For Quick Alerts
ALLOW NOTIFICATIONS  
For Daily Alerts

ಭೂತಗಳ ಕಾಟಕ್ಕೆ ಒಳಗಾಗಿದ್ದೀರಿ ಎನ್ನುವುದನ್ನು ಸೂಚಿಸುವ 6 ಚಿಹ್ನೆಗಳು

|

ಚಳಿಗಾಲ ಎಂದರೆ ಸಾಮಾನ್ಯವಾಗಿ ವಾತಾವರಣದಲ್ಲಿ ಶುಷ್ಕತೆ, ಗಾಳಿ ಹಾಗೂ ತಣ್ಣನೆಯ ಕೊರೆತ ಅಧಿಕವಾಗಿರುತ್ತವೆ. ಅಂತೆಯೇ ಹಗಲಿನ ಸಮಯ ಕಡಿಮೆ ಹಾಗೂ ರಾತ್ರಿಯ ಸಮಯ ಹೆಚ್ಚೆಂದು ಹೇಳುತ್ತಾರೆ, ಅಂದರೆ ಬಹುಬೇಗ ಕತ್ತಲಾಗುವುದು ಎಂದು. ಕೆಲವು ನಂಬಿಕೆಗಳ ಪ್ರಕಾರ ಚಳಿಗಾಲದಲ್ಲಿ ಭೂತ-ಪ್ರೇತಗಳ ಓಡಾಟ ಹೆಚ್ಚಿರುತ್ತವೆ. ಅತೃಪ್ತ ಆತ್ಮಗಳು ಕಾಡುವ ಸಮಯ ಎಂದು ಹೇಳುವುದುಂಟು. ಆದರೆ ಭೂತ-ಪ್ರೇತಗಳ ಇರುವಿಕೆಯ ಬಗ್ಗೆ ಇಂದಿನವರೆಗೂ ಸಾಕ್ಷಿ ಆಧಾರಗಳು ದೊರೆತಿಲ್ಲ. ಆದರೂ ಭೂತ ಮತ್ತು ಪ್ರೇತಗಳ ಒಂದು ಕಾಲ್ಪನಿಕ ಚಿತ್ರಣವನ್ನು ಹೊಂದಿದ್ದೇವೆ ಎನ್ನಬಹುದು.

House Haunted

ಕೆಲವು ನಂಬಿಕೆ ಹಾಗೂ ಉಲ್ಲೇಖಗಳಿಗೆ ಸಂಬಂಧಿಸಿದಂತೆ ಆತ್ಮ ಮತ್ತು ದೆವ್ವಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಆತ್ಮಗಳು ಎಂದರೆ ಒಬ್ಬ ವ್ಯಕ್ತಿಯ ಸಾವಿನ ನಂತರ ದೇಹದಿಂದ ದೂರವಾಗುವ ಒಂದು ಚೈತನ್ಯ ಅಥವಾ ಶಕ್ತಿಗೆ ಆತ್ಮ ಎನ್ನುತ್ತೇವೆ. ಅದೇ ದೇಹದಿಂದ ಹೊರ ಬಂದ ಆತ್ಮಗಳು ಸದ್ಗತಿಯನ್ನು ಕಾಣದೆ ಇತರ ವ್ಯಕ್ತಿಗಳನ್ನು ಕೆಟ್ಟ ರೀತಿಯಲ್ಲಿ ಕಾಡುವುದು ಅಥವಾ ಪಾಳುಬಿದ್ದ ಮನೆಗಳಲ್ಲಿ ಓಡಾಡಿಕೊಂಡಿರುವ ಆತ್ಮಗಳಿಗೆ ದೆವ್ವ, ಪ್ರೇತ, ಭೂತ ಎಂದು ಕರೆಯಲಾಗುವುದು. ಹಿಂದಿನ ಕಾಲದಲ್ಲಿ ಯುದ್ಧ ಭೂಮಿಯಲ್ಲಿ ಸಾವಿರಾರು ಸೈನಿಕರು ಮರಣ ಹೊಂದುತ್ತಿದ್ದರು. ಸದ್ಗತಿ ಕಾಣದ ಅವರ ಆತ್ಮಗಳು ಭೂತ-ಪ್ರೇತಗಳಾಗಿ ಇತರರನ್ನು ಕಾಡುತ್ತದೆ ಎಂದು ಹೇಳಲಾಗುತ್ತಿತ್ತು.

ಈ ರೀತಿಯ ದುಷ್ಟ ಶಕ್ತಿ ಅಥವಾ ವಿಕೃತ ಶಕ್ತಿಯು ಮನುಷ್ಯನನ್ನು ಕಾಡುವುದುಂಟು. ಋಣಾತ್ಮಕವಾದ ಶಕ್ತಿಯು ಮನೆಯೊಳಗೆ ಪ್ರವೇಶ ಪಡೆದುಕೊಂಡರೆ ಅಥವಾ ವ್ಯಕ್ತಿಯ ದೇಹವನ್ನು ಆಶ್ರಯಿಸಿಕೊಂಡಿದ್ದರೆ ಕೆಲವು ತೊಂದರೆಗಳು ಉಂಟಾಗುತ್ತವೆ. ಮನೆಯಲ್ಲಿ ಹಾಗೂ ಮನಸ್ಸಿಗೆ ನೆಮ್ಮದಿ ಸಿಗದೆ ಹೋರಾಡುವುದುಂಟು. ದುಷ್ಟ ಶಕ್ತಿಯ ಆಗಮನವನ್ನು ನಾವು ಕೆಲವು ಚಿಹ್ನೆಗಳ ಮೂಲಕ ಗುರುತಿಸಬಹುದು. ಹಾಗಾದರೆ ಆ ಚಿಹ್ನೆಗಳು ಯಾವುವು? ಅವುಗಳ ಪ್ರಭಾವ ಹೇಗಿರುತ್ತವೆ ಎನ್ನುವುದನ್ನು ತಿಳಿಯಲು ಲೇಖನದ ಮುಂದಿನ ಭಾಗವನ್ನು ಓದಿ.

1. ಭೂತಗಳು ಹೇಗಿರುತ್ತವೆ?

1. ಭೂತಗಳು ಹೇಗಿರುತ್ತವೆ?

ಭೂತಗಳು ಮನುಷ್ಯರಂತೆಯೇ ಉಡುಪು, ಸೂಟು-ಬೂಟುಗಳನ್ನು ಧರಿಸುತ್ತದೆಯೇ? ಅದರ ಆಗಮನವು ಮನುಷ್ಯರಂತೆಯೇ ಇರುವುದೇ? ಅದನ್ನು ನಾವು ಸುಲಭವಾಗಿ ಕಾಣಬಹುದೇ? ಎನ್ನುವಂತಹ ಅನೇಕ ಪ್ರಶ್ನೆಗಳನ್ನು ನಮ್ಮನ್ನು ಸಾಕಷ್ಟು ಸಂದರ್ಭದಲ್ಲಿ ಕಾಡಿರುತ್ತವೆ. ಆದರೆ ಅದಕ್ಕೆ ಸೂಕ್ತ ಉತ್ತರ ಸಿಕ್ಕಿರುವುದಿಲ್ಲ. ಅವು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಆದರೆ ಕೆಲವು ವಾತಾವರಣದ ಬದಲಾವಣೆಯಿಂದ ಗುರುತಿಸಬಹುದು.

2. ವಿವರಿಸಲು ಅಸಾಧ್ಯವಾದಂತಹ ವಾತಾವರಣ

2. ವಿವರಿಸಲು ಅಸಾಧ್ಯವಾದಂತಹ ವಾತಾವರಣ

ಕೆಲವು ಪುಸ್ತಕ ಹಾಗೂ ಉಲ್ಲೇಖಗಳ ಪ್ರಕಾರ ದೆವ್ವಗಳಿಗೆ ಶಕ್ತಿಯಿರುತ್ತದೆ. ಅವು ತಾವು ಇದ್ದ ಕಡೆಗೆ ಪರಿಸರದಲ್ಲಿ ಇರುವ ಶಕ್ತಿಯನ್ನು ಆಕರ್ಷಿಸುತ್ತವೆ. ಹಾಗಾಗಿ ಅವುಗಳ ಉಪಸ್ಥಿತಿ ಇದ್ದಾಗ ಪರಿಸರದಲ್ಲಿ ತಾಪಮಾನವು ಹಠಾತ್ ಬದಲಾವಣೆಯನ್ನು ಕಾಣುವುದು. ಇಲ್ಲವೇ ಹಠಾತ್ ಹಾನಿಗಳು ಸಂಭವಿಸುತ್ತವೆ. ಅವುಗಳ ಸ್ಪರ್ಶ ಉಂಟಾದರೆ ಕಾರಣಗಳಿಲ್ಲದೆ ತಲೆ ಹಾಗೂ ದೇಹದಲ್ಲಿ ಹೇಳಲು ಅಸಾಧ್ಯವಾದ ತೊಂದರೆ ಉಂಟಾಗುವುದು.

3. ವಿಚಿತ್ರವಾದ ತಾಂತ್ರಿಕ ತೊಂದರೆ ಉಂಟಾಗುವುದು

3. ವಿಚಿತ್ರವಾದ ತಾಂತ್ರಿಕ ತೊಂದರೆ ಉಂಟಾಗುವುದು

ದೆವ್ವಗಳ ಶಕ್ತಿಯು ತಂತ್ರಜ್ಞಾನಗಳ ಮೇಲೆ ಪ್ರಭಾವ ಬೀರುತ್ತವೆ. ನಿಮ್ಮ ಮನೆಯಲ್ಲಿ ಇರುವ ಎಲೆಕ್ಟ್ರಿಕ್ ದೀಪಗಳು ನಿಯತಕಾಲಿಕವಾಗಿ ಆಫ್ -ಆನ್ ಆಗುತ್ತಲೇ ಇರಬಹುದು. ರಿಂಗಿಂಗ್ ಫೋನ್ ಇದ್ದರೆ ಒಮ್ಮೆ ರಿಂಗಾದಂತೆ ತಕ್ಷಣಕ್ಕೆ ಬಂದಾಗುವಂತೆ ತೋರುವುದು. ಟಿವಿಯು ಇದ್ದಕ್ಕಿದ್ದಂತೆ ಆಫ್ ಆಗುವುದು, ಚಾನಲ್‍ಗಳು ಬದಲಾಯಿಸದೆ ಇದ್ದರೂ ತನ್ನಷ್ಟಕ್ಕೆ ಬದಲಾವಣೆಯನ್ನು ಹೊಂದುತ್ತಿದ್ದರೆ ಅದು ಭೂತಗಳ ಉಪಸ್ಥಿತಿಯನ್ನು ಬಹಿರಂಗ ಪಡಿಸುತ್ತದೆ.

4. ಅನುಚಿತವಾದ ವಾಸನೆ

4. ಅನುಚಿತವಾದ ವಾಸನೆ

ಭೂತ-ಪ್ರೇತಗಳ ವಾಸನೆಗಳು ಅನುಚಿತವಾಗಿರುತ್ತವೆ. ಅವು ವಿಚಿತ್ರವಾಗಿರುತ್ತವೆ ಎಂದು ಹೇಳಲಾಗುವುದು. ಮನೆಯ ಸುತ್ತಮುತ್ತ ಅಥವಾ ಮನೆಯ ಒಳಗೆ ನಿಮಗೆ ಇದ್ದಕ್ಕಿದ್ದಂತೆ ವಿಚಿತ್ರವಾದ ವಾಸನೆಗಳು ಕಾಣಿಸಿಕೊಳ್ಳುತ್ತವೆ. ಆ ವಾಸನೆಗಳು ಮನೆಯಲ್ಲಿ ಇರುವ ಅಡುಗೆಯ ತ್ಯಾಜ್ಯಗಳಿಗಿಂತ ದುರ್ವಾಸನೆಯನ್ನು ಸೂಚಿಸುತ್ತದೆ. ಭೂತ-ಪ್ರೇತಗಳು ಆಗಮಿಸಿದರೆ ತಂಬಾಕುಗಳ ವಾಸನೆ, ಸಿಗರೇಟ್ ಗಳ ವಾಸನೆಗಳಂತೆ ದುರ್ಗಂಧವು ಸೂಸುವುದು. ಆ ವಾಸನೆಗಳನ್ನು ಸಹಿಸಲು ನಮಗೆ ಅತ್ಯಂತ ಕಷ್ಟಕರ ಎನಿಸುವುದು. ಅಂತಹ ವಾಸನೆಗಳು ನಿಮ್ಮ ಮೂಗಿಗೆ ತಗುಲುತ್ತಿದೆ ಎಂದರೆ ನೀವು ಸುಲಭವಾಗಿ ಇದು ದುಷ್ಟಶಕ್ತಿಗಳ ವಾಸನೆ ಎಂದು ಪರಿಗಣಿಸಬಹುದು.

5. ವಸ್ತುಗಳ ಚಲನೆ ಮತ್ತು ಗುರುತಿಸಲಾಗದ ಶಬ್ದಗಳು

5. ವಸ್ತುಗಳ ಚಲನೆ ಮತ್ತು ಗುರುತಿಸಲಾಗದ ಶಬ್ದಗಳು

ನೀವು ಇದ್ದಕ್ಕಿದ್ದಂತೆ ಮೆಟ್ಟಿಲು ಏರುವ ಶಬ್ದ, ಬಾಗಿಲು ತೆರೆಯುವ ಶಬ್ದ, ಗೋಡೆಗೆ ಇದ್ದ ಛಾಯಾ ಚಿತ್ರಗಳು ನೆಲಕ್ಕೆ ಉರುಳಿದ ಶಬ್ದವನ್ನು ಕೇಳುತ್ತಿದ್ದೀರಿ ಎಂದರೆ ಅದು ಭೂತದ ತೊಂದರೆ ಎನ್ನಬಹುದು. ವಸ್ತುಗಳೊಂದಿಗೆ ಸಂವಹನ ನಡೆಸಲು ದೆವ್ವಗಳು ಸಾಕಷ್ಟು ಶಕ್ತಿಯನ್ನು ಹೊಂದಿರುತ್ತವೆ. ಯಾರೋ ಕರೆದಂತೆ ಭಾಸವಾಗುವುದು, ನೀವು ಹೋಗಿ ನೋಡುವಷ್ಟರಲ್ಲಿ ಯಾರು ಇಲ್ಲದಂತೆ ತೋರುವುದು, ಮನೆಯ ಕೋಣೆಯೊಳಗೆ ಬಳೆಗಳ ಶಬ್ದ ಅಥವಾ ಇನ್ಯಾವುದೋ ವಸ್ತು ಬಿದ್ದ ಶಬ್ದವು ನಿಮಗೆ ಕೇಳುತ್ತದೆ. ನಂತರ ನೀವು ಒಳಗೆ ಹೋದರೆ ಏನೂ ಇರುವುದಿಲ್ಲ. ಇಂತಹ ತೊಂದರೆ ಅಥವಾ ಬದಲಾವಣೆಯನ್ನು ನೀವು ಗಮನಿಸುತ್ತಿದ್ದರೆ ಅದು ಭೂತಗಳ ಇರುವಿಕೆಯನ್ನು ಸೂಚಿಸುತ್ತದೆ.

6. ಸಾಕು ಪ್ರಾಣಿಗಳು ಸಂಪರ್ಕವನ್ನು ಹೊಂದಿರುತ್ತವೆ

6. ಸಾಕು ಪ್ರಾಣಿಗಳು ಸಂಪರ್ಕವನ್ನು ಹೊಂದಿರುತ್ತವೆ

ಪ್ರಾಣಿಗಳು ಮನುಷ್ಯನಿಗೆ ಪತ್ತೆಹಚ್ಚಲು ಸಾಧ್ಯವಾಗದ ಶಬ್ದ, ವಾಸನೆ, ದೃಶ್ಯ ಹಾಗೂ ವಿದ್ಯಮಾನಗಳನ್ನು ಸುಲಭವಾಗಿ ಪತ್ತೆಹಚ್ಚುತ್ತವೆ. ಅವು ದೈವಶಕ್ತಿಯನ್ನು ಹೊಂದಿರುವ ಪ್ರಾಣಿಗಳು ಎಂದು ಪರಿಗಣಿಸಲಾಗುತ್ತದೆ. ಸಾಕು ಪ್ರಾಣಿಗಳು ಸುಂಟರ ಗಾಳಿ, ಸುನಾಮಿ ಹಾಗೂ ನೈಸರ್ಗಿಕವಾಗಿ ನಡೆಯುವ ಕೆಲವು ವಿದ್ಯಮಾನಗಳನ್ನು ಸುಲಭವಾಗಿ ಸಹಿಸಿಕೊಳ್ಳುತ್ತವೆ. ಅವುಗಳಲ್ಲಿ ಯಾವುದೇ ಆಶ್ಚರ್ಯವಿಲ್ಲ. ನಿಮ್ಮ ಮನೆಯನ್ನು ಭೂತಗಳು ಪ್ರವೇಶಿಸಿದರೆ ಅಥವಾ ನಿಮ್ಮ ಮನೆಯ ಸುತ್ತಲು ಓಡಾಡುತ್ತಿದ್ದರೆ ಸಾಕು ಪ್ರಾಣಿಗಳು ಸುಲಭವಾಗಿ ಪತ್ತೆಹಚ್ಚುತ್ತವೆ. ಅಂತಹ ಸಂದರ್ಭದಲ್ಲಿ ವಿಚಿತ್ರ ಧ್ವನಿಯಲ್ಲಿ ಕೂಗುವುದರ ಮೂಲಕ ಅಥವಾ ವಿಚಿತ್ರ ವರ್ತನೆಯನ್ನು ತೋರುವುದರ ಮೂಲಕ ನಿಮಗೆ ಸೂಚನೆಯನ್ನು ನೀಡುತ್ತವೆ. ಅವುಗಳನ್ನು ಗಮನಿಸುವ ಸೂಕ್ಷ್ಮತೆ ನಮಗಿರಬೇಕು.

English summary

Is Your House Haunted? 6 Signs You're Being Ghosted in an Even Worse Way

During the fall we spend more and more time in darkness, and there is an eerie, otherworldly energy. If you’ve been feeling a bit haunted lately, it may not be because your ex is texting you (though that probably doesn’t help). The spirit world is activated in October, so if you’ve been wondering whether there’s an otherworldly presence in your home, this is the perfect time to find out.
X
Desktop Bottom Promotion