For Quick Alerts
ALLOW NOTIFICATIONS  
For Daily Alerts

ನಿಮ್ಮ ಪೂರ್ವಜನ್ಮದ ಬಗ್ಗೆ ತಿಳಿಸುವ ಸೂಚನೆಗಳು

|

ಪುನರ್ಜನ್ಮ ಎನ್ನುವುದು ಇದೆಯಾ ಎನ್ನುವ ಪ್ರಶ್ನೆ ಹಲವು ಮಂದಿಯನ್ನು ಕಾಡುತ್ತಲೇ ಇರುತ್ತದೆ. ಕೆಲವರು ಪುನರ್ಜನ್ಮ ಇದೆ ಎಂದು ಹೇಳಿದರೆ, ಇನ್ನು ಕೆಲವರು ಇದೆಲ್ಲವೂ ಸುಳ್ಳು ಎಂದು ಹೇಳುವರು. ಆದರೆ ಕೆಲವೊಂದು ಘಟನೆಗಳು ಪುನರ್ಜನ್ಮಕ್ಕೆ ಸಾಕ್ಷಿ ಆಗಿರುವುದು ಇದೆ. ಕೆಲವು ಜನರಿಗೆ ತಮ್ಮ ಹಿಂದಿನ ಜನ್ಮದ ಬಗ್ಗೆ ನೆನಪುಗಳು ಬಂದು ಅವರ ತಮ್ಮ ಹಿಂದಿನ ಜೀವನದಲ್ಲಿದ್ದ ವ್ಯಕ್ತಿಗಳನ್ನು ಹುಡುಕಿಕೊಂಡು ಬಂದಿರುವಂತಹ ಘಟನೆಗಳ ಬಗ್ಗೆ ನಾವು ಓದಿದ್ದೇವೆ. ಹಿಂದಿನ ಜನ್ಮದ ಬಗ್ಗೆ ತಿಳಿಯುವಂತಹ ಕೆಲವೊಂದು ಕಾರ್ಯಕ್ರಮಗಳು ಕೂಡ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಹಿಂದೂ ಧರ್ಮದಲ್ಲಿ ಪುನರ್ಜನ್ಮದ ಬಗ್ಗೆ ಉಲ್ಲೇಖಗಳು ಇವೆ. ಈ ಜನ್ಮದಲ್ಲಿ ಮಾಡಿದಂತಹ ಪಾಪ ಪುಣ್ಯಗಳ ಫಲವು ಮುಂದಿನ ಜನ್ಮದಲ್ಲಿ ಸಿಗುವುದು ಎಂದು ಹೇಳಲಾಗುತ್ತದೆ. ಆದರೆ ನಿಜವಾಗಿಯೂ ಪುನರ್ಜನ್ಮವು ಇದೆಯಾ ಎನ್ನುವ ಪ್ರಶ್ನೆಯು ಮತ್ತೆ ಮತ್ತೆ ಕಾಡುವುದು.

ನೀವು ಹಿಂದೊಮ್ಮೆ ಜನಿಸಿದ್ದೀರಾ?

ನೀವು ಹಿಂದೊಮ್ಮೆ ಜನಿಸಿದ್ದೀರಾ?

ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಈ ಪುನರ್ಜನ್ಮದ ಬಗ್ಗೆ ಚರ್ಚೆಗಳು ನಡೆದಿದ್ದವು. ಭಾರತ ಮತ್ತು ಗ್ರೀಕ್ ನ ಇತಿಹಾಸದಲ್ಲಿ ಇದರ ಬಗ್ಗೆ ಹಲವಾರು ಉಲ್ಲೇಖಗಳು ಕೂಡ ಇದೆ. ನಮ್ಮ ಆತ್ಮವು ಕೇವಲ 7, 8 ಅಥವಾ 9 ಜೀವನಕ್ಕೆ ಮಾತ್ರ ಸೀಮಿತವಾಗಿಲ್ಲ. ನಾವು ಹಿಂದೆ ಕೂಡ ಬದುಕಿದ್ದೆವು ಮತ್ತು ಇನ್ನು ಮುಂದೆಯೂ ಬದುಕುತ್ತೇವೆ. ಪುನರ್ಜನ್ಮದ ಬಗ್ಗೆ ಹೇಳುವವರು ನಮ್ಮ ಹಿಂದಿನ ಜನ್ಮದ ಕೆಲವೊಂದು ಅಂಶಗಳು ಈ ಜನ್ಮದಲ್ಲಿ ಕಾಣಿಸಿಕೊಳ್ಳುವುದು ಎಂದು ಹೇಳುತ್ತಾರೆ. ಇದರ ಬಗ್ಗೆ ನಾವು ತಿಳಿಯುವ...

ನಿಮ್ಮದೂ ಪುನರ್ಜನ್ಮವೇ?

ನಿಮ್ಮದೂ ಪುನರ್ಜನ್ಮವೇ?

ಅತೀಂದ್ರೀಯ ಮತ್ತು ಕೆಲವೊಂದು ಸಂಶೋಧನೆಗಳ ಪ್ರಕಾರ ಹಿಂದಿನ ಜನ್ಮದ ಕೆಲವೊಂದು ನಡವಳಿಕೆಯನ್ನು ಮರೆಯುವುದಿಲ್ಲ. ಈ ಅನುಭವವು ಎಷ್ಟೇ ವರ್ಷಗಳ ಹಿಂದೆ ನಡೆದಿದ್ದರೂ ಇದು ಆಧ್ಯಾತ್ಮಿಕ ಸುಪ್ತಾವಸ್ಥೆಯಲ್ಲಿ ಅಡಗಿರುವುದು.

ಈಗಿನ ಬದುಕಿನಲ್ಲಿ ನೀವು ಕಾಣಬಹುದಾದ ಕೆಲವೊಂದು ಸುಳಿವುಗಳು ಇಲ್ಲಿವೆ

ಡೇಜು ವು(ಪೂರ್ವಾನುಭವದ ಭಾವನೆ)

ಡೇಜು ವು(ಪೂರ್ವಾನುಭವದ ಭಾವನೆ)

ಡೇಜು ವು ಎನ್ನುವುದು ಒಂದು ಫ್ರೆಂಚ್ ಶಬ್ದ ಮತ್ತು ಮೊದಲೇ ನೋಡಿರುವುದು ಎನ್ನುವುದು ಇದರರ್ಥ. ಭಾವನೆಗೆ ಒಳಗಾದವರು ಇದನ್ನು ನಿಕಟತೆಯ ಅಗಾಧ ಪ್ರಜ್ಞೆ ಎಂದು ಬಣ್ಣಿಸುವರು. ಹೆಚ್ಚಿನವರಿಗೆ ಡೇಜು ವು ಅನುಭವ ಆಗಿರಬಹುದು. ಈ ಘಟನೆಯು ಹಿಂದೊಮ್ಮೆ ನಡೆದಿದೆ ಎನ್ನುವ ಬಗ್ಗೆ ಹಠಾತ್ ಅಥವಾ ಅಚ್ಚರಿಯ ಭಾವನೆ ಬರುವುದು. ವಿಜ್ಞಾನಿಗಳು ಮತ್ತು ಮನಶಾಸ್ತ್ರಜ್ಞರು ಈ ವಿದ್ಯಮಾನಗಳಿಗೆ ನರವೈಜ್ಞಾನಿಕ ವಿವರಣೆ ನೀಡುವರು. ಆದರೆ ಇದು ಹಿಂದಿನ ಜನ್ಮದ ನೆನಪುಗಳು ಮರಕಳಿಸುವುದು ಎಂದು ಹೇಳಲಾಗುತ್ತದೆ. ನೀವು ಹಿಂದೆ ಇದೇ ಜಾಗದಲ್ಲಿ ಇದ್ದೀರಿ ಎನ್ನುವ ಬಗ್ಗೆ ನಿಮಗೆ ಅತೀವ ಭಾವನೆ ಆಗಬಹುದು. ಹಾಗಾದರೆ ನಿಮಗಿದು ಪುನರ್ಜನ್ಮವೇ?

1. ಕನಸುಗಳು ಕೂಡ ನಿಜ ಜೀವನದಂತೆ ಇರುವುದು

1. ಕನಸುಗಳು ಕೂಡ ನಿಜ ಜೀವನದಂತೆ ಇರುವುದು

ನಿಮಗೆ ಕೆಲವೊಂದು ಜಾಗಗಳ ಕನಸುಗಳು ಪದೇ ಪದೇ ಬೀಳುತ್ತಿರುತ್ತದೆಯಾ? ಹಾಗಾದರೆ ಇದು ಹಿಂದಿನ ಜನ್ಮದ ನೆನಪು ಆಗಿರಬಹುದು. ಹಿಂದಿನ ಜನ್ಮದ ನೆನಪುಗಳು ಸ್ಪಷ್ಟವಾದ ನೆನಪುಗಳು ಆಗಿರುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಲು ಮತ್ತು ಅದರ ಸ್ಪಷ್ಟ ಅರ್ಥವನ್ನು ತಿಳಿಯಲು ಹೆಚ್ಚು ಶ್ರಮಪಡಬೇಕಾಗುತ್ತದೆ. ಕೆಲವೊಂದು ಸಂಕೇತಗಳು ಅಷ್ಟು ಪ್ರಭಾವಿ ಆಗಿರುವುದಿಲ್ಲ. ಹಿಂದಿನ ಜೀವನದ ಕೆಲವೊಂದು ನೆನಪುಗಳು ಕವಿತೆ ಅಥವಾ ಇತಿಹಾಸದ ಪಠ್ಯವಾಗಿ ಮರುಕಳಿಸಬಹುದು.

2. ನಿಮ್ಮದೇ ಆಗಿರುವ ಇತಿಹಾಸ ಹೊಂದಿದ್ದರೆ

2. ನಿಮ್ಮದೇ ಆಗಿರುವ ಇತಿಹಾಸ ಹೊಂದಿದ್ದರೆ

ಪ್ರತಿಭೆ ಮತ್ತು ಕೌಶಲ್ಯ, ಇಷ್ಟ ಮತ್ತು ಇಷ್ಟವಿಲ್ಲದೆ ಇರುವುದು, ಆಕರ್ಷಣೆ ಮತ್ತು ವೈರತ್ವ ಕೂಡ ಹಿಂದಿನ ಜನ್ಮದ ಸಂಕೇತವಾಗಿರಬಹುದು. ಕೆಲವು ಜನರನ್ನು ನೀವು ಎಂದಿಗೂ ಭೇಟಿಯಾಗದೆ ಇದ್ದರೂ ಅವರನ್ನು ನೀವು ಹಿಂದೆ ಎಲ್ಲೋ ಭೇಟಿಯಾಗಿದ್ದೇವೆ ಎಂದು ಅನಿಸಬಹುದು. ಕೆಲವೊಂದು ಪಠ್ಯಗಳು ಮತ್ತು ಕೆಲಸಗಳನ್ನು ನೀವು ಮೊದಲೇ ಗೊತ್ತಿರುವಂತೆ ಮಾಡಬಹುದು. ಯಾವುದೇ ಒಂದು ವಿದೇಶಿ ಭಾಷೆಯು ನಿಮಗೆ ಬೇರೆಯವರಿಗಿಂತಲೂ ಬೇಗನೆ ಬರಬಹುದು. ಆದರೆ ಇತರರಿಗೆ ಇದು ತುಂಬಾ ಕಷ್ಟವಾಗಬಹುದು.

3. ನಿಮಗೊಬ್ಬರು ಆತ್ಮ ಸಂಗಾತಿ ಇರಬಹುದು

3. ನಿಮಗೊಬ್ಬರು ಆತ್ಮ ಸಂಗಾತಿ ಇರಬಹುದು

ಬೇರ ಬೇರೆ ಜನ್ಮದಲ್ಲಿ ಒಬ್ಬರೇ ಸಂಗಾತಿಯನ್ನು ಹೊಂದುವುದು ಸಾಮಾನ್ಯವಾಗಿದೆ. ಏಳೇಳು ಜನ್ಮಕ್ಕೂ ನೀನೇ ನನ್ನ ಪತಿ ಅಥವಾ ಪತ್ನಿ ಆಗಿರು ಎಂದು ಹೇಳುವುದು ಇದಕ್ಕೆ ಇರಬಹುದು. ಇದನ್ನು ಆತ್ಮಗಳ ಗುಂಪು, ಆತ್ಮ ಸಂಗಾತಿ ಅಥವಾ ಆತ್ಮ ಕುಟುಂಬ ಎಂದು ಹೇಳಬಹುದು. ಆಧ್ಯಾತ್ಮಿಕ ಪಾಠಗಳನ್ನು ಕಲಿತುಕೊಂಡು ನಾವು ಯಾವುದೇ ರೀತಿಯ ಕರ್ಮಗಳನ್ನು ಮಾಡಿದ್ದರೆ ಅದನ್ನು ನಿವಾರಿಸಬೇಕು. ಉದಾಹರಣೆಗೆ ನಿಮ್ಮ ಅಜ್ಜಿಯಂತೆ ಮೊಮ್ಮಗನು ಕಾಣಿಸುತ್ತಿರಬಹುದು. ಇದರಿಂದ ನಾವು ಪ್ರೀತಿಪಾತ್ರರನ್ನು ಕಳೆದುಕೊಂಡಿಲ್ಲ ಮತ್ತು ಎಲ್ಲರೂ ಜತೆಯಾಗಿಯೇ ಇದ್ದೇವೆ ಎನ್ನುವ ಸೂಚನೆ ಆಗಿದೆ.

4. ವಿಚಿತ್ರ ನೆನಪುಗಳು

4. ವಿಚಿತ್ರ ನೆನಪುಗಳು

ಕೆಲವು ಮಕ್ಕಳಲ್ಲಿ ಬಾಲ್ಯದ ಕೆಲವೊಂದು ನೆನಪುಗಳು ಇರುವುದು. ಆದರೆ ಈ ಘಟನೆಗಳು ವಾಸ್ತವದಲ್ಲಿ ನಡೆದೇ ಇರುವುದಿಲ್ಲ. ಇದು ಮಕ್ಕಳ ಭ್ರಮೆ, ಅಪಾರ್ಥ ಅಥವಾ ವಾಸ್ತವದಲ್ಲಿ ಕಾಡುವಂತಹ ಕನಸು ಆಗಿರಬಹುದೇ? ಈ ಜನ್ಮಕ್ಕೆ ಬರುವ ಮೊದಲು ಅವರ ಜೀವನದಲ್ಲಿ ನಡೆದಿರುವುದನ್ನು ಅವರು ನೆನಪು ಮಾಡಿಕೊಳ್ಳುತ್ತಿದ್ದಾರೆಯಾ? ಮಾನವನ ನೆನಪು ದೋಷ ಹಾಗೂ ಅಸಂಗತೆಯಿಂದ ಕೂಡಿದೆ. ಕುಟುಂಬ ಹಾಗೂ ಸ್ನೇಹಿತರ ಬಗ್ಗೆ ನಮ್ಮಲ್ಲಿ ಕೆಲವೊಂದು ನೆನಪುಗಳು ಹಾಗೆ ಇರುವುದು. ಆದರೆ ಇದು ಯಾವತ್ತೂ ನಡೆದಿರದ ಘಟನೆಗಳು ಆಗಿರುವುದು. ಹಾಗಾದರೆ ಇದು ನೆನಪಿನ ತಪ್ಪು ಕಲ್ಪನೆಯಾ ಅಥವಾ ಹಿಂದಿನ ಜನ್ಮದ ನೆನಪುಗಳಾ?

5. ಕನಸುಗಳು ಮತ್ತು ದುಸ್ವಪ್ನಗಳು

5. ಕನಸುಗಳು ಮತ್ತು ದುಸ್ವಪ್ನಗಳು

ಕೆಲವು ಜನರಿಗೆ ಒಂದೇ ರೀತಿಯ ಕನಸುಗಳು ಪದೇ ಪದೇ ಬೀಳುತ್ತಿರುವುದು. ಇನ್ನು ಕೆಲವರಿಗೆ ಸ್ವಲ್ಪ ಕಾಲ ಮತ್ತು ಕೆಲವರಿಗೆ ಜೀವನಪೂರ್ತಿ ಈ ಕನಸುಗಳು ಕಾಡುವುದು. ಪದೇ ಪದೇ ಕಾಡುವಂತಹ ಕನಸುಗಳು ನಿಮ್ಮ ಜೀವನದಲ್ಲಿ ಏನೋ ಇದೆ. ಆದರೆ ಇದನ್ನು ಗುರುತಿಸಲು ನಿಮಗೆ ಸಾಧ್ಯವಾಗಿಲ್ಲ ಮತ್ತು ಇದರಿಂದಾಗಿಯೇ ನೀವು ಒತ್ತಡಕ್ಕೆ ಒಳಗಾಗುತ್ತಿದ್ದೀರಿ ಎಂದು ಹೇಳುತ್ತದೆ. ಸಮಸ್ಯೆಗಳನ್ನು ಬಗೆಹರಿಸದೆ ಇದ್ದರೆ ಕನಸುಗಳು ಬರುತ್ತಲೇ ಇರುತ್ತದೆ. ಹಿಂದೆ ಆಗಿರುವಂತಹ ಕೆಲವೊಂದು ಕೆಟ್ಟ ಘಟನೆಗಳ ಪರಿಣಾಮವಾಗಿ ಇಂತಹ ಕನಸುಗಳು ಬೀಳುತ್ತಿರಬಹುದು ಎಂದು ಕೂಡ ಹೇಳಲಾಗುತ್ತದೆ. ಆದರೆ ಇಂತಹ ಸಂದರ್ಭದಲ್ಲಿ ಕನಸುಗಳು ತುಂಬಾ ಕಡಿಮೆ ಸಂಖ್ಯೆಯಲ್ಲಿ ಇರುವುದು.

6. ವಿವರಿಸಲು ಅಸಾಧ್ಯವಾದ ಭೀತಿ

6. ವಿವರಿಸಲು ಅಸಾಧ್ಯವಾದ ಭೀತಿ

ಕೆಲವೊಂದು ವಿಚಾರಗಳು ಭೀತಿ ಉಂಟು ಮಾಡಬಹುದು ಎಂದು ವೈಜ್ಞಾನಿಕವಾಗಿಯೂ ಹೇಳಲಾಗುತ್ತದೆ ಮತ್ತು ಇದರಲ್ಲಿ ಒಂದು ಯಾತನಾಮಯ ಅಥವಾ ಸಂಕಷ್ಟದ ಮುಖಾಮುಖಿ. ಕೆಲವು ಭೀತಿಗಳ ಬಗ್ಗೆ ನಿಮಗೆ ವಿವರಿಸಲು ಸಾಧ್ಯವಾಗದೆ ಇರಬಹುದು. ಯಾವುದೇ ರೀತಿಯ ದುರ್ಘಟನೆಗಳು ನಡೆಯದೆ ಇದ್ದರೂ, ನಿಮಗೆ ನೀರನ್ನು ಕಂಡರೆ ತುಂಬಾ ಭೀತಿ ಉಂಟಾಗುವುದು. ಇದಕ್ಕೆ ಸ್ಪಷ್ಟ ಕಾರಣ ಏನೆಂದು ತಿಳಿದಿಲ್ಲ. ಆದರೆ ಹಿಂದಿನ ಜನ್ಮದಲ್ಲಿ ನೀರಿನಿಂದಾಗಿ ಏನಾದರೂ ತುಂಬಾ ಕೆಟ್ಟದು ಆಗಿರಬಹುದು.

7. ಕಾಲಾನಂತರದ ಸ್ಥಿರತೆ

7. ಕಾಲಾನಂತರದ ಸ್ಥಿರತೆ

ಕಾಲಾನಂತರದ ಸ್ಥಿರತೆಯು ಹಿಂದಿನ ಜನ್ಮದ ನೆನಪು ಮತ್ತು ಭ್ರಮೆಯ ನಡುವಿನ ವ್ಯತ್ಯಾಸವನ್ನು ಬಿಂಬಿಸುವುದು. ಒಬ್ಬ ಹುಡುಗ ನಿಮಗೆ ಒಂದು ಕಟ್ಟುಕಥೆ ಹೇಳಬಹುದು. ಆದರೆ ನಿಜವಾಗಿಯೂ ಆತ ಇದೇ ರೀತಿಯಲ್ಲಿ ಆ ಕಥೆಯನ್ನು ಒಂದು ವಾರ ಅಥವಾ ಒಂದು ತಿಂಗಳ ಬಳಿಕ ಅಥವಾ ಮರುಕ್ಷಣದಲ್ಲೇ ಹೇಳಲು ಸಾಧ್ಯವೇ? ಕಲ್ಪನೆಗಳ ಮೂಲಕ ಇಂತಹ ಕಥೆಗಳನ್ನು ಹೇಳಬಹುದು. ಆದರೆ ಹಿಂದಿನ ಜೀವನದ ಕಥೆಯು ಮನಸ್ಸಿನಲ್ಲಿ ಅಚ್ಚೊತ್ತಿರುವ ಸಿನಿಮಾವಾಗಿರುವುದು. ಇದು ತುಂಬಾ ಸ್ಥಿರವಾಗಿ ಇರುವುದು ಮತ್ತು ಈ ಜೀವನದಲ್ಲಿ ನಡೆದಿರುವಂತಹ ಘಟನೆಗಳಂತೆ ಇರುವುದು.

8. ನಮ್ಮ ಹಿತಕರ ಮಟ್ಟ

8. ನಮ್ಮ ಹಿತಕರ ಮಟ್ಟ

ಕೆಲವೊಂದು ಕಡೆಗಳಲ್ಲಿ ನಾವು ಹೆಚ್ಚು ಹಿತಕರವಾಗಿ ಇರುತ್ತೇವೆ. ಆದರೆ ಬೇರೆಯವರಿಗೆ ಹಾಗೆ ಆಗಲ್ಲ. ಇದು ಯಾಕೆ. ನಮ್ಮ ಹಿಂದಿನ ಜೀವನದ ಕೆಲವು ವಿಚಾರಗಳು ಮೆದುಳಿನಲ್ಲಿ ಇದಕ್ಕೆ ಅವಕಾಶ ಮಾಡಿಕೊಡಬಹುದು. ಪರ್ವತಗಳನ್ನು ಇಷ್ಟಪಡುತ್ತೀರಾ? ಸಮುದ್ರ ತೀರವು ನಿಮಗೆ ಮನೆಯಂತೆ ಭಾವನೆಯಾಗುತ್ತಿದೆಯಾ? ದೊಡ್ಡ ಮನೆಯ ಬದಲಿಗೆ ಸಣ್ಣ ಮನೆಯನ್ನು ಇಷ್ಟಪಡುತ್ತೀರಾ? ಇದೆಲ್ಲವೂ ನೀವು ಎಲ್ಲಿ ಬದುಕಿದ್ದೀರಿ ಮತ್ತು ಎಷ್ಟು ಸಂತೋಷ ಹಾಗೂ ಹಿತಕರವಾಗಿ ಇದ್ದೀರಿ ಎನ್ನುವುದನ್ನು ತೋರಿಸಿಕೊಡುವುದು.

9. ಪೂರ್ತಿಗೊಳಿಸದ ವ್ಯಾಪಾರ

9. ಪೂರ್ತಿಗೊಳಿಸದ ವ್ಯಾಪಾರ

ಈ ಜನ್ಮದಲ್ಲಿ ಏನಾದರೂ ಮಾಡಬೇಕೆಂದು ನಿಮಗೆ ಒಂದು ಮಹತ್ವಾಕಾಂಕ್ಷೆಯು ಹುಟ್ಟಿದ ದಿನದಿಂದಲೇ ಇದೆಯಾ? ನೀವು ನಡೆಯಲು ಆರಂಭಿಸಿದಾಗ ಅಥವಾ ಮಾತನಾಡಲು ಶುರು ಮಾಡಿದಾಗ ಇದನ್ನು ಮಾಡುತ್ತಿದ್ದೀರಿ ಎಂದು ಮನೆಯವರು ನಿಮಗೆ ಹೇಳುತ್ತಿದ್ದಾರೆಯಾ? ಹಾಗಾದರೆ ನೀವು ಏನಾದರೂ ಕೆಲಸವನ್ನು ಹಿಂದಿನ ಜನ್ಮದಲ್ಲಿ ಅರ್ಧಕ್ಕೆ ಬಿಟ್ಟಿರಬಹುದು. ನೀವು ತುಂಬಾ ಪ್ರೀತಿಸುತ್ತಾ ಇದ್ದ ಕೆಲಸವನ್ನು ಪೂರ್ತಿಗೊಳಿಸಲು ಏನಾದರೂ ಅಡ್ಡಿ ಆಗಿರಬಹುದು ಮತ್ತು ನೈಸರ್ಗಿಕವಾಗಿ ಅದನ್ನು ನೀವು ಆಯ್ಕೆ ಮಾಡಿದ್ದೀರಿ.

10. ಪ್ರವಾಸದ ಬಗ್ಗೆ ಹೆಚ್ಚಿನ ಆಕರ್ಷಣೆ

10. ಪ್ರವಾಸದ ಬಗ್ಗೆ ಹೆಚ್ಚಿನ ಆಕರ್ಷಣೆ

ನೀವು ಒಂದು ಕಡೆಯಲ್ಲಿ ವಾಸವಾಗಿದ್ದರೂ ಬೇರೆ ಕಡೆಯಲ್ಲಿ ವಾಸವಾಗಬೇಕು ಎಂದು ಅನಿಸುತ್ತಿದೆಯಾ? ಯಾವುದೇ ಕಾರಣವಿಲ್ಲದೆ ಆ ಜಾಗಕ್ಕೂ ನಿಮಗೂ ಯಾವುದೋ ಸಂಬಂಧವಿದೆ ಎಂದು ಅನಿಸುತ್ತದೆಯಾ ಮತ್ತು ಪದೇ ಪದೇ ಅಲ್ಲಿಗೆ ಭೇಟಿ ನೀಡುತ್ತೀರಾ? ನೀವು ವಿಶ್ವದ ಯಾವುದೋ ಒಂದು ಪ್ರದೇಶದಲ್ಲಿ ಇರುವಂತೆ ಕನಸು ಬೀಳುತ್ತಿದೆಯಾ? ಆದರೆ ನೀವು ಯಾವತ್ತಿಗೂ ಅಲ್ಲಿಗೆ ಹೋಗಿಲ್ಲ ಮತ್ತು ಅದನ್ನು ಚಿತ್ರಗಳಲ್ಲಿ ಮಾತ್ರ ನೋಡಿದ್ದೀರಿ. ನೀವು ಆ ಪ್ರದೇಶ ಮತ್ತು ಅಲ್ಲಿನ ಸಂಸ್ಕೃತಿಯನ್ನು ಹೆಚ್ಚು ಇಷ್ಟಪಟ್ಟಿರಬಹುದು ಅಥವಾ ಅಲ್ಲಿ ನೀವು ಹಿಂದಿನ ಜನ್ಮದಲ್ಲಿ ಬದುಕಿರಬಹುದು.

11. ವಿವರಿಸಲು ಅಸಾಧ್ಯವಾದ ನೋವು

11. ವಿವರಿಸಲು ಅಸಾಧ್ಯವಾದ ನೋವು

ಹೆಚ್ಚಿನ ಜನರಿಗೆ ದೀರ್ಘಕಾಲಿಕ ನೋವು ಕಾಣಿಸಿಕೊಳ್ಳುವುದು. ಆದರೆ ಇದಕ್ಕೆ ಯಾವುದೇ ಕಾರಣಗಳು ಇರುವುದಿಲ್ಲ. ಹಿಂದಿನ ಜನ್ಮದಲ್ಲಿ ಆಗಿರುವಂತಹ ಯಾವುದಾದರೂ ಅಪಘಾತ ಅಥವಾ ಅವಘಡದಿಂದಾಗಿ ಈ ನೋವು ಬರಬಹುದು ಎಂದು ಹಿಂದಿನ ಜನ್ಮದ ಬಗ್ಗೆ ನಡೆಸಿರುವಂತಹ ಅಧ್ಯಯನಗಳು ಹೇಳಿವೆ. ಕೆಲವು ಜನರಿಗೆ ವಿವರಿಸಲು ಆಗದ ಕುತ್ತಿಗೆ ನೋವು ಕಾಣಿಸುವುದು. ಇದು ಅವರನ್ನು ಹಿಂದಿನ ಜನ್ಮದಲ್ಲಿ ಗಲ್ಲಿಗೇರಿಸಿರುವ ಅಥವಾ ನೇಣು ಹಾಕಿಕೊಂಡಿರುವ ಕಾರಣಕ್ಕೆ ಆಗಿರಬಹುದು!

12. ಜನ್ಮ ಚಿಹ್ನೆಗಳು

12. ಜನ್ಮ ಚಿಹ್ನೆಗಳು

ಕೆಲವು ಜನರಲ್ಲಿ ತುಂಬಾ ವಿಚಿತ್ರ ಹಾಗೂ ನಿಖರವಾದ ಜನ್ಮ ಚಿಹ್ನೆಗಳು ಇರುವುದು. ಇದು ಯಾವುದೋ ಗಾಯದ ಗುರುತೇ? ಇಂತಹ ಜನ್ಮ ಚಿಹ್ನೆಗಳು ಇರುವಂತಹವರನ್ನು ಹಿಂದಿನ ಜನ್ಮದ ಬಗ್ಗೆ ಸಂಶೋಧನೆ ಮಾಡಿದ ವೇಳೆ ಅವರು ಯಾವುದೋ ಗಾಯಕ್ಕೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ಹಿಂದಿನ ಜನ್ಮದಲ್ಲಿ ಇದ್ದಂತಹ ಕೆಲವೊಂದು ಗಾಯದ ಗುರುತು ಈ ಜನ್ಮದಲ್ಲೂ ಕಾಣಿಸಿಕೊಂಡಿದೆ. ಇಂತಹ ಘಟನೆಗಳ ಬಗ್ಗೆ ನಿಮಗೆ ಇಂಟರ್ನೆಟ್ ನಲ್ಲಿ ಸಾವಿರಾರು ಸಿಗಬಹುದು.

13. ಮಕ್ಕಳ ಕಥೆ

13. ಮಕ್ಕಳ ಕಥೆ

ನೀವು ಯಾವತ್ತಾದರೂ ಮಕ್ಕಳು ಕಥೆ ಹೇಳುವುದನ್ನು ಕೇಳಿದ್ದೀರಾ? ಕೆಲವು ಮಕ್ಕಳು ತಮ್ಮ ಮುಖ್ಯಪಾತ್ರದಲ್ಲಿ ಇಟ್ಟುಕೊಂಡು ಕಥೆ ಹೇಳುವರು. ಆದರೆ ಈ ಕಥೆಯು ಅವರು ವಾಸ್ತವಿಕ ಜೀವನದಲ್ಲಿ ಎಂದೂ ಎದುರಿಸಿದಂತಹ ಕಥೆಯಾಗಿ ಇರುವುದಿಲ್ಲ. ಇದು ಯಾವುದೋ ಕ್ರಿಯಾತ್ಮಕ ಕಲ್ಪನೆಯೋ ಅಥವಾ ಬೇರೆ ಏನಾದರೂ ಇದೆಯಾ? ಮಕ್ಕಳು ತಮ್ಮ ಹಿಂದಿನ ಜನ್ಮದ ನೆನಪನ್ನು ಬೇಗನೆ ತಿಳಿಯುವರು. ಆದರೆ ಬೆಳೆಯುತ್ತಿದ್ದಂತೆ ಅವರು ಇದೆಲ್ಲವನ್ನೂ ಮರೆಯುವರು. ಇದು ಹಿಂದಿನ ಜನ್ಮದ ಕೆಲವೊಂದು ಘಟನೆಗಳ ಸಂಗ್ರಹವಾಗಿರಬಹುದು.

14. ನಿಯಂತ್ರಿಸಲು ಆಗದ ಹವ್ಯಾಸಗಳು

14. ನಿಯಂತ್ರಿಸಲು ಆಗದ ಹವ್ಯಾಸಗಳು

ನಿಯಂತ್ರಿಸಲು ಆಗದೆ ಇರುವಂತಹ ಕೆಲವೊಂದು ಹವ್ಯಾಸಗಳು ಜನರ ಜೀವವನ್ನೇ ಬಲಿ ತೆಗೆಯುವುದು ಅಥವಾ ಸಮಾಜದಲ್ಲಿ ಅವರು ಮೂಲೆ ಗುಂಪಾಗುವಂತೆ ಮಾಡುವುದು. ಕೆಲವೊಂದು ಗೀಳನ್ನು ಇದಕ್ಕೆ ಸೇರಿಸಿಕೊಳ್ಳಬಹುದು. ಕೆಲವು ಜನರು ಮನೆಯಿಂದ ಹೊರಗಡೆ ಹೋಗುವ ವೇಳೆ ಹತ್ತು ಸಲ ಲೈಟ್ ಸ್ವಿಚ್ ಆಫ್ ಮಾಡುವರು. ಮಹಿಳೆಯೊಬ್ಬರು ತನ್ನ ಮನೆಯ ತುಂಬಾ ಪತ್ರಿಕೆಗಳನ್ನು ತುಂಬಿಕೊಂಡಿರುವರು. ಈ ಗೀಳಿಗೆ ಕೆಲವು ಮನಶಾಸ್ತ್ರಜ್ಞ ವಿವರಣೆಗಳು ಸಿಗುವುದು. ಆದರೆ ಇದೆಲ್ಲವೂ ಹಿಂದಿನ ಜನ್ಮದ ನೆನಪುಗಳು ಆಗಿರಬಹುದು ಎಂದು ಹೇಳಲಾಗುತ್ತದೆ.

15. ಕೊನೇ ಮಾತು

15. ಕೊನೇ ಮಾತು

ಈ ಲೇಖನದಲ್ಲಿ ಹೇಳಿರುವಂತಹ ವಿಚಾರಗಳಿಗೆ ಕೆಲವೊಂದು ವೈದ್ಯಕೀಯ, ಮಾನಸಿಕ ಅಥವಾ ಸಾಮಾಜಿಕ ವಿವರಣೆಗಳು ಇರಬಹುದು. ಇದರಲ್ಲಿ ಯಾವುದಾದರೂ ಅನುಭವಕ್ಕೆ ಬಂದಿದ್ದರೆ ಆಗ ನೀವು ಹಿಂದೆ ಒಂದು ಜನ್ಮ ಅನುಭವಿಸಿದ್ದೀರಿ ಎಂದು ಹೇಳಲಾಗದು. ಪುನರ್ಜನ್ಮ ಎನ್ನುವುದು ಇದುವರೆಗೆ ಯಾರಿಂದಲೂ ಸಾಬೀತು ಮಾಡಲು ಆಗಿಲ್ಲ. ಸಾಧ್ಯತೆಗಳ ಮೇಲೆ ಈ ಜಗತ್ತು ನಿಂತಿದೆ ಮತ್ತು ಹಿಂದೆ ನಾವು ಬದುಕಿದ್ದೆವು ಮತ್ತು ಮುಂದೆ ಬದುಕಲಿದ್ದೇವೆ ಎನ್ನುವುದು ತುಂಬಾ ಆಕರ್ಷಣೀಯವಾಗಿರುವುದು.

English summary

signs you may have had a past life!

The idea that our souls or spirits reincarnate reaches back at least 3,000 years. Discussions of the subject can be found in the ancient traditions of India and Greece. It's a tantalizing belief - that our spirits are not confined to the 7, 8 or 9 lives, but that we have lived before and that we might live again. Those who believe in reincarnation suggest that there might be clues to what our past lives were in the various aspects that make our present. Let’s explore…
X
Desktop Bottom Promotion