For Quick Alerts
ALLOW NOTIFICATIONS  
For Daily Alerts

ಚಿಪ್ಸ್, ಬ್ರೆಡ್ ಮತ್ತು ಫ್ರೆಂಚ್ ಫ್ರೈ ಸೇವಿಸಿ ಕಣ್ಣುಗಳನ್ನೇ ಕಳಕೊಂಡ ಯುವಕ!

|

ನಮ್ಮ ಕೆಟ್ಟ ಜೀವನಶೈಲಿಯು ಕೆಲವೊಮ್ಮೆ ಯಾವ ರೀತಿಯ ಅನಾಹುತವನ್ನು ಉಂಟು ಮಾಡುತ್ತದೆ ಎನ್ನುವುದು ನಮಗೆ ಏನಾದರೂ ಸಮಸ್ಯೆಗಳು ಬಂದ ಬಳಿಕವಷ್ಟೇ ತಿಳಿದುಬರುವುದು. ಅಮೆರಿಕದಲ್ಲಿ ಬಾಲಕನೊಬ್ಬ ಅತಿಯಾಗಿ ಫ್ರೆಂಚ್ ಫ್ರೈ, ಬಿಳಿ ಬ್ರೆಡ್ ಮತ್ತು ಚಿಪ್ಸ್ ತಿಂದು ದೊಡ್ಡ ಮಟ್ಟದ ಅಪಾಯವನ್ನು ತಂದೊಡ್ಡಿಕೊಂಡಿದ್ದಾನೆ.

ಈ ಬಾಲಕನಿಗೆ ಏನಾಯಿತು? ಫ್ರೆಂಚ್ ಫ್ರೈ ತಿಂದರೆ ಅಂತದೇನು ಆಗತ್ತೆ ಎನ್ನುವ ಪ್ರಶ್ನೆ ಈಗ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಹೌದು, ಯಾವಾಗಲೊಮ್ಮೆ ಇಂತಹ ಫಾಸ್ಟ್ ಫುಡ್ ಗಳನ್ನು ಸೇವನೆ ಮಾಡಿದರೆ ಅದರಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ಅತಿಯಾದರೆ ಅಮೃತವು ವಿಷ ಎನ್ನುವಂತೆ ಆಹಾರ ಕೂಡ ನಮಗೆ ವಿಷವಾಗುವ ಸಾಧ್ಯತೆಗಳು ಇರುತ್ತದೆ. ಇಲ್ಲಿ ನಡೆದಿರುವುದು ಕೂಡ ಹಾಗೆ.

ಕೆಟ್ಟ ಆಹಾರ ಕ್ರಮದಿಂದ ದೃಷ್ಟಿ ದೋಷ

ಕೆಟ್ಟ ಆಹಾರ ಕ್ರಮದಿಂದ ದೃಷ್ಟಿ ದೋಷ

ಪ್ರತಿನಿತ್ಯವು ಫ್ರೆಂಚ್ ಫ್ರೈ, ಬಿಳಿ ಬ್ರೆಡ್ ಮತ್ತು ಚಿಪ್ಸ್ ಸೇವನೆ ಮಾಡುತ್ತಿದ್ದ ಬಾಲಕ ಈಗ ಕಣ್ಣ ದೃಷ್ಟಿ ಕಳೆದುಕೊಂಡಿದ್ದಾನೆ. ಬ್ರಿಸ್ಟಲ್ ಯೂನಿವರ್ಸಿಟಿಯ ವಿಜ್ಞಾನಿಗಳು ಈ ಬಗ್ಗೆ ಪರೀಕ್ಷೆ ನಡೆಸಿ, ಕೆಟ್ಟ ಆಹಾರ ಕ್ರಮದಿಂದಾಗಿ ಹೀಗೆ ಆಗಿದೆ ಎಂದು ದೃಢಪಡಿಸಿದ್ದಾರೆ.

ಈ ಬಗ್ಗೆ ಬಾಲಕನ ಪೋಷಕರು ಹೇಳುವ ಪ್ರಕಾರ ಈತ ತನ್ನ ಪ್ರಾಥಮಿಕ ಶಾಲಾ ದಿನಗಳಿಂದ ಫ್ರೈ, ಬಟಾಟೆ ಚಿಪ್ಸ್, ಬಿಳಿ ಬ್ರೆಡ್, ಸಾಸೇಜ್ ನ್ನು ಸೇವನೆ ಮಾಡುತ್ತಾ ಬರುತ್ತಿದ್ದಾನೆ. ಮೊದಲ ಬಾರಿ ಈ ಬಾಲಕ 14ರ ಹರೆಯದವನಿದ್ದಾಗ ವೈದ್ಯರಲ್ಲಿಗೆ ಭೇಟಿ ನೀಡಿ ತನ್ನನ್ನು ನಿಶ್ಯಕ್ತಿ ಕಾಡುತ್ತಿದೆ ಎಂದು ಹೇಳಿದ್ದಾನೆ. ಆದರೆ ಈತನ ದೇಹದ ತೂಕ ಹಾಗೂ ಎತ್ತರ ಸರಿಯಾದ ಕ್ರಮದಲ್ಲಿದ್ದ ಕಾರಣದಿಂದಾಗಿ ವೈದ್ಯರು ಪೋಷಕಾಂಶಗಳ ಕೊರತೆ ಇದೆ ಎಂದು ಪರಿಗಣಿಸಲಿಲ್ಲ ಮತ್ತು ಆತನಿಗೆ ಯಾವುದೇ ಔಷಧಿ ಕೂಡ ನೀಡಲಿಲ್ಲ.

ವೈದ್ಯರಿಗೇ ಸವಾಲಾಗಿದ್ದ ಯುವಕನ ಸಮಸ್ಯೆ

ವೈದ್ಯರಿಗೇ ಸವಾಲಾಗಿದ್ದ ಯುವಕನ ಸಮಸ್ಯೆ

ಇದರ ಬಳಿಕ ಬಾಲಕನನ್ನು ಪರೀಕ್ಷೆ ಮಾಡಿದ ವೇಳೆ ಆತನ ದೇಹದಲ್ಲಿ ವಿಟಮಿನ್ ಬಿ12 ಮತ್ತು ರಕ್ತಹೀನತೆ ಕಂಡುಬಂದಿದೆ. ಇದರ ಬಳಿಕ ಆತನಿಗೆ ವಿಟಮಿನ್ ಬಿ12 ಇಂಜೆಕ್ಷನ್ ನೀಡಲಾಯಿತು ಮತ್ತು ಆಹಾರ ಕ್ರಮವನ್ನು ಕೂಡ ಸೂಚಿಸಲಾಯಿತು. ಆದರೆ ಒಂದು ವರ್ಷದ ಬಳಿಕ ಬಾಲಕನಿಗೆ ಸರಿಯಾಗಿ ಕಿವಿ ಕೇಳಿಸುತ್ತಿರಲಿಲ್ಲ ಮತ್ತು ಕಣ್ಣು ಕೂಡ ಮಂದವಾಗಲು ಆರಂಭವಾಯಿತು. ಆದರೆ ಸಾಕಷ್ಟು ಬಾರಿ ಪರೀಕ್ಷೆ, ಚಿಕಿತ್ಸೆ ನೀಡಿದರೂ ಗುಣಮುಖವಾಗದ ಹಿನ್ನೆಲೆ ಯಾವ ಕಾರಣದಿಂದಾಗಿ ಹೀಗೆ ಆಗುತ್ತಿದೆ ಎಂದು ತಿಳಿಯಲು ವೈದ್ಯರಿಗೆ ಕೂಡ ತಿಳಿಯಲಿ ಸಾಧ್ಯವಾಗಿರಲಿಲ್ಲ.

ಪೋಷಕಾಂಶದ ಕೊರತೆ

ಪೋಷಕಾಂಶದ ಕೊರತೆ

17ರ ಹರೆಯಕ್ಕೆ ಬರುತ್ತಿದ್ದಂತೆ ಆತ ಸಂಪೂರ್ಣವಾಗಿ ಕಣ್ಣ ದೃಷ್ಟಿ ಕಳೆದುಕೊಂಡ. ಇದಕ್ಕೆ ಪ್ರಮುಖ ಕಾರಣ ಆತನ ದೇಹದಲ್ಲಿ ವಿಟಮಿನ್ ಬಿ12, ತಾಮ್ರ, ಸೆಲೆನಿಯಂ, ಸತು, ವಿಟಮಿನ್ ಡಿ ಕೊರತೆಯಿಂದ ಹೀಗೆ ಆಗಿದೆ. ಅಸ್ಥಿ ರಂಧ್ರತೆಯು ಕಾಣಿಸಿದೆ ಎಂದು ಅಧ್ಯಯನಗಳು ಹೇಳಿವೆ. ಪೋಷಕಾಂಶದ ಕೊರತೆಯಿಂದಾಗಿ ನರಗಳಿಗೆ ಹಾನಿಯಾಗಿ ಕಣ್ಣು ಮತ್ತು ಕಿವಿಗೆ ಸಮಸ್ಯೆಯಾಗಿದೆ ಎಂದು ಬ್ರಿಸ್ಟಲ್ ಮೆಡಿಕಲ್ ಸ್ಕೂಲ್ ಮತ್ತು ಬ್ರಿಸ್ಟಲ್ ಕಣ್ಣಿನ ಆಸ್ಪತ್ರೆಯು ಹೇಳಿದೆ. ಕೆಟ್ಟ ಆಹಾರ ಕ್ರಮವನ್ನು ಹೊಂದಿರುವ ಕೆಲವೊಂದು ರಾಷ್ಟ್ರಗಳಿಗೆ ಹೀಗೆ ಆಗುವುದು. ಹೊಟ್ಟೆಯ ಸಮಸ್ಯೆ ಮತ್ತು ಔಷಧದಿಂದಾಗಿ ಪೋಷಕಾಂಶಗಳ ಹೀರಿಕೊಳ್ಳುವಿಕೆ ಸಮಸ್ಯೆಯಾಗುವುದು ಎಂದು ವೈದ್ಯರು ಹೇಳಿದ್ದಾರೆ. ವಿಟಮಿನ್ ಬಿ12 ಕೊರೆಯಿಂದಾಗಿ ಪೋಷಕಾಂಶದ ಕೊರತೆ ಉಂಟಾಗಿ ನರರೋಗ ಕಾಡಬಹುದು. ಆದರೆ ಹ್ಯಾಮ್ ಮತ್ತು ಸಾಸೇಜ್ ನಂತಹ ಕೆಲವೊಂದು ಮಾಂಸಹಾರಿ ಆಹಾರ ಸೇವನೆ ಮಾಡಿದ ವೇಳೆ ಇದು ಕಂಡು ಬರುವುದು ತುಂಬಾ ಅಪರೂಪ. ಯಾಕೆಂದರೆ ಇದರಲ್ಲಿ ವಿಟಮಿನ್ ಬಿ12 ಇದೆ ಎಂದು ಲಂಡನ್ ಕಿಂಗ್ಸ್ ಕಾಲೇಜಿನ ಪೋಷಕಾಂಶ ತಜ್ಞ ಟಾಮ್ ಸ್ಯಾಂಡರ್ ತಿಳಿಸಿದ್ದಾರೆ.

ಇನ್ನು ಮುಂದೆ ಮಕ್ಕಳಿಗೆ ಚಿಪ್ಸ್ ಮತ್ತು ಫ್ರೆಂಚ್ ಫ್ರೈ ನೀಡುವ ಮೊದಲು ಈ ಲೇಖನವನ್ನು ಮತ್ತೊಮ್ಮೆ ಜ್ಞಾಪಿಸಿಕೊಳ್ಳಿ. ಯಾಕೆಂದರೆ ಪ್ರತಿನಿತ್ಯವು ಇದನ್ನು ಸೇವಿಸಿದರೆ ಖಂಡಿತವಾಗಿಯೂ ಆರೋಗ್ಯ ಸಮಸ್ಯೆಯು ಕಾಡುವುದು ಎಚ್ಚರಿಕೆ!.

English summary

Teen Boy Lost His sight After Existing on French Fries, Pringles, White bread

French fries, white bread and Pringles might sound scrumptious but the combination turned out to be something else for a teenager. A teenage boy who consumed the dishes aforementioned lost his sight, according to a case study published in Annals of Internal Medicine.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more