಮಹಿಳೆಗೆ ಹಾಗಾಗಲಿಲ್ಲ. ಅವಳ ನಗುವೇ ಒಂದು ಅಪಾಯದ ಸಂಗತಿಯನ್ನು ಸೃಷ್ಟಿಸಿತು. ಅವಳು ಸಂತೋಷದಿಂದ ನಕ್ಕಿರುವುದೇ ಅವಳ ದುಃಖಕ್ಕೆ ಕಾರಣವಾಯಿತು. ಹೌದು, ಚೀನಾದಲ್ಲಿ ಒಂದು ವಿಲಕ್ಷಣವಾದ ಘಟನೆಯೊಂದು ನಡೆದಿದೆ. ಈ ರೀತಿಯ ಸಮಸ್ಯೆ ಸಾಮಾನ್ಯವಾಗಿ ಯಾರಿಗೂ ಆಗಿರಲಿಕ್ಕೆ ಸಾಧ್ಯವಿಲ್ಲ. ಹಾಗಾದರೆ ಅದೆಂತಹ ಸಂಗತಿ ಎಂದು ನೋಡೋಣ ಬನ್ನಿ...

ಅದು ಚೀನಾದ ಗುವಾಂಗ್ ಡಾಂಗ್ ಪ್ರಾಂತ್ಯ. ಅಲ್ಲಿ ವೇಗವಾಗಿ ಚಲಿಸುತ್ತಿದ್ದ ರೈಲ್ ಒಂದರಲ್ಲಿ ಮಹಿಳೆಯೊಬ್ಬಳು ಪ್ರಯಾಣಿಸುತ್ತಿದ್ದಳು. ಅನೇಕ ಜನರಿಂದ ಕೂಡಿದ ಆ ರೈಲಿನಲ್ಲಿ ನಿಂತು ಪ್ರಯಾಣಿಸುತ್ತಿದ್ದಳು. ಯಾವುದೋ ಹಾಸ್ಯ ಸನ್ನಿವೇಶ ಸೃಷ್ಟಿಯಾದ್ದರಿಂದ ತನ್ನೊಟ್ಟಿಗಿರುವವರ ಜೊತೆಗೆ ಒಮ್ಮೆ ಜೋರಾಗಿ ನಕ್ಕಿದ್ದಾಳೆ. ಹಾಗೆ ನಕ್ಕವಳು ಹಲವಾರು ನಿಮಿಷಗಳ ಕಾಲ ನಗುತ್ತಲೇ ಇದ್ದಾಳೆ. ಅವಳ ವರ್ತನೆ ಅಲ್ಲಿರುವವರಿಗೆ ಒಮ್ಮೆ ಆಶ್ವರ್ಯ ಹಾಗೂ ಸಂದೇಹವನ್ನು ಮೂಡಿಸಿದೆ...

ನಕ್ಕರೆ ಎನು ಸಮಸ್ಯೆ, ಒಳ್ಳೆಯದೆ ಅಲ್ಲವೇ ಎನ್ನಬಹುದು. ಮುಂದೆ ಕೇಳಿ... ಆಕೆ ನಕ್ಕಿರುವ ಪರಿಣಾಮಕ್ಕೆ ಆಕೆಯ ದವಡೆಗಳೇ ಸ್ಥಳಾಂತರಗೊಂಡಿದೆ. ಹೌದು, ನಗಲು ಬಾಯಿ ತೆರದ ಆಕೆಗೆ ಪುನಃ ಬಾಯಿ ಮುಚ್ಚಲು ಸಾಧ್ಯವಾಗದೆ ಕುಸಿದಿದ್ದಾಳೆ. ಸಹ ಪ್ರಯಾಣಿಕರು ತುರ್ತುಚಿಕಿತ್ಸೆಗೆ ಮನವಿ ಮಾಡಿಕೊಂಡಿದ್ದಾರೆ.

ಆಕೆಯ ಅದೃಷ್ಟವೇನೋ, ಕೂಡಲೇ ಇದೇ ರೈಲಿನಲ್ಲಿ ಪ್ರಯಾಣಿಸುತ್ತಿರುವ ವೈದ್ಯರೊಬ್ಬರು ಅವಳನ್ನು ಪರೀಕ್ಷಿಸಿದ್ದಾರೆ. ಅದನ್ನು ಕಂಡ ವೈದ್ಯರು ಮೊದಲು ಆಕೆಗೆ ಪಾರ್ಶ್ವವಾಯು ಆಗುತ್ತಿದೆಯೇ ಎಂದು ಭಾವಿಸಿದರು. ಅವಳ ರಕ್ತದೊತ್ತಡವನ್ನು ಪರೀಕ್ಷಿಸಿದರು. ಆಗ ಸಮಸ್ಯೆ ಇಲ್ಲ ಎನ್ನುವುದು ತಿಳಿದರು.

ನಂತರ ಅವಳ ದವಡೆಯನ್ನು ಪರೀಕ್ಷಿಸಿದರು. ದವಡೆಯು ಸ್ಥಳಾಂತರವಾಗಿರುವುದು ತಿಳಿಯಿತು. ಹಾಗೆಯೇ ಅವಳಿಗೆ ಅವಳ ಸಮಸ್ಯೆಯನ್ನು ವಿವರಿಸಿದರು. "ನಾನು ದವಡೆಯನ್ನು ಸರಿ ಮಾಡುವ ತಜ್ಞನಲ್ಲ, ಆದರೆ ಮಾಡುವ ವಿಧಾನ ತಿಳಿದಿದೆ,'' ಎಂದು ಹೇಳಿದರು. ಅಷ್ಟರಲ್ಲಿ ಅಕೆಯ ಜೊತೆಗೆ ಇರುವವರು ಅವಳು ಗರ್ಭಾವಸ್ಥೆಯಲ್ಲಿ ಪದೇ ಪದೇ ವಾಂತಿ ಮಾಡುತ್ತಿದ್ದಳು, ಆಗ ಅವಳ ದವಡೆಯು ಸ್ಥಳಾಂತರಗೊಳ್ಳುತ್ತಿತ್ತು ಎಂದು ತಿಳಿಸಿದರು. ನಂತರ ವೈದ್ಯರು ತನಗೆ ತಿಳಿದಿರುವ ಹಾಗೆ ಅವಳ ದವಡೆಯನ್ನು ಸರಿಯಾಗಿ ಕೂರಿಸಿದರು. ಹಾಗೇ ವೈದ್ಯರು, ಮತ್ತೆ ನಗುವಾಗ ಅಷ್ಟು ದೊಡ್ಡದಾಗಿ ನಗಬಾರದು ಎನ್ನುವ ಮೂಲಕ ಎಚ್ಚರಿಕೆಯನ್ನು ತಿಳಿಸಿದರು. ಅವಳ ಅದೃಷ್ಟ ಉತ್ತಮವಾಗಿರುವುದಕ್ಕೆ ಆ ರೈಲಿನಲ್ಲಿಯೇ ಚಿಕಿತ್ಸೆ ಲಭಿಸಿತ್ತು, ಇಲ್ಲವಾದಲ್ಲಿ ದೇವರೇ ಬಲ್ಲ!.

ನೀವು ಸಹ ಈ ಮೊದಲು ದವಡೆ ಸ್ಥಳಾಂತರವಾದಂತಹ ಅನುಭವವನ್ನು ಹೊಂದಿದ್ದರೆ ನಗುವಾಗ, ಆಕಳಿಕೆ ತೆಗೆಯುವಾಗ, ಕೂಗುವಾಗ ಸಾಕಷ್ಟು ಎಚ್ಚರಿಕೆ ವಹಿಸಿ. ಬಾಯನ್ನು ಅತಿಯಾಗಿ ಅಗಲಿಸಿದರೆ ಕೆಲವೊಮ್ಮೆ ಈ ಸಮಸ್ಯೆ ಉಂಟಾಗುವ ಸಾಧ್ಯತೆಗಳು ಇರುತ್ತವೆ!.

English summary

Woman dislocates her jaw after laughing too hard

Laughter is the best medicine, is how the saying goes, but for a woman in China, laughter turned out to be the cause for the injury. The woman, who was travelling from Kunming South to Guangzhou South Railway Station, laughed so hard that her jaw dropped and left her mouth hanging wide open. Really.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X