For Quick Alerts
ALLOW NOTIFICATIONS  
For Daily Alerts

Solar Eclipses 2022ರಲ್ಲಿರುವ ಸೂರ್ಯಗ್ರಹಣಗಳ ಬಗೆಗಿನ ಸಂಪೂರ್ಣ ಮಾಹಿತಿ

|

ನಭೋಮಂಡಲದಲ್ಲಿ ನಡೆಯುವ ಕೌತುಕ ಘಟನೆಗಳಲ್ಲಿ ಸೂರ್ಯಗ್ರಹಣವೂ ಒಂದು. ಹಿಂದೂ ಧರ್ಮದಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವ ಸೂರ್ಯಗ್ರಹಣವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಯಾವುದೇ ವ್ಯಕ್ತಿಯು ತನ್ನ ಜನ್ಮಕುಂಡಲಿಯಲ್ಲಿ ಸೂರ್ಯಗ್ರಹಣದ ಪ್ರಭಾವವನ್ನು ಹೊಂದಿದ್ದರೆ ಆ ವ್ಯಕ್ತಿಯು ಸೂರ್ಯಗ್ರಹಣದಿಂದ ಸಾಕಷ್ಟು ಅಡ್ಡ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಎಂಬ ನಂಬಿಕೆಯಿದೆ.

ಹಾಗಾದರೆ, ಮುಂಬರುವ 2022ರಲ್ಲಿ ಒಟ್ಟು ಎಷ್ಟು ಸೂರ್ಯಗ್ರಹಣಗಳಿವೆ? ಯಾವಾಗ ಗೋಚರಿಸಲಿವೆ? ಅದರ ಪ್ರಭಾವ ಭಾರತಕ್ಕೆ ಇದೆಯಾ? ಈ ಎಲ್ಲಾ ಪ್ರಶ್ನೆಗಳಿಗೆ ನಾವಿಂದು ಉತ್ತರ ನೀಡಲಿದ್ದೇವೆ.

ಮೊದಲಿಗೆ ಸೂರ್ಯಗ್ರಹಣ ಎಂದರೇನು?:

ಮೊದಲಿಗೆ ಸೂರ್ಯಗ್ರಹಣ ಎಂದರೇನು?:

ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಆ ಸ್ಥಿತಿಯನ್ನು ಸೂರ್ಯಗ್ರಹಣವೆಂದು ಕರೆಯಲಾಗುತ್ತದೆ. ಸೂರ್ಯನಿರುವ ಪ್ರದೇಶದಲ್ಲಿ ಆ ಸಮಯದಲ್ಲಿ ಕತ್ತಲು ಆವರಿಸುತ್ತದೆ. ಈ ಸಮಯದಲ್ಲಿ ಮನೆಯಿಂದ ಹೊರಬರಬಾರದು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಜಾತಕದಲ್ಲಿ ಸೂರ್ಯಗ್ರಹಣದ ದೋಷವಿರುವವರು ಸೂರ್ಯ ಗ್ರಹಣ ದೋಷ ನಿವಾರಣಾ ಪೂಜೆಯನ್ನು ಮಾಡಬೇಕು.

2022ರಲ್ಲಿರುವ ಸೂರ್ಯಗ್ರಹಣಗಳ ಪಟ್ಟಿ ಇಲ್ಲಿದೆ:

2022ರಲ್ಲಿರುವ ಸೂರ್ಯಗ್ರಹಣಗಳ ಪಟ್ಟಿ ಇಲ್ಲಿದೆ:

2022ರಲ್ಲಿ ಒಟ್ಟು 2 ಸೂರ್ಯಗ್ರಹಣಗಳು ಸಂಭವಿಸಲಿವೆ. ಅವುಗಳೆಂದರೆ:

ಏಪ್ರಿಲ್ 30ರಂದು 2022 ರ ಮೊದಲ ಸೂರ್ಯ ಗ್ರಹಣ:

2022 ರ ಮೊದಲ ಸೂರ್ಯ ಗ್ರಹಣವು ಏಪ್ರಿಲ್ 30, ಶನಿವಾರದಂದು ಸಂಭವಿಸುತ್ತದೆ ಎಂದು ಪಂಚಾಂಗ ಹೇಳುತ್ತದೆ. ಗ್ರಹಣದ ಸಮಯವು ಮಧ್ಯಾಹ್ನ 12:15 ರಿಂದ ಸಂಜೆ 04:07 ರವರೆಗೆ ಇರುತ್ತದೆ. ಇದು ಭಾಗಶಃ ಗ್ರಹಣವಾಗಿದ್ದು, ಇದರ ಪರಿಣಾಮವು ದಕ್ಷಿಣ/ಪಶ್ಚಿಮ ಅಮೆರಿಕ, ಪೆಸಿಫಿಕ್ ಅಟ್ಲಾಂಟಿಕ್ ಮತ್ತು ಅಂಟಾರ್ಟಿಕಾದಲ್ಲಿ ಕಂಡುಬರುತ್ತದೆ.

ಅಕ್ಟೋಬರ್ 25ಕ್ಕೆ ಎರಡನೇ ಸೂರ್ಯಗ್ರಹಣ:

2022 ರ ಎರಡನೇ ಸೂರ್ಯಗ್ರಹಣ ಅಕ್ಟೋಬರ್ 25 ರಂದು ಮಂಗಳವಾರ ಸಂಭವಿಸುತ್ತದೆ. ಇದು ಭಾಗಶಃ ಸೂರ್ಯಗ್ರಹಣವಾಗಿದ್ದು, ಅಕ್ಟೋಬರ್ 25 ರಂದು 4.29ಕ್ಕೆ ಪ್ರಾರಂಭವಾಗಿ, 05:42ಕ್ಕೆ ಕೊನೆಯಾಗುತ್ತದೆ. ಈ ಗ್ರಹಣದ ಪ್ರಭಾವವು ಯುರೋಪ್, ದಕ್ಷಿಣ/ಪಶ್ಚಿಮ ಏಷ್ಯಾ, ಆಫ್ರಿಕಾ ಮತ್ತು ಅಟ್ಲಾಂಟಿಕಾದಲ್ಲಿ ಇರಲಿದೆ. ಈ ಗ್ರಹಣ ಭಾರತದಲ್ಲಿ ಕಾಣಿಸುವುದಿಲ್ಲ.

ಸೂರ್ಯಗ್ರಹಣದ ಸಮಯದಲ್ಲಿ ಏನು ಮಾಡಬಾರದು?:

ಸೂರ್ಯಗ್ರಹಣದ ಸಮಯದಲ್ಲಿ ಏನು ಮಾಡಬಾರದು?:

1) ಸೂರ್ಯಗ್ರಹಣದ ಸಮಯದಲ್ಲಿ ಬರೀಗಣ್ಣಿನಿಂದ ಸೂರ್ಯನನ್ನು ನೋಡಬಾರದು.

2) ಗರ್ಭಿಣಿಯರು ಮನೆಯಿಂದ ಹೊರಗೆ ಬರಬಾರದು. ಇದರಿಂದ ಸೂರ್ಯನ ಕಿರಣಗಳು ಗರ್ಭಿಣಿಯರ ಮೇಲೆ ಬಿದ್ದು, ಹೊಟ್ಟೆಯಲ್ಲಿರುವ ಮಗುವಿನ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ.

3) ಸೂರ್ಯಗ್ರಹಣದ ಸಮಯದಲ್ಲಿ ನಿದ್ರೆ, ಸ್ನಾನ, ಊಟ ಅಥವಾ ಪ್ರಯಾಣ ಮಾಡದಿರುವುದು ಉತ್ತಮ.

4) ಈ ಸಮಯದಲ್ಲಿ ದೇವತಾ ವಿಗ್ರಹಗಳನ್ನು ಮುಟ್ಟಬಾರದು.

5) ಹಣ, ಕಾಸಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಒಪ್ಪಂದವನ್ನು ಮಾಡಿಕೊಳ್ಳಬಾರದು.

ಸೂರ್ಯಗ್ರಹಣದ ಸಮಯದಲ್ಲಿ ಏನು ಮಾಡಬೇಕು?:

ಸೂರ್ಯಗ್ರಹಣದ ಸಮಯದಲ್ಲಿ ಏನು ಮಾಡಬೇಕು?:

1) ಗಹಣ ಹಿಡಿಯುವ ಕಾಲದಲ್ಲಿ ಜನರು ಸ್ನಾನವನ್ನು ಮಾಡಿ ಶುಚಿಯಾಗಬೇಕು.

2) ಗ್ರಹಣದ ಸಮಯದಲ್ಲಿ ದೇವರ ಸ್ತೋತ್ರಗಳನ್ನು, ಮಂತ್ರಗಳನ್ನು ಪಠಿಸಬೇಕು.

3) ಗ್ರಹಣ ಮುಗಿದ ನಂತರ ಮತ್ತೊಮ್ಮೆ ಸ್ನಾನ ಮಾಡಬೇಕು.

4) ದೇವರ ಕೋಣೆಯನ್ನು ಸ್ವಚ್ಛಗೊಳಿಸಿ ಪೂಜೆ ಮಾಡಬೇಕು.

5) ಪೂಜೆಯ ನಂತರ ಪ್ರಸಾದವನ್ನು ಸ್ವೀಕರಿಸಿ, ಆಹಾರ ಸೇವನೆ ಮಾಡಬಹುದು.

ಸೂರ್ಯಗ್ರಹಣದ ವೇಳೆ ಈ ಮಂತ್ರವನ್ನು ಪಠಿಸುವುದರಿಂದ ಗ್ರಹಣದಿಂದಾಗುವ ದುಷ್ಪರಿಣಾಮವು ನಿವಾರಣೆಯಾಗುತ್ತದೆ:

ಸೂರ್ಯಗ್ರಹಣದ ವೇಳೆ ಈ ಮಂತ್ರವನ್ನು ಪಠಿಸುವುದರಿಂದ ಗ್ರಹಣದಿಂದಾಗುವ ದುಷ್ಪರಿಣಾಮವು ನಿವಾರಣೆಯಾಗುತ್ತದೆ:

ಯೋ ಸೌ ವಜ್ರಧರೋ ದೇವಃ ಆದಿತ್ಯಾನಂ ಪ್ರಭುರ್ಮತಃ |

ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||

ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |

ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||

ಯೋ ಸೌ ಶೂಲಧಯೋ ದೇವಃ ಪಿನಾಕೀ ವೃಷವಾಹನಃ |

ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು |

ಸೂರ್ಯಗ್ರಹಣ ದೋಷ ಪರಿಹಾರ ಕ್ರಮ:

ಸೂರ್ಯಗ್ರಹಣ ದೋಷ ಪರಿಹಾರ ಕ್ರಮ:

1) ಗ್ರಹಣದ ನಂತರ ಶಿವನ ದೇವಾಲಯಕ್ಕೆ ಹೋಗಿ ಶಿವನಿಗೆ ಎಣ್ಣೆ ನೀಡುವುದು.

2) ದೇವಾಲಯದಲ್ಲಿ ಕನಿಷ್ಟ 21 ಪ್ರದಕ್ಷಿಣೆ ಹಾಕುವುದು.

3) ಜ್ಯೋತಿಷ್ಯರ ಬಳಿ ವಿಚಾರಿಸಿ ಗೋಧಿ ಅಥವಾ ಹುರುಳಿ ಸೇರಿದಂತೆ ಇನ್ನಿತರ ದಾನ್ಯಗಳನ್ನು ದಾನವಾಗಿ ನೀಡಬೇಕು.

English summary

Solar Eclipses 2022: Check 2022 Surya Grahan Dates, Timings and Visibility in India

Solar Eclipses 2022: There will be a total of 2 solar eclipses in 2022. Check 2022 Surya Dates, Timings, Visibility in India and other details in kannada. Read on.
X
Desktop Bottom Promotion