Just In
Don't Miss
- News
Mood Of The Nation ಸಮೀಕ್ಷೆ: ಈಗ ಚುನಾವಣೆ ನಡೆದರೂ ಗೆಲ್ಲೋದು ಎನ್ಡಿಎ
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Movies
ಬಾಂಬೆ ಹೈಕೋರ್ಟ್ ನಲ್ಲಿ ಹಿನ್ನಡೆ: ಸಂಕಷ್ಟದಲ್ಲಿ ಸೋನು ಸೂದ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಈ ವರ್ಷ ಪರಿಸರ ಸ್ನೇಹಿ ದೀಪಾವಳಿ ಆಚರಿಸಲು ಇಲ್ಲಿವೆ ಟಿಪ್ಸ್
ದೀಪಾವಳಿ ಹಬ್ಬದ ಆಚರಣೆಯನ್ನು ಪರಿಸರ-ಸ್ನೇಹಿಯನ್ನಾಗಿಸುವುದೆಂದರೆ ಕೇವಲ ಪಟಾಕಿಗಳನ್ನು ಹೊಡೆಯದಿರುವುದಷ್ಟೇ ಅಂದುಕೊಂಡಿರಾ? ಖಂಡಿತಾ ಅಷ್ಟೇ ಅಲ್ಲ. ದೀಪಾವಳಿಯ ಹೆಸರಿನಲ್ಲಿ ನಾವು ನಾನಾ ಬಗೆಗಳಲ್ಲಿ ತ್ಯಾಜ್ಯಗಳನ್ನು ಉತ್ಪಾದಿಸುತ್ತೇವೆ. ಅಷ್ಟಕ್ಕೂ ಹಬ್ಬದಾಚರಣೆಯ ಅರ್ಥವೇನೆಂದರೆ ಪರಿಸರವ್ಯವಸ್ಥೆಗೆ ಧಕ್ಕೆ ಉಂಟಾಗದ ರೀತಿಯಲ್ಲಿ ಸಂಭ್ರಮ ಸಡಗರವನ್ನಾಚರಿಸುವುದು.
ಆದರೆ, ದೀಪಾವಳಿಯ ಮಾರನೇ ದಿನವೇ ಮನೆ ಬಿಟ್ಟು ಹೊರಹೋದಾಗ ಕಂಡುಬರುವ ದೃಶ್ಯಗಳಾದರೂ ಎಂತಹವು? ರಸ್ತೆಗಳಲ್ಲಿ ಎಲ್ಲಿ ನೋಡಿದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರಬಹುದಾದ ಪಟಾಕಿಗಳ ಕಾಗದದ ಚೂರುಗಳು, ಬೂದಿಗಳು, ಪಟಾಕಿಗಳ ತುಣುಕುಗಳು ಇತ್ಯಾದಿ. ದುಷ್ಟಶಕ್ತಿಗಳನ್ನು ನಮ್ಮ ಮನೆಗಳಿಂದ ಹೊಡೆದೋಡಿಸುವುದೇ ದೀಪಾವಳಿ ಹಬ್ಬದಾಚರಣೆಯ ತಿರುಳು. ನಮ್ಮ ಮನೆಗಳು ನೆಲೆಯೂರಿರುವ ಈ ಪರಿಸರವ್ಯವಸ್ಥೆಯೂ ನಮ್ಮ ಮನೆಗಳಿಗಿಂತ ಕಡಿಮೆಯೇನೂ ಅಲ್ಲ ಅಲ್ಲವೇ? ಈ ದೃಷ್ಟಿಯಿಂದ ಈ ಬಾರಿಯ ದೀಪಾವಳಿಯ ಆಚರಣೆಯನ್ನು ಹಸಿರಾಗಿಸುವ 10 ಉಪಾಯಗಳನ್ನು ನಾವಿಲ್ಲಿ ಕೊಟ್ಟಿದ್ದೇವೆ.

1. ಮನೆಯನ್ನು ಚೈನೀಸ್ ದೀಪಗಳಿಗೆ ಬದಲಾಗಿ ಹಣತೆಗಳಿಂದ ಅಲಂಕರಿಸಿರಿ
ಹೆಚ್ಚುವರಿ ವಿದ್ಯುತ್ ಬಿಲ್ ಯಾರನ್ನು ತಾನೇ ಖುಷಿಯಾಗಿಸೀತು ಹೇಳಿ? ವಿದ್ಯುತ್ತಿನ ಬಳಕೆಯನ್ನು ಮಿತಗೊಳಿಸುವುದು ಕೇವಲ ನಿಮ್ಮ ಹಣಕಾಸಿನ ಆರೋಗ್ಯದ ದೃಷ್ಟಿಯಿಂದಷ್ಟೇ ಹಿತಕಾರಿಯಾಗಿರುವುದಲ್ಲ ಜೊತೆಗೆ ನಿಮ್ಮ ಪರಿಸರವ್ಯವಸ್ಥೆಯ ಆರೋಗ್ಯಕ್ಕೂ ಪೂರಕವಾಗಿರುತ್ತದೆ ಎಂಬುದರ ಅರಿವು ನಿಮಗಿದೆಯೇ? ಈ ದೀಪಾವಳಿಯಂದು ನಿಮ್ಮ ಮನೆಯನ್ನು ಅಲಂಕರಿಸಲು ಮಣ್ಣಿನ ಸಾಂಪ್ರದಾಯಿಕ ಹಣತೆ ದೀಪಗಳನ್ನು ಬಳಸಿರಿ. ಸಾಮಾನ್ಯವಾಗಿ ಬಳಸಲಾಗುವ ದೀಪಗಳ ಬದಲು ಸಾಧ್ಯವಾದಲ್ಲಿ ಎಲ್.ಇ.ಡಿ. ಲೈಟ್ ದೀಪಗಳನ್ನು ಬಳಸಿರಿ.

2. ಪಟಾಕಿಗಳನ್ನು ಸುಡುವುದಕ್ಕಿಂತಲೂ ವಿಭಿನ್ನವಾಗಿರುವ ಇತರ ವಿನೋದಾತ್ಮಕ ಚಟುವಟಿಕೆಗಳನ್ನು ತೊಡಗಿಕೊಳ್ಳಿರಿ
ರಸ್ತೆಗಳನ್ನೇ ಮನೆಮಾಡಿಕೊಂಡಿರುವ ಮೂಕಜೀವಿಗಳ ಬಗ್ಗೆಯೂ ತುಸು ಯೋಚಿಸಿರಿ ಹಾಗೂ ಜೊತೆಗೆ ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಗಳಿಂದ ಬಳಲುವವರ ಬಗ್ಗೆಯೂ ಕಾಳಜಿ ಇರಲಿ. ಸುಡುಮದ್ದುಗಳೆಂದರೆ ವಿಪರೀತ ಬೆಳಕು ಮತ್ತು ಸದ್ದಿನಿಂದ ಹೊರಹೊಮ್ಮುವ ಗದ್ದಲಗಳಲ್ಲದೇ ಬೇರೇನೂ ಅಲ್ಲ. ಪಟಾಕಿಗಳನ್ನು ಸುಡುವಾಗ ಹೊರಹೊಮ್ಮುವ ಹೊಗೆಯೂ ಸಹ ಅನೇಕರ ಪಾಲಿಗೆ ಉಸಿರುಕಟ್ಟುವಂತಿರುತ್ತದೆ. ಹೊತ್ತಿ ಉರಿಯುವ ಸುಡುಮದ್ದಿನ ಜಾಗದಲ್ಲಿ ನೀವು ಅಗ್ಗಿಷ್ಟಿಕೆ (ಸೌದೆ ಬೆಂಕಿ) ಯನ್ನು ಬಳಸಬಹುದು. ಆ ಅಗ್ಗಿಷ್ಟಿಕೆಯ ಬೆಂಕಿಯ ಸುತ್ತಲೂ ನೀವೂ, ನಿಮ್ಮ ಕುಟುಂಬದ ಸದಸ್ಯರೂ ಹಾಡುತ್ತಾ, ನಲಿಯುತ್ತಾ ಕೌಟುಂಬಿಕ ಸಮಯವನ್ನು ಉತ್ತಮ ರೀತಿಯಲ್ಲಿ ಕಳೆಯಬಹುದು.

3. ರಂಗೋಲಿಗಳನ್ನು ಹಾಕಲು ನೈಸರ್ಗಿಕ ಬಣ್ಣಗಳನ್ನೇ ಬಳಸಿರಿ
ಹಿಂದಿನ ದಿನಗಳಲ್ಲೆಲ್ಲಾ ರಂಗೋಲಿಗಳನ್ನು ಹಾಕುತ್ತಿದ್ದ ಉದ್ದೇಶವೇನೆಂದು ನಿಮಗೆ ಗೊತ್ತೇ? ಹಕ್ಕಿಗಳಿಗೆ ಆಹಾರವನ್ನು ನೀಡುವುದೇ ರಂಗೋಲಿಗಳನ್ನು ಹಾಕುವುದರ ಹಿಂದಿನ ಉದ್ದೇಶವಾಗಿತ್ತು. ಬಿಳಿಬಣ್ಣಕ್ಕಾಗಿ ಅಕ್ಕಿ ಹಿಟ್ಟು, ಹಳದಿ ಬಣ್ಣಕ್ಕಾಗಿ ಅರಿಶಿನದ ಪುಡಿ, ಕೆಂಪು ಬಣ್ಣಕ್ಕಾಗಿ ವರ್ಣಪೂರಿತ ಅಕ್ಕಿ.... ಹೀಗೆ ಇಂತಹ ವಸ್ತುಗಳನ್ನು ನೀವು ರಂಗೋಲಿಯನ್ನು ಹಾಕುವುದಕ್ಕಾಗಿ ಬಳಸಬಹುದು. ನಿಮ್ಮ ರಂಗೋಲಿಯನ್ನು ಇನ್ನಷ್ಟು ವರ್ಣಮಯವನ್ನಾಗಿಸಲು ಗೊಂಡೆಹೂವು, ಗುಲಾಬಿ ಹಾಗೂ ಇತರ ಹೂವುಗಳನ್ನೂ ನೀವು ಬಳಸಿಕೊಳ್ಳಬಹುದು.

4. ಮಿಗತೆಯಾಗಿರುವ ಸಾಮಗ್ರಿಗಳಿಂದ ಕರಕುಶಲ ವಸ್ತುಗಳನ್ನು ರಚಿಸಿರಿ
ಬಣ್ಣಬಣ್ಣದ ಕರ್ಟನ್ ಗಳನ್ನಾಗಿಸುವುದಕ್ಕೆ ನೀವು ಹಳೆಯ ಸೀರೆಗಳನ್ನೋ ಇಲ್ಲವೇ ದುಪಟ್ಟಾಗಳನ್ನೋ ಬಳಸಬಹುದು. ಹಳೆಯ ವಾರ್ತಾಪತ್ರಿಕೆಗಳಿಗೇ ಬಣ್ಣಹಚ್ಚಿ, ಅವುಗಳನ್ನು ನಾನಾ ರೀತಿಗಳಲ್ಲಿ ಮಡಚುವುದರ ಮೂಲಕ ಅವುಗಳಿಗೆ ವಿವಿಧ ಆಕೃತಿಗಳನ್ನು ಕೊಟ್ಟು ಗೋಡೆಗಳಲ್ಲಿ ಅಲಂಕಾರಿಕ ವಸ್ತುಗಳ ರೂಪದಲ್ಲಿ ನೇತುಹಾಕಬಹುದು. ಕೆಲದಿನಗಳ ಮಟ್ಟಿಗೆ ಕರೆಗಂಟೆಯ ಬದಲಾಗಿ ಗಂಟೆಯೊಂದನ್ನು ನಿಮ್ಮ ಮನೆಯ ಹೆಬ್ಬಾಲಿಗಿಗೆ ನೇತುಹಾಕಿರಿ.

5. ಸಿಹಿತಿಂಡಿಗಳನ್ನು ಮನೆಯಲ್ಲಿ ತಯಾರಿಸಿರಿ!
ಹಬ್ಬಹರಿದಿನಗಳ ಸಂದರ್ಭಗಳಲ್ಲಿ, ಅದರಲ್ಲೂ ದೀಪಾವಳಿಯಂತಹ ಮಹತ್ವದ ಹಬ್ಬದ ಅವಧಿಯಲ್ಲಿ ಸಿಹಿತಿಂಡಿಗಳಿಗೆ ವಿಪರೀತ ಬೇಡಿಕೆಯಿರುವುದು ತೀರಾ ಸಹಜ. ಆ ಬೇಡಿಕೆಯನ್ನು ಪೂರೈಸುವ ಸಲುವಾಗಿ ಸಿಹಿತಿಂಡಿ ವರ್ತಕರೂ ಸಹ ಸಿಹಿತಿಂಡಿಗಳ ತಯಾರಿಕೆಯಲ್ಲಿ ಕಳಪೆದರ್ಜೆಯ ವಸ್ತುಗಳನ್ನು ಬಳಸುವುದು ಹೊಸತೇನಲ್ಲ. ಅವುಗಳ ಸೇವನೆಯು ನಿಮ್ಮನ್ನು ಗಂಭೀರ ಸ್ವರೂಪದ ಅನಾರೋಗ್ಯಕ್ಕೆ ತಳ್ಳಬಹುದು. ಬದಲಿಗೆ, ಮನೆಯಲ್ಲಿಯೇ ಸುಲಭವಾಗಿ ತಯಾರು ಮಾಡಬಹುದಾದ ಖೋಯ ಬರ್ಫಿ, ಮತ್ತು ಬೇಸಿನ್ ಲಾಡುಗಳಂತಹ ಸಿಹಿತಿನಿಸುಗಳನ್ನು ತಯಾರಿಸಿ, ಸೇವಿಸಿ, ಆನಂದಿಸಿರಿ.

6. ಕುಟುಂಬಕ್ಕಾಗಿ ಸಮಾರಂಭಗಳನ್ನು ಆಯೋಜಿಸಿರಿ
ಒಳಾಂಗಣ ಆಟಗಳಲ್ಲಿ ತೊಡಗಿಕೊಳ್ಳಿರಿ ಹಾಗೂ ನಿಮ್ಮ ಕುಟುಂಬದ ಎಲ್ಲಾ ಸದಸ್ಯರನ್ನೂ ಒಳಗೊಳ್ಳುವಂತಹ ಚಟುವಟಿಕೆಗಳನ್ನು ಆಯೋಜಿಸಿರಿ. ದೀಪಗಳು, ಕಪ್ ಗಳು ಮೊದಲಾದವುಗಳಿಗೆ ಎಲ್ಲರೂ ಒಟ್ಟಾಗಿ ಬಣ್ಣವನ್ನು ಹಚ್ಚುತ್ತಾ ಒಳ್ಳೆಯ ಕೌಟುಂಬಿಕ ಸಮಯವನ್ನು ಕಳೆಯುವ ದಿಶೆಯಲ್ಲಿ ನೆರವಾಗುವ ಇಂತಹ ಚಟುವಟಿಕೆಗಳನ್ನು ಆಯೋಜಿಸಿರಿ. ನಿಮ್ಮ ಕುಟುಂಬದ ಸದಸ್ಯರುಗಳನ್ನು ತೊಡಗಿಸುವುದಕ್ಕಾಗಿ ನೀವು ರಂಗೋಲಿ ಸ್ಪರ್ಧೆಯಂತಹ ಕಾರ್ಯಕ್ರಮವನ್ನೂ ಹಾಕಿಕೊಳ್ಳಬಹುದು.

7. ನಿಮ್ಮ ಅತ್ಯಂತ ಪ್ರೀತಿಪಾತ್ರರಿಗಾಗಿ ವೈಯುಕ್ತಿಕ ಉಡುಗೊರೆಗಳನ್ನು ಖುದ್ದು ನೀವೇ ತಯಾರಿಸಿರಿ
ನಿಮ್ಮ ಪರಮಾಪ್ತರಿಗಾಗಿ ಒಂದಿಷ್ಟು ಸಿಹಿತಿಂಡಿಗಳನ್ನೋ, ಕೇಕ್ ಗಳನ್ನೋ ತಯಾರಿಸಿರಿ. ಉಡುಗೊರೆಯನ್ನು ನೀಡುವ ಉದ್ದೇಶಕ್ಕಾಗಿ ನೀವು ಮನೆಯಲ್ಲಿಯೇ ಅಲಂಕಾರಿಕ ಫ್ಯಾನ್ಸಿ/ಷೋಕಿ ವಸ್ತುಗಳನ್ನು ತಯಾರಿ ಮಾಡಬಹುದು. ಹಾಗೆ ತಯಾರು ಮಾಡಿದ ಉಡುಗೊರೆಗಳ ಪ್ಯಾಕಿಂಗ್ ಗಾಗಿ ಪ್ರತ್ಯೇಕ ಪ್ಯಾಕಿಂಗ್ ಕಾಗದಗಳನ್ನು ವ್ಯರ್ಥಗೊಳಿಸುವ ಬದಲು, ಪ್ಯಾಕಿಂಗ್ ಗಾಗಿ ವಾರ್ತಾಪತ್ರಿಕೆಗಳನ್ನೇ ಬಳಸಿರಿ.

8. ನಿಮ್ಮ ಕುಟುಂಬದ ಸದಸ್ಯರುಗಳಿಗಾಗಿ ಕಾರ್ಡ್ ಗಳನ್ನು ತಯಾರಿಸಿರಿ
ನಿಮ್ಮ ಕುಟುಂಬದ ಪ್ರತಿಯೋರ್ವ ಸದಸ್ಯರಿಗೂ, ಅವರವರಿಗೆ ಒಪ್ಪವಾಗುವಂತಹ ಬೇರೆ ಬೇರೆ ವಿಶೇಷ ಸಂದೇಶಗಳಿರುವ ಕಾರ್ಡ್ ಗಳನ್ನು ತಯಾರಿಸಿರಿ. ಆ ಕಾರ್ಡ್ ಅನ್ನು ಜೀವಮಾನವಿಡೀ ಕಾಪಿಟ್ಟುಕೊಳ್ಳಲು ಯೋಗ್ಯವಾಗುವ ರೀತಿಯಲ್ಲಿ ನೀವು ಆ ಕಾರ್ಡ್ ಗಳಲ್ಲಿ ಕೌಟುಂಬಿಕ ಚಿತ್ರಗಳನ್ನೂ ಅಂಟಿಸಬಹುದು.

9. ಸಮಾಜಕ್ಕಾಗಿ ಏನನ್ನಾದರೂ ಕೈಗೊಳ್ಳಿ
ಬಡ ಅಥವಾ ಅನಾಥ ಮಕ್ಕಳೊಡನೆ ಒಂದಿಷ್ಟು ಸಮಯವನ್ನು ಕಳೆಯಿರಿ ಹಾಗೂ ಅವರಿಗೆ ಹೊಸ ಬಟ್ಟೆಗಳನ್ನೂ ಹಾಗೂ ಇತರ ಉಪಯುಕ್ತ ವಸ್ತುಗಳನ್ನೂ ಉಡುಗೊರೆಯ ರೂಪದಲ್ಲಿ ನೀಡಿರಿ. ನೀವು ಅವರೊಡನೆ ಆಟದಲ್ಲಿಯೂ ತೊಡಗಿಸಿಕೊಳ್ಳಬಹುದು. ನಿಮ್ಮ ಪಾಲಿಗೆ ಅದೇನೂ ದೊಡ್ಡ ಹೊರೆಯಾಗಲಿಕ್ಕಿಲ್ಲ, ಆದರೆ ನಿಮ್ಮೊಂದಿಗೆ ಕಳೆದ ಆ ಕ್ಷಣಗಳು, ಆ ಮಕ್ಕಳ ಪಾಲಿಗೆ ಅವರು ಜೀವನವಿಡೀ ನೆನಪಿನಲ್ಲಿಟ್ಟುಕೊಳ್ಳಬಹುದಾದ ಸ್ಮರಣೀಯ ಕ್ಷಣಗಳಾಗುವ ಸಾಧ್ಯತೆ ಇದೆ.

10. ನಿಮ್ಮ ಕುಟುಂಬದವರಿಗೂ, ಸ್ನೇಹಿತರಿಗೂ ನೆರವಾಗಿರಿ
ನಿಮ್ಮ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ನೆರವಾಗುವುದಕ್ಕಿಂತಲೂ ತೃಪ್ತಿದಾಯಕ ಸಂಗತಿಯು ಬೇರೊಂದಿರಲಿಕ್ಕಿಲ್ಲ. ಒಂದು ವೇಳೆ ಮೆಹಂದಿ ಹಚ್ಚುವ ಕಲೆಯಲ್ಲಿ ನೀವು ನಿಪುಣರಾಗಿದ್ದರೆ, ನಿಮ್ಮ ಬಡಾವಣೆಯಲ್ಲಿರುವ ಎಲ್ಲಾ ಹೆಣ್ಣುಮಕ್ಕಳನ್ನೂ ಒಗ್ಗೂಡಿಸಿ ಅವರ ಕೈಗಳಿಗೆ ಅಂದವಾಗಿ ಮದರಂಗಿಯನ್ನು ಲೇಪಿಸಿರಿ. ಅದರಿಂದ ಆ ಹೆಂಗಳೆಯರಿಗೆ ಅತ್ಯಂತ ಸಂತಸವಾಗುತ್ತದೆ.