For Quick Alerts
ALLOW NOTIFICATIONS  
For Daily Alerts

Shani Pradosh Vrat 2021: ಈ ದಿನದ ಮಹತ್ವವೇನು? ಕಷ್ಟಗಳ ನಿವಾರಣೆಗೆ ಏನು ಮಾಡಬೇಕು?

|

ಪ್ರದೋಷ ವ್ರತಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಪ್ರತೀ ತಿಂಗಳಿನಲ್ಲಿ ಬರುವ ಶುಕ್ಲ ಮತ್ತು ಕೃಷ್ಣ ತ್ರಯೋದಶಿಯಂದು ಸೂರ್ಯಾಸ್ತದ ನಂತರ ಮೂರು ಘಳಿಗೆಗಳ ಕಾಲಕ್ಕೆ ಪ್ರದೋಷ ಎನ್ನುತ್ತಾರೆ.

ಈ ದಿನ ಉಪವಾಸವಿದ್ದು, ಶಿವನ ಉಪಾಸನೆ ಮಾಡಿ, ರಾತ್ರಿ ಪೂಜೆಯ ಬಳಿಕ ಆಹಾರ ಸೇವಿಸಬೇಕು. ಏಪ್ರಿಲ್ 24ರಂದು ಪ್ರದೋಷ ವ್ರತ ಬಂದಿದೆ. ಇದು ಶನಿವಾರ ಬಂದಿರುವುದರಿಂದ ಶನಿ ಪ್ರದೋಷ ವ್ರತ ಎಂದು ಕರೆಯಲಾಗುವುದು.

Shani pradosh vrat

ಶನಿವಾರ ಶನಿ ದೇವನಿಗೆ ಮೀಸಲಾದ ದಿನ. ಈ ದಿನದಂದು ಪ್ರದೋಷ ವ್ರತ ಬಂದಿರುವುದರಿಂದ ಶಿವ-ಪಾರ್ವತೆಯ ಆರಾಧನೆಯಲ್ಲಿ ಶನಿಯನ್ನೂ ಪೂಜಿಸಲಾಗುತ್ತದೆ. ಪ್ರದೋಷ ದಿನದಂದು ಶನಿ ದೇವನಿಗೆ ಕಪ್ಪು ಎಳ್ಳು, ಕಪ್ಪು ಬಟ್ಟೆ, ಸಾಸಿವೆ ಎಣ್ಣೆ ನೀಡುವುದನ್ನು ಶುಭವೆಂದು ಪರಿಗಣಿಸಲಾಗಿದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ, ಶನಿ ಪ್ರದೋಷ ದಿನದಂದು ಶನಿಯನ್ನು ಆರಾಧಿಸುವುದರಿಂದ ಶಿವನ ಜೊತೆಗೆ ಶನಿಯ ಕೃಪೆಯೂ ನಿಮ್ಮ ಮೇಲಿರುವುದು. ಇಲ್ಲಿ ಶನಿ ಪ್ರದೋಷ ಪೂಜೆ ಶುಭ ಮುಹೂರ್ತ, ಶನಿ ಹಾಗೂ ಶಿವನನ್ನು ಮೆಚ್ಚಿಸಲು ಏನು ಮಾಡಬೇಕೆಂದು ಹೇಳಲಾಗಿದೆ ನೋಡಿ.

ಶನಿ ಪ್ರದೋಷ ವ್ರತವನ್ನು ಪೂಜಿಸಲು ಶುಭ ಸಮಯ-

ಶನಿ ಪ್ರದೋಷ ವ್ರತವನ್ನು ಪೂಜಿಸಲು ಶುಭ ಸಮಯ-

ಶುಕ್ಲ ತ್ರಯೋದಶಿ ತಿಥಿ ಪ್ರಾರಂಭ: ಏಪ್ರಿಲ್‌ 24, ಶನಿವಾರ ಸಂಜೆ 07:17ಕ್ಕೆ

ತ್ರಯೋದಶಿ ತಿಥಿ ಮುಕ್ತಾಯ: ಏಪ್ರಿಲ್‌ 25, ಭಾನುವಾರ ಮಧ್ಯಾಹ್ನ 04:12ಕ್ಕೆ

ಶನಿ ದೇವನನ್ನು ಮೆಚ್ಚಿಸಲು ಪ್ರದೋಷ ವ್ರತ ಹೇಗೆ ಮಾಡಬೇಕು

ಶನಿ ದೇವನನ್ನು ಮೆಚ್ಚಿಸಲು ಪ್ರದೋಷ ವ್ರತ ಹೇಗೆ ಮಾಡಬೇಕು

ಶನಿದೋಷವಿದ್ದರೆ ಅದರಿಂದ ಮುಕ್ತರಾಗಿ ಶನಿಕೃಪೆಗೆ ಪಾತ್ರರಾಗಲು ಶನಿ ಪ್ರದೋಷ ವ್ರತವನ್ನು ವಿಶೇಷವಾಗಿ ಮಾಡಲಾಗುತ್ತದೆ. ಈ ದಿನ ಶನಿ ಮಂತ್ರ ಪಠಿಸಿದರೆ ತುಂಬಾ ಪ್ರಯೋಜನ ಸಿಗುವುದು. ಅಲ್ಲದೆ ಈ ವ್ರತ ಮಾಡುವುದರಿಂದ ಸಂತಾನ ಅಪೇಕ್ಷಿತರಿಗೆ ಆ ಭಾಗ್ಯವು ದೊರೆಯುವುದು ಎಂದು ಹೇಳಲಾಗುವುದು. ಈ ದಿನ ಉಪವಾಸವಿದ್ದು

ಶನಿಯನ್ನು ಆರಾಧಿಸಬೇಕು. ಕಪ್ಪು ನಾಯಿ ಹಾಗೂ ಕಾಗೆಗೆ ಆಹಾರ ನೀಡಬೇಕು. ನಂತರ ಪೂಜೆಯಲ್ಲಿ ಜಪಮಾಲೆ ಹಿಡಿದು ಶನಿ ಮಂತ್ರ ಪಠಿಸಬೇಕು. ಪಠಣ ಮಾಡುವಾಗ ಉಚ್ಚಾರಣೆಯು ಶುದ್ಧವಾಗಿರಬೇಕು.

ಈ ದಿನ ಸಾಸಿವೆಯೆಣ್ಣೆಯಿಂದ ಆಹಾರ ತಯಾರಿಸಿ ಬಡವರಿಗೆ ದಾನ ಮಾಡಿ.

ಶನಿ ಪ್ರದೋಷ್ ವ್ರತ ಪೂಜಾ ವಿಧಾನ-

ಶನಿ ಪ್ರದೋಷ್ ವ್ರತ ಪೂಜಾ ವಿಧಾನ-

* ಪ್ರದೋಷ ದಿನದಂದು ಬೆಳಗ್ಗೆ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ ಶಿವನಿಗೆ ಪೂಜೆಯನ್ನು ಸಲ್ಲಿಸಿ. ಶಿವನ ಪೂಜೆಗೆ ಬಿಲ್ವೆ ಪತ್ರೆ ಎಲೆ, ಹೂಗಳು, ಧೂಪ, ದೀಪ, ನೈವೇದ್ಯ ಅರ್ಪಿಸಿ. ಸಂಜೆ ಮತ್ತೆ ಶಿವನನ್ನು ಅದೇ ರೀತಿಯಲ್ಲಿ ಆರಾಧನೆ ಮಾಡಿ.

* ಶನಿಯ ಕೃಪೆಗೆ ಪಾತ್ರರಾಗಲು ಬಡವರಿಗೆ ಆಹಾರ ಹಾಗೂ ಕಪ್ಪು ಬಟ್ಟೆ ದಾನ ನೀಡಿ.

* ಅಲ್ಲದೆ ಈ ದಿನ ಕಂಚಿನ ಬಟ್ಟಲಿನಲ್ಲಿ ಸಾಸಿವೆಯೆಣ್ಣೆ ಅಥವಾ ಎಳ್ಳೆಣ್ಣೆ ತುಂಬಿ ಅದರಲ್ಲಿ ಮುಖ ನೋಡಿ.

* ಆಲದ ಮರಕ್ಕೆ ನೀರನ್ನು ಹಾಕಿ.

ಈ ರೀತಿ ಮಾಡುವುದರಿಂದ ಶಿವ ಹಾಗೂ ಶನಿಯ ಕೃಪೆಗೆ ಪಾತ್ರರಾಗುವಿರಿ. ಕಷ್ಟಗಳು ದೂರವಾಗುವುದು.

English summary

Shani Pradosh Vrat 2021: Date, Shubh Muhurat and How to Please Shani in Kannada

Shani pradosh vrat 2021: date, shubh muhurat and how to please shani, Read on..
X
Desktop Bottom Promotion