Just In
- 4 hrs ago
ವಾರ ಭವಿಷ್ಯ (ಫೆ.4-11): ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- 13 hrs ago
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- 15 hrs ago
ಫೆಬ್ರವರಿಯಲ್ಲಿದೆ ಶುಕ್ರ ಗ್ರಹ ಮಾಲವ್ಯ ಯೋಗ: ಈ 3 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗುವುದು
- 16 hrs ago
'ಸಿಂಗಾರ ಸಿರಿಯೇ' ಎಂದು 60ನೇ ವಯಸ್ಸಿನಲ್ಲಿ ವೆಡ್ಡಿಂಗ್ ಫೋಟೋಶೂಟ್: ರೊಮ್ಯಾಂಟಿಕ್ ವೀಡಿಯೋ ಸಕತ್ ವೈರಲ್
Don't Miss
- News
Aero India 2023: ಮಾಂಸ ಮಾರಾಟ ನಿಷೇಧ ಹಿಂಪಡೆದ ಬಿಬಿಎಂಪಿಯಿಂದ ತ್ಯಾಜ್ಯ ವಿಲೇವಾರಿಗೆ ಸೂಚನೆ
- Movies
"ಒಳ್ಳೆವ್ನಾ ಕೆಟ್ಟವ್ನಾ ಜಡ್ಜ್ಮೆಂಟ್ಗೆ ಸಿಗೊವಲ್ದು": ಡಾಲಿ 'ಹೊಯ್ಸಳ' ಪೊಲೀಸ್ ಗಿರಿ ಝಲಕ್
- Sports
BGT 2023: ಆಸ್ಟ್ರೇಲಿಯಾಗೆ ಆರಂಭದಲ್ಲೇ ಆಘಾತ; ಮತ್ತೋರ್ವ ಸ್ಟಾರ್ ವೇಗಿ ಮೊದಲ ಟೆಸ್ಟ್ನಿಂದ ಔಟ್!
- Automobiles
ಪ್ರಮುಖ ಮಾದರಿಗಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್ಸ್
- Technology
ಇಂಥಾ ಸ್ಮಾರ್ಟ್ಫೋನ್ ಖರೀದಿಸಿದ್ರೆ, ಫೋನ್ ಹ್ಯಾಂಗ್ ಆಗುವ ಸಮಸ್ಯೆ ಇರಲ್ಲ!
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Astrology tips: ಜ್ಯೋತಿಷ್ಯಾಸ್ತ್ರದ ಪ್ರಕಾರ ಯಾವ ರಾಶಿಯವರಿಗೆ ಯಾವ ವಿಚಾರ ಥಟ್ ಅಂತ ಕೋಪ ತರಿಸುತ್ತದೆ?
ಮನುಷ್ಯ ಎಂದ ಮೇಲೆ ಕೋಪ ಸಹಜ ಗುಣ. ಕೆಲವರು ಹೇಳುವಂತೆ ಉಪ್ಪು-ಖಾರ ತಿಂದ ದೇಹ ಕೋಪ ಬರದೇ ಇರುತ್ತದೆಯೇ ಎನ್ನುತ್ತಾರೆ. ಆದರೆ ಪ್ರತಿಯೊಬ್ಬರ ಕೋಪಕ್ಕೂ ವ್ಯತ್ಯಾಸವಿದೆ, ಭಿನ್ನತೆ ಇದೆ. ಎಲ್ಲರೂ ಒಂದೇ ರೀತಿ ಕೋಪ ಮಾಡಿಕೊಳ್ಳುವುದಿಲ್ಲ.
ಜ್ತೋತಿಷ್ಯಾಸ್ತ್ರ ಪ್ರಕಾರ, ದ್ವಾದಶ ರಾಶಿಚಕ್ರಗಳಲ್ಲಿ ಒಂದೊಂದು ರಾಶಿಚಕ್ರದವರೂ ಸಹ ಭಿನ್ನವಾಗಿ ತಮ್ಮ ಕೋಪವನ್ನು ತೋರ್ಪಡಿಸುತ್ತಾರಂತೆ.
ನಾವಿಂದು ಈ ಲೇಖನದಲ್ಲಿ ಯಾವ ರಾಶಿಯವರು ಹೇಗೆ ಕೋಪ ಮಾಡಿಕೊಳ್ಳುತ್ತಾರೆ, ಯಾವೆಲ್ಲಾ ವಿಚಾರಗಳಿಗೆ ಕೋಪಕ್ಕೆ ಒಳಗಾಗುತ್ತಾರೆ, ಯಾರ ಕೋಪ ಅತೀ ಹೆಚ್ಚು ಭಯಾನಕ ಎಂಬುದರ ಬಗ್ಗೆ ತಿಳಿಯೋಣ:

ಮೇಷ ರಾಶಿ
ಮೇಷ ರಾಶಿಯವರು ತಮ್ಮ ಭಾವನೆಗಳನ್ನು ಶುಗರ್‌ಕೋಟ್ ಮಾಡುವವರಲ್ಲ. ಉದ್ವೇಗ/ ಕೋಪ ಸುಲಭವಾಗಿ ಹೊತ್ತಿಕೊಳ್ಳುತ್ತದೆ ಮತ್ತು ಬೇಗನೆ ಹೊರಹೊಮ್ಮುತ್ತದೆ. ಆದರೆ ನಿಮ್ಮ ಅಂತರ್ಗತ ಮೊಂಡುತನವು ಯಾರೊಬ್ಬರ ಭಾವನೆಗಳನ್ನು ಗಾಯಗೊಳಿಸಬಹುದು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ. ಪದೇ ಪದೇ ಕಿರಿ ಕಿರಿ ಮಾಡುವ ಜನರಿಂದ ಮೇಷ ರಾಶಿಯವರು ಬೇಗ ಕೋಪಕ್ಕೆ ಒಳಗಾಗುತ್ತಾರೆ.

ವೃಷಭ ರಾಶಿ
ವೃಷಭ ರಾಶಿಯವರು ಬಹಳ ಮೌನವಾಗಿದ್ದಾರೆ ಎಂದರೆ ಅವರಿಗೆ ಸಾಕಷ್ಟು ಕೋಪ ಬಂದಿದೆ ಎಂದರ್ಥ, ಅದನ್ನೇ ನೀವು ಎಚ್ಚರಿಕೆ ಚಿಹ್ನೆಯಾಗಿ ತೆಗೆದುಕೊಳ್ಳಬೇಕು. ನೀವು ಇದನ್ನು ಪತ್ತೆ ಮಾಡಲು ವಿಫಲವಾದರೆ ಅವರ ಕೋಪಕ್ಕೆ ಗುರಿಯಾಗಬಹುದು.
ವೃಷಭ ರಾಶಿಯವರಿಗೆ ಯಾವುದ ಸಹ ಇಲ್ಲ ಎನ್ನಬಾರದು. ಅದು ಅವರನ್ನು ಹೆಚ್ಚು ಕೋಪಗೊಳ್ಳುವ ಹಾಗೆ ಮಾಡುತ್ತದೆ.

ಮಿಥುನ ರಾಶಿ
ದ್ವಾದಶ ರಾಶಿಚಕ್ರದಲ್ಲಿ ಸಾಮಾಜಿಕ ಚಿಟ್ಟೆ ಎಂದೇ ಕರೆಯುವ ರಾಶಿ ಮಿಥುನ ರಾಶಿ. ಆದರೆ ಇವರಿಗೆ ಚರ್ಚೆಗಳು ಅತಿಯಾದರೆ ಕೋಪಗೊಳ್ಳುವಂತೆ ಮಾಡುತ್ತದೆ. ನಿಮ್ಮ ಹಠಾತ್ ಕೋಪ ಮತ್ತು ಭಾವನಾತ್ಮಕ ವಿಚಾರಗಳಿಂದಾಗಿ ನಿಮ್ಮ ಸುತ್ತಮುತ್ತಲಿನ ಸ್ನೇಹಿತರು ಸದಾ ನಿಮ್ಮ ಜೊತೆ ಮೊಟ್ಟೆಯ ಚಿಪ್ಪಿನ ಮೇಲೆ ನಡೆಯುತ್ತಿರುತ್ತಾರೆ.
ಮಿಥುನ ರಾಶಿಯವರಿಗೆ ಸಾಮಾಜಿಕ ಮಾಧ್ಯಮದಲ್ಲಿ ತೆಗಳುವುದು/ಹೀಗಳೆಯುವುದು ಬಹಳ ಕೋಪ ತರಿಸುತ್ತದೆ.

ಕರ್ಕ ರಾಶಿ
ಯಾರಾದರೂ ಕಿರಿಕಿರಿ ಮಾಡಿದರೆ ಕರ್ಕ ರಾಶಿಯವರು ಸಾಮಾನ್ಯವಾಗಿ ಪ್ರತಿಕ್ರಿಯಿಸುವುದಿಲ್ಲ. ಅವರ ಕೋಪವನ್ನು ಸಾಧ್ಯಯವಾದಷ್ಟು ನಿಯಂತ್ರಿಸುತ್ತಾರೆ, ಆದರೆ ಇವರು ಒಮ್ಮೆ ಉಗ್ರರಾದರೆ ಇವರನ್ನು ತಡೆಯುವುದು ಕಷ್ಟ. ಕರ್ಕ ರಾಶಿಯವರಿಗೆ ಭಾವನೆಗಳ ಜೊತೆ ಆಟವಾಡುವುದು ಇಷ್ಟವಾಗುವುದಿಲ್ಲ.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇತರರ ಅಭಿಪ್ರಾಯಗಳನ್ನು ಕೇಳುವ ಹೆಚ್ಚು ತಾಳ್ಮೆಯಿಲ್ಲ, ಅಲ್ಲದೆ ಇವರ ಗರ್ವಕ್ಕೆ ಅಲ್ಪ-ಸ್ವಭಾವದ ಕುಖ್ಯಾತಿಯನ್ನು ಹೊಂದಿದ್ದಾರೆ. ನೀವು ಇತರರ ನಡವಳಿಕೆಯನ್ನು ಸುಲಭವಾಗಿ ಕ್ಷಮಿಸುವಿರಿ ಎಂಬುದು ನಿಜವಾಗಿದ್ದರೂ, ನಿಮ್ಮ ಸ್ವಂತ ಕ್ರಿಯೆಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಹ ಇದು ಸಹಾಯ ಮಾಡುತ್ತದೆ.
ಸಿಂಹ ರಾಶಿಯವರಿಗೆ ತಾವು ಮಾಡುತ್ತಿರುವ ಕೆಲಸದ ಬಗ್ಗೆ ಯಾರಾದರೂ ಅಡ್ಡ ಮಾತನಾಡಿದರೆ, ತಪ್ಪು ಎಂದರೆ ಬಹಳ ಬೇಗ ಕೋಪಗೊಳ್ಳುತ್ತಾರೆ.

ಕನ್ಯಾ ರಾಶಿ
ಕನ್ಯಾ ರಾಶಿಯವರು ಹೃದಯದಲ್ಲಿ ಪರಿಪೂರ್ಣತಾವಾದಿಗಳು, ಇವರು ತಮ್ಮ ಜೀವನವನ್ನು ಅಚ್ಚುಕಟ್ಟಾಗಿ ಮತ್ತು ಸಂಘಟಿತವಾಗಿರಲು ಇಷ್ಟಪಡುತ್ತಾರೆ. ವಸ್ತುಗಳ ಕ್ರಮವನ್ನು ಅಸ್ತವ್ಯಸ್ತಗೊಳಿಸುವುದನ್ನು ಇವರು ಎಂದಿಗೂ ಒಪ್ಪುವುದಿಲ್ಲ. ಅವರ ಕೋಪಕ್ಕೆ ಶುಚಿತ್ವ ಇಲ್ಲದಿರುವುದೇ ಸಾಕು.

ತುಲಾ ರಾಶಿ
ತುಲಾ ರಾಶಿಯವರು ಹಿಂದೆ ಏನಾದರೂ ಮಾತಾಡಿಕೊಳ್ಳಿ ಅದರ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದೇ ಇಲ್ಲ, ಆದರೆ ಅವರ ಮುಖದ ಮುಂದೆ ಮಾತಾನಡಿಸದರೆ ಹಾಗೂ ಯಾವುದೇ ನಕಾರಾತ್ಮಕ ಮಾತುಗಳು ಅವರಿಗೆ ಕೇಳಿ ಬಂದರೆ ಸಾಕಷ್ಟು ಕೋಪ ತರಿಸುತ್ತದೆ.

ವೃಶ್ಚಿಕ ರಾಶಿ
ದ್ವಾದಶ ರಾಶಿಗಳಲ್ಲಿ ವೃಶ್ಚಿಕ ರಾಶಿಯವರು ಕೋಪಕ್ಕೆ ಎತ್ತಿದ ಕೈ. ಇವರಿಗೆ ಯಾವ ವಿಚಾರಕ್ಕೆ ಯಾವಾಗ, ಏಕೆ ಕೋಪ ಬರುತ್ತದೆ ಎಂಬುದೇ ಅನಿಶ್ಚಿತ. ಅಷ್ಟು ಅಲ್ಲದೆ, ತಮ್ಮ ಪ್ರೀತಿಪಾತ್ರರನ್ನು ಯಾರಾದರೂ ನೋಯಿಸಿದರೆ ಮಾತ್ರ ಇವರ ಉಗ್ರ ಪ್ರತಾಪವನ್ನು ಸಹಿಸಲು ನೀವು ಸಿದ್ಧರಿರಲೇಬೇಕು.

ಧನು ರಾಶಿ
ಬೆಂಕಿಯ ಚಿಹ್ನೆಯಿಂದ ಆಳಲ್ಪಡುವ ಧನು ರಾಶಿ ನಿಮ್ಮ ಉತ್ತಮ ಸ್ನೇಹಿತ ಮತ್ತು ನಿಮ್ಮ ಕೆಟ್ಟ ಶತ್ರುವೂ ಆಗಬಹುದು. ಅವರ ಕೋಪವು ಉರಿಯುತ್ತಿರುವಾಗ, ಅವರು ಬೇಗನೆ ಜ್ವಾಲೆಯಾಗಿ ಸಿಡಿಯುತ್ತಾರೆ ಮತ್ತು ಮರುದಿನ ಬೆಳಿಗ್ಗೆ ಎದ್ದಾಗ ಹಠಾತ್ ಆಗಿ ನಿಮ್ಮ ಜೊತೆ ಸಾಮಾನ್ಯವಾಗಿ ಎಂದಿನಂತೆ ಇರಲು ಬಯಸುತ್ತಾರೆ. ಇವರ ಕೋಪದ ಅವಧಿ ಬಹಳ ಕಡಿಮೆ.

ಮಕರ ರಾಶಿ
ಮಕರ ರಾಶಿಯವರ ಶಾಂತ ಮುಖವು ನೀವು ವಿಷಯಗಳನ್ನು ಬಿಟ್ಟುಬಿಡುತ್ತಿರಿ ಎಂದು ಯೋಚಿಸುವಂತೆ ಮಾಡುತ್ತದೆ ಆದರೆ, ನಿಮ್ಮ ಒಳಗಿನ ಜ್ವಾಲೆ ಹೊತ್ತಿ ಉರಿಯುತ್ತಿರುತ್ತದೆ. ನಿಮ್ಮ ಸಮಚಿತ್ತದ ಹಿಂದಿನ ಗಾಯಗಳು ನಿಜವಾಗಿಯೂ ಹತ್ತಿರವಿರುವವರಿಗೆ ಮಾತ್ರ ತಿಳಿದಿರುತ್ತದೆ. ಆದರೆ ಅದನ್ನು ಕೆದಕುವ ಕೆಲಸ ಮಾತ್ರ ಯಾರೂ ಮಾಡಬಾರದು, ಕೆದಕಿದರೆ ಅವರ ಕತೆ ಅಷ್ಟೇ.

ಕುಂಭ ರಾಶಿ
ಕುಂಭ ರಾಶಿಯವರು ಭಾವನೆಗಳಿಗೆ ಮಣಿಯುವವರಲ್ಲ, ದೀರ್ಘಕಾಲದವರೆಗೆ ನಿಮಗೆ ಕಿರಿಕಿರಿ ಉಂಟುಮಾಡುವದನ್ನು ಯೋಚನೆ ಮಾಡದೆ ನಿರ್ಲಕ್ಷಿಸುತ್ತೀರಿ. ಆದರೆ ನೀವು ಭಾವನೆಗಳಿಗೆ ಮಣಿಯುವಾಗ ಮಾತ್ರ ನಿಮ್ಮ ಕೋಪವು ಹಿಮಭರಿತ ಉದಾಸೀನತೆಯ ರೂಪವನ್ನು ತೆಗೆದುಕೊಳ್ಳುತ್ತದೆ, ಅದು ನರಕಕ್ಕೆ ಸಮ ಎನ್ನಬಹುದು.

ಮೀನ ರಾಶಿ
ದ್ವಾದಶಗಳಲ್ಲಿ ಹೆಚ್ಚು ಭಾವನಾತ್ಮಕ ರಾಶಿ ಮೀನ ರಾಶಿ. ನೀವು ಸಾಮಾನ್ಯವಾಗಿ ಬಹುತೇಕ ವಿಚಾರಗಳನ್ನು ಸ್ವೀಕರಿಸುತ್ತೀರಿ, ಆದರೆ ಅದನ್ನು ಹೇಳುವ ರೀತಿಯಲ್ಲಿ ಅಡಗಿದೆ. ಕೋಪದಿಂದ ಅಥವಾ ಅಧಿಕಾತಯುವಾಗಿ ಏನನ್ನಾದರೂ ಹೇಳಿದರೆ ನಿಮ್ಮ ಕೋಪ ಮಿತಿ ಮೀರಬಹುದು ಅಲ್ಲದೆ ಅದನ್ನು ಮಾಡುವ ಪ್ರಯತ್ನ ಸಹ ಮಾಡುವುದಿಲ್ಲ.