For Quick Alerts
ALLOW NOTIFICATIONS  
For Daily Alerts

ಮದುವೆಯಾಗುವಂತೆ ನಿಮ್ಮ ಮನವೊಲಿಸಲು ಜನರು ನೀಡುವ ವಿಲಕ್ಷಣ ಕಾರಣಗಳು

|

ನೀವು ಯಾರನ್ನಾದರೂ ಯಾವಾಗಲಾದರೂ ನೀವ್ಯಾಕೆ ಮದುವೆಯಾದಿರಿ ಎಂದು ಪ್ರಶ್ನಿಸಿದ್ದೀರಾ? ಬಹುಶಃ ಹೀಗೆ ಪ್ರಶ್ನೆ ಕೇಳಿದ್ದರೆ ಖಂಡಿತ ನಿಮಗೆ ಕೆಲವರು ನಾನು ಸೆಟಲ್ ಆಗಬೇಕು ಎಂದಿದ್ದೆ ಅದಕ್ಕಾಗಿ ಮದುವೆಯಾದೆ, ಅಪ್ಪ-ಅಮ್ಮ ಒತ್ತಾಯವಾಗಿ ಮದುವೆ ಮಾಡಿದರು, ನನ್ನ ವಯಸ್ಸು 30 ಆಗುತ್ತಾ ಬಂದಿತ್ತು ಸಮಾಜ ಪ್ರಶ್ನಿಸುತ್ತದೆ ಎಂದು ಮದುವೆಯಾದೆ, ಹೀಗೆ ಹಲವು ಕಾರಣಗಳು ಸಿಗುತ್ತವೆ.

ಕೆಲವು ಮಂದಿ ತಾವು ಪ್ರೀತಿಸುತ್ತಿದ್ದೆವು ಅದಕ್ಕಾಗಿ ಮದುವೆಯಾದೆವು ಎಂದು ಕೂಡ ಹೇಳಬಹುದು. ಜೀವನದ ನಿರ್ದಿಷ್ಟ ವಯಸ್ಸೊಂದರಲ್ಲಿ ನಾವು ನಮ್ಮ ಮುಂದಿನ ಜೀವನವನ್ನು ಕಳೆಯಬಹುದಾದ ಯಾರನ್ನಾದರೂ ಭೇಟಿ ಮಾಡುತ್ತೇವೆ ಎಂಬ ಮನಸ್ಥಿತಿ ನಮ್ಮಲ್ಲಿದೆ. ಆದರೆ ಎಲ್ಲವೂ ನಾವಂದುಕೊಂಡಂತೆ ನಡೆಯುವುದಿಲ್ಲ.

ಇನ್ನ ನಿಮ್ಮ ಸುತ್ತಮುತ್ತ ಜನರು ಅಥವಾ ಕುಟುಂಬಸ್ಥರು ವಯಸ್ಸಿಗೆ ಬಂದ ಕೂಡಲೇ ಮದುವೆಯಾಗಲು, ನಿಮ್ಮನ್ನು ಮದುವೆಗೆ ಪ್ರೇರೇಪಿಸಲು ಅಥವಾ ಮನವೊಲಿಸಲು ವಿಲಕ್ಷಣ ಕಾರಣಗಳನ್ನು ನೀಡುತ್ತಾರೆ. ನಾವಿಲ್ಲಿ ಕೆಲವು ಕಾರಣಗಳನ್ನು ಪಟ್ಟಿ ಮಾಡಿದ್ದೇವೆ. ಖಂಡಿತ ಈ ಕಾರಣಗಳು ನಿಮ್ಮ ತಲೆಯಲ್ಲಿ ಹುಳ ಬಿಡಬಹುದು. ಯಾವುದಕ್ಕೂ ಮುಂದೆ ಓದಿ.

1. ಜೀವನದಲ್ಲಿ ನೆಲೆಗೊಳ್ಳುವುದಕ್ಕಾಗಿ ಮದುವೆಯಾಗಬೇಕು

1. ಜೀವನದಲ್ಲಿ ನೆಲೆಗೊಳ್ಳುವುದಕ್ಕಾಗಿ ಮದುವೆಯಾಗಬೇಕು

ಹುಟ್ಟಿನಿಂದಲೇ ಸಮಸ್ಯೆಗಳ ಸುಳಿಯಲ್ಲಿ ಬದುಕುತ್ತಾ ಬಂದಿರುವವರಿಗೆ ಹೇಗಾದರೂ ಜೀವನದಲ್ಲಿ ನೆಲೆಗೊಳ್ಳಬೇಕು ಎಂದು ಮನಸ್ಸು ಬಯಸುತ್ತದೆ. ಆದರೆ ಅದೇ ಕಾರಣಕ್ಕೆ ಮದುವೆಯೊಂದು ಉತ್ತರ ಎಂದು ಜನರು ಭಾವಿಸುತ್ತಾರೆ. ಮದುವೆಯಾದರೆ ಸೆಟಲ್ ಆದಂತೆ ಎಂಬ ಭಾವನೆ ಹೆಚ್ಚಿನ ಜನರಲ್ಲಿರುತ್ತದೆ. ಹೆಚ್ಚಿನವರಿಗೆ 20-30 ರ ವಯಸ್ಸಿನ ಆಸುಪಾಸಿನಲ್ಲಿದ್ದಾಗ ಮದುವೆಯಾದರೆ ಎಲ್ಲವೂ ಸುಖಮಯ ಎಂಬ ಭಾವನೆ ಇರುತ್ತದೆ.

ಆದರೆ ನಾವು ಸ್ವಲ್ಪ ಭಿನ್ನವಾಗಿ ಯೋಚಿಸೋಣವೇ? ಸೆಟಲ್ ಆಗುವುದು ಅಥವಾ ನೆಲೆಗೊಳ್ಳುವುದು ಎಂದರೆ ಸ್ವಯಂ ಅವಲಂಬನೆಯಲ್ಲಿ ಬದುಕುವುದು ಎಂದು ಯೋಚಿಸಿದರೆ ಹೇಗೆ? ನಮ್ಮ ಬಿಲ್ ಗಳನ್ನು ನಾವೇ ಪಾವತಿ ಮಾಡಿಕೊಳ್ಳುವುದು, ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದುವುದು, ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವ ತಾಕತ್ತು ಬೆಳೆಸಿಕೊಳ್ಳುವುದು ಇತ್ಯಾದಿ ರೀತಿಯಲ್ಲಿ ಆಲೋಚಿಸಿದರೆ ಹೇಗೆ? ಇದೆಲ್ಲದಕ್ಕೂ ಮದುವೆ ಉತ್ತರವಾದೀತೇ?

2. ಮದುವೆಯಾಗಲು ಖಂಡಿತ ಇದು ಸರಿಯಾದ ಸಮಯ

2. ಮದುವೆಯಾಗಲು ಖಂಡಿತ ಇದು ಸರಿಯಾದ ಸಮಯ

ನಮ್ಮಲ್ಲಿ ಹೆಚ್ಚಿನವರು ಆಲೋಚಿಸುವುದು ಹೇಗೆ ಎಂದರೆ 25-30 ನೇ ವಯಸ್ಸು ಮದುವೆಯಾಗುವುದಕ್ಕೆ ಸರಿಯಾದ ಸಮಯ. ಕೆಲವು ಜನರ ಪಿತೃಪ್ರಧಾನ ಮನಸ್ಥಿತಿಗೆ ಧನ್ಯವಾದ ಹೇಳಲೇಬೇಕು! ಮನೆಯ ಫಂಕ್ಷನ್ ಗಳು, ಪಾರ್ಟಿಗಳು, ಕುಟುಂಬದ ಸಮಾವೇಶಗಳು ಇತ್ಯಾದಿಗಳಲ್ಲಿ ನಿಮ್ಮ ಸಂಬಂಧಿಗಳು ಇಲ್ಲವೇ ಹೆಚ್ಚಾಗಿ ಹೆಂಗಸರು ನಿಮ್ಮನ್ನ ಈ ವಯಸ್ಸಿನಲ್ಲಿ ಕೆಣಕಲು ಪ್ರಾರಂಭಿಸಿರುತ್ತಾರೆ. ಯಾವಾಗಮ್ಮಾ/ಪ್ಪಾ ಮದುವೆ? ಎಲ್ಲಾದ್ರೂ ಹುಡುಕ್ಕೊಂಡಿದಿಯೋ ಹೇಗೆ? ಎಂಬಿತ್ಯಾದಿ ಪ್ರಶ್ನೆಗಳು ಬಂದರೂ ಆಶ್ಚರ್ಯವಿಲ್ಲ. ಹಿರಿಯರ ಇಂತಹ ಮನಸ್ಥಿತಿಯು ನಿಮ್ಮನ್ನ ಒಂದು ವಯಸ್ಸಿನಲ್ಲಿ ಮದುವೆಯಾಗಲು ಪ್ರೇರೇಪಿಸುತ್ತದೆ. ಮದುವೆ ಮತ್ತು ವಯಸ್ಸು ಖಂಡಿತ ಒಂದಕ್ಕೊಂದು ಸಂಬಂಧ ಹೊಂದಿಲ್ಲ. ಈ ವಿಚಾರವನ್ನು ಅರ್ಥೈಸಿಕೊಳ್ಳುವುದರಲ್ಲಿ ಹೆಚ್ಚಿನವರು ಸೋಲಬಾರದು. ಮದುವೆಯಾಗುವುದು ಮತ್ತು ಇನ್ನೊಬ್ಬರ ಜೊತೆಗೆ ಬಾಳ್ವೆ ಮಾಡಬೇಕು ಎಂದು ಬಯಸುವುದು ಅವರವರ ಇಚ್ಛೆಗೆ ಬಿಟ್ಟದ್ದು. ಯಾರು ತಮ್ಮ ಜೀವನದ ಉಳಿದ ಭಾಗವನ್ನು ಮತ್ತೊಬ್ಬನ/ಳ ಜೊತೆಗೆ ಹೊಂದಾಣಿಕೆಯಲ್ಲಿ ಬದುಕಲು ಸಾಧ್ಯ ಎಂದು ನಿರ್ಧರಿಸುತ್ತಾರೋ ಅವರು ಮದುವೆಯಾಗಬಹುದು.

3. ತಪ್ಪುಗಳನ್ನು ಮುಚ್ಚಿಕೊಳ್ಳುವುದಕ್ಕಾಗಿ ಮದುವೆಯಾಗಬೇಕು

3. ತಪ್ಪುಗಳನ್ನು ಮುಚ್ಚಿಕೊಳ್ಳುವುದಕ್ಕಾಗಿ ಮದುವೆಯಾಗಬೇಕು

ನಮ್ಮ ಸಮಾಜ ಕೆಲವು ನಿಯಮಗಳನ್ನು ಮಾಡಿಟ್ಟಿದೆ. ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧರಿಸಿಬಿಟ್ಟಿದೆ. ಅದರಲ್ಲೂ ಹುಡುಗಿಯರಿಗಾಗಿ ಈ ನಿಯಮಗಳು ಹೆಚ್ಚಾಗಿ ಜಾರಿಯಲ್ಲಿವೆ. ಅವರಿಗೆ ಏನನ್ನು ತೊಡಬೇಕು, ಏನನ್ನು ತಿನ್ನಬೇಕು, ಯಾರ ಜೊತೆಗೆ ಆಕೆ ಸ್ನೇಹಿತೆಯಾಗಿರಬೇಕು, ಯಾವಾಗ ಅವರು ಕೆಲಸದಿಂದ, ಪಾರ್ಟಿಯಿಂದ, ಫಂಕ್ಷನ್ ನಿಂದ ಮನೆಗೆ ಮರಳಬೇಕು, ಹೀಗೆ ಪಟ್ಟಿ ಮುಂದುವರಿಯುತ್ತಲೇ ಸಾಗುತ್ತದೆ. ಈ ಎಲ್ಲಾ ವಿಚಾರಗಳು ಯಾವಾಗಲೂ ಹುಡುಗರಿಗೆ ಅನ್ವಯಿಸುವುದಿಲ್ಲ ಮತ್ತು ಇವೆಲ್ಲವೂ ಕೂಡ ಪಿತೃಪ್ರಧಾನ ಮನಸ್ಥಿತಿಯ ಪ್ರಭಾವಳಿಗಳು ಅಷ್ಟೇ. ಮಹಿಳೆಯು ಪುರುಷರಿಗಿಂತ ದುರ್ಬಲಳು ಎಂಬ ಮನಸ್ಥಿತಿಯ ಪರಿಣಾಮದಿಂದಾಗಿ ಈ ಎಲ್ಲಾ ನಿಯಮಾವಳಿಗಳು ಜಾರಿಯಲ್ಲಿವೆ. ಹುಡುಗಿಯೊಬ್ಬಳು ಏನನ್ನಾದರೂ ತಪ್ಪು ಮಾಡುವ ಮುನ್ನ ಅವಳ ಮದುವೆ ಆಗಿ ಬಿಡಬೇಕು ಎಂಬುದು ಈ ಸಮಾಜದ ಆಲೋಚನೆ. ಉದಾಹರಣೆಗೆ ಯಾವುದಾದರೂ ಹುಡುಗಿ ಹುಡುಗನ ಜೊತೆಗೆ ಡೇಟಿಂಗ್ ಗೆ ತೆರಳಿ ಮದುವೆಗೂ ಮುನ್ನ ಗರ್ಭವತಿಯಾದರೆ ಅದು ಆಕೆಯ ಮತ್ತು ಆಕೆಯ ಪೋಷಕರ ಮರ್ಯಾದೆ ಹೋಗುವ ವಿಚಾರ ಎಂಬ ಮನಸ್ಥಿತಿ ಇದೆ. ಅದೇ ಕಾರಣಕ್ಕೆ ಹುಡುಗಿಯ ಮದುವೆ ಬೇಗನೆ ಆಗಿ ಬಿಡಬೇಕು ಎಂಬುದು ಹೆಚ್ಚಿನವರ ಆಲೋಚನೆ. ಇನ್ನೊಂದು ಭಾರತೀಯ ಸಂಪ್ರದಾಯದ ವಿಲಕ್ಷಣ ವಿಚಾರವೆಂದರೆ ಹುಡುಗಿ ವರನನ್ನು ಪ್ರೀತಿಸುತ್ತಾಳೋ ಇಲ್ಲವೋ ಪೋಷಕರು ನಿರ್ಧರಿಸಿ ಬಿಟ್ಟರೆ ಮುಗಿದೇ ಹೋಯಿತು. ಆಕೆ ಅವನೊಂದಿಗೆ ಜೀವನ ಕಳಿಯಲೇ ಬೇಕು. ಅವನು ಎಷ್ಟೇ ಅಪರಿಚಿತನಾಗಿದ್ದರೂ ಒಮ್ಮೆ ತಾಳಿ ಕಟ್ಟಿದನೆಂದರೆ ಆತ ಆಕೆಯ ಗಂಡ.

4. ಸಾಮಾಜಿಕ ಭದ್ರತೆಗಾಗಿ ಮದುವೆಯಾಗಬೇಕು

4. ಸಾಮಾಜಿಕ ಭದ್ರತೆಗಾಗಿ ಮದುವೆಯಾಗಬೇಕು

ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಮಕ್ಕಳಿಗಾಗಿ ಉತ್ತಮ ವ್ಯಕ್ತಿಯನ್ನು ಹುಡುಕುತ್ತಾರೆ. ಅದರಲ್ಲೂ ಹುಡುಗಿಯರಿಗೆ ಅತ್ಯುತ್ತಮವಾಗಿರುವ ವರ ಬೇಕು ಎಂದು ಬಯಸುತ್ತಾರೆ. ಆದರೆ ಅವರು ತಮ್ಮ ಮಗಳನ್ನು ಆತ ಎಷ್ಟು ಪ್ರೀತಿಸುತ್ತಾನೆ ಎಂಬ ವಿಚಾರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದೇ ಇಲ್ಲ. ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದೇ ವರನ ಅರ್ಹತೆಯ ಮಾನದಂಡವಾಗಿ ಬಿಡುವ ಪ್ರಕರಣಗಳೂ ಕೂಡ ಇವೆ. ವರನು ಕೋಟಿಗಟ್ಟಲೆ ಹಣವಿರುವವನಾಗಿದ್ದರೆ ನನ್ನ ಮಗಳಿಗೆ ಫರ್ಫೆಕ್ಟ್ ಜೋಡಿ ಎಂದು ಭಾವಿಸುವ ಪೋಷಕರಿಗೇನೂ ಕೊರತೆಯಿಲ್ಲ. ಹಣವೊಂದಿದ್ದರೆ ತಮ್ಮ ಮಗಳು ಸುಖಿ ಎಂದು ಭಾವಿಸುತ್ತಾರೆ. ಹಣವಿದ್ದರೆ ಆಕೆಯ ಮದುವೆಯ ನಂತರದ ಜೀವನದಲ್ಲಿ ಯಾವುದೇ ಸಮಸ್ಯೆಯೇ ಇರುವುದಿಲ್ಲ ಎಂಬಂತೆ ಆಲೋಚಿಸುತ್ತಾರೆ. ಸಾಮಾಜಿಕ ಭದ್ರತೆಯೊಂದು ಮದುವೆಯ ನಂತರ ಲಭ್ಯವಾಗುತ್ತದೆ ಎಂದು ಅಂದುಕೊಳ್ಳುವ ಮಂದಿ ಸಾಕಷ್ಟಿದ್ದಾರೆ. ಇದು ಕೇವಲ ಪೋಷಕರು ಮಾತ್ರವೇ ಆಲೋಚಿಸುವುದಲ್ಲ ಬದಲಾಗಿ ಸಂಗಾತಿಯ ಬಳಿ ಹಣವಿದ್ದರೆ ಸುಖವಾಗಿ ಇರಬಹುದು ಎಂದು ಭಾವಿಸುವವರೂ ಸಹ ಹಲವರಿದ್ದಾರೆ.

5. ಸಂತೋಷ ಸಿಗುವುದಕ್ಕಾಗಿ ಮದುವೆಯಾಗಬೇಕು

5. ಸಂತೋಷ ಸಿಗುವುದಕ್ಕಾಗಿ ಮದುವೆಯಾಗಬೇಕು

ನಿಮ್ಮನ್ನು ಕಾಳಜಿ ಮಾಡುವ ಮತ್ತು ಪ್ರತಿ ದಿನವೂ ನಿಮ್ಮನ್ನ ಉತ್ತಮ ರೀತಿಯಲ್ಲಿ ನೋಡಿಕೊಳ್ಳುವ ವ್ಯಕ್ತಿಯೊಬ್ಬರಿದ್ದರೆ ಜೀವನ ಸಂತೋಷವಾಗಿರುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಹಾಗೂ ಇದನ್ನೇ ಪೋಷಕರು ಸಹ ಬಯಸುವುದು. ಆದರೆ ಸಂಗಾತಿಯೇ ಸಂತೋಷದ ಕೀಲಿಕೈ ಎಂದು ಕೆಲವರು ಭಾವಿಸುವ ಭಾವನೆ ತಪ್ಪು. ಎಷ್ಟೋ ಸಂದರ್ಭಗಳಲ್ಲಿ ನೀವು ಅಥವಾ ಪೋಷಕರು ಬಯಸಿದ ವಿಚಾರವು ನಿಮ್ಮ ಸಂಗಾತಿಯ ಬಳಿ ಇಲ್ಲದೇ ಇರಬಹುದು. ಯಾವಾಗ ಅವಾಸ್ತವಿಕ ನಿರೀಕ್ಷೆಗಳು ಅಧಿಕವಾಗಿರುತ್ತವೆಯೋ ಆಗ ಖಂಡಿತ ನೀವು ಅವುಗಳಿಗೆ ಕಡಿವಾಣ ಹಾಕಿಕೊಳ್ಳಲೇಬೇಕು. ನಮ್ಮ ಮನಸ್ಸಿನಲ್ಲಿ ಏನೋ ನಿರೀಕ್ಷೆ ಇಟ್ಟುಕೊಳ್ಳುವುದು ಮತ್ತು ಆ ನಿರೀಕ್ಷೆ ಕೈಗೂಡದೇ ಇದ್ದಾಗ ಬೇಸರವಾಗಿ ನಿರಾಶೆ ಮತ್ತು ಹತಾಶೆಗೆ ಒಳಗಾಗುವುದು ಸರಿಯಲ್ಲ.

ವಿದೇಶ ಪ್ರಯಾಣ ಮಾಡಬೇಕು, ದುಬಾರಿ ಜೀವನಶೈಲಿ ನಡೆಸಬೇಕು ಅಥವಾ ನಿಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಬೇಕು ಅಥವಾ ಏಕಾಂಗಿಯ ಜೀವನ ಸುರಕ್ಷತೆ ಅಲ್ಲ ಎಂಬಿತ್ಯಾದಿ ಕಾರಣಗಳಿಗಾಗಿ ಮನವೊಲಿಕೆಗೆ ಮರುಳಾಗಿ ಮದುವೆಯಾಗುವುದಾದರೆ ಖಂಡಿತ ಹೆಚ್ಚು ದಿನ ನೀವು ಮದುವೆಯಾಗಿ ಸಂತೋಷದಿಂದ ಇರಲಾರಿರಿ. ಯಾವುದೇ ಭೌತಿಕ ಪ್ರಯೋಜನಗಳಿಗಾಗಿ ಅಲ್ಲ ಬದಲಾಗಿ ಪ್ರೀತಿಗಾಗಿ, ಪ್ರೀತಿಸುವುದಕ್ಕಾಗಿ, ಜವಾಬ್ದಾರಿಗಾಗಿ ಮದುವೆಯಾಗಿ, ಆಗ ಖಂಡಿತ ಖುಷಿಯಾಗಿರುತ್ತೀರಿ.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary

Weird Reasons People Give To Convince You To Get Married

Have you ever asked someone why did they get married? While some of them might have said that they wanted to settle down, others might have told that they were in their 30s and it was "necessary" to get married because society feels so.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X