For Quick Alerts
ALLOW NOTIFICATIONS  
For Daily Alerts

ಫೋಟೋದಲ್ಲೇಕೆ ನೈಜ ಸೌಂದರ್ಯ ಮರೆಯಾಗುತ್ತದೆ?

|

ಸೌಂದರ್ಯ ಪ್ರಿಯರು, ಸೆಲ್ಫಿ ಪ್ರಿಯರು, ಬಹುತೇಕ ಹೆಣ್ಣುಮಕ್ಕಳ ಅತಿದೊಡ್ಡ ಪ್ರಶ್ನೆ, "ನಾನು ಕನ್ನಡಿಯಲ್ಲಿ ತುಂಬಾ ಸುಂದರವಾಗಿ ಕಾಣುತ್ತೇನೆ ಆದರೆ, ಫೋಟೋ ತೆಗೆದರೆ ಆ ಅಂದವೆಲ್ಲಾ ಮಾಯವಾಗಿರುತ್ತದೆ, ಚೆನ್ನಾಗಿಯೇ ಕಾಣುವುದಿಲ್ಲ ಏಕೆ?''. "ನನ್ನ ಚರ್ಮ ಕನ್ನಡಿಯಲ್ಲಿ ನೋಡಿದಾಗ ಫಳಫಳ ಎಂದು ಹೊಳೆಯುತ್ತದೆ ಆದರೆ ಮರುಕ್ಷಣವೇ ಕ್ಯಾಮೆರಾದಲ್ಲಿ ಸೆಲ್ಫಿ ತೆಗೆದರೆ ತ್ವಚೆಯಲ್ಲಿ ಹೊಳಪೇ ಇರುವುದಿಲ್ಲ ಅದೇಕೇ ಹಾಗೇ?,

look attractive

ನನ್ನ ಸೌಂದರ್ಯದ ಬಗ್ಗೆ ಕನ್ನಡಿ ಒಂದು ರೀತಿಯ ಉತ್ತರ ಕೊಟ್ಟರೆ, ಫೋಟೋ ಏಕೆ ಮತ್ತೊಂದು ಉತ್ತರ dಕೊಡುತ್ತದೆ?, ನನ್ನ ಸೌಂದರ್ಯ ಎಲ್ಲಿ ಹೋಗುತ್ತದೆ, ಇದಕ್ಕೆಲ್ಲಾ ಕಾರಣವಾದರೂ ಏನು? ಇದು ಯಾಕೆ ಹೀಗೆ? ಎಂಬೆಲ್ಲಾ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಓಡುತ್ತಿದ್ದರೆ ಮುಂದೆ ಲೇಖನದಲ್ಲಿದೆ ನಿಮಗೆ ಉತ್ತರ.
'ಇದಕ್ಕೆಲ್ಲಾ ವೈಜ್ಞಾನಿಕ ಕಾರಣ ಕನ್ನಡಿ ಹಾಗೂ ಸ್ಮಾರ್ಟ್ ಫೋನ್‌ ನಡುವಿನ ಪ್ರತಿಫಲನದಲ್ಲಿರುವ ವ್ಯತ್ಯಾಸ. ಏನಿದು?

ಕನ್ನಡಿಯೊಂದಿಗೆ ನಿಮಗಿರುವ ಪರಿಚಿತತೆ

ಕನ್ನಡಿಯೊಂದಿಗೆ ನಿಮಗಿರುವ ಪರಿಚಿತತೆ

ನಮ್ಮ ಮುಖದ ಪರಿಪೂರ್ಣ ಅಂದ ಅಥವಾ ಸೌದರ್ಯದ ಕ್ಲಿಯರ್ ಚಿತ್ರಣ ಸಿಗುವುದು ನಾವು ನೋಡುವ ಕನ್ನಡಿಯಲ್ಲಿ ಮಾತ್ರ. ಅದು ನೀಡುವ ಪ್ರತಿಫಲನವನ್ನೇ ನಾವು ನಂಬುವುದು. ನಿತ್ಯ ಬಹುತೇಕ ಬಾರಿ ಅಥವಾ ಆಗಾಗ್ಗೆ ಕನ್ನಡಿಯನ್ನು ನೋಡಿಕೊಳ್ಳುತ್ತಲೇ ಇರುತ್ತೇವೆ. ಮನೆಯಿಂದ ಹೊರ ಹೋಗುವಾಗಂತೂ ಅಂದವಾಗಿ ಕಾಣಲು ಪ್ರಸಾಧನಗಳನ್ನು ಬಳಸಿ ಮುಖವನ್ನು ಇನ್ನಷ್ಟು ಅಂದಗಾಣಿಸಿ ಕನ್ನಡಿಯಲ್ಲೇ ಪದೇ ಪದೇ ನೋಡಿಕೊಂಡು ಚೆನ್ನಾಗಿದೆ ಎಂದು ಖಚಿತವಾದ ಮೇಲೆಯೇ ಮನೆಯಿಂದ ಹೊರಗೆ ಹೋಗುವುದು. ಇದಕ್ಕೆ ಹೆಣ್ಣುಮಕ್ಕಳು ಮಾತ್ರ ಸೀಮಿತರಾಗಿಲ್ಲ, ಪುರುಷರು ಸಹ ಈ ಅಭ್ಯಾಸದಿಂದ ಹೊರತಾಗಿಲ್ಲ. ನಿತ್ಯ ಇಷ್ಟೆಲ್ಲಾ ಹೊತ್ತು ಕನ್ನಡಿ ಮುಂದೆ ಕಳೆಯುವ ನಾವು ಇದ್ದಕ್ಕಿಂದ್ದಂತೆ ನಮ್ಮ ಪ್ರತಿಫಲನ್ನು ವಿರುದ್ಧವಾಗಿ ತೋರಿಸುವ ಕ್ಯಾಮೆರಾ ಅಥವಾ ಸೆಲ್ಫಿಯಲ್ಲಿ ನಮ್ಮ ಪ್ರತಿಬಿಂಬ ಕಂಡಾಗ ಅದು ನಮಗೆ ಅಹಿತವೆನಿಸುತ್ತದೆ ಅಥವಾ ವಿಭಿನ್ನ ಎನಿಸದಿರದು.

ಫೋಟೋಜೆನಿಕ್ ಫೇಸ್

ಫೋಟೋಜೆನಿಕ್ ಫೇಸ್

ನಿಮ್ಮ ಮುಖ ವಿಭಿನ್ನವಾಗಿ ಅಥವಾ ನೀವಂದುಕೊಂಡಂತೆ ಕಾಣದೇ ಇರಲು ಕಾರಣ ಗೊತ್ತೆ?, ನೀವು ಇಷ್ಟು ದಿನ ಕನ್ನಡಿಯಲ್ಲಿ ನೋಡುತ್ತಿದ್ದ ಪ್ರತಿಬಿಂಬವೇ ನಿಮ್ಮ ನಿಜವಾದ ಸೌಂದರ್ಯ, ಅದೇ ನೀವು ಎಂಬುದು ನಿಮ್ಮ ಅಭಿಪ್ರಾಯವಾಗಿತ್ತು, ಆದರೆ ನಿತ್ಯದ ದಿನಚರಿಗಿಂತ ಭಿನ್ನವಾಗಿ ಮೊಬೈಲ್ ಕ್ಯಾಮೆರಾದಲ್ಲಿ ನಿಮ್ಮ ಪ್ರತಿಬಿಂಬವನ್ನು ಕಂಡಾಕ್ಷಣ ಏನೋ ವಿಚಿತ್ರವಾಗಿದೆ ಎಂಬ ಭಾವನೆ ನಿಮ್ಮಲ್ಲಿ ಮೂಡುತ್ತದೆ. ಮತ್ತೊಂದು ಕಾರಣ ನಿಮ್ಮ ಮುಖದ ಚಹರೆ. ಕೆಲವರ ಮುಖದ ಚಹರೆ ಫೋಟೋಗೆ ತಾನು ಇರುವುದಕ್ಕಿಂತ ತುಂಬಾನೆ ಚೆನ್ನಾಗಿ ಕಂಡರೆ ಇನ್ನೂ ಕೆಲವರಿಗೆ ಇರುವ ಅಂದವೂ ಫೊಟೋದಲ್ಲಿ ಕಾಣುವುದಿಲ್ಲ. ಆದ್ದರಿಂದ, ನೀವು ಸಂಪೂರ್ಣವಾಗಿ ಫೋಟೋಗೆ ಒಪ್ಪುವ ಮುಖವನ್ನು ಹೊಂದಿರಲಾರದಿದ್ದರೆ, ನಿಮಗೆ ಕ್ಯಾಂಡಿಡ್ ಫೋಟೋಗಳನ್ನು ಸಹ ಇಷ್ಟಪಡದೇ ಇರುವ ಸಾಧ್ಯತೆಗಳೇ ಹೆಚ್ಚಿದೆ.

ಕ್ಯಾಮೆರಾದ ಆ್ಯಂಗಲ್

ಕ್ಯಾಮೆರಾದ ಆ್ಯಂಗಲ್

ನೀವು ಹೆಚ್ಚು ಲೈಕ್ಸ್ ಅಥವಾ ಕಮೆಂಟ್ ಗಳನ್ನು ಪಡೆಯಲು ಸಾಮಾನ್ಯವಾಗಿ ದಿ ಬೆಸ್ಟ ಫೋಟೋಗಳನ್ನು ಮಾತ್ರ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತೇವೆ. ಇದಕ್ಕಾಗಿ ಹತ್ತಾರು ಫೋಟೋಗಳನ್ನು ಭಿನ್ನ ಭಿನ್ನ ಆ್ಯಂಗಲ್ ನಲ್ಲಿ ತೆಗೆದುಕೊಳ್ಳುತ್ತೇವೆ. ಆದರೆ ಛಾಯಾಚಿತ್ರಗಳು ನಿಜ ಜೀವನದ 2-ಡಿ ಆವೃತ್ತಿಯಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇದರರ್ಥ ಫೋಟೋಗಳು ನಿಮ್ಮ ಮುಖದ ವೈಶಿಷ್ಟ್ಯಗಳನ್ನು ಚಪ್ಪಟೆಗೊಳಿಸುತ್ತವೆ ಅಥವಾ ಕೆಲವು ಕೋನಗಳಿಂದಾಗಿ ಅವುಗಳನ್ನು ವಿರೂಪಗೊಳ್ಳುತ್ತವೆ. ಅಲ್ಲದೆ, ಫೋಟೋಗಳು ನಿಮ್ಮ ಮುಖದ ಪ್ರತಿಯೊಂದು ಚಹರೆಯನ್ನು ಸಂಗ್ರಹಿಸುವುದರಿಂದ ನಿಜ ಜೀವನದಲ್ಲಿ ಗಮನಕ್ಕೆ ಬಾರದ ಹಲವು ವಿಚಿತ್ರ ಚಹರೆಗಳಳನ್ನು ನೀವು ನೋಡಲು ಸಾಧ್ಯವಾಗುತ್ತದೆ.

ಆದರೆ ನೆನಪಿಡಿ

ಆದರೆ ನೆನಪಿಡಿ

ಒಂದು ಅತ್ಯುತ್ತಮ ಚಿತ್ರ ಉತ್ತಮ ಬೆಳಕು+ ಅತ್ಯುತ್ತಮವಾದ ಆ್ಯಂಗಲ್ + ಬೆಸ್ಟ್ ಭಂಗಿಯ ಮಿಶ್ರಣ.

ಸಲಹೆ: ನಿಮ್ಮ ಫೋನ್‌ನ ಫ್ಲ್ಯಾಷ್ ಲೈಟ್ ನಿಮ್ಮ ಮುಖದಲ್ಲಿ ಆಕರ್ಷಕವಾಗಿಲ್ಲದ ಎಲ್ಲವನ್ನೂ ಹೈಲೈಟ್ ಮಾಡುತ್ತದೆ. ಆದ್ದರಿಂದ ಆದಷ್ಟು ಫೋಟೋಗಳನ್ನು ತೆಗೆದುಕೊಳ್ಳುವಾಗ ನೈಸರ್ಗಿಕವಾದ ಬೆಳಕನ್ನು ಬಳಸಿಕೊಳ್ಳಿ.

English summary

Why Do We Looks Attractive In The Mirror But Ugly In The Photos

Your skin is glowing and your hairdo is perfect--simply put you are feeling good about yourself as you look in the mirror. However, you open your front camera to fix your lipstick and your confidence comes crashing down. How come the reflection in the mirror and the photograph in your smartphone are in such sharp contrast to each other?. Take a look.
Story first published: Monday, December 16, 2019, 9:29 [IST]
X
Desktop Bottom Promotion